Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೆದರ್ಲ್ಯಾಂಡ್ಸ್ ಗೆ ಭೇಟಿ ನೀಡಿದ ವೇಳೆ (ಜೂನ್ 27, 2017) ಪ್ರಧಾನಮಂತ್ರಿಯವರ ಮಾಧ್ಯಮ ಹೇಳಿಕೆ

ನೆದರ್ಲ್ಯಾಂಡ್ಸ್ ಗೆ ಭೇಟಿ ನೀಡಿದ ವೇಳೆ (ಜೂನ್ 27, 2017) ಪ್ರಧಾನಮಂತ್ರಿಯವರ ಮಾಧ್ಯಮ ಹೇಳಿಕೆ

ನೆದರ್ಲ್ಯಾಂಡ್ಸ್ ಗೆ ಭೇಟಿ ನೀಡಿದ ವೇಳೆ (ಜೂನ್ 27, 2017) ಪ್ರಧಾನಮಂತ್ರಿಯವರ ಮಾಧ್ಯಮ ಹೇಳಿಕೆ


ಘನತೆವೆತ್ತ ಪ್ರಧಾನಮಂತ್ರಿ ಮಾರ್ಕ್ ರುಟ್ಟೆ ಅವರೇ,

2015ರ ಜೂನ್ ತಿಂಗಳಲ್ಲಿ ನನಗೆ ತಮ್ಮನ್ನು ಭಾರತಕ್ಕೆ ಸ್ವಾಗತಿಸುವ ಅವಕಾಶ ದೊರೆತಿತ್ತು. ಜೂನ್ ಮಾಸ ಸಾಮಾನ್ಯವಾಗಿ ಭಾರತದಲ್ಲಿ ಅತಿ ಹೆಚ್ಚು ತಾಪಮಾನದ ತಿಂಗಳು. ಅದು ಬಿರು ಬೇಸಿಗೆಯ ಕಾಲ. ಆದರೂ ತಾವು ಆ ಕಾಲವನ್ನೇ ತಮ್ಮ ಭೇಟಿಗೆ ಆಯ್ಕೆ ಮಾಡಿಕೊಂಡಿದ್ದಿರಿ ಮತ್ತು ಇದು ನಮ್ಮ ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ನಿಮ್ಮ ಬದ್ಧತೆಯ ಸಂಕೇತವಾಗಿದೆ.

ಇಂದು, ಸರಿಯಾಗಿ ಎರಡು ವರ್ಷಗಳ ಬಳಿಕ ನಾನು ಕೂಡ ನೆದರ್ಲ್ಯಾಂಡ್ಸ್ ಗೆ ಜೂನ್ ಮಾಸದಲ್ಲೇ ಬಂದಿದ್ದೇನೆ. ಹವಾಮಾನದ ವಿಚಾರದಲ್ಲಿ ದೆಹಲಿ ಮತ್ತು ಹೇಗ್ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇದು ಬಹುತೇಕ ಹಗಲು ಮತ್ತು ರಾತ್ರಿಯ ರೀತಿ ಇದೆ. ಇಲ್ಲಿನ ಹವಾಮಾನ ನಾನು ಕಂಡಂತೆ ಆಹ್ಲಾದಕರವಾಗಿದೆ.

ಘನತೆವೆತ್ತರೇ, ಮೊದಲಿಗೆ, ನನಗಷ್ಟೇ ಅಲ್ಲ, ನನ್ನ ಇಡೀ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನನ್ನ ಕೃತಜ್ಞತೆಗಳನ್ನು ಮತ್ತು ಧನ್ಯವಾದಗಳನ್ನು ತಮಗೆ ವ್ಯಕ್ತಪಡಿಸಲು ಇಚ್ಛಿಸುತ್ತೇನೆ. ಈ ಆತ್ಮೀಯ ಸ್ವಾಗತದ ಮೂಲಕ ನೀವು ಭಾರತದ ಜನರ ಬಗಿಗಿನ ಆತ್ಮೀಯ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಿ.

ಘನತೆವೆತ್ತರೆ, ನೆದರ್ಲ್ಯಾಂಡ್ಸ್ ಗೆ ನನ್ನ ಈ ಭೇಟಿ, ಅತಿ ಕಡಿಮೆ ಅವಧಿಯಲ್ಲಿ ನಿಗದಿಯಾಗಿದ್ದು, ಆದರೂ ನೀವು ಈ ಪ್ರವಾಸಕ್ಕೆ ಎಷ್ಟು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದೀರಿ ಎಂದರೆ, ಅಷ್ಟೇ ಅಲ್ಲ ಇಷ್ಟು ಕಡಿಮೆ ಅವಧಿಯಲ್ಲಿ ಫಲಪ್ರದವಾದ ಕಾರ್ಯಕ್ರಮ ಆಯೋಜನೆ ಮಾಡಿ, ಇದನ್ನು ಫಲಶ್ರುತಿ ಕೇಂದ್ರಿತಗೊಳಿಸಿದ್ದೀರಿ. ಇದು ನಿಮ್ಮ ಕೌಶಲ್ಯದ ಸಂಕೇತವಾಗಿದ್ದು, ನಾನು ನಿಮ್ಮ ಅದ್ಭುತ ನಾಯಕತ್ವವನ್ನು ಪ್ರಶಂಸಿಸುತ್ತೇನೆ.

ಘನತೆವೆತ್ತರೆ, ಭಾರತ ಮತ್ತು ನೆದರ್ಲ್ಯಾಂಡ್ಸ್ ಸಂಬಂಧ ಶತಮಾನಗಳಷ್ಟು ಪುರಾತನವಾದ್ದು ಮತ್ತು ಎರಡೂ ರಾಷ್ಟ್ರಗಳ ಉದ್ದೇಶ ಅದನ್ನು ಆಪ್ತಗೊಳಿಸುವ ಮತ್ತು ಆಳಗೊಳಿಸುವುದಾಗಿದೆ. ಈ ವರ್ಷ ನೀವು ತಿಳಿಸಿದಂತೆ ನಾವು ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ರಾಜತಾಂತ್ರಿಕ ಬಾಂಧವ್ಯದ 70ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಹೀಗಾಗಿ ನಾವು ಸ್ವಾಭಾವಿಕವಾಗಿ ನಮ್ಮ ದ್ವಿಪಕ್ಷೀಯ ಬಾಂಧವ್ಯದ ಕಡೆಗೆ ಹೆಚ್ಚು ಗಮನ ಹರಿಸಿದ್ದೇವೆ.

ಇಂದಿನ ವಿಶ್ವ ಅಂತರ ಸಂಪರ್ಕಿತ ಮತ್ತು ಅಂತರ ಅವಲಂಬಿತವಾದುದಾಗಿದೆ, ಹೀಗಾಗಿ ನಮ್ಮ ಚರ್ಚೆಯಲ್ಲಿ ನಾವು ದ್ವಿಪಕ್ಷೀಯ ವಿಚಾರಗಳನ್ನಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಹತ್ವದ ವಿಚಾರಗಳ ಬಗ್ಗೆಯೂ ಚರ್ಚಿಸಲಿದ್ದೇವೆ.

ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಎರಡು ರಾಷ್ಟ್ರಗಳ ನಡುವೆ ಬಹಳಷ್ಟು ಅಭಿಪ್ರಾಯದಲ್ಲಿ ಒಮ್ಮತವಿದೆ ಮತ್ತು ನೆದರ್ಲ್ಯಾಂಡ್ಸ್ ನೆರವಿನಿಂದ ಭಾರತವು ಕಳೆದ ವರ್ಷ ಎಂ.ಟಿ.ಸಿ.ಆರ್. ಸದಸ್ಯತ್ವ ಪಡೆಯಲು ಯಶಸ್ವಿಯಾಯಿತು ಮತ್ತು ಅದಕ್ಕಾಗಿ ನಾನು ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ.

ಇನ್ನು ದ್ವಿಪಕ್ಷೀಯ ಹೂಡಿಕೆಗೆ ಸಂಬಂಧಿಸಿದಂತೆ, ಈವರೆಗೆ ನೆದರ್ಲ್ಯಾಂಡ್ಸ್ ವಿದೇಶೀ ನೇರ ಬಂಡವಾಳ ಹೂಡಿಕೆ ಮೂಲದಲ್ಲಿ ಐದನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇದು ಮೂರನೇ ಅತಿ ದೊಡ್ಡ ವಿದೇಶೀ ಬಂಡವಾಳ ಹೂಡಿಕೆ ಮೂಲವಾಗಿ ಹೊರಹೊಮ್ಮಿದೆ.

ಭಾರತದ ಆರ್ಥಿಕ ಬೆಳವಣಿಗೆಯಲ್ಲಿ, ನಮ್ಮ ಅಭಿವೃದ್ಧಿಯ ಆದ್ಯತೆಗಳಲ್ಲಿ, ನೆದರ್ಲ್ಯಾಂಡ್ಸ್ ಸ್ವಾಭಾವಿಕ ಪಾಲುದಾರ ಎಂದು ಪುನರುಚ್ಚರಿಸುವ ಅಗತ್ಯವಿಲ್ಲ.

ಇಂದು, ನಮಗೆ ಡಚ್ ಕಂಪನಿಗಳ ಸಿಇಓಗಳೊಂದಿಗೆ ಸಭೆ ನಡೆಸುವ ಅವಕಾಶವೂ ಲಭಿಸಿತ್ತು ಮತ್ತು ಅವರು ಭಾರತದ ವಿಚಾರಕ್ಕೆ ಸಂಬಂಧಿಸಿದಂತೆ ಧನಾತ್ಮಕ ಮೇಲ್ನೋಟವನ್ನು ಹೊಂದಿದ್ದಾರೆ ಮತ್ತು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಅವರ ಅಭಿಪ್ರಾಯ ಕೇಳಲು ಕಾತರನಾಗಿದ್ದೇನೆ.

ಇಂದು, ನನಗೆ ನೆದರ್ಲ್ಯಾಂಡ್ಸ್ ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಜನರನ್ನು ಭೇಟಿ ಮಾಡುವ ಅವಕಾಶ ಲಭಿಸಿತು. ಇಲ್ಲಿರುವ ಭಾರತೀಯ ಸಮುದಾಯವು ಎರಡೂ ದೇಶಗಳ ನಡುವಿನ ಸ್ನೇಹಸೇತುವಾಗಿದೆ. ಇದು ನಮ್ಮ ಜನರೊಂದಿಗಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನವಾಗಿದೆ.

ನಾನು ಇಂದು ಘನತೆವೆತ್ತ ದೊರೆ ಮತ್ತು ಘನತೆವೆತ್ತ ರಾಣಿಯವರನ್ನು ಭೇಟಿ ಮಾಡುತ್ತಿದ್ದೇನೆ, ಇದು ನನಗೆ ಇದು ಸೌಭಾಗ್ಯದ ವಿಚಾರವಾಗಿದೆ, ನಾನು ಅವರೊಂದಿಗಿನ ಭೇಟಿಗೆ ಎದಿರು ನೋಡುತ್ತಿದ್ದೇನೆ. ಮತ್ತೊಮ್ಮೆ ನಾನು, ಪ್ರಧಾನಿ ರುಟ್ಟೆ ಅವರಿಗೆ ಮತ್ತು ನೆದರ್ಲ್ಯಾಂಡ್ ಸರ್ಕಾರಕ್ಕೆ ಮತ್ತು ಇಲ್ಲಿನ ಜನತೆಗೆ ನನ್ನ ಹೃತ್ಪೂರ್ವಕವಾದ ಆಭಾರ ಮನ್ನಣೆಯನ್ನು ಸಲ್ಲಿಸಬಯಸುತ್ತೇನೆ.

ಧನ್ಯವಾದಗಳು.

***

VBA/HS