Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೇಪಾಳಕ್ಕೆ ತೆರಳುವ ಮೊದಲು ಪ್ರಧಾನ ಮಂತ್ರಿ ಅವರ ಹೇಳಿಕೆ.


ನೇಪಾಳಕ್ಕೆ ತೆರಳುವ ಮೊದಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ ಹೇಳಿಕೆಯ ಪಠ್ಯ ಈ ಕೆಳಗಿನಂತಿದೆ.

“ ನೇಪಾಳ ಪ್ರಧಾನ ಮಂತ್ರಿ ಗೌರವಾನ್ವಿತ ಕೆ.ಪಿ. ಓಲಿ ಅವರ ಆಹ್ವಾನದ ಮೇರೆಗೆ ನಾನು 2018ರ ಮೇ 11 ರಿಂದ 12 ರವರೆಗೆ ನೇಪಾಳಕ್ಕೆ ಭೇಟಿ ನೀಡುತ್ತಿದ್ದೇನೆ.

ಪ್ರಧಾನ ಮಂತ್ರಿಯಾಗಿ ನೇಪಾಳಕ್ಕೆ ಇದು ನನ್ನ ಮೂರನೇಯ ಭೇಟಿ. ಇದು ಭಾರತದ ಅದ್ಯತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಾನು ವೈಯಕ್ತಿಕವಾಗಿ ನೇಪಾಳದ ಜತೆ ನಮ್ಮ ಪ್ರಾಚೀನ ಮತ್ತು ನಿಕಟ ಹಾಗು ಸ್ನೇಹ ಸೌಹಾರ್ದದ ಸಂಬಂಧಗಳನ್ನು ಇದು ಪ್ರನಿಧಿಸುತ್ತದೆ ಎಂದು ಭಾವಿಸುತ್ತೇನೆ.

ಕಳೆದ ತಿಂಗಳು ಪ್ರಧಾನ ಮಂತ್ರಿ ಓಲಿ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಬಳಿಕ ಅದಕ್ಕೆ ಸಂವಾದಿಯಾಗಿ ನನ್ನ ಭೇಟಿ ಆಯೋಜನೆಗೊಂಡಿದೆ. ಈ ಉನ್ನತ ಮಟ್ಟದ ಮತ್ತು ನಿಯಮಿತ ಸಂವಾದಗಳು ನನ್ನ ಸರಕಾರ ’ನೆರೆಯವರು ಮೊದಲು” ನೀತಿಗೆ ಬದ್ದವಾಗಿರುವುದರ ಪ್ರತೀಕವಾಗಿದೆ. ಇದು ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ’ ಗೆ ಪ್ರತಿಸ್ಪಂದಿಸುತ್ತದೆ.

ನಮ್ಮ ಎರಡೂ ದೇಶಗಳು ಒಗ್ಗೂಡಿ ಕಳೆದ ಕೆಲವು ವರ್ಷಗಳಲ್ಲಿ ಹಲವು ದ್ವಿಪಕ್ಷೀಯ ಸಂಪರ್ಕಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಅಭಿವೃದ್ದಿ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ. ಮತ್ತು ನಮ್ಮ ಎರಡೂ ದೇಶಗಳ ಜನರ ಒಳಿತಿಗಾಗಿ ಅನೇಕ ಪರಿವರ್ತನಾಶೀಲ ಉಪಕ್ರಮಗಳನ್ನು ಆರಂಭಿಸಿದ್ದೇವೆ.

ಪ್ರಧಾನ ಮಂತ್ರಿ ಓಲಿ ಮತ್ತು ನಾನು ಇತ್ತೀಚೆಗೆ ಪರಸ್ಪರ ಹಿತಾಸಕ್ತಿಗಳ ಬಗ್ಗೆ ಹೊಸದಿಲ್ಲಿಯಲ್ಲಿ ನಡೆಸಿದ ವಿಸ್ತಾರ ವ್ಯಾಪ್ತಿಯ ಮಾತುಕತೆಗಳನ್ನು ಮುಂದೆ ಕೊಂಡೊಯ್ಯಲು ಅವಕಾಶವನ್ನು ಹೊಂದಿದ್ದೇವೆ. ಮತ್ತು ವೈವಿಧ್ಯಮಯ ವಲಯಗಳಲ್ಲಿ ನಮ್ಮ ಸಹಕಾರದ ಸಹಭಾಗಿತ್ವವನ್ನು ಮುಂದುವರೆಸಲು ಅವಕಾಶವನ್ನು ಪಡೆದಿದ್ದೇವೆ.

ಕಾಠ್ಮಂಡು ಜೊತೆಗೆ ನಾನು ಜನಕಪುರ ಮತ್ತು ಮುಕ್ತಿನಾಥಕ್ಕೂ ಭೇಟಿ ನೀಡಲು ಉದ್ದೇಶಿಸಿದ್ದೇನೆ. ಈ ಎರಡೂ ಸ್ಥಳಗಳು ಪ್ರತೀ ವರ್ಷ ಭಾರೀ ಸಂಖ್ಯೆಯಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತವೆ. ಅವುಗಳು ಭಾರತದ ಮತ್ತು ನೇಪಾಳದ ಜನತೆ ಪ್ರಾಚೀನ ಮತ್ತು ಬಲವಾದ ಸಾಂಸ್ಕೃತಿಕ ಹಾಗು ಧಾರ್ಮಿಕ ಸಂಬಂಧಗಳನ್ನು ಹೊಂದಿರುವುದಕ್ಕೆ ಜೀವಂತ ಸಾಕ್ಷಿಗಳು .

ನೇಪಾಳವು ಪ್ರಜಾಪ್ರಭುತ್ವದ ಲಾಭಗಳ ಮೇಲೆ ಹೊಸ ಶಕೆಯನ್ನು ಆರಂಭಿಸುವತ್ತ ಸಾಗುತ್ತಿರುವಾಗ ಮತ್ತು ತ್ವರಿತ ಗತಿಯಲ್ಲಿ ಅಭಿವೃದ್ದಿ ಹಾಗು ಆರ್ಥಿಕ ಬೆಳವಣಿಗೆಯನ್ನು ಸಾಧಿಸುತ್ತಿರುವಾಗ ಭಾರತವು ನೇಪಾಳ ಸರಕಾರದ ಜತೆಗಾರನಾಗಿರಲು ಇಚ್ಚಿಸುತ್ತದೆ ಮತ್ತು ಅದರ ದೂರದೃಷ್ಟಿಯಾದ “ ಸಮೃದ್ಧ ನೇಪಾಳ, ಸುಖಿ ನೇಪಾಳಿ” ಅನುಷ್ಟಾನಕ್ಕೆ ಬೆಂಬಲವೀಯುತ್ತದೆ.

ನೇಪಾಳದಲ್ಲಿ ನಾನು ರಾಜಕೀಯ ನಾಯಕರು ಮತ್ತು ಸ್ನೇಹಿತರ ಸಭೆಯನ್ನು ಎದುರು ನೋಡುತ್ತಿದ್ದೇನೆ. ನನ್ನ ಭೇಟಿ ನೇಪಾಳದ ಜೊತೆ ಪರಸ್ಪರ ವಿಶ್ವಾಸ ಮತ್ತು ತಿಳುವಳಿಕೆ ಹಾಗು ಪರಸ್ಪರ ಲಾಭದಾಯಕ ರೀತಿಯಲ್ಲಿ ನಮ್ಮ ಜನತಾ ಕೇಂದ್ರಿತ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ಬಗ್ಗೆ ನಾನು ದೃಢ ವಿಶ್ವಾಸಿಯಾಗಿದ್ದೇನೆ.

***