Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೈಜ ಜ್ಞಾನಿಯ ಗುಣಲಕ್ಷಣಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನೈಜ ಜ್ಞಾನಿಯ ಗುಣಲಕ್ಷಣಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ಎಕ್ಸ್ (X) ವೇದಿಕೆಯ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“यस्य कृत्यं न जानन्ति मन्त्रं वा मन्त्रितं परे।

कृतमेवास्य जानन्ति स वै पण्डित उच्यते॥”

ಯಾರ ಯೋಜನೆಗಳು ಮತ್ತು ಕಾರ್ಯಗಳು ಪೂರ್ಣಗೊಳ್ಳುವವರೆಗೂ ಇತರರಿಗೆ ತಿಳಿಯುವುದಿಲ್ಲವೋ, ಅವರೇ ನಿಜವಾದ ಜ್ಞಾನಿ. ಅಂತಹ ಶಿಸ್ತುಬದ್ಧ, ವಿವೇಚನಾಶೀಲ ಮತ್ತು ಚಿಂತನಶೀಲ ವ್ಯಕ್ತಿಯನ್ನು ನಿಜವಾದ ಪಂಡಿತನೆಂದು ಪರಿಗಣಿಸಿರುವುದು ಸರಿಯಷ್ಟೇ.

 

*****