ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನ್ಯಾಯಾಂಗದ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ದಿಗಾಗಿ ಕೇಂದ್ರ ಪ್ರಾಯೋಜಿತ ಯೋಜನೆ (ಸಿ.ಎಸ್.ಎಸ್.)ಯನ್ನು 12ನೇ ಪಂಚ ವಾರ್ಷಿಕ ಯೋಜನೆಯ ನಂತರವೂ ಅಂದರೆ 01.04.2017 ರಿಂದ 31.03.2020ರವರೆಗೆ, ಅಭಿಯಾನದೋಪಾದಿಯಲ್ಲಿ ಅಂದಾಜು 3,320 ಕೋಟಿ ರೂಪಾಯಿ ಹಂಚಿಕೆಯೊಂದಿಗೆ ರಾಷ್ಟ್ರೀಯ ನ್ಯಾಯದಾನ ಮತ್ತು ಕಾನೂನು ಸುಧಾರಣೆ ಅಭಿಯಾನದ ಮೂಲಕ ಅನುಷ್ಠಾನಗೊಳಿಸಲು ತನ್ನ ಸಮ್ಮತಿ ನೀಡಿದೆ.
ಭವಿಷ್ಯದ ಯೋಜನೆಗಳು ಮತ್ತು ಉತ್ತಮ ಆಸ್ತಿ ನಿರ್ವಹಣೆ ಮತ್ತು ನಿಯಮಾವಳಿಗಳ ರಚನೆ ಸೇರಿದಂತೆ ದೇಶದಲ್ಲಿ ಭವಿಷ್ಯದಲ್ಲಿ ಈ ಯೋಜನೆಯಡಿ ನಿರ್ಮಾಣ ಮಾಡಬೇಕಾದ ಕೋರ್ಟ್ ಹಾಲ್ ಗಳ ಮತ್ತು ವಸತಿ ಘಟಕಗಳ ವಿವರಗಳು ಮತ್ತು ಕೋರ್ಟ್ ಹಾಲ್ ಗಳ ಕಾಮಗಾರಿ ಪ್ರಗತಿ, ಪೂರ್ಣಗೊಂಡ ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ಘಟಕಗಳ ಕುರಿತಂತೆ ದತ್ತಾಂಶ ಸಂಗ್ರಹಣೆಗಾಗಿ ನ್ಯಾಯ ಇಲಾಖೆಯಿಂದ ಭೂ-ಸಂಪರ್ಕದೊಂದಿಗೆ ಆನ್ ಲೈನ್ ನಿಗಾ ವ್ಯವಸ್ಥೆ ಸ್ಥಾಪಿಸಲು ಸಂಪುಟವು ತನ್ನ ಅನುಮೋದನೆ ನೀಡಿದೆ.
ಯೋಜನೆಯಿಂದಾಗುವ ಲಾಭಗಳು:
ಈ ಯೋಜನೆಯು ಸುಸ್ಥಿರ ಸೂಕ್ತ ಸಂಖ್ಯೆಯ ಕೋರ್ಟ್ ಹಾಲ್ ಗಳ ಲಭ್ಯತೆ ಮತ್ತು ನ್ಯಾಯಾಧೀಶರಿಗೆ / ಜಿಲ್ಲಾ ಮತ್ತು ಕೆಳಹಂತದ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗೆ ಜಿಲ್ಲೆ, ಉಪ ಜಿಲ್ಲೆ, ತಾಲೂಕು, ತಹಶೀಲ್ ಮತ್ತು ಗ್ರಾಮ ಪಂಚಾಯ್ತಿ ಮತ್ತು ಗ್ರಾಮಮಟ್ಟದಲ್ಲಿ ವಸತಿ ಸೌಕರ್ಯ ಹೆಚ್ಚಿಸಲಿದೆ. ಇದು ದೇಶಾದ್ಯಂತ ನ್ಯಾಯಾಂಗದ ಕಾರ್ಯಾಚರಣೆ ಮತ್ತು ಪ್ರದರ್ಶನವನ್ನು ಸುಧಾರಿಸಿ ಪ್ರತಿಯೊಬ್ಬ ನಾಗರಿಕರಿಗೂ ತಲುಪುವಂತೆ ಮಾಡಲು ನೆರವಾಗುತ್ತದೆ.
ಆರ್ಥಿಕ ನೆರವು:
ರಾಜ್ಯಸರ್ಕಾರಗಳಿಗೆ/ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್.ಎಸ್.) ಅಡಿಯಲ್ಲಿ ಕೋರ್ಟ್ ಹಾಲ್ ಮತ್ತು ನ್ಯಾಯಾಧಿಶರಿಗೆ/ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗೆ ವಸತಿ ಸೌಲಭ್ಯ ಒದಗಿಸುವುದು ಸೇರಿದಂತೆ ನ್ಯಾಯಾಂಗಕ್ಕೆ ಮೂಲಸೌಕರ್ಯಕ್ಕಾಗಿ ಕೇಂದ್ರ ಸರ್ಕಾರದ ನೆರವನ್ನು ಒದಗಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯದ ನಿಧಿ ಹಂಚಿಕೆಯು ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳನ್ನು ಹೊರತಾಗಿ ಇತರ ರಾಜ್ಯಗಳಿಗೆ 60:40 ಆಗಿದೆ.ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ ಈ ನಿಧಿ ಹಂಚಿಕೆಯ ಪ್ರಮಾಣ 90:10 ಆಗಿದೆ; ಮತ್ತು ಕೇಂದ್ರಾಂಡಳಿತ ಪ್ರದೇಶಗಳಿಗೆ ಶೇ.100 ಆಗಿದೆ. ಇಂದು ಹಾಲಿ ನಡೆಯುತ್ತಿರುವ 3000 ಕೋರ್ಟ್ ಹಾಲ್ ಮತ್ತು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗಾಗಿ ನಿರ್ಮಾಣ ಮಾಡುತ್ತಿರುವ 1800 ವಸತಿ ಘಟಕಗಳ ಯೋಜನೆಗಳ ಜಾರಿಗೆ ನೆರವಾಗುತ್ತದೆ.
ಯೋಜನೆಯ ನಿಗಾ
ಉತ್ತಮ ಆಸ್ತಿ ನಿರ್ವಹಣೆ ಜೊತೆಗೆ ಕೋರ್ಟ್ ಹಾಲ್ ಗಳ ಕಾಮಗಾರಿ ಪ್ರಗತಿ, ಪೂರ್ಣಗೊಂಡ ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ಘಟಕಗಳ ಕುರಿತಂತೆ ದತ್ತಾಂಶ ಸಂಗ್ರಹಣೆಗಾಗಿ ನ್ಯಾಯ ಇಲಾಖೆಯಿಂದ ಆನ್ ಲೈನ್ ನಿಗಾ ವ್ಯವಸ್ಥೆ ಸ್ಥಾಪಿಸಲಾಗುವುದು.
ನಿಗಾ ಸಮಿತಿಯು ತ್ವರಿತ ಮತ್ತು ಉತ್ತಮ ನಿರ್ಮಾಣಕ್ಕಾಗಿ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ನಿಯಮಿತ ಸಭೆಗಳನ್ನು ಏರ್ಪಡಿಸಬಹುದಾಗಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾದ ಹಣ ವಿಳಂಬವಿಲ್ಲದೆ ರಾಜ್ಯ ಸರ್ಕಾರಗಳಿಂದ ಪಿಡ್ಲ್ಯುಡಿಗೆ ಬಿಡುಗಡೆ ಆಗಿದೆಯೇ ಎಂಬ ಬಗ್ಗೆಯೂ ಅದು ನಿಗಾ ಇಡಬಹುದಾಗಿದೆ.
ಹಿನ್ನೆಲೆ:
ಈ ನಿಟ್ಟಿನಲ್ಲಿ ನ್ಯಾಯಾಂಗ ಮೂಲ ಸೌಕರ್ಯ ಅಭಿವೃದ್ಧಿಗಾಗಿ 1993-94ರಿಂದ ಜಾರಿಗೊಳಿಸಿರುವ ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್) ಮೂಲಕ ರಾಜ್ಯ ಸರ್ಕಾರಗಳ ಸಂಪನ್ಮೂಲವನ್ನು ಕೇಂದ್ರ ಸರ್ಕಾರವು ಹೆಚ್ಚಿಸಲಿದೆ. ಕೇಂದ್ರದ ನೆರವನ್ನು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಯೋಜನೆಯಡಿ ಕೋರ್ಟ್ ಹಾಲ್ ಗಳ ನಿರ್ಮಾಣ ಮತ್ತು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧಿಶರು/ನ್ಯಾಯಾಂಗ ಅಧಿಕಾರಿಗಳ ವಸತಿ ಘಟಕಗಳ ನಿರ್ಣಾಣಕ್ಕೆ ಒದಗಿಸಲಿದೆ.
Cabinet approves Rs 3,320 cr plan to boost judicial infrastructure. https://t.co/G8puncR4x3
— PMO India (@PMOIndia) November 17, 2017
via NMApp pic.twitter.com/abUsyqvHHw