ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ರಾಷ್ಟ್ರ ನಿರ್ಮಾಣದ ಅಡಿಪಾಯವಾಗಿ ಅವರ ‘ಅಂತ್ಯೋದಯ’ ಮತ್ತು ವಂಚಿತರ ಏಳಿಗೆಯ ದೃಷ್ಟಿಕೋನವನ್ನು ಸ್ಮರಿಸಿದರು. ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಮತ್ತು ರಾಷ್ಟ್ರೀಯ ಜವಾಬ್ದಾರಿಗಳನ್ನು ಪೂರೈಸಬೇಕೆಂದು ಪ್ರಧಾನಮಂತ್ರಿ ಕರೆ ನೀಡಿದರು. ಈ ಸಂದರ್ಭದಲ್ಲಿ, ಶ್ರೀ ಮೋದಿ ಅವರು ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದು, ಯಶಸ್ಸು ಮತ್ತು ನಾವೀನ್ಯತೆಯು ಅದೃಷ್ಟಕ್ಕಿಂತ ಹೆಚ್ಚಾಗಿ ನಿರಂತರ ಪ್ರಯತ್ನ ಮತ್ತು ಧೈರ್ಯದಿಂದ ನಡೆಸಲ್ಪಡುತ್ತದೆ ಎಂಬುದನ್ನು ಎತ್ತಿ ತೋರಿದರು.
ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ;
“राष्ट्रसेवा के सच्चे साधक पंडित दीनदयाल उपाध्याय जी को उनकी जयंती पर सादर नमन। उन्होंने समाज की अंतिम पंक्ति में खड़े व्यक्ति के उत्थान को राष्ट्र निर्माण का आधार माना और अंत्योदय की एक ऐसी विचारधारा दी, जिससे आज भी जनकल्याण की अद्भुत प्रेरणा मिलती है। आइए, इस विशेष अवसर पर उनके विचारों और आदर्शों को आत्मसात कर सामाजिक और राष्ट्रीय दायित्वों को पूरा करने का संकल्प दोहराएं।
यथा यथा प्रयत्नः स्याद्भवेदाशु फलं तथा।
इति पौरुषमेवास्ति दैवमस्तु तदेव च॥”
ವ್ಯಕ್ತಿಯ ಪ್ರಯತ್ನ ಮತ್ತು ಪರಿಶ್ರಮ ಎಷ್ಟು ಹೆಚ್ಚಿರುತ್ತದೋ, ಅಷ್ಟು ಬೇಗ ಅವರು ಯಶಸ್ಸನ್ನು ಸಾಧಿಸುತ್ತಾರೆ. ನಾವೀನ್ಯತೆಯು ಸಹ ನಿರಂತರ ಪ್ರಯತ್ನದ ಮೇಲೆ ಆಧಾರಿತವಾಗಿದೆ. ಆದ್ದರಿಂದ, ಅದೃಷ್ಟವಲ್ಲ, ಬದಲಾಗಿ, ಸಮರ್ಪಣಾಭಾವದ ಶ್ರಮ, ಧೈರ್ಯ ಮತ್ತು ನವೀನ ಆಲೋಚನೆಗಳನ್ನು ವಾಸ್ತವಕ್ಕೆ ಪರಿವರ್ತಿಸುವ ದೃಢಸಂಕಲ್ಪವೇ ಅದಕ್ಕೆ ದಾರಿ ಮಾಡಿಕೊಡುತ್ತದೆ.
*****
राष्ट्रसेवा के सच्चे साधक पंडित दीनदयाल उपाध्याय जी को उनकी जयंती पर सादर नमन। उन्होंने समाज की अंतिम पंक्ति में खड़े व्यक्ति के उत्थान को राष्ट्र निर्माण का आधार माना और अंत्योदय की एक ऐसी विचारधारा दी, जिससे आज भी जनकल्याण की अद्भुत प्रेरणा मिलती है। आइए, इस विशेष अवसर पर उनके… pic.twitter.com/evr9ghWWe9
— Narendra Modi (@narendramodi) September 25, 2026