Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸುವೇಂದು ಅಧಿಕಾರಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸುವೇಂದು ಅಧಿಕಾರಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸುವೇಂದು ಅಧಿಕಾರಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಶ್ರೀ ಸುವೇಂದು ಅಧಿಕಾರಿ ಅವರು ಜನರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುವ ಮತ್ತು ಅವರ ಆಕಾಂಕ್ಷೆಗಳನ್ನು ನಿಕಟವಾಗಿ ಅರ್ಥಮಾಡಿಕೊಂಡ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮುಂದಿನ ಅವಧಿ ಫಲಪ್ರದವಾಗಲಿ ಎಂದು ಶ್ರೀ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ದಿಲೀಪ್ ಘೋಷ್, ಶ್ರೀಮತಿ ಅಗ್ನಿಮಿತ್ರ ಪಾಲ್, ಶ್ರೀ ಅಶೋಕ್ ಕೀರ್ತಾನಿಯಾ, ಶ್ರೀ ಕ್ಷುದಿರಾಮ್ ತುಡು ಮತ್ತು ಶ್ರೀ ನಿಸಿತ್ ಪ್ರಾಮಾಣಿಕ್ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದ್ದಾರೆ.

ಈ ನಾಯಕರು ತಳಮಟ್ಟದಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡಿದ್ದಾರೆ ಮತ್ತು ಜನರಿಗೆ ಸೇವೆ ಸಲ್ಲಿಸಿದ್ದಾರೆ ಎಂದು ಶ್ರೀ ಮೋದಿ ಅವರು ಹೇಳಿದರು.  ಅವರು ಸಚಿವರಾಗಿ ಪಶ್ಚಿಮ ಬಂಗಾಳದ ಅಭಿವೃದ್ಧಿ ಪ್ರಯಾಣವನ್ನು ಮತ್ತಷ್ಟು ಬಲಪಡಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು ಮತ್ತು ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಪ್ರಧಾನಮಂತ್ರಿ ಅವರು ಎಕ್ಸ್ ತಾಣದ ಸಂದೇಶದಲ್ಲಿ ಈ ರೀತಿ ಬರೆದಿದ್ದಾರೆ;

“ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸುವೇಂದು ಅಧಿಕಾರಿ ಜಿ ಅವರಿಗೆ ಅಭಿನಂದನೆಗಳು. ಜನರೊಂದಿಗೆ ಆಳವಾದ ಸಂಪರ್ಕವನ್ನು ಉಳಿಸಿಕೊಂಡಿರುವ ಮತ್ತು ಅವರ ಆಕಾಂಕ್ಷೆಗಳನ್ನು ನಿಕಟ ವಲಯದಿಂದ ಅರ್ಥಮಾಡಿಕೊಂಡ ನಾಯಕರಾಗಿ ಅವರು ಛಾಪು ಮೂಡಿಸಿದ್ದಾರೆ. ಮುಂದಿನ ಫಲಪ್ರದ ಅವಧಿಗೆ ಅವರಿಗೆ ನನ್ನ ಶುಭಾಶಯಗಳು.

@SuvenduWB”

“ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿಲೀಪ್ ಘೋಷ್ ಜಿ, ಅಗ್ನಿಮಿತ್ರ ಪಾಲ್ ಜಿ, ಅಶೋಕ್ ಕೀರ್ತಾನಿಯಾ ಜಿ, ಕ್ಷುದಿರಾಮ್ ತುಡು ಜಿ ಮತ್ತು ನಿಸಿತ್ ಪ್ರಾಮಾಣಿಕ್ ಜಿ ಅವರಿಗೆ ಅಭಿನಂದನೆಗಳು. ಈ ನಾಯಕರು ತಳಮಟ್ಟದಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡಿದ್ದಾರೆ ಮತ್ತು ಜನರಿಗೆ ಸೇವೆ ಸಲ್ಲಿಸಿದ್ದಾರೆ. ಅವರು ಸಚಿವರಾಗಿ ಪಶ್ಚಿಮ ಬಂಗಾಳದ ಅಭಿವೃದ್ಧಿ ಪ್ರಯಾಣವನ್ನು ಮತ್ತಷ್ಟು ಬಲಪಡಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನನ್ನ ಶುಭಾಶಯಗಳು.

@DilipGhoshBJP

@paulagnimitra1

@NisithPramanik”

 

*****