ಪಿಎಂಇಂಡಿಯಾ

ಬಾಂಗ್ಲಾ ದೇಶದ ಸನ್ಮಾನ್ಯ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀಮತಿ ಶೇಖ್ ಹಸೀನಾ ಅವರೇ, ಗೌರವಾನ್ವಿತ ಅತಿಥಿಗಳಾದ ಶ್ರೀ ಮುಖ್ಯಮಂತ್ರಿಗಳೇ, ಗೌರವಾನ್ವಿತ ರಾಜ್ಯಪಾಲರೇ ಮತ್ತು ಸ್ನೇಹಿತರೇ,
ಬಾಂಗ್ಲಾದೇಶ್ ಭವನವು ಭಾರತ ಮತ್ತು ಬಾಂಗ್ಲಾ ದೇಶಗಳ ನಡುವಿನ ಸಾಂಸ್ಕೃತಿಕ ಬಂಧನವಾಗಿದೆ. ಕಲೆ, ಭಾಷೆ, ಸಂಸ್ಕೃತಿ, ಶಿಕ್ಷಣ ಕುಟುಂಬ ಬಾಂಧವ್ಯ ಹೀಗೆ ಹಲವು ವಿಚಾರಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಲಕ್ಷಾಂತರ ಜನರ ನಡುವಿನ ಸದೃಢ ಬಾಂಧವ್ಯದ ಸಂಕೇತವಾಗಿ ಈ ಕಟ್ಟಡ ಗೋಚರಿಸುತ್ತಿದೆ ಮತ್ತು ಚಿತ್ರಹಿಂಸೆಯ ವಿರುದ್ಧ ನಡೆದ ಸಂಘರ್ಷದ ಪರಸ್ಪರ ಹಂಚಿಕೊಂಡ ಭಾವನೆಗಳ ಸದೃಢ ಸಂಬಂಧವೂ ಇದಾಗಿದೆ. ನಾನು ಬಾಂಗ್ಲಾದೇಶದ ಪ್ರಧಾನಮಂತ್ರಿಗಳಾದ ಶ್ರೀಮತಿ ಶೇಕ್ ಹಸೀನಾಜಿ ಮತ್ತು ಆ ದೇಶದ ಜನರಿಗೆ ಈ ಕಟ್ಟಡ ನಿರ್ಮಿಸಿರುವುದಕ್ಕಾಗಿ ಧನ್ಯವಾದ ಹೇಳುತ್ತೇನೆ. ಭಾರತ ಮತ್ತು ಬಾಂಗ್ಲಾದೇಶಕ್ಕೆ ರಾಷ್ಟ್ರಗೀತೆಯನ್ನು ರಚಿಸಿಕೊಟ್ಟ ಗುರುದೇವ ಶ್ರೀ ರವೀಂದ್ರನಾಥ್ ಠಾಗೂರ್ ಅವರ ಕರ್ಮ ಭೂಮಿ(ಕಾಯಕದ ಭೂಮಿ)ಯಲ್ಲಿ ರಮ್ಜಾನ್ ನ ಪವಿತ್ರ ಮಾಸದಲ್ಲಿ ಈ ಕಟ್ಟಡವನ್ನು ಸಮರ್ಪಣೆ ಮಾಡಲು ನಾನು ಅತ್ಯಂತ ಹರ್ಷಿಚಿತ್ತಗೊಂಡಿದ್ದೇನೆ.
ಸ್ನೇಹಿತರೇ,
ಈ ವಿಶ್ವ ವಿದ್ಯಾಲಯದ ಇತಿಹಾಸವು ಭಾರತ ಮತ್ತು ಬಾಂಗ್ಲಾದೇಶಗಳು ಸ್ವಾತಂತ್ರ್ಯಗೊಳ್ಳುವುದಕ್ಕಿಂತಲೂ ಹಳೆಯದು. ಅಷ್ಟೇ ಅಲ್ಲ ವಸಾಹತುಯುಗದಲ್ಲಿ ಬಾಂಗ್ಲಾ ದೇಶ ಇಬ್ಭಾಗವಾಗುವುದಕ್ಕೂ ಪುರಾತನವಾದುದು. ಬ್ರಿಟೀಷರು ವಿಭಜನೆ ಮಾಡಲಾಗದಂತಹ, ಒಡೆದು ಆಳುವಂತಹ ರಾಜಕೀಯವೂ ವಿಭಜಿಸಲಾಗದಂತಹ ನಮ್ಮ ಪರಂಪರೆಯ ಪ್ರತೀಕ ಇದಾಗಿದೆ. ಗಂಗಾನದಿಯ ಅಸಂಖ್ಯಾತ ಅಲೆಗಳು ಎರಡೂ ದೇಶಗಳ ತೀರಗಳನ್ನು ತಟ್ಟುತ್ತಿವೆ. ನಮ್ಮ ಏಕರೂಪ ಹೋಲಿಕೆಗಳು ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿವೆ. ಬಂಗಬಂಧು, ಶೇಖ್ ಮುಜಿಬುರ್ ರೆಹ್ಮಾನ್ ಅವರನ್ನು ಬಾಂಗ್ಲಾದೇಶದಷ್ಟೇ ಗೌರವದಿಂದ ಭಾರತದಲ್ಲಿ ಕಾಣುತ್ತಿದ್ದೇವೆ. ಅದೇ ರೀತಿ ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರಬೋಸ್, ಮತ್ತು ಮಹಾತ್ಮ ಗಾಂಧೀಜಿ ಅವರನ್ನು ಭಾರತದಲ್ಲಿ ಗೌರವಿಸುವಂತೆಯೇ ಬಾಂಗ್ಲಾದೇಶದಲ್ಲೂ ಗೌರವಿಸಲಾಗುತ್ತಿದೆ.
ಕವಿ ಶ್ರೀ ರವೀಂದ್ರನಾಥ್ ಟಾಗೂರ್ ಅವರ ಪ್ರಸಿದ್ಧ ಕವಿತೆಗಳು ಬಾಂಗ್ಲಾದೇಶದ ಪ್ರತಿ ಹಳ್ಳಿಯಲ್ಲೂ ಪ್ರತಿಧ್ವನಿಸುತ್ತಿವೆ. ಅದೇ ರೀತಿ ಕಾಝಿ ನಜ್ರುಲ್ ಇಸ್ಲಾಂ ಅವರ ಪ್ರಸಿದ್ಧ ಬರಹಗಳು ಪಶ್ಚಿಮ ಬಂಗಾಳದ ಪ್ರತಿ ಮೂಲೆಯಲ್ಲೂ ಅನುರಣಿಸುತ್ತಿವೆ
ಈ ವಿಶ್ವ ವಿದ್ಯಾಲಯದ ಜತೆ ಬಾಂಗ್ಲಾದೇಶದ ಹಲವು ಗೌರವಾನ್ವಿತರ ಹೆಸರುಗಳು ಜೋಡಿಸಿಕೊಂಡಿವೆ. ಅವರುಗಳಲ್ಲಿ ರಿಜ್ವಾನ್ ಚೌಧರಿ ಬನ್ಯಾ, ಅದಿತಿ ಮೊಹ್ಸಿನ್, ಲಿಲಿ ಇಸ್ಲಾಂ, ಲೀನಾ ತಪೋಶಿ, ಶರ್ಮಿಳಾ ಬ್ಯಾನರ್ಜಿ ಮತ್ತು ನಿಸಾರ್ ಹುಸೇನ್ ಅವರುಗಳ ಹೆಸರು ಈ ವಿಶ್ವ ವಿದ್ಯಾಲಯದಲ್ಲಿ ಜೋಡಿಸಿಕೊಂಡಿವೆ. ರವೀಂದ್ರ ನಾಥ್ ಠ್ಯಾಗೂರ್ ಅವರ ದೂರದೃಷ್ಠಿಯ ಪರಿಣಾಮವಾಗಿ ಈ ವಿಶ್ವ ವಿದ್ಯಾಲಯವು ನಮ್ಮ ರಾಜಕೀಯ ಗಡಿ ಮತ್ತು ಬಂಧಗಳಿಗೂ ಮೀರಿದ್ದಾಗಿದೆ. ಗುರುದೇವ ಶ್ರೀ ರವಿಂದ್ರ ನಾಥ ಠಾಗೂರ್ ಅವರು ಸ್ವತಂತ್ರ ಚಿಂತನೆಯ ಮೇರು ವ್ಯಕ್ತಿತ್ವವಾಗಿದ್ದಾರೆ. ಅವರು ಯಾವತ್ತೂ ಗಡಿಗಳಿಗೆ ಸೀಮಿತವಾದವರಲ್ಲ. ಅವರು ಭಾರತಕ್ಕೆ ಎಷ್ಟು ಅಚ್ಚುಮೆಚ್ಚೋ ಅಷ್ಟೇ ಬಾಂಗ್ಲಾದೇಶಕ್ಕೂ ಅಚ್ಚುಮೆಚ್ಚಾಗಿದ್ದಾರೆ. ಬಾಂಗ್ಲಾದೇಶದ ನೆಲದಲ್ಲಿ ಅವರು ಬೆಂಗಾಳಿ ಜನಪದ ಗೀತೆಗಳಾದ ಗಗನ್ ಹರ್ಕರಾ ಮತ್ತು ಲಲಾನ್ ಫಾಕಿರ್ ಪ್ರಕಾರಗಳನ್ನು ಪರಿಚಯಿಸಿಕೊಟ್ಟಿದ್ದರು. ಅವರ ಅಮರ್ ಸೊನಾರ್ ಬಾಂಗ್ಲಾ ಹಾಡು ಗಗನ್ ಹರ್ಕರಾದಿಂದ ಪ್ರೇರಿತವಾಗಿದೆ. ರಬೀಂದ್ರ ಸಂಗೀತದಲ್ಲಿ ಬೌಲ್ ಸಾಂಗ್ ನ ಪ್ರಭಾವವನ್ನು ಸ್ಪಷ್ಟವಾಗಿ ಕಾಣಿಸುತ್ತದೆ. ಬಂಗಬಂಧುವು ಗುರುದೇವರ ಆದರ್ಶ ಮತ್ತು ಕಲೆಯ ದೊಡ್ಡ ಅಭಿಮಾನವಾಗಿದೆ. ಠಾಗೂರರ ಸಾರ್ವತ್ರಿಕ ಮಾನವತಾವಾದವು ಬಂಗಬಂಧು ಶೇಕ್ ಮುಜಿಬುರ್ ರೆಹ್ಮಾನ್ ಅವರನ್ನು ಪ್ರಭಾವಿಸಿದೆ. ಗುರುದೇವ್ ಅವರ ಶೋನಾರ್ ಬಂಗ್ಲಾವು ಬಂಗಬಂಧು ಅವರ ಮೋಡಿ ಮಾಡುವ ಭಾಷಣವಾಗಿದೆ. ರವೀಂದ್ರನಾಥ್ ಠಾಗೂರ್ ಅವರ ಸಾರ್ವತ್ರಿಕ ಮಾನವತಾವಾದವು ನಮಗೂ ಪ್ರೇರಣೆಯಾಗಿದೆ. ನಮ್ಮದೇ ಪದಗಳಲ್ಲಿ ಹೇಳುವುದಾದರೆ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಕಲ್ಪನೆಯಲ್ಲಿ ಇದೆಲ್ಲವೂ ಪ್ರತಿಫಲಿಸುತ್ತಿದೆ.
ಸ್ನೇಹಿತರೇ,
ಭಾರತ ಹಾಗೂ ಬಾಂಗ್ಲಾ ದೇಶಗಳ ಸಮೃದ್ಧ ಸಾಂಸ್ಕೃತಿಕ ಪರಂಪರೆ ಮತ್ತು ಮಹಾನ್ ವ್ಯಕ್ತಿಗಳು ನೀಡಿದಂತಹ ಕೊಡುಗೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಪರಿಚಯಿಸುವ ನಿರಂತರವಾದ ಪ್ರಯತ್ನವನ್ನು ಮಾಡುತ್ತಿದ್ದೇವೆ. ಭಾರತದ ಹೈ ಕಮಿಷನ್ ಮತ್ತು ಇತರೆ ಸಂಸ್ಥೆಗಳು ಮತ್ತು ವ್ಯಕ್ತಿಗಳು, ಭಾರತೀಯ ಸಾಂಸ್ಕೃತಿಕ ಮಂಡಳಿ ಹೀಗೆ ಅನೇಕ ಸಂಸ್ಥೆಗಳು ಮತ್ತು ಇಲಾಖೆಗಳು ಈ ಮಹಾನ್ ಕಾರ್ಯದಲ್ಲಿ ಕೈಜೋಡಿಸಿವೆ. ಇವತ್ತು, ಬಾಂಗ್ಲಾ ದೇಶ ಭವನವನ್ನು ಉದ್ಘಾಟನೆ ಮಾಡುತ್ತಿದ್ದೇವೆ. ಬಾಂಗ್ಲಾದೇಶದ ಕುಶ್ತಿಯಾ ಜಿಲ್ಲೆಯ ಕುಥಿಬಾರಿಯಲ್ಲಿರುವ ಗುರುದೇವ ಶ್ರೀ ರವೀಂದ್ರನಾಥ ಠಾಗೂರ್ ಅವರ ನಿವಾಸವನ್ನು ನವೀಕರಿಸುವಂತಹ ಹೊಣೆಗಾರಿಕೆಯನ್ನು ನಾವು ಕೈಗೆತ್ತಿಕೊಂಡಿದ್ದೇವೆ.
ಸ್ನೇಹಿತರೇ,
ಪರಸ್ಪರ ಹಂಚಿಕೊಂಡ ಪರಂಪರೆ ಮತ್ತು ರವಿಂದ್ರ ಸಂಗೀತದ ಸಿಹಿಯ ಮಕರಂದ ನಮ್ಮ ಸಂಬಂಧಗಳನ್ನು ಉಬ್ಬಿಸಿದೆ ಮತ್ತು ಸಂತೋಷ ಮತ್ತು ದುಃಖದ ಸಮಯದಲ್ಲಿ ನಮ್ಮನ್ನು ಒಟ್ಟುಗೂಡಿಸಿದೆ. ಇದರ ಪರಿಣಾದಿಂದಲೇ ಬಾಂಗ್ಲಾ ಸ್ವಾತಂತ್ರ್ಯದ ಸಂಗ್ರಾಮವು ಗಡಿಯ ಉದ್ದಕ್ಕೂ ನಡೆದಿತ್ತು. ಪ್ರೇರಣೆಯ ಬಿತ್ತಿ ಬೀಜಗಳು ಈ ನೆಲದಿಂದಲೇ ಗೋಚರಿಸಿದವು. ಆದರೂ ವಿರೋಧಿಗಳ ಸ್ವಾರ್ಥ ಗುಣದ ಪರಿಣಾದಿಂದಾಗಿ ಬಾಂಗ್ಲಾದೇಶದ ಮೇಲೆ ಗಾಯದ ಗುರುತುಗಳನ್ನು ಉಂಟು ಮಾಡಿದವು. ಈ ಭಾಗದ ಮೇಲೆ ಆ ನೋವಿನ ಛಾಯೆಯು ಆವರಿಸಿತ್ತು. ಇದೇ ಕಾರಣದಿಂದ ಅಂದು ಬಂಗಬಂಧು ಅವರು ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಈ ಹೋರಾಟದ ಜತೆ ಲಕ್ಷೋಪಲಕ್ಷ ಭಾರತೀಯರು ಕೈಜೋಡಿಸಲು ಪ್ರೇರಣೆಯೂ ಆಗಿತ್ತು. ದಬ್ಬಾಳಿಕೆ ಮತ್ತು ಭಯೋತ್ಪಾದನೆ ವಿರುದ್ಧ ನಮ್ಮ ಹಂಚಿಕೆಯ ನಿರ್ಣಯ ಮತ್ತು ಅದರ ಇತಿಹಾಸವು ಈ ಕಟ್ಟಡದ ಮೂಲಕ ಭವಿಷ್ಯದ ಪೀಳಿಗೆಯನ್ನು ಉತ್ತೇಜಿಸುವುದನ್ನು ಮುಂದುವರಿಸುತ್ತದೆ. ಸ್ನೇಹಿತರೇ, ದೆಹಲಿಯಲ್ಲಿ ಭಾರತದ ಸೈನಿಕರನ್ನು ನಾವು ಕಳೆದ ವರ್ಷ ಗೌರವಿಸುವ ಸಂದರ್ಭದಲ್ಲಿ ನನಗೆ ತುಂಬಾ ಭಾವನಾತ್ಮಕವಾಗಿದ್ದೆ. ಏಕೆಂದರೆ ಇದು ಕೇವಲ 1661ರ ಭಾರತೀಯ ಸೈನಿಕರನ್ನು ಸನ್ಮಾನಿಸುವ ಕಾರ್ಯಕ್ರಮ ಆಗಿರಲಿಲ್ಲ. ಅವರು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತ್ಯಾಗ ಮಾಡಿದ್ದವರು. ಬಾಂಗ್ಲಾದೇಶದ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆಯೂ ಭಾವನಾತ್ಮಕತೆಯು ನಮಗೆ ರಕ್ತಗತವಾಗಿದೆ. ಅಕ್ಕಪಕ್ಕದ ರಾಷ್ಟ್ರಗಳು ಪರಸ್ಪರರನ್ನು ಗೌರವಿಸುತ್ತಿರುವುದು ಅತ್ಯಂತ ಅಪರೂಪ.
ಸ್ನೇಹಿತರೇ,
ಕಳೆದ ಹಲವು ವರ್ಷಗಳಿಂದಲೂ ಭಾರತ ಮತ್ತು ಬಾಂಗ್ಲಾದೇಶಗಳ ಸಂಬಂಧದ ಸ್ವರ್ಣಪುಟಗಳನ್ನು ಬರೆಯಲಾಗುತ್ತಿದೆ. ಭೂ ಗಡಿ ಮತ್ತು ಕಡಲ ಗಡಿಯ ಸಂಬಂಧಿತ ದ್ವಿಪಕ್ಷೀಯ ಸಂಗತಿಗಳು ಪರಿಹಾರಕ್ಕೆ ಅಸಾಧ್ಯವಾದಂತಹವು ಎಂಬ ಭಾವನೆ ತುಂಬಾ ದಿನಗಳಿಂದಲೂ ಇದ್ದವು. ಆದರೆ ಈಗ ಅವೆಲ್ಲವೂ ಬಗೆಹರಿದಿವೆ. ರಸ್ತೆ, ರೈಲ್ವೆ, ಒಳ ಜಲಸಾರಿಗೆ ಮತ್ತು ಕರಾವಳಿ ಹಡಗುಗಾರಿಕೆಯ ಕ್ಷೇತ್ರಗಳಲ್ಲಿ ನಾವು ಕ್ಷಿಪ್ರಗತಿಯಲ್ಲಿ ಸಂಪರ್ಕವನ್ನು ಸಾಧ್ಯ ಮಾಡುತ್ತಿದ್ದೇವೆ. ಸಂಪರ್ಕ ಜಾಲದ ಹೊಸ ಆಯಾಮಗಳೂ ಇದರಲ್ಲಿ ಒಳಗೊಂಡಿವೆ.
ಕಳೆದ ವರ್ಷ ಹವಾನಿಯಂತ್ರಿತ ರೈಲು ಸೇವೆಯನ್ನು ಕೋಲ್ಕತ್ತಾ ಮತ್ತು ಖುಲ್ನಾ ನಡುವೆ ಆರಂಭಿಸಲಾಗಿದೆ, ಈ ರೈಲಿಗೆ ನಾವು ಬಂಧನ್ ಎಕ್ಸ್್ಪ್ರೆಸ್ ಎಂದು ನಾಮಕರಣ ಮಾಡಿದ್ದೇವೆ. ಇದರ ಅರ್ಥ ಸ್ನೇಹ ಬಾಂಧವ್ಯ ಎಂದಾಗಿದೆ. ನಾವು ಈ ಬಂಧನ್ ಮೂಲಕ ನಮ್ಮ ಸಂಬಂಧವನ್ನು ನಾವು ಇನ್ನಷ್ಟು ವೃದ್ಧಿಸಿಕೊಳ್ಳುತ್ತಿದ್ದೇವೆ.
ಬಾಂಗ್ಲಾದೇಶಕ್ಕೆ ಭಾರತವು ಅನಿಯಮಿತ ವಿದ್ಯುತ್ ಅನ್ನು ಪೂರೈಕೆ ಮಾಡುತ್ತಿದೆ. ಹಾಲಿ 600 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಆಗುತ್ತಿದೆ. ನಾವು ಈ ವರ್ಷ ಈ ಗುರಿಯನ್ನು 1100 ಮೆಗಾವ್ಯಾಟ್ ಗೆ ವಿಸ್ತರಿಸಿಕೊಂಡಿದ್ದೇವೆ.
ಬಾಂಗ್ಲಾದೇಶದ ಮೂಲಕವೇ ಈಶಾನ್ಯ ರಾಜ್ಯಗಳು ಅಂತರ್ಜಾಲದ ಸಂಪರ್ಕವನ್ನು ಪಡೆದುಕೊಳ್ಳುತ್ತಿವೆ. ಭಾರತವು ಬಾಂಗ್ಲಾದೇಶದ ಪ್ರಧಾನಮಂತ್ರಿ ಶ್ರೀ ಶೇಖ್ ಹಸೀನಾ ಅವರು ಗಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಮತ್ತು ಮೂಲ ಸೌಕರ್ಯ ಕಾರ್ಯಗಳಿಗೆ 1 ದಶಲಕ್ಷ ಡಾಲರ್ ನೆರವು ನೀಡಿದೆ. ಆ ಕಾರ್ಯ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಿದ್ದೇವೆ. ಕಾಮಗಾರಿಗಳನ್ನು ಗುರುತಿಸುವ ಮತ್ತು ಕೆಲವು ಕಾಮಗಾರಿಗಳಿಗೆ ಅದರ ಲಾಭವನ್ನು ನೀಡುವ ಪ್ರಯತ್ನ ಆಗಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲೂ ಬಾಂಗ್ಲಾದೇಶ ತ್ವರಿತಗತಿಯ ಪ್ರಗತಿಯನ್ನು ಕಾಣುತ್ತಿದೆ. ಇತ್ತೀಚೆಗೆ ಬಾಂಗ್ಲಾದೇಶವು ಮೊಟ್ಟ ಮೊದಲ ಉಪಗ್ರಹ ಬಂಗಬಂಧುವನ್ನು ಉಡ್ಡಯನ ಮಾಡಿದೆ. ಈ ಸಾಧನೆಗಾಗಿ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಕ್ ಹಸೀನಾ ಮತ್ತು ಆ ದೇಶದ ಜನರನ್ನು ಅಭಿನಂದಿಸುತ್ತೇನೆ. ಇವತ್ತು ಭಾರತದಲ್ಲಿ ಜನರ ಜೀವನ ಸುಧಾರಣೆ ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಉಪಗ್ರಹವನ್ನು ಬಳಕೆ ಮಾಡುತ್ತಿದ್ದೇವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭವಿಷ್ಯದ ದಿನಗಳಲ್ಲಿ ಉಭಯ ದೇಶಗಳು ಸಹಕಾರ ಸಾಧಿಸಿಕೊಳ್ಳುತ್ತವೆ ಎನ್ನುವ ಬಲವಾದ ನಂಬಿಕೆ ನನ್ನಲ್ಲಿದೆ.
ಎರಡೂ ದೇಶಗಳ ನಡುವಿನ ಪರಸ್ಪರ ಸಂಬಂಧಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಬಾಂಗ್ಲಾ ದೇಶದ ಪ್ರಧಾನಮಂತ್ರಿಗಳಾದ ಶ್ರೀಮತಿ ಶೇಕ್ ಹಸೀನಾ ಮತ್ತು ನನ್ನ ನಡುವಿನ ನಿತ್ಯದ ಮಾತುಕತೆಯು ಹೆಚ್ಚು ಫಲಪ್ರದವಾಗಿದೆ. ಕಳೆದ ವರ್ಷ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಇಂದಿನ ಕಾರ್ಯಕ್ರಮದಲ್ಲೂ ಭಾಗಿಯಾಗಿರುವುದು ತುಂಬಾ ಸಂತೋಷವನ್ನು ಉಂಟು ಮಾಡಿದೆ.
ಸ್ನೇಹಿತರೇ,
ನಮ್ಮ ಅಭಿಲಾಷೆಗಳು ಮತ್ತು ಸವಾಲುಗಳು ಬಹುತೇಕ ಒಂದೇ ರೀತಿಯಲ್ಲಿವೆ. ಹವಾಮಾನ ವೈಪರೀತ್ಯ ನಮ್ಮ ಮುಂದಿರುವ ದೊಡ್ಡ ಮಟ್ಟದ ಸವಾಲು. ಸುಡುವ ಸೂರ್ಯ ನಮ್ಮೆಲ್ಲರ ಆತಂಕ ಮತ್ತು ಸವಾಲಾಗಿದ್ದಾನೆ. ಪರಿಹಾರವೂ ಕೂಡಾ ಇದೇ ಸೂರ್ಯನ ರಶ್ಮಿಯಲ್ಲೇ ಅಡಗಿದೆ. ಪ್ರಧಾನಮಂತ್ರಿಗಳಾದ ಶ್ರೀಮತಿ ಶೇಖ್ ಹಸೀನಾ ಅವರು 2021ಕ್ಕೆ ಬಾಂಗ್ಲಾ ದೇಶದ ಎಲ್ಲರಿಗೂ ವಿದ್ಯುತ್ ನೀಡುವ ಸಂಕಲ್ಪವನ್ನು ಹೊಂದಿದ್ದಾರೆ. ಭಾರತದಲ್ಲೂ ಮುಂದಿನ ವರ್ಷದ ಒಳಗೆ ಎಲ್ಲ ಕುಟುಂಬಗಳಿಗೂ ವಿದ್ಯುತ್ ನೀಡುವ ಗುರಿಯನ್ನು ಪೂರೈಸುತ್ತೇವೆ. ನಮ್ಮ ದೇಶದ ಎಲ್ಲಾ ಹಳ್ಳಿಗಳಿಗೂ ವಿದ್ಯುತ್ ನೀಡುವ ಗುರಿಯನ್ನು ನಾವು ಈಗಾಗಲೇ ಪೂರೈಸಿದ್ದೇವೆ. ನಮ್ಮ ನಿರ್ಧಾರಗಳೂ ಒಂದೇ ಇವೆ. ಅವುಗಳನ್ನು ಪರಿಹಾರ ಮಾಡಲು ಕೈಗೊಂಡಿರುವ ಮಾರ್ಗಗಳೂ ಒಂದೇ ಮಾದರಿಯಲ್ಲಿವೆ.
ಸ್ನೇಹಿತರೇ,
ಭಾರತವು ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಯನ್ನು ಸಾಧಿಸಿಕೊಂಡಿದೆ. ಇಡೀ ವಿಶ್ವದ ಹಲವು ರಾಷ್ಟ್ರಗಳು ಈ ಮೈತ್ರಿಯಲ್ಲಿ ಸೇರಿಕೊಂಡು ಇದರ ಭಾಗವಾಗಿವೆ. ಈ ಮೈತ್ರಿಯು ಇಡೀ ವಿಶ್ವದಲ್ಲಿ ಸೌರ ಶಕ್ತಿಯ ಸಾಮರ್ಥ್ಯವನ್ನು ಪರಿಚಯಿಸುತ್ತದೆ. ವಿವಿಧ ದೇಶಗಳಲ್ಲಿ ಹೇಗೆ ಹೂಡಿಕೆ ಮಾಡಬೇಕು ಎಂಬ ತಂತ್ರಗಾರಿಕೆಯನ್ನು ಸಿದ್ಧಪಡಿಸುತ್ತದೆ. ಸೌರ ಮೈತ್ರಿಯಲ್ಲಿ ಬಾಂಗ್ಲಾ ದೇಶವೂ ಒಂದು ಭಾಗವಾಗಿದೆ ಎಂದು ಹೇಳಲು ನನಗೆ ಸಂತೋಷ ಎನಿಸುತ್ತದೆ. ಈ ವರ್ಷದ ಮಾರ್ಚ್ ನಲ್ಲಿ ಭಾರತದಲ್ಲಿ ಅಂತಾರಾಷ್ಟ್ರೀಯ ಸೌರಶಕ್ತಿ ಸಮ್ಮೇಳನವನ್ನು ಏರ್ಪಡಿಸಿದ್ದೆವು. ಈ ಸಮ್ಮೇಳನದಲ್ಲಿ ಬಾಂಗ್ಲಾದೇಶದ ಗೌರವಾನ್ವಿತ ಅಧ್ಯಕ್ಷರು ಪಾಲ್ಗೊಂಡಿದ್ದು ನಮಗೆ ಸಂತಸದ ವಿಚಾರವೇ ಆಗಿತ್ತು. ಅವಕಾಶಗಳನ್ನು ಅರ್ಜಿಸಿಕೊಳ್ಳುವಲ್ಲಿ ಸವಾಲುಗಳನ್ನು ಸ್ವೀಕರಿಸಲು ಎರಡೂ ದೇಶಗಳು ಹೇಗೆ ಬಲವಾದ ಆಶಾವಾದವನ್ನು ಇಟ್ಟುಕೊಂಡಿವೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಕಳೆದ ತಿಂಗಳು ಬಾಂಗ್ಲಾದೇಶದ ನೂರು ಮಂದಿ ಯುವಕರ ನಿಯೋಗವನ್ನು ನಾನು ಭೇಟಿ ಮಾಡಿದ್ದೆ. ಭಾರತದ ಯುವ ಜನಾಂಗಕ್ಕೆ ಅವರ ಕನಸುಗಳು ಮತ್ತು ಆಶೋತ್ತರಗಳು ಸರಿಸಮಾನವಾಗಿವೆ. ಎರಡೂ ದೇಶಗಳ ಯುವ ಸಮುದಾಯದ ಆಶೋತ್ತರ ಮತ್ತು ಕಸನಸುಗಳನ್ನು ನನಸು ಮಾಡುವತ್ತ ಕೆಲಸ ಮಾಡುತ್ತಿದ್ದೇವೆ.
ಇವತ್ತು ಪ್ರಧಾನಮಂತ್ರಿ ಶ್ರೀಮತಿ ಶೇಕ್ ಹಸೀನಾ ಅವರ ನಾಯಕತ್ವದಲ್ಲಿ ಅಭಿವೃದ್ಧಿಯ ಹೊಸ ಪಥದತ್ತ ದೇಶವು ಸಾಗಿದೆ. ಅಭಿವೃದ್ಧಿ ಶೀಲ ಆರ್ಥಿಕತೆಯ ಎಲ್ಲಾ ಹಂತಗಳಲ್ಲಿ ಭಾಗಿಯಾಗುತ್ತಾ ಬಾಂಗ್ಲಾದೇಶದ ಎಲ್ಲ ಜನರ ಆಶೋತ್ತರಗಳನ್ನು ಈಡೇರಿಸುತ್ತಿರುದಕ್ಕೆ ನಾನು ಶ್ರೀಮತಿ ಶೇಕ್ ಹಸೀನಾ ಅವರ ಬಗ್ಗೆ ಹೆಮ್ಮೆ ಪಡುತ್ತೇನೆ.
ಬಾಂಗ್ಲಾ ದೇಶವು ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆಗ ಗಣನೀಯವಾದ ಪ್ರಗತಿಯ ಸಾಧನೆಯನ್ನು ಮಾಡಿದೆ. ಬಡವರ ಜೀವನವನ್ನು ಸುಲಭ ಮಾಡಿದೆ. ನಮ್ಮ ದೇಶದ ಜನರನ್ನು ಈ ಐತಿಹಾಸಿಕ ಕಾರ್ಯವು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸಿದ್ದೇನೆ.
ಸ್ನೇಹಿತರೇ, ಇಂದು, ಭಾರತ ಮತ್ತು ಬಾಂಗ್ಲಾದೇಶದ ಅಭಿವೃದ್ಧಿಯ ಪ್ರಯಾಣದ ಎಳೆಯು ಸುಂದರವಾದ ಹಾರವನ್ನು ಹೋಲುತ್ತದೆ. ವಿಶ್ವದ ಬಹುತೇಕ ಭಾಗಗಳಲ್ಲಿ ಇಂದಿಗೂ ಅಸುರಕ್ಷತೆಯ ವಾತಾವರಣವು ಮನೆ ಮಾಡಿದೆ. ಜಗತ್ತಿನ ರಾಜಕೀಯ ಭೌತಿಕತೆಯು ಬದಲಾವಣೆ ನಿರಂತರವಾಗಿ ಆಗುತ್ತಲೇ ಇದೆ. ಆದರೂ ಕಳೆದ ಹಲವು ವರ್ಷಗಳಲ್ಲಿ ಹಿಂಜರಿಯುವ ಸತ್ಯಗಳು ಬಹಿರಂಗವಾಗಿವೆ. ಭಾರತ ಮತ್ತು ಬಾಂಗ್ಲಾ ದೇಶದ ನಡುವೆ ಬಾಂಧವ್ಯವು ಪ್ರಗತಿ, ಅಭಿವೃದ್ಧಿ, ಶಾಂತಿ ಮತ್ತು ಸ್ಥಿರತೆಗಾಗಿ ಗಟ್ಟಿಗೊಂಡಿದೆ. ನಮ್ಮ ನಡುವಿನ ಸಂಬಂಧವು ಕೇವಲ ದ್ವಿಪಕ್ಷೀಯ ಮಾತುಕತೆ ಒಂದರಿಂದಲೇ ಸಮೃದ್ದಗೊಂಡಿಲ್ಲ ಬಿಮ್ ಟೆಕ್ (ಬಿಐಎಮ್ ಎಸ್ ಟಿಇಸಿ)ಯಂತಹ ವೇದಿಕೆಯ ಮೂಲಗ ಗಟ್ಟಿಗೊಂಡಿದೆ. ಇದು ಪ್ರಾದೇಶಿಕ ಪ್ರಗತಿ ಮತ್ತು ಸಂಪರ್ಕವನ್ನು ಉತ್ತೇಜಿಸಿದೆ.
ಸ್ನೇಹಿತರೇ,
ಪ್ರತಿಯೊಂದು ದೇಶವೂ ಈ ಪ್ರದೇಶವು ಅಭಿವೃದ್ಧಿಯಾದರೆ ಪ್ರಗತಿಯನ್ನು ಕಂಡೇ ಕಾಣಲಿದೆ. ಇದು ಸಮಯದಿಂದ ಸಮಯಕ್ಕೆ ಸಾಧ್ಯವಾಗುತ್ತಿದೆ. ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಈ ಸ್ನೇಹ ಸಂಬಂಧ ಮತ್ತು ಸಹಕಾರ ಭಾವನೆಯು ಇತರರ ಅಧ್ಯಯನ ಮತ್ತು ಅನುಕರಣೆಗೆ ಕಾರಣವಾಗಿದೆ.
ಸ್ನೇಹಿತರೇ,
ಪ್ರಧಾನಮಂತ್ರಿ ಶ್ರೀ ಶೇಖ್ ಹಸೀನಾ ಅವರು 2041ರ ಒಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ಕೈಗೊಂಡಿದ್ದಾರೆ. ಇದು ಬಾಂಗ್ಲಾದೇಶದ ಕಲ್ಯಾಣದ ಬಗ್ಗೆ ಬಂಗಬಂಧು ಅವರು ಇಟ್ಟುಕೊಂಡಿದ್ದ ದೂರದೃಷ್ಟಿ ಮತ್ತು ಸಂಪ್ರದಾಯದ ಸಂಕೇತವಾಗಿದೆ. ಈ ಗುರಿಯನ್ನು ಸಾಧನೆ ಮಾಡಲು ಭಾರತವು ಶೇಖ್ ಹಸೀನಾ ಅವರಿಗೆ ಎಲ್ಲರೀತಿಯ ಸಹಕಾರವನ್ನು ನೀಡಲಿದೆ.
ನಾನು ಮತ್ತೊಮ್ಮೆ ಶ್ರೀಮತಿ ಶೇಖ್ ಹಸೀನಾ ಅವರಿಗೆ ಇಲ್ಲಿಗೆ ಬಂದಿರುವುದಕ್ಕಾಗಿ ತುಂಬು ಹೃದಯದ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಬಾಂಗ್ಲಾದೇಶ ಭವನದ ಲೋಕಾರ್ಪಣಾ ಸಮಾರಂಭದಲ್ಲಿ ಭಾಗಿಯಾಗಿರುವುದಕ್ಕೆ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು. ಶುಭಕಾಮನೆಗಳು.. ಧನ್ಯವಾದ..
……………..
PM Sheikh Hasina and I inaugurated the Bangladesh Bhavan at the Visva-Bharati University. The previous few years have been marked by a historic growth and strengthening of India-Bangladesh relations. This augurs well for the people of both nations. pic.twitter.com/XY6ozfRWQP
— Narendra Modi (@narendramodi) May 25, 2018
Bangladesh Bhavan is a symbol of the warm and deep-rooted cultural ties between India and Bangladesh. pic.twitter.com/Ssn2OXIjwJ
— Narendra Modi (@narendramodi) May 25, 2018
Gurudev Tagore connects India and Bangladesh.
— Narendra Modi (@narendramodi) May 25, 2018
Bangabandhu Sheikh Mujibur Rahman was greatly inspired by the teachings of Gurudev Tagore. pic.twitter.com/KKYJtkZB1U