ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪಹಾಡ್ಪುರ ಗ್ರಾಮದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರೊಂದಿಗೆ ಸಂತಾಲಿ ಜಹೇರಾ ಮತ್ತು ಹೋ ಜಹೇರಾಗಳಿಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದಾರೆ.
ಬುಡಕಟ್ಟು ಸಮುದಾಯಗಳು ಪಾಲಿಸಿಕೊಂಡು ಬಂದಿರುವ ಆಳವಾದ ಆಧ್ಯಾತ್ಮಿಕ ಸಂಪ್ರದಾಯಗಳು ಮತ್ತು ಪ್ರಕೃತಿಯೊಂದಿಗಿನ ಸಾಮರಸ್ಯದ ಸಂಬಂಧವನ್ನು ಈ ಪವಿತ್ರ ತೋಪುಗಳು (sacred groves) ಬಿಂಬಿಸುತ್ತವೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ.
ಇಂತಹ ಆಚಾರ-ವಿಚಾರಗಳು ಮತ್ತು ಸಂಪ್ರದಾಯಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗಗಳಾಗಿವೆ ಎಂದು ಶ್ರೀ ಮೋದಿಯವರು ಉಲ್ಲೇಖಿಸಿದ್ದಾರೆ.
ಭವಿಷ್ಯದ ಪೀಳಿಗೆಗಾಗಿ ಈ ಕಾಲಾತೀತ ಸಂಪ್ರದಾಯಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಇರುವ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಬರೆದಿದ್ದಾರೆ;
“ರಾಷ್ಟ್ರಪತಿಯವರ ಜೊತೆಗೂಡಿ ಪಹಾಡ್ಪುರ ಗ್ರಾಮದ ಸಂತಾಲಿ ಜಹೇರಾ ಮತ್ತು ಹೋ ಜಹೇರಾಗಳಿಗೆ ತೆರಳಿದ್ದೆ.
ನಮ್ಮ ಬುಡಕಟ್ಟು ಸಮುದಾಯಗಳು ಪಾಲಿಸಿಕೊಂಡು ಬಂದಿರುವ ಆಳವಾದ ಆಧ್ಯಾತ್ಮಿಕ ಸಂಪ್ರದಾಯಗಳು ಮತ್ತು ಪ್ರಕೃತಿಯೊಂದಿಗಿನ ಸಾಮರಸ್ಯದ ಸಂಬಂಧವನ್ನು ಬಿಂಬಿಸುವ ಈ ಪವಿತ್ರ ತೋಪುಗಳಿಗೆ ಗೌರವ ನಮನಗಳನ್ನು ಸಲ್ಲಿಸಿದೆ.
ಇಂತಹ ಆಚಾರ-ವಿಚಾರಗಳು ಮತ್ತು ಸಂಪ್ರದಾಯಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿವೆ.
ಭವಿಷ್ಯದ ಪೀಳಿಗೆಗಾಗಿ ಈ ಕಾಲಾತೀತ ಸಂಪ್ರದಾಯಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ.
@rashtrapatibhvn”
*****
Along with Rashtrapati Ji, went to Santhali Jahera and Ho Jahera in Pahadpur village.
— Narendra Modi (@narendramodi) June 20, 2026
Paid respects at these sacred groves that embody the deep spiritual traditions and harmonious relationship with nature cherished by our tribal communities. Such customs and traditions are an… pic.twitter.com/q4rtfLTx0n
ରାଷ୍ଟ୍ରପତିଙ୍କ ସହିତ ପାହାଡ଼ପୁର ଗାଁରେ ସାନ୍ତାଳୀ ଜାହେର ଏବଂ ହୋ ଜାହେର ପରିଦର୍ଶନ କଲି ।
— Narendra Modi (@narendramodi) June 20, 2026
ମୁଁ ଏହି ପବିତ୍ର ଉପବନରେ ଶ୍ରଦ୍ଧାସୁମନ ଅର୍ପଣ କଲି । ଏହା ଆମ ଜନଜାତି ସମ୍ପ୍ରଦାୟର ଗଭୀର ଆଧ୍ୟାତ୍ମିକ ପରମ୍ପରା ଓ ପ୍ରକୃତି ସହ ସାମଞ୍ଜସ୍ୟପୂର୍ଣ୍ଣ ସମ୍ପର୍କକୁ ଦର୍ଶାଇଥାଏ । ଏଭଳି ରୀତିନୀତି ଓ ପରମ୍ପରା ଭାରତର ସମୃଦ୍ଧ ସାଂସ୍କୃତିକ… pic.twitter.com/teAnsAKd2r