ಪಿಎಂಇಂಡಿಯಾ
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ರೈತ ಸೋದರ-ಸೋದರಿಯರೇ, ಸಹಕಾರಿ ಕ್ಷೇತ್ರದ ಎಲ್ಲ ಗಣ್ಯರೇ, ಮೊಟ್ಟಮೊದಲಿಗೆ ನಾನು ವಸಂತದಾದಾ ಪಾಟೀಲರ ಜನ್ಮಶತಾಬ್ದಿಯ ಶುಭಾರಂಭದ ಸಮಯದಲ್ಲಿ ಅವರಿಗೆ ನನ್ನ ಗೌರವಪೂರ್ಣ ಅಶ್ರುತರ್ಪಣವನ್ನು ನೀಡುತ್ತೇನೆ. ಸಾರ್ವಜನಿಕ ಜೀವನದಲ್ಲಿ ಅವರು ಉನ್ನತ ಮೌಲ್ಯಗಳ ಪರಿಚಯ ಮಾಡಿಕೊಟ್ಟರು. ಆದರೆ ಇದರ ಜೊತೆ-ಜೊತೆಗೇ ತಮ್ಮ ಜೀವನವನ್ನು ರೈತರೊಡನೆ, ಸಹಕಾರಿತನದೊಡನೆ ಅದರಲ್ಲೂ ಆಧುನಿಕತೆಯೆಡೆಗೆ ನಿರಂತರವಾಗಿ ನಡೆಯುತ್ತಿದ್ದುದು ಅವರ ಬಹಳ ದೊಡ್ಡ ಕೊಡುಗೆಯೆನ್ನಬಹುದು.ಇಂದು ನಾವೇನು ಈ ಸಂಸ್ಥೆಯ ಭದ್ರಬುನಾದಿಯನ್ನೇನು ನೋಡುತ್ತಿದ್ದೇವೋ ಅದರ ಹಿಂದೆ ವಸಂತದಾದಾ ಪಾಟೀಲರ ದೂರದೃಷ್ಟಿ ಹಾಗೂ ಅವರ ಕೊಡುಗೆಗಳು ಭಾರತದ ಆರ್ಥ ವ್ಯವಸ್ಥೆಯ ಮೂಲವಾದ ಹಳ್ಳಿ ಮತ್ತು ರೈತರೊಡನೆ ಸೇರಿಕೊಂಡಿದೆ. ಅವುಗಳನ್ನು ಚೆನ್ನಾಗಿ ಅರಿತುಕೊಂಡು ಅವಕ್ಕೆ ಸಾಮರ್ಥ್ಯನೀಡುವ ನಿರಂತರ ಪ್ರಯತ್ನವು ಮುಂಬರುವ ಜನಾಂಗಕ್ಕೂ ಉಪಕಾರಿಯಾಗಲಿವೆ.
ನಮ್ಮ ದೇಶದಲ್ಲಿ ಕೃಷಿಕ್ಷೇತ್ರದಲ್ಲಿ ಸಂಶೋಧನೆಗಳಾಗಬೇಕಿತ್ತು. ತಂತ್ರಜ್ಞಾನದ ಬಳಕೆ ಹೆಚ್ಚಾಗಬೇಕಿತ್ತು. ವಿಶ್ವವು ಯಾವ ವೇಗದಲ್ಲಿ ಮುಂದುವರಿಯುತ್ತಿದೆಯೋ , ಅದರಲ್ಲಿ ನಾವು ಸಾಕಷ್ಟು ಹಿಂದುಳಿದಿದ್ದೇವೆ. ಇಂದಿಗೂ ವಿಶ್ವದಲ್ಲಿ ಪ್ರತಿ ಎಕರೆಗೆ ಕಬ್ಬಿನ ಬೆಳೆಯ ಪ್ರಮಾಣಕ್ಕೆ ಹೋಲಿಸಿದಾಗ ನಾವು ಸಾಕಷ್ಟು ಹಿಂದಿದ್ದೇವೆ. ಇಂದಿಗೂ ವಿಶ್ವದೆಲ್ಲೆಡೆ ಕಬ್ಬಿನಲ್ಲಿರುವ ಸಕ್ಕರೆಯ ಅಂಶಕ್ಕೂ ಹಾಗೂ ನಮ್ಮ ದೇಶದಲ್ಲಿರುವ ಸಕ್ಕರೆಯ ಅಂಶದಲ್ಲಿ ವ್ಯತ್ಯಾಸಗಳಿವೆ. ಈ ವಿಷಯದಲ್ಲಿ ಪರೀಕ್ಷಿಸಿದಾಗ ದಕ್ಷಿಣದಲ್ಲಿ ಒಂದು, ಉತ್ತರದಲ್ಲಿ ಒಂದು, ಮಧ್ಯ ಭಾಗದಲ್ಲಿ ಒಂದು ಪ್ರಮಾಣ ದೊರೆಯುತ್ತದೆ. ಇಂತಹ ಸಮಯದಲ್ಲಿ ಒಂದು ಸಂಸ್ಥೆ ಈ ಉದ್ದೇಶ್ಯಕ್ಕಾಗಿ ತತ್ಪರತೆಯಿಂದ ನಿರಂತರವಾಗಿ ವೈಜ್ಞಾನಿಕರೊಡನೆ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ರೈತನಿಗೆ ಅರ್ಥವಾಗುವ ಭಾಷೆಯಲ್ಲಿ ಹೊಲಗದ್ದೆಗಳವರೆಗೂ ತಲುಪುವ ಪ್ರಯತ್ನ ಮಾಡುತ್ತಿದೆ. ನನ್ನ ಪ್ರಕಾರ ಇದು ಸಣ್ಣ ಕೆಲಸವಲ್ಲ . ಇದರ ಪರಿಣಾಮದ ಅನುಭವ ನಮಗೆಲ್ಲ ಆಗಿದೆ. ನಾನು ಇಂದು ಶರದ್ ಜೀ ಯವರೊಡನೆ ಹೊಲಗದ್ದೆಯ ಭೇಟಿಯನ್ನೂ ಮಾಡಿದೆ ಹಾಗೂ ಎಲ್ಲ ಅಂಶಗಳನ್ನೂ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಿದೆ. ನನಗೂ ಈ ವಿಷಯಗಳಲ್ಲಿ ಸ್ವಲ್ಪ ಆಸಕ್ತಿ ಇದೆ. ನಾನೂ ಕೆಲ ಬಾರಿ ಕಬ್ಬು ಬೆಳೆಗೆ ಪ್ರವಾಹ ದಂತಹ ನೀರಾವರಿ ಬೇಕು ಎಂದು ಆದಾಗ ನಾನೂ ಚಿಂತಿತನಾಗಿದ್ದೆ. ರೈತನ ತಲೆಯಲ್ಲಿ ಎಲ್ಲಿಯವರೆಗೆ ಜಮೀನಿನಲ್ಲಿ ನೀರು ನಿಂತಿರುವುದಿಲ್ಲವೋ ಅಲ್ಲಿಯವರೆಗೆ ಕಬ್ಬಿನ ಬೆಳೆ ಬೆಳೆಯದು ಎಂಬ ಭಾವನೆ ತುಂಬಿತ್ತು.
ಬಹಳ ವರ್ಷಗಳ ಹಿಂದೆ ನಾನು ಈ ವಿಷಯಗಳ ಬಗ್ಗೆ ತಿಳುವಳಿಕೆ ಪಡೆದುಕೊಳ್ಳಲು ಮಾರಿಷಸ್ ಗೆ ಹೋಗಿದ್ದೆ, ಆಗ ನಾನು ರಾಜಕೀಯದಲ್ಲಿರಲಿಲ್ಲ. ತುಂತುರು ನೀರು ಸಿಂಪಡಿಸುವಿಕೆ ಯಿಂದ ಅಲ್ಲಿನ ಹೊಲಗದ್ದೆಗಳು ನಳನಳಿಸುತಿದ್ದವು. ಅದು ಪ್ರವಾಹ ದೋಪಾದಿ ನೀರಾವರಿ ಇಂದಲ್ಲ. ಅಲ್ಲಿಂದ ಬಂದ ನಂತರ ನಾನು ನಮ್ಮ ರೈತರಿಗೆ ಅರ್ಥಮಾಡಿಸಿ ಹೇಳಲು ಪ್ರಯತ್ನಿಸಿದ್ದೆ . ಅವರಿಗೆ ಇದೊಂದು ಅದ್ಭುತ ಎನಿಸಿತ್ತು, ಆದರೆ ಇವನಿಗೇನು ಗೊತ್ತು ಎಂಬ ಭಾವ ಅವರಲ್ಲಿತ್ತು. ಆದರೆ ನಾನಂತೂ ಹೀಗಲ್ಲ ಕೇಳು ತಮ್ಮಾ ನಾವು ಸೂಕ್ಷ್ಮ ನೀರಾವರಿ ಮೂಲಕ ಒಳ್ಳೆಯ ಪರಿಣಾಮ ಪಡೆಯಬಹುದು ಎಂದು ನನ್ನ ಪ್ರಯತ್ನ ಮಾಡುತ್ತಲೇ ಇದ್ದೆ. ಈ ದಿನಗಳಲ್ಲಿ ನಮಗೆ ನೀರಿನ ಅಭಾವದ ಸಂಕಟ ಕಾಡುತ್ತಿದೆ. ಅದರಲ್ಲೂ ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಅದರ ಅನುಭವ ಆಗುತ್ತಿದೆ. ಇಲ್ಲಿಯ ರೈತ ಬಹಳ ಬೇಗ ಕಬ್ಬುಬೆಳೆಯಲ್ಲಿ ಸೂಕ್ಷ್ಮ ನೀರಾವರಿ ಕಡೆಗೆ ವಾಲುತ್ತಿದ್ದಾನೆ ಹಾಗೂ ಇದರ ಲಾಭ ಕೂಡ ನಮಗೆ ಕಾಣುತ್ತಿದೆ. ಎಲ್ಲಿ ಸೂಕ್ಷ್ಮ ನೀರಾವರಿ ಮೂಲಕ ಕಬ್ಬಿನ ವ್ಯವಸಾಯ ಮಾಡಲಾಯಿತೋ ಅಲ್ಲಿ ಬೆಳೆ, ಬೆಳೆಯ ಗುಣವತ್ತತೆ, ಬೆಳೆಯ ಪ್ರಮಾಣ ಮತ್ತು ಅದರಲ್ಲಿ ಸಕ್ಕರೆಯ ಅಂಶದಲ್ಲಿ ಬಹಳಷ್ಚು ಮಟ್ಟಿಗೆ ಸುಧಾರಣೆ ಕಂಡು ಬಂದಿದೆ. ಹೀಗಾಗಿ ಮೆಲ್ಲಮೆಲ್ಲಗೆ ಸಕ್ಕರೆ ಕಾರ್ಖಾನೆ ಯವರಿಗೂ ಒಂದುವೇಳೆ ನಾವು ಸೂಕ್ಷ್ಮ ನೀರಾವರಿ ಕಡೆಗೆ ಗಮನಹರಿಸಿದರೆ, ಅದಕ್ಕೆ ಪ್ರೋತ್ಸಾಹ ನೀಡಿದರೆ ಖಂಡಿತಾ ಲಾಭ ದೊರೆಯುವುದೆನ್ನುವ ಭಾವನೆ ಮೂಡತೊಡಗಿದೆ.
ಇಲ್ಲಿ ಯಾವ ಸಂಶೋಧನಾ ಸಂಸ್ಥೆ ಕೆಲಸ ನಡೆಸುತ್ತಿದೆಯೋ ಅದರ ಬಗ್ಗೆ ನಾವು ಕೆಲಸ ಮಾಡಬೇಕಾದರೆ ಎರಡು ಅಂಶಗಳ ಕಡೆ ಗಮನ ಹರಿಸಿ ಕೆಲಸ ಮಾಡಬೇಕಾಗುತ್ತದೆ . ನಾನು ಈ ವಿಭಾಗಗಳೊಡನೆ ಈ ಮೊದಲೂ ಸಹ ಒಮ್ಮೆ ಮಾತನಾಡಿದ್ದೆ. ಪ್ರಪಂಚದ ಬೇರೆಡೆಗಳಲ್ಲಿ ಬೆಳೆಯುವ ಕಬ್ಬಿನ ಎರಡು ಗಂಟುಗಳಿಗೂ ನಡುವಿನ ಅಂತರ ಹೆಚ್ಚು .ನಮ್ಮಲ್ಲಿ ಬೆಳೆಯುವ ಕಬ್ಬಿನ ಎರಡು ಗಂಟುಗಳಿಗೂ ನಡುವಿನ ಅಂತರ ಕಡಿಮೆ. ಈ ಕಾರಣದಿಂದ ನಮ್ಮ ಸಕ್ಕರೆಯ ಅಂಶವು ನಷ್ಟವಾಗಿ ಬಿಡುತ್ತೆ. ನಾವು ಜನಾಂಗಿಕ ಹಸ್ತಕ್ಷೇಪದಿಂದ ನಮ್ಮ ಕಬ್ಬಿನಲ್ಲಿರುವ ಈ ಗಂಟುಗಳೇನಿವೆ ಇವುಗಳ ನಡುವಿನ ಅಂತರ ವನ್ನು ಹೆಚ್ಚು ಮಾಡುವುದು ಹೇಗೆ , ಒಂದುವೇಳೆ ಇವುಗಳ ನಡುವಿನ ಅಂತರ ಹೆಚ್ಚಿಸಿದರೆ ನಮ್ಮ ಕಬ್ಬಿನಲ್ಲಿ ಸಕ್ಕರೆಯ ಅಂಶವು ಹೆಚ್ಚಾಗುತ್ತದೆ. ಈ ಕಾರಣದಿಂದ ನೀರಿನ ಬಳಕೆ ಕೂಡ ಕಡಿಮೆಯಾಗುತ್ತೆ . ಯಾಕೆಂದರೆ ಗಂಟುಗಳ ಕಾರಣದಿಂದ ಅದು ಬೆಳೆಯಲು ಹೆಚ್ಚು ಶಕ್ತಿ
ಬೇಕಾಗುತ್ತದೆ.ಒಂದುವೇಳೆ ನಾವು ಈ ನಿಟ್ಟಿನಲ್ಲಿ ಬೇರೆ ಬೆಳೆಗಳಿಗೂ ಹೆಚ್ಚಿನ ಸಂಶೋಧನೆ ಮಾಡಬಹುದೇನೋ. ಆದರೆ ನಾವು ಮಾಡುವುದು ಸಕ್ಕರೆ ಗಾಗಿ ಮಾತ್ರ. ಈ ಸಂಸ್ಥೆ ಕೂಡ ಸಕ್ಕರೆಗಾಗಿಯೇ ಮೀಸಲಾಗಿದೆ. ಈ ದಿಕ್ಕಿನಲ್ಲಿ ಕೆಲಸ ಮಾಡಲು ಒಂದುವೇಳೆ ಶರದ್ ರಾವ್ ರವರು ಮುಂದಾಳತ್ವ ವಹಿಸಿದರೆ ಹಾಗೂ ಇಲ್ಲಿರುವ ವಿಜ್ಞಾನಿಗಳೂ ಸ್ವಲ್ಪ ಕೆಲಸ ಮಾಡಿದರೆ, ಇನ್ನೊಂದು ಬೆಳೆಯೂ ಒಂದೇ ಸ್ವಭಾವದ್ದು ಆದ್ದರಿಂದ, ಆ ಬೆಳೆ ಬಿದಿರು. ಬಿದಿರಿನ ವ್ಯವಸಾಯಕ್ಕೆ ವಿಶ್ವದಲ್ಲಿ ಒಳ್ಳೆಯ ಮಾರುಕಟ್ಟೆಯಿದೆ. ಆದರೆ ನಮ್ಮ ದೇಶದ ಬಿದಿರಿನಲ್ಲೂ ಇಂತದ್ದೇ ಸಮಸ್ಯೆ ಅದೆಂದರೆ ಅದರಲ್ಲೂ ಗಂಟುಗಳ ಮಧ್ಯೆ ಅಂತರ ಬಹಳ ಕಡಿಮೆಯಿದೆ. ಈ ಕಾರಣದಿಂದ ಬಿದಿರಿನಿಂದ ತಯಾರಾಗುವ ವಸ್ತುಗಳ ಹೆಚ್ಚಿನ ಮೌಲ್ಯದಲ್ಲಿ ನಮ್ಮ ರೈತರಿಗೆ ದೊರೆಯಬೇಕಾದಷ್ಟು ಲಾಭ ದೊರೆಯುವುದಿಲ್ಲ. ಬಿದಿರಿನ ಬೆಳೆಗೆ ನೀರೂ ಕಡಿಮೆ ಸಾಕು ಬೆಳೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಜನಾಂಗಿಕ ಹಸ್ತಕ್ಷೇಪದಿಂದ ಕಬ್ಬು ಬೆಳೆಯಲ್ಲಿ ನಾವು ಬದಲಾವಣೆ ತರಬಲ್ಲವರಾದರೆ…. ಹೀಗೆ …ನನಗೆ ಸಣ್ಣ – ಸಣ್ಣ ಅನುಮಾನಗಳಿವೆ. ಆದರೆ ನಾನೇನೂ ವಿಜ್ಞಾನಿಯಲ್ಲ. ವಿಜ್ಞಾನಿಗಳು ಈ ವಿಷಯದಲ್ಲಿ ಹೆಚ್ಚು ಸಹಾಯ ಮಾಡಬಲ್ಲರು. ಬಿದಿರಿನಲ್ಲೂ ಇದೇ ಸಂಶೋಧನೆಯನ್ನು ಅಳವಡಿಸಿ ಎರಡೂ ಒಟ್ಟೋಟ್ಟಿಗೇ ನಡೆದರೆ ನಾವು ವಿಶ್ವ ಮಟ್ಟದ ಸ್ಪರ್ಧಾತ್ಮಕ ಗುಣಮಟ್ಟದ ಬಿದಿರನ್ನು ನಾವು ತಂದರೆ ನಮ್ಮ ದೇಶವೂ ಕೃಷಿ ಆರ್ಥಿಕತೆಯ ಪ್ರಾರಂಭ ಮಾಡಬಹುದು. ಆ ದಿಕ್ಕಿನಲ್ಲೂ ನಾವು ಯೋಚಿಸಬಹುದು.
ಎರಡನೇ ವಿಷಯವೇನೆಂದರೆ ಜಮೀನು ಕಡಿಮೆಯಾಗುತ್ತಿರುವುದು. ರೈತರು ತಲೆತಲಾಂತರದಿಂದ ಮಕ್ಕಳಿಗೆ ಜಮೀನನ್ನು ತುಂಡು-ತುಂಡು ಮಾಡಿ ಹಂಚುತ್ತಾ ಬರುತ್ತಿದ್ದಾರೆ. ಜನಸಂಖ್ಯೆಯ ಹೆಚ್ಚಳದಿಂದಲೂ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಹೀಗಾಗಿ ರೈತನಿಗೆ ಒಳಿತಾಗಬೇಕಾದರೆ ಪ್ರತಿ ಹೆಕ್ಟೇರಿಗೆ ತಳಿಯು ಹೆಚ್ಚಾಗಬೇಕು, ಪ್ರತಿ ಹೆಕ್ಟೇ ರಿಗೆ ತಳಿಯು ಹೆಚ್ಚಾಗಬೇಕೆಂದರೆ ಹೆಚ್ಚು-ಹೆಚ್ಚು ರಾಸಾಯನಿಕ ಗೊಬ್ಬರ ಹಾಕಬೇಕೆಂದಲ್ಲ. ವೈಜ್ಞಾನಿಕ ರೀತಿಯಿಂದ ಸಮತೋಲನ ಪ್ರಮಾಣದಲ್ಲಿ ಉಪಯೋಗಮಾಡುವುದರಿಂದ ಇದು ಸಾಧ್ಯ. ಸಂತೋಷದ ವಿಷಯವೆಂದರೆ ಮೊದಲು ಕಬ್ಬು ಬೆಳೆಯುವ ರೈತನು ನಾವು ಕಬ್ಬಿನ ಬೆಳೆಯ ಮಧ್ಯದ ಸಾಲಿನಲ್ಲಿ ಮತ್ತೊಂದು ಮೂರನೇ ಬೆಳೆ ಬೆಳೆಯ ಬಹುದೆಂಬ ವಿಷಯವನ್ನು ಒಪ್ಪಲು ತಯಾರಿರಲಿಲ್ಲ. ಈಗ ಕಬ್ಬಿನ ಎರಡು ಪಂಕ್ತಿಯ ನಡುವೆ ಇದನ್ನು, ವಿಶೇಷವಾಗಿ ದ್ವಿದಳ ಧಾನ್ಯ , ತೊಗರಿಯನ್ನು, ಹೆಸರನ್ನು ರೈತರು ಈಗ ನಿಧಾನವಾಗಿ ಬೆಳೆಯಲು ಆರಂಭಿಸಿದ್ದಾರೆ. ಇದರಲ್ಲಿ ಯಾರೂ ಹನಿ ನೀರಾವರಿ ಅಧವಾ ತುಂತುರು ನೀರಾವರಿಯನ್ನು ಬಳಸಲು ಆರಂಭಿಸಿದ್ದಾರೋ ಅವರಿಗೆ ಇದು ಬಹಳ ಸುಲಭವಾಗಿ ಬಿಟ್ಟಿದೆ. ಇದು ಒಂದು ರೀತಿಯಲ್ಲಿ ಉಪ-ಬೆಳೆಯಾಗಿದೆ. ಸಕ್ಕರೆಯಿಂದ ನಿಮಗೆ ಸಿಗುತ್ತಿದ್ದ ಆದಾಯವಂತೂ ಸಿಕ್ಕೇ ಸಿಗುತ್ತೆ. ಮಧ್ಯದಲ್ಲಿ ಖಾಲಿಯಿದ್ದ ಈ ಜಾಗದಲ್ಲಿ ಕೆಲವರು ತರಕಾರಿ ಬೆಳೆಯುತ್ತಾರೆ. ಮತ್ತೆ ಕೆಲವರು ಹೂ ಬೆಳೆಯುತ್ತಾರೆ . ಆದರೆ ಹೆಚ್ಚಿನವರು ದ್ವಿದಳ ಧಾನ್ಯ ವನ್ನು ಬೆಳೆಯುತ್ತಾರೆ. ಬೇಳೆಕಾಳುಗಳಿಗೆ ಪ್ರಚಾರ ಕೊಡಿರೆಂದು ನಾವು ಕೇಳಿಕೊಳ್ಳುತ್ತೇವೇ . ಇಂದಿಗೂ ಸಹ ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ದ್ವಿದಳ ಧಾನ್ಯವನ್ನು ಆಮದು ಮಾಡಿ ಕೊಳ್ಳಲಾಗುತ್ತಿದೆ. ನಮ್ಮಲ್ಲಿ ದ್ವಿದಳ ಧಾನ್ಯಗಳ ಅವಶ್ಯಕತೆ ಹೆಚ್ಚು. ಆದ್ದರಿಂದ ಸಕ್ಕರೆಯೊಡನೆ ನಾವು ದ್ವಿದಳಧಾನ್ಯಕ್ಕೆ ಒತ್ತುಕೊಟ್ಟರೆ ಒಳ್ಳೆಯ ಮಾರುಕಟ್ಟೆ ಸಿಗುವ ಖಾತರಿಯಿದೆ. ಒಮ್ಮೊಮ್ಮೆ ಸಕ್ಕರೆಯ ಬೆಲೆ ಕುಸಿದರೂ ನಮ್ಮ ರೈತ ಒಂದು ವರ್ಷ ಸಂಕಟ ಅನುಭವಿಸಬೇಕಾಗುತ್ತದೆ. ಈ ಮಧ್ಯದ ಜಾಗದ ವ್ಯವಸಾಯದಿಂದ ಅವನಿಗೆ ಲಾಭವಾಗುತ್ತದೆ. ಆ ನಿಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಂಶೋಧನೆ ನಡೆಸಿರಿ, ಆ ಸಂಶೋಧನೆ ಮಾಡುವ ಅಗತ್ಯ ನಮಗಿದೆ.
ಇಲ್ಲಿಯವರೆಗೆ ನಮ್ಮ ಯಾವ ರೈತ ಕಬ್ಬಿನೊಡನೆ ಸಂಪರ್ಕ ಹೊಂದಿದ್ದನೋ ಅವನ ಸಂಪೂರ್ಣ ಅದೃಷ್ಟ ಸಕ್ಕರೆ ಕಾರ್ಖಾನೆಯ ಮೇಲೆ ಅವಲಂಬಿತವಾಗಿತ್ತು. ಅಲ್ಲಿ ಸಹಕಾರಿ ಬುನಾದಿ ಗಟ್ಟಿಯಾಗಿತ್ತು. ವಸಂತ್ ದಾದಾ ಪಾಟೀಲರೆನ್ನಿ, ಶರದ್ ರಾವ್ ಅವರ ತಂದೆಯ ಕಾಲದ ಮಾತನಾಡಿ ಅಥವಾ ಬೈಕುಂಠ ರಾಯ್ ಮೆಹ್ತಾ ಎಂಬ ಹಳ್ಳಿಯ ಒಬ್ಬ ಸಮರ್ಪಿತ ಮುಖಂಡರಿದ್ದರು ಅವರಾದರೂ ಸರಿ.
ಈಗಿನ ಪೀಳಿಗೆಯು ಈ ಸಹಕಾರಿ ಬುನಾದಿಯನ್ನು ಅವಕಾಶವಾದೀ ವ್ಯವಸ್ಥೆಯಾಗಿಸಿಬಿಟ್ಟಿತು. ಈ ಕಾರಣದಿಂದ ಇಂದು ಗುಜರಾತಿನಲ್ಲಾಗಲೀ, ಮಹಾರಾಷ್ಟ್ರದ ರೈತರಿಗೆ ಸಂಕಟ ಸಮಯದಲ್ಲಿ ಅಲ್ಪ ಸ್ವಲ್ಪ ಸಹಾಯ ದೊರೆಯುವುದು ನಿಜ. ಆದರೆ ನಾವು ಮೌಲ್ಯವರ್ಧನೆಯಲ್ಲಿ ವಿಶ್ವ ಆರ್ಥಿಕತೆಯನ್ನು ಕಡೆಗಾಣಿಸುವುದಂತೂ ಸಾಧ್ಯವಿಲ್ಲ. ವಿಶ್ವದಲ್ಲಿ ಸಕ್ಕರೆ ಹೆಚ್ಚಾದರೂ ಭಾರತಕ್ಕೆ ಹೊಡೆತ ಬೀಳುತ್ತದೆ. ವಿಶ್ವದಲ್ಲಿ ಸಕ್ಕರೆ ಕಡಿಮೆಯಾದರೆ ಭಾರತಕ್ಕೆ ಅವಕಾಶ ದೊರೆಯುತ್ತದೆ. ಕೆಲವೊಮ್ಮೆ ಭಾರತಕ್ಕೆ ಅವಕಾಶ ದೊರೆತಾಗ ಕ್ಷಾಮ ತಲೆದೋರಿರುತ್ತದೆ, ಆಗ ರೈತ ತೊಂದರೆಯಲ್ಲಿರುತ್ತಾನೆ. ಹೀಗಾಗಿ ಆ ಅವಕಾಶದ ಲಾಭ ಪಡೆಯಲಾರ. ಇಂತಹ ಪರಿಸ್ಥಿತಿಗಳಲ್ಲಿ ನಮ್ಮ ಈ ಕ್ಷೇತ್ರವನ್ನು ಸಂಬಾಳಿಸಿಕೊಳ್ಳಬೇಕಾಗುತ್ತದೆ. ಅದರಲ್ಲೊಂದು ಉತ್ತಮ ಮಾರ್ಗವಿದೆ, ಇದರ ಮೇಲೆ ನಾವು ನಂಬಿಕೆಯಿಡಬಹುದು. ಅದೆಂದರೆ ಎಥನಾಲ್. ಇಂದು ಭಾರತದಲ್ಲಿ ಊರ್ಜಾಶಕ್ತಿಯ ಆಮದು ನಮ್ಮ ವಿದೇಶೀ ಬಂಡವಾಳವನ್ನೆಲ್ಲಾ ನುಂಗುತ್ತಿದೆ. ನಮ್ಮ ಹಣವೆಲ್ಲಾ ಪೆಟ್ರೋಲ್, ಡೀಜಲ್ ಇವುಗಳಲ್ಲಿ ವ್ಯರ್ಥವಾಗಿ ಖರ್ಟು ಮಾಡಬೇಕಾಗಿದೆ. ಎಥನಾಲ್ ನಿಂದ ನಾವು ಪೆಟ್ರೋಲ್, ಡೀಜಲ್ ಆಮದನ್ನು ಹೇಗೆ ಕಡಿಮೆ ಮಾಡಬಹುದು. ನಮ್ಮ ಸಾರ್ವಜನಿಕ ವಾಹನ ನೀತಿಯಲ್ಲಿ ಇದನ್ನು ಹೇಗೆ ಬಳಸಬಹುದೆಂದು ಕಂಡುಹಿಡಿಯಬೇಕು. ಪ್ರಪಂಚಲ್ಲಿ ಬ್ರೆಜಿಲ್ ನಂತಹ ಅನೇಕ ದೇಶಗಳು ಎಥನಾಲನ್ನು ಉತ್ತಮ ರೀತಿಯಲ್ಲಿ ಬಳಸುತ್ತಿವೆ. ಇದರಿಂದ ಪೆಟ್ರೋಲ್ ಇತ್ಯಾದಿಗಳನ್ನು ಉಳಿಸಿ ಪರಿಸರ ಸ್ನೇಹಿ ವಾಹನ ವ್ಯವಸ್ಥೆಯನ್ನು ತಂದಿವೆ. ನಾವು ಭಾರತದಲ್ಲಿ ಇದರ ಉಪಯೋಗವನ್ನು ಹೆಚ್ಚಿಸುವುದು ಹೇಗೆ, ಕಳೆದ ಎರಡು ವರ್ಷಗಳಲ್ಲಿ ಎಥನಾಲನ ಉತ್ಪಾದನೆ ಮತ್ತು ಬಳಕೆ ಮೂರು ಪಟ್ಟು ಹೆಟ್ಟಿದೆ. 2015-16ರಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಇದರ ಉತ್ಪಾದನೆ ಗರಿಷ್ಠಮಟ್ಟವನ್ನು ಮುಟ್ಟಿದೆ. ಆದರೂ ನಮ್ಮ ಸಾಮರ್ಥ್ಯದ ಆಧಾರಕ್ಕೆ ಹೋಲಿಸಿಕೊಂಡರೆ ಈ ಕೆಲಸದಲ್ಲಿ ನಾವಿನ್ನೂ ಹಿಂದಿದ್ದೇವೆ.
ನಾವು ಈಗ ನೀತಿಗಳ ಮೂಲಕ ನಮ್ಮ ಬೆಂಬಲ ವ್ಯವಸ್ಥೆಯ ವಿಶೇಷವಾಗಿ ಮೌಲ್ಯ ಸಂಕಲನದ ಮೂಲಕ ನಾವು ಎಥನಾಲಿನ ಆಮದನ್ನು ಕಡಿತಗೊಳಿಸುವುದು ಹೇಗೆಂಬ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಮ್ಮ ವಾಹನ ವ್ಯವಸ್ಥೆಗೆ ಕೊಲ್ಲಿಯ ಎಣ್ಣೆಯೋ ,ಗಿಡಗಂಟಿಗಳ ಎಣ್ಣೆಯೋ, ನಮ್ಮ ರೈತನು ಕೊಲ್ಲಿಯ ಎಣ್ಣೆಯಿಂದ ನಮ್ಮನ್ನು ಮುಕ್ತರನ್ನಾಗಿಸಿ ಗಿಡಗಂಟಿಗಳ ಎಣ್ಣೆಯಿಂದ ದೇಶವನ್ನು ಮಂಚೂಣಿಗೆ ತೆಗೆದುಕೊಂಡು ಹೋಗಬಲ್ಲನೆಂಬ ನಂಬಿಕೆ ನನಗಿದೆ. ಈ ವಿಷಯಕ್ಕೆ ನಾವು ಒತ್ತು ಕೊಡಬೇಕು. ಸರ್ಕಾರವು ಈ ನಿಟ್ಟಿನಲ್ಲಿ ಕೆಲವು ಪ್ರಗತಿಪರ ನೀತಿಗಳನ್ನು ಕೈಗೆತ್ತಿಕೊಂಡಿದೆ. ಮೊದಲ ಬಾರಿಗೆ ಎಥನಾಲನಲ್ಲಿ ಮೃದುತ್ವ/ ಹೊಂದಿಕೊಳ್ಳುವ ಗುಣವಿದೆ. ಒಂದುವೇಳೆ ಎಂ ಎಸ್ ಪಿ(ಕನಿಷ್ಟ ಮಾರಾಟ ಬೆಲೆ) ಯಂತಹ ವ್ಯವಸ್ಥೆ ಮಾಡಿದರೆ ಮಾರುಕಟ್ಟೆ ಖಚಿತವಾಗುತ್ತದೆ. ಕೆಲವು ಸಕ್ಕರೆ ಕಾರ್ಖಾನೆಗಳಲ್ಲಿ ಎಥನಾಲ್ ತಯಾರು ಮಾಡುವ ಘಟಕಗಳಿಲ್ಲ. ಬೇರೆಯವರ ಘಟಕಗಳ ಸಹಾಯದಿಂದ ಈ ಕೆಲಸ ಮಾಡಿಸಿಕೊಳ್ಳಿ. ನಾವು ನಿಮಗೆ ಪರಿಹಾರ ಧನ ಕೊಡುತ್ತೇವೆಂದು ಅಂತಹವರುಗಳಿಗೆ ಹೇಳಲಾಗಿದೆ. ಇದರ ಉದ್ದೇಶ್ಯ ಸಂಪೂರ್ಣ ಸಕ್ಕರೆಯ, ಕಬ್ಬಿನ ಉತ್ಪಾದಕಗಳು ಹಚ್ಚಿನ ಪ್ರಮಾಣದಲ್ಲಿ ಎಥನಾಲ ತಯಾರಿಕೆಯ ಕಡೆ ಹೋಗಲಿ ಎಂದು, ಆಗ ನಾವು ಇದರಲ್ಲಿ ಸಫಲತೆಯನ್ನು ಕಾಣಬಹುದು. ಸಕ್ಕರೆಯ ಮಾರುಕಟ್ಟೆ ಕ್ಷೀಣಿಸಿದರೂ ನಾವಿದನ್ನು ಸಮತೋಲನಗೊಳಿಸಬಹುದು. ಸಕ್ಕರೆಯ ಮಾರುಕಟ್ಟೆಯಲ್ಲಿ ತೊಂದರೆ ಕಂಡುಬಂದರೂ ಈ ಕಡೆ ಅದರ ದಿಕ್ಕು ಬದಲಾಯಿಸಬಹುದು. ಆರ್ಥಿಕತೆಯಲ್ಲಿ ಆಗ ಸಮತೋಲನ ಸಾಮರ್ಥ್ಯದ ರೂಪದಲ್ಲಿ ಈ ಪ್ರಯೋಗದ ಮೂಲಕ ನಾವು ಸಾಕಷ್ಟು ಕೆಲಸ ಮಾಡಬಹುದು.
ಮತ್ತೊಂದು ಕ್ಷೇತ್ರವೆಂದರೆ ಸ್ಟಾರ್ಟ ಅಪ್ ಗಳ ಮೂಲಕ. ಅನ್ವೇಷಣೆಯ ನಿಟ್ಟಿನಲ್ಲಿ ನಾವು ಬಹಳ ಕೆಲಸ ಮಾಡಬೇಕೆನ್ನುವುದೇನೋ ನಿಜವಾದ ಸಂಗತಿ. ಎಷ್ಟು ಅನ್ವೇಷಣೆಯು ಒಂದು ತೋಟದಲ್ಲಿ ಆಗುವವೋ ಅದಕ್ಕಿಂತ ಹೆಚ್ಚು ಕೃಷಿಯಲ್ಲಿ ಇಂದು ಇಂಜಿನಿಯರಿಂಗ್ ಮುಖೇನ ಆಗುತ್ತಿವೆ. ಹೇಗೆ ಚಿಕಿತ್ಸಾ ವಿಜ್ಞಾನ ಸಂಪೂರ್ಣವಾಗಿ ತಂತ್ರಜ್ಞಾನ ಪ್ರಚೋದಿತವಾಗುತ್ತಿದೆಯೋ ಹಾಗೆ. ತಂತ್ರಜ್ಞಾನವು ಚಿಕಿತ್ಸಾ ವಿಜ್ಞಾನಕ್ಷೇತ್ರದಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತಿದೆ. ಕೃಷಿ ಕ್ಷೇತ್ರದಲ್ಲೂ ತಂತ್ರಜ್ಞಾನವು ಬಹಳ ಮುಖ್ಯ ಪಾತ್ರ ವಹಿಸುವ ದಿನ ಇನ್ನು ದೂರವಿಲ್ಲ . ನಮ್ಮ ಯುವಜನತೆಗೂ, ವಿಜ್ಞಾನಿಗಳಿಗೂ, ತಾಂತ್ರಿಕ ನಿಪುಣರಿಗೂ ನಾವು ಸ್ಟಾರ್ಟ ಅಪ್ ಗಳ ಮೂಲಕ ಅವಕಾಶ ನೀಡೋಣ.. ಅನ್ವೇಷಣೆಗೆ ಇಲ್ಲಿ ಅವಕಾಶ ಕಲ್ಪಿಸಿಕೊಡೋಣ.
ವಸಂತ್ ದಾದಾ ಪಾಟೀಲರ ಸಂಸ್ಥೆ ಮೂಲಕ ಸಕ್ಕರೆಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಹೊಲಗದ್ದೆ ಮತ್ತು ಸಕ್ಕರೆ ಹಾಗೂ ಸಕ್ಕರೆಯ ಉಪ-ಉತ್ಪನ್ನ ಗಳ ಮತ್ತು ಅದಕ್ಕಾಗಿಯೇ ಇರುವ ಕೆಲವು ಯಂತ್ರಗಳನ್ನೂ ನಾನು ಈಗತಾನೆ ನೋಡಿದೆ. ಹೇಗೆ ಹಾಲಿನಿಂದ ಕೊಬ್ಬಿನ ಅಂಶವನ್ನು ತೆಗೆಯಲಾಗುತ್ತದೋ ಹಾಗೆಯೇ ಸಕ್ಕರೆಯ ಅಂಶದಿದ ಕೊಬ್ಬಿನ ಅಂಶವನ್ನು ಮಶೀನಿನಿಂದ ತೆಗೆಯಲಾಗುತ್ತಿದೆ. ಈ ಮಶೀನುಗಳು ಜನಪ್ರಿಯವಾಗುತ್ತಿವೆ. ಆದರೆ ಇಂತಹ ಚಿಕ್ಕ- ಚಿಕ್ಕ ಮಶೀನುಗಳನ್ನು ನಮ್ಮ ಹೊಸ ಪೀಳಿಗೆಯ ನವಯುವಕರು ತಯಾರಿಸ ಬಲ್ಲರು. ಸ್ಟಾರ್ಟ ಅಪ್ ಗಳಿಗೆ ನಾವು ಬೆಂಬಲ ನೀಡಬೇಕು. ಎಷ್ಟು ಪ್ರಮಾಣದಲ್ಲಿ ನಮ್ಮ ಸ್ಟಾರ್ಟ ಅಪ್ ಗಳು ಕೃಷಿ ಕ್ಷೇತ್ರದಲ್ಲಿ ಬರುವವೋ ಅಷ್ಟರಮಟ್ಟಿಗೆ ನಮ್ಮ ದೇಶದ ಕೃಷಿ ಮತ್ತು ಮೌಲ್ಯಸಂಕಲನ ಎರಡಕ್ಕೂ ಉಪಕಾರಿಯಾಗುವವು. ಈ ದೃಷ್ಟಿಯಿಂದ ನಮ್ಮ ದೇಶದಲ್ಲಿ ಕೃಷಿಕ್ಷೇತ್ರದಲ್ಲಿ ಎರಡನೇ ಹಂತದ ಕ್ರಾಂತಿ ಉಂಟಾಗುತ್ತದೆ.
ಜನಾಂಗಿಕ ಹಸ್ತಕ್ಷೇಪ, ತಾಂತ್ರಿಕ ಆಧುನೀಕರಣ, ಮೌಲ್ಯ ಸಂಕಲನ ಮತ್ತು ಮಾರುಕಟ್ಟೆಗಳು ಕೃಷಿ ಉತ್ಪಾದನಾ ಪ್ರಕಾರಗಳು.
ಇತ್ತೀಚಿನ ದಿನಗಳಲ್ಲಿ ಪ್ರಧಾನಮಂತ್ರಿ ಬಿಮಾ ಯೋಜನೆಯ ಮೂಲಕ ಎಲ್ಲಕ್ಕಿಂತ ಹೆಚ್ಚು ಸುರಕ್ಷಿತ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಣ್ಣಿನ ಆರೋಗ್ಯ ಕಾರ್ಯಕ್ರಮದ ಮೂಲಕ ರೈತನು ತನ್ನ ಜಮೀನಿನಲ್ಲಿ ಏನು ಮತ್ತು ಯಾವ ಸಮಸ್ಯೆಗಳಿವೆ ಎಂದು ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಪಕ್ಕದ ರೈತ ಕೆಂಪು ಡಬ್ಬದ ಪೌಡರ್ ಚಿಮುಕಿಸಿದರೆ ನಾನೂ ಕೆಂಪು ಡಬ್ಬದ ಪೌಡರ್ ಚಿಮುಕಿಸುತ್ತೇನೆಂದೋ, ಹಳದಿ ಪೌಡರ್ ಚಿಮುಕಿಸಿದರೆ ನಾನೂ ಹಳದಿ ಪೌಡರ್ ಚಿಮುಕಿಸುತ್ತೇನೆಂದೋ ಯೋಚಿಸುತ್ತಾನೆ. ಎರಡೂ ಜಮೀನಿನ ಸ್ವಭಾವ ಬೇರೆ ಹಾಗೂ ಎರಡೂ ಜಮೀನಿನ ಅಗತ್ಯ ಬೇರೆ. ಒಬ್ಬರ ಜಮೀನಿನಲ್ಲಿ ಕೆಲವು ಗುಣ ಹೆಚ್ಚಿರಬಹುದು, ಮತ್ತೊಬ್ಬರ ಜಮೀನಿನಲ್ಲಿ ಬೇರೆ ಗುಣ ಹೆಚ್ಚಿರಬಹುದು, ಹೇಗೆ ಮನುಷ್ಯನ ಶರೀರದ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಮಾಡಿ ಪೆಥಾಲಜಿಕಲ್ ರಿಪೋರ್ಟ ಬರುವುದಿಲ್ಲವೇ, ಔಷಧ ಕೊಡುವುದಿಲ್ಲವೇ ಹಾಗೆಯೇ ಮಾನವ ಶರೀರದಂತೆಯೇ ಮಣ್ಣು ಕೂಡ. ನಮ್ಮ ಮಣ್ಣಿನ ಆರೋಗ್ಯ ಕಾರ್ಡ್ ನಮಗೆ ಬೇಕಾದಾಗ ಬಹಳಷ್ಟು ಪ್ರಮಾಣದಲ್ಲಿ ಮಣ್ಣು ಪರೀಕ್ಷೆ ಪ್ರಯೋಗಾಲಯದ ಸ್ಟಾರ್ಟ ಅಪ್ ಗಳು ಆರಂಭವಾಗುತ್ತವೆ. ನಮ್ಮ ರೈತರೂ ಅವರ ಸಹಕಾರ ಸಂಘಗಳ ವತಿಯಿಂದ ಮಣ್ಣು ಪರೀಕ್ಷೆ ಪ್ರಯೋಗಾಲಯಗಳನ್ನು ಆರಂಭಿಸಬಹುದು. ಪ್ರತಿ ವರ್ಷ ಬೆಳೆ ಬೆಳೆಯುವ ಮೊದಲು ನಮ್ಮ ಮಣ್ಣಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಅದಕ್ಕೆ ಸೂಕ್ತವಾದ ಬೆಳೆಯ ಸಮಯ ಕೈಪಿಡಿ ತಯಾರು ಮಾಡಿಕೊಳ್ಳಬೇಕೆಂಬುದು ನಮ್ಮ ರೈತರಿಗೆ ಅಭ್ಯಾಸವಾಗಬೇಕು. ಆಗ ನೋಡಿ ನಮ್ಮ ಖರ್ಚು ಕಡಿಮೆಯಾಗುತ್ತೆ.
ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಸೌರಪಂಪಿನ ಮೂಲಕ ಒಂದು ದೊಡ್ಡ ಕಾರ್ಯದ ಶುಭಾರಂಭ ಮಾಡಿದೆ . ಸೌರಪಂಪಿನ ಚಳವಳಿಯನ್ನು ನಾವು ಒಂದುವೇಳೆ ರೈತನ ವರೆವಿಗೂ ತೆಗೆದುಕೊಂಡು ಹೋದ ಪಕ್ಷದಲ್ಲಿ, ನಮ್ಮದು ಕಡಿಮೆ ಖರ್ಚಿನ ವ್ಯವಸಾಯ ವಾಗಿಬಿಡುತ್ತೆ. ವಿದ್ಯುತ್ ಖರ್ಚು, ನೀರಿನ ಖರ್ಚು ಎಲ್ಲಕ್ಕಿಂತ ಹೆಚ್ಚಿನವು. ಸೌರಪಂಪಿಗೆ ಭಾರತ ಸರ್ಕಾರವೂ ಸಹಾಯ ಮಾಡುತ್ತಿದೆ, ಮಹಾರಾಷ್ಟ್ರ ಸರ್ಕಾರವು ಇದರ ನೇತೃತ್ವ ವಹಿಸಿದೆ, ಸಹಕಾರ ಯೂನಿಟ್ ಗಳೂ ಇದರೊಡನೆ ಸೇರಿಕೊಂಡು, ಒಂದುವೇಳೆ ನಾವು ಅದನ್ನೇ ಆಯ್ಕೆ ಮಾಡಿದ್ದೇ ಆದರೆ ವಿದ್ಯುತ್ ಉಳಿಸಿ ಸೌರ ಶಕ್ತಿಯನ್ನು ಹೊಲಗದ್ದೆಗಳಲ್ಲಿ ಬಳಸುವ ದಿಕ್ಕಿನಲ್ಲಿ ಮುಂದುವರೆದರೆ ಮಿತ ವ್ಯಯದ ವ್ಯವಸಾಯದಿಂದ ನಮಗೆ ಬಹಳ ಲಾಭ ಉಂಟಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ನಾವು ಪ್ರಯತ್ನ ಪಡಬೇಕು.
ನೀವೆಲ್ಲ ವ್ಯವಸಾಯದ ವಿಷಯದಲ್ಲಿ ನನಗಿಂತ ಸಾವಿರಪಟ್ಟು ಅನುಭವಿಗಳೆಂಬುದು ನನಗೆ ಗೊತ್ತು. ಶರದ್ ರಾವ್ ರವರು ಎಷ್ಟೇ ರಾಜಕೀಯ ಓಡಾಟದಲ್ಲಿರಲಿ, ದಿನನಿತ್ಯವೂ ಎಷ್ಟೋ ರಾಜಕೀಯ ಜಂಜಾಟದ ಒತ್ತಡದಲ್ಲಿರಲಿ ಏನಾದ್ರೂ ರೈತನ, ವ್ಯವಸಾಯದ ವಿಷಯ ಬಂದ ಕೊಡಲೇ ತಕ್ಷಣ ಚುರುಕಾಗಿ ಆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಾರೆ. ಅಷ್ಟೊಂದು ತತ್ಪರತೆ ಅವರಲ್ಲಿದೆ. ಈ ತತ್ಪರತೆಯನ್ನು ನಾನು ಅವರಲ್ಲಿ ಕಣ್ಣಾರೆ ಕಂಡಿದ್ದೇನೆ. ಈ ಫೆಬ್ರವರಿಗೆ ಅವರ ಸಾರ್ವಜನಿಕ ಜೀವನಕ್ಕೆ ಜನಪ್ರತಿನಿಧಿಯ ರೂಪಕ್ಕೆ ಐವತ್ತು ವರ್ಷಗಳಾಗುತ್ತವೆ. ಈ ಸಾಧನೆಗೆ ನಾನು ಅವರಿಗೆ ಈಗಲೇ ಶುಭ ಹಾರೈಸುತ್ತೇನೆ, ಐವತ್ತು ವರ್ಷ ಅಡಚಣೆಗಳೇನೂ ಇಲ್ಲದೆ ಜನಪ್ರತಿನಿಧಿಯಾಗಿ ಗೆದ್ದು ಬರುವುದು ಸಾಮಾನ್ಯ ವಿಷಯವಲ್ಲ, ಚುನಾವಣೆಯಲ್ಲಿ ಯಾರು ಹೋರಾಡುತ್ತಾರೋ ಅವರೇ ಗೆಲ್ಲೋದು. ಯಾವರೀತಿಯಲ್ಲಿ ಬದುಕಬೇಕೆನ್ನುವುದು ಅವರಿಗೆ ಗೊತ್ತು. ಆ ಜೀವನವನ್ನು ಶರದ್ ರಾವ್ ಜೀ ಯವರು ಜೀವಿಸಿ ತೋರಿಸಿದ್ದಾರೆ. ಎಲ್ಲ ಸಾರ್ವಜನಿಕ ಜೀವನದ ಜನರಿಗೆ ಇವರು ಒಂದು ಉತ್ತಮ ಉದಾಹರಣೆಯನ್ನು ನೀಡಿದ್ದಾರೆ.
ಹೀಗೆಯೇ ನಮ್ಮ ದೇವೇಂದ್ರ ಫಡ್ನವೀಸ್ ರವರು, ಇವರು ಕೂಡ ನಾಗಪುರದ ಮುನ್ಸಿಪಲ್ ಚುನಾವಣೆಗಳಲ್ಲಿ ಗೆದ್ದು ಕಾರ್ಪೊರೇಟರ್ ಆದ ಲೆಕ್ಕವನ್ನೂ ಸೇರಿಸಿಕೊಂಡರೆ ಅವರ ಜನಪ್ರತಿನಿಧಿತನಕ್ಕೂ ಅಡೆ-ತಡೆಯಿಲ್ಲದ ಐವತ್ತು ವರ್ಷಗಳಾಗುತ್ತವೆ. ಇಷ್ಟು ಕಡಿಮೆ ವಯಸ್ಸಿನಲ್ಲಿ ಇವರದು ಈ ಸಾಧನೆ. ಇನ್ನು ಶರದ್ ರಾವ್ ಅವರ ಎಂ ಎಲ್ ಎ ಮತ್ತು ಎಂ ಪಿ ಯ ವಿಷಯ . ಇದೊಂದು ತಾನಾಗಿಯೇ ಬಂದ ಒಂದು ಆಸ್ತಿ..ಸಾರ್ವಜನಿಕ ಜೀವನದ ಬಹಳ ದೊಡ್ಡ ಬಂಡವಾಳವಿದು. ನಾನು ಶರದ್ ರಾವ್ ಅವರನ್ನ ವ್ಯಕ್ತಿಗತವಾಗಿ ಬಹಳ ಗೌರವದಿಂದ ಕಾಣುವವರಲ್ಲೊಬ್ಬ. ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದೆ. ಅವರು ಯಾವಾಗಲೂ ನನ್ನ ಬೆರಳು ಹಿಡಿದು ನಡೆಸುತ್ತಾ ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಈ ಮಾತನ್ನು ಸಾರ್ವಜನಿಕವಾಗಿ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಸಾರ್ವಜನಿಕ ಜೀವನ ಜನಹಿತಕ್ಕಾಗಿಯೇ ಇರುತ್ತದೆ ಎಂಬುದನ್ನು ನಾನು ಒಪ್ಪಿಕೊಂಡಿದ್ದೇನೆ.
ಸೋದರ-ಸೋದರಿಯರೇ ಈ ವಿಷಯಕ್ಕೆ ಹೊರತಾದ ಒಂದು ವಿಷಯವನ್ನು ನಾನು ಹೇಳಲು ಇಷ್ಟಪಡುತ್ತೇನೆ. ನಮ್ಮ ಶತ್ರುಗಳು ನಮ್ಮ ದೇಶವನ್ನು ನಾಶಮಾಡಲಿಕ್ಕಾಗಿ ಹೊರಟಿದ್ದರು. ಅವರ ದೇಶದಲ್ಲೆಷ್ಟು ಕರೆನ್ಸಿ ಪ್ರಿಂಟಾಗುತ್ತದೋ ಅದಕ್ಕಿಂತ ಹೆಚ್ಚು ನಕಲಿ ನೋಟುಗಳನ್ನು, ಖೋಟಾ ನೋಟುಗಳನ್ನು ನಮ್ಮ ದೇಶದೊಳಗೆ ನುಗ್ಗಿಸಿಬಿಡುವ ಆಟವನ್ನು ಬಹಳ ಹಿಂದಿನಿಂದ ಆಡುತ್ತಲೇಇದ್ದರು. ಇವರು ನಕ್ಸಲ್ ವಾದ, ಉಗ್ರವಾದ ವೆಂಬ ಹೆಸರುಗಳೊಡನೆ ಜನರಿಂದ ಹಣವನ್ನು ದೋಚುತ್ತಾರೆ. ಕಾಡಿನ ಮರಗಳಡಿಯಲ್ಲಿ ಅದನ್ನು ಮುಚ್ಚಿಡುತ್ತಾರೆ. ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಾರೆ. ಇದರಿಂದ ಅತಂಕವಾದಕ್ಕೆ ಬಲ ದೊರೆಯುತ್ತದೆ. ಇವರ ಎರಡನೇ ನರವನ್ನು ಅಂದರೆ ಎಲ್ಲಿಂದ ಅವರಿಗೆ ಹಣ ಬರುತ್ತಿತ್ತೋ ಅದರ ಮೂಲವನ್ನು ಕತ್ತರಿಸುವುದು ಅವಶ್ಯಕವಾಗಿತ್ತು. ಆದುದರಿಂದ ಭಾರತ ಸರ್ಕಾರವು 08 ನೇ ತಾರೀಖಿನ ರಾತ್ರಿ 08 ಗಂಟೆಗೆ 1000 ಮತ್ತು 500 ರ ನೋಟುಗಳನ್ನು ಅಮಾನ್ಯೀಕರಣ ಗೊಳಿಸಿತು. ಹಾಗೂ ಖೋಟಾನೋಟಿನ ಬಗ್ಗೆ ಸರ್ಕಾರ ಒಂದು ಕಠಿಣ ನಿರ್ಧಾರ ತೆಗೆದುಕೊಂಡಿತು. ದೇಶದ ಜನತೆ ಆ ನಿರ್ಧಾರಕ್ಕೆ ತಮ್ಮ ಆಶೀರ್ವಾದ ನೀಡಿತು . ಇದಕ್ಕಾಗಿ ನಾನು ದೇಶದ ಜನರಿಗೆ ಕೃತಜ್ಞನಾಗಿರುತ್ತೇನೆ. ಒಂದು ಭ್ರಮೆಯನ್ನು ಹರಡಲಾಗುತ್ತಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರಿರುವುದರಿಂದ ನಾನು ಈ ಬಗ್ಗೆ ಹೇಳುತ್ತಿದ್ದೇನೆ. ರೈತರನ್ನು 1000 ಮತ್ತು 500 ರ ನೋಟುಗಳು ಹೊರಟು ಹೋದವು. ಈಗ ನೀವು ನಿಮ್ಮ ಬಳಿ ವ್ಯವಸಾಯದಿಂದ ಬರುವ ಎಲ್ಲ ಹಣವನ್ನೂ ಬ್ಯಾಂಕಿನಲ್ಲಿಡಬೇಕಾಗುತ್ತದೆ. ಮೋದಿ ಅದರ ಮೇಲೂ ತೆರಿಗೆ ವಸೂಲು ಮಾಡುತ್ತಾನೆ ಎಂದಲ್ಲಾ ಹೇಳಿ ನಿಮ್ಮಲ್ಲಿ ಭ್ರಮೆ ಹುಟ್ಟಿಸುತ್ತಿದ್ದಾರೆ. ರೈತಸೋದರರೇ, ನಿಮ್ಮ ಮೇಲೆ ಯಾವ ತೆರಿಗೆಯನ್ನೂ ಹಾಕುವುದಿಲ್ಲ. ಚಿಂತೆ ಮಾಡಬೇಡಿ . ಈ ದೇಶ ನಿಮ್ಮದು . ಹಣ ನಿಮ್ಮದು. ಬ್ಯಾಂಕು ನಿಮ್ಮದು, ಮೋದಿ ಕೂಡ ನಿಮ್ಮವನೇ. ಈ ಎಲ್ಲ ಭ್ರಮಾಜಾಲದಿಂದ ಈಚೆಗೆ ಬರಬೇಕಾದರೆ ನಾನು ದೇಶದ ಜನರಲ್ಲಿ 50 ದಿನ ಸಮಯ ಕೇಳಿದ್ದೇನೆ. ಏಕೆಂದರೆ ಇಷ್ಟು ದೊಡ್ಡ ಬದಲಾವಣೆ ತರಬೇಕಲ್ಲವೇ,1978ರಲ್ಲಿ ಜನತಾ ಸರ್ಕಾರವಿತ್ತು, ಆಗ ಮೊರಾರ್ಜಿ ಭಾಯ್ ದೇಸಾಯಿ ಯವರು 1000 ರೂ ನೋಟನ್ನು ಬಂದ್ ಮಾಡಿದ್ದರು ಎಂಬುದು ನಿಮಗೆ ಗೊತ್ತಿರಬಹುದು. ಇದನ್ನು ಮಾಡಿದವರಲ್ಲಿ ನಾನು ಮೊದಲಿಗನೇನೂ ಅಲ್ಲ. ನಂತರದ ಯು ಪಿ ಎ ಸರ್ಕಾರ ನಾಲ್ಕಾಣೆಯನ್ನು ಬಂದ್ ಮಾಡಿತ್ತು, ಅವರು ನಾಲ್ಕಾಣೆಯ ಮೇಲೆ ಯಾಕೆ ಪ್ರತಿಬಂಧ ಹೇರಿದರೆನ್ನುವುದು ಅವರಿಗೇ ಗೊತ್ತು. ಆದರೆ ಮೊರಾರ್ಜಿ ಭಾಯ್ ದೇಸಾಯಿ ಯವರು 1000 ರೂ ನೋಟನ್ನು ಬಂದ್ ಮಾಡಿದ್ದರು. ಆಗ ರೆಸೆರ್ವ್ ಬ್ಯಾಂಕಿನಲ್ಲಿ ಒಟ್ಟು145 ಕೋಟಿ ರೂಪಾಯಿ ಬೆಲೆಯ 1000 ರೂ. ನೋಟುಗಳನ್ನು ಮುದ್ರಿಸಲಾಗಿತ್ತು. ಅದರಲ್ಲಿ 80 ಕೋಟಿ,ಕೇವಲ 80 ಕೋಟಿ ಸಾರ್ವಜನಿಕರಲ್ಲಿತ್ತು. 65 ಕೋಟಿ ಬ್ಯಾಂಕಿನಲ್ಲಿತ್ತು. ಅದನ್ನು ಹೊರಗೆ ತೆಗೆದಿರಲೇ ಇಲ್ಲ. ಈ ಸಮಯದಲ್ಲಿ 500ಮತ್ತು 1000 ರೂಪಾಯಿಯ ನೋಟಿನ ಮೌಲ್ಯ ಸರಿಸುಮಾರು 14 ಲಕ್ಷ ಕೋಟಿ. ಎಲ್ಲಿ 145 ಕೋಟಿ, ಎಲ್ಲಿ 14 ಲಕ್ಷ ಕೋಟಿ. ಇದರ ಲಾಭವನ್ನು ಶತ್ರುಗಳು, ಸಮಾಜದ್ರೋಹಿಗಳು ಮತ್ತು ಭ್ರಷ್ಟಾಚಾರಿಗಳು ಪಡೆಯುತ್ತಿದ್ದರು. ಇದನ್ನು ಬೇರುಸಮೇತ ಕಿತ್ತು ಹಾಕದಿದ್ದರೆ ದೇಶದ ಭಾವೀ ಪೀಳಿಗೆಗೆ, ಅವರ ಕನಸುಗಳನ್ನು ನನಸು ಮಾಡುವಲ್ಲಿ ನಮ್ಮ ವ್ಯವಸ್ಥೆಗೆ ಅಡ್ಡಿಯಾಗುವುದಿಲ್ಲವೇ.
ಹೀಗಾಗಿ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ನಾನು ಹೀಗೆ ಮಾಡಿದೆ.,ಇಂತಹ ದೊಡ್ಡ ನಿರ್ಣಯದಿಂದ ಕಷ್ಟವೇ ಆಗಲ್ಲ ಎಂದು ನಾನೇನು ಹೇಳುತ್ತಾ ಇಲ್ಲ. ನಾನು ಮೊದಲ ದಿನವೇ ಕಷ್ಟವಾಗುತ್ತೆ, ತೊಂದರೆಯಾಗುತ್ತೆ ಎಂದು ಹೇಳಿದ್ದೆ. ಆದರೆ 70 ವರ್ಷದ ಕಾಯಿಲೆಯಿಂದ ಮುಕ್ತಿ ದೊರೆಯುವ ದಾರಿ ತೆರೆದುಕೊಳ್ಳುತ್ತದೆ, ಸಹೋದರ ಸಹೋದರಿಯರೇ , ಭವಿಷ್ಯದ ಪೀಳಿಗೆಗೆ ರಸ್ತೆ ತಂತಾನೇ ತೆರೆದುಕೊಳ್ಳುತ್ತದೆ. ಬಡ ಮಧ್ಯಮ ವರ್ಗದ ವ್ಯಕ್ತಿ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲಬಲ್ಲವನಾಗುತ್ತಾನೆ. ನಾನು ದೇಶವಾಸಿಗಳಲ್ಲಿ ನಿಮಗೆ ತೊಂದರೆಯಾದರೂ ಈ ಭಗೀರಥ ಕಾರ್ಯಕ್ಕೆ ಸಹಯೋಗ ನೀಡಿರೆಂದು ಕೇಳಿಕೊಳ್ಳುತ್ತೇನೆ. ಕೆಲವರಿಗೆ ಹೆಚ್ಚು ಕಷ್ಟವೂ ಆಗಬಹುದು ಅವರು ಏನು ಮಾಡುವರೋ ಅದು ನನಗೆ ಗೊತ್ತಿಲ್ಲ. ನನಗೆ ಆ ಬಗ್ಗೆ ಹೆಚ್ಚು ಚಿಂತೆ ಯಿಲ್ಲ. ನನ್ನ ಚಿಂತೆ ಕೇವಲ ದೇಶದ ಸಾಮಾನ್ಯ ಪ್ರಜೆಯ ಬಗೆಗೆ ಮಾತ್ರ.
ನೀವು ನಿಮ್ಮ 500 ರೂಪಾಯಿಗೆ ಬದಲಾಗಿ 499 ರೂಪಾಯಿಗೂ ವಿನಿಮಯ ಮಾಡಿಕೊಳ್ಳುವ ಅಗತ್ಯವಿಲ್ಲ. ನಿಮ್ಮ 500ಕ್ಕೆ 500 ನಿಮ್ಮ ಹಕ್ಕು ಅದು ನಿಮಗೆ ಸಿಕ್ಕೇ ಸಿಗುತ್ತದೆ. ನಿಮ್ಮ 1000 ರೂಪಾಯಿಯಲ್ಲಿ 10 ರೂಪಾಯಿ ಕಡಿಮೆ ಪಡೆಯುವ ಅಗತ್ಯವಿಲ್ಲ. ನಿಮಗೆ ಪೂರ್ತಿ 1000 ರೂಪಾಯಿಗೆ 1000 ರೂಪಾಯಿ ಖಂಡಿತಾ ಸಿಗುತ್ತೆ. ಡಿಸೆಂಬರ್ 30 ರವರೆಗೆ ನಾನು 50 ದಿನಗಳ ಸಮಯಾವಕಾಶ ಕೇಳಿದ್ದೇನೆ. ವ್ಯವಸ್ಥೆಗಳು ನಡೆಯುತ್ತಿವೆ, ಇದನ್ನು ನಾನು ನವಂಬರ್ 08ನೇ ತಾರೀಖಿಗಿಂತ ಮೊದಲು ಮಾಡಲು ಸಾಧ್ಯವಿರಲಿಲ್ಲ. ಇಲ್ಲವಾದಲ್ಲಿ ಇದು ಗುಟ್ಟಾಗಿರದೆ ರಟ್ಟಾಗಿಬಿಡುತ್ತಿತ್ತು. ರಟ್ಟಾಗಿದ್ದರೆ ಯಾರು- ಯಾರ ಮನೆಯಲ್ಲಿ ಚೀಲದ ತುಂಬಾ ನೋಟಿತ್ತೋ ಅವರು ಈ ಹೋರಾಟವನ್ನು ಗೆದ್ದುಬಿಡುತ್ತಿದ್ದರು. ನಾನು ಬಡವರಿಗಾಗಿ, ಬಡವರ ಹಕ್ಕಿಗಾಗಿಯೇ ಇರುವವನು. ಸಾಮಾನ್ಯ ಮನುಷ್ಯರಿಗಾಗಿ ಇರುವವನು. ಸಾಮಾನ್ಯ ಮನುಷ್ಯರ ಹಕ್ಕಿಗಾಗಿ ಇರುವವನು. ಆದ್ದರಿಂದ ಕಷ್ಟವಾಗುತ್ತೆ ಎಂಬ ಪೂರ್ಣ ಅಂದಾಜು ನನಗಿತ್ತು. ಆರಂಭದಲ್ಲಿ ಹಣ ತಲುಪಿಸುವುದರಲ್ಲಿ ಕಷ್ಟವಾಗಿತ್ತು ಆದರೆ ದೇಶವಾಸಿಗಳು ನನ್ನೊಡನೆ ಇದ್ದಾರೆ ನನಗೆ ಸಹಾಯ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿತ್ತು. ದೇಶದ ಶುಚಿತ್ವಕ್ಕಾಗಿ, ಶುದ್ದೀಕರಣಕ್ಕಾಗಿ ಮಾಡಿದ ಪ್ರಾಮಾಣಿಕತೆಯ ಈ ಆಚರಣೆಗೆ ತಮ್ಮ ಪೂರ್ಣ ಸಹಕಾರ ನೀಡಿರಿ.
ಈ ಅಪೇಕ್ಷೆಯೊಡನೆ ಮತ್ತೊಂದುಬಾರಿ ವಸಂತ್ ದಾದಾರವರಿಗೆ ಅನೇಕಾನೇಕ ಅಭಿನಂದನೆಗಳು. ಅವರಿಗೆ ನಮಸ್ಕರಿಸುತ್ತೇನೆ,ಶ್ರದ್ದಾಂಜಲಿ ಅರ್ಪಿಸುತ್ತೇನೆ . ಅವರ ಈ ಶತಾಬ್ದಿಯು ರೈತರ ಜೀವನದಲ್ಲಿ ಬದಲಾವಣೆ ತರುವುದಕ್ಕಾಗಿ ಆಧುನಿಕ ಕೃಷಿಪದ್ದತಿಯೆಡೆಗೆ ಕೊಂಡೊಯ್ಯುವಂತಾಗಲಿ ಎಂದು ಹಾರೈಸುತ್ತೇನೆ. ಈ ಸಂದರ್ಭದಲ್ಲಿ ನನಗೆ ಇಲ್ಲಿಗೆ ಬರುವ ಅವಕಾಶ ದೊರಕಿತು. ಇಂತಹ ಮಹತ್ವಪೂರ್ಣ ಸಂದರ್ಭದಲ್ಲಿ ನನ್ನನ್ನು ಇಷ್ಟೊಂದು ಪ್ರೀತಿ ಹಾಗೂ ಗೌರವದಿಂದ ಆಹ್ವಾನಿಸಿದ ಶರದ್ ರಾವ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಮರ್ಪಿಸುತ್ತೇನೆ. ತುಂಬಾ ತುಂಬಾ ಧನ್ಯವಾದಗಳು.
We are talking about sugar but I also add- let us think about bamboo and how research will help our farmers: PM @narendramodi
— PMO India (@PMOIndia) November 13, 2016
Let us think of globally competitive bamboo products: PM @narendramodi
— PMO India (@PMOIndia) November 13, 2016
Important to think about higher land productivity: PM @narendramodi
— PMO India (@PMOIndia) November 13, 2016
We have a requirement of pulses. Can we think about pulses in addition to sugar? There is an assured market for pulses: PM @narendramodi
— PMO India (@PMOIndia) November 13, 2016
We cannot ignore the global economy when we are looking at the sugar industry: PM @narendramodi
— PMO India (@PMOIndia) November 13, 2016
Farmers are misled that Modi will tax you. I assure my farmer sisters and brothers, no one will tax you. This nation belongs to you: PM
— PMO India (@PMOIndia) November 13, 2016