ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಯುವ ಹಾಕಿ ಆಟಗಾರರ ಅದ್ಭುತ ಸಾಧನೆಯನ್ನು ಶ್ಲಾಘಿಸಿದ್ದಾರೆ. 2026ರ ಪುರುಷರ ಯು18 ಏಷ್ಯಾ ಕಪ್ ಗೆದ್ದ ಭಾರತೀಯ ಪುರುಷರ ಯು18 ಹಾಕಿ ತಂಡವನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದ್ದಾರೆ.
ಟೂರ್ನಮೆಂಟ್ನಾದ್ಯಂತ ತಂಡವು ಅಸಾಧಾರಣ ಕೌಶಲ್ಯ ಮತ್ತು ತಂಡದ ಕೆಲಸವನ್ನು ಪ್ರದರ್ಶಿಸಿತು, ಇದು ಫೈನಲ್ ನಲ್ಲಿ ಸ್ಮರಣೀಯ ವಿಜಯದಲ್ಲಿ ಕೊನೆಗೊಂಡಿತು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಈ ಗೆಲುವು ಯುವಜನರಲ್ಲಿ ಹಾಕಿಯ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಗಮನಿಸಿದರು ಮತ್ತು ತಂಡದ ಭವಿಷ್ಯದ ಪ್ರಯತ್ನಗಳಿಗಾಗಿ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಅವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಬರೆದಿದ್ದಾರೆ:
“ನಮ್ಮ ಯುವ ಹಾಕಿ ಆಟಗಾರರಿಂದ ಅದ್ಭುತ ಸಾಧನೆ!
2026 ರ ಪುರುಷರ ಯು18 ಏಷ್ಯಾ ಕಪ್ ಗೆದ್ದ ಭಾರತೀಯ ಪುರುಷರ ಯು18 ಹಾಕಿ ತಂಡಕ್ಕೆ ಅಭಿನಂದನೆಗಳು. ತಂಡವು ಪಂದ್ಯಾವಳಿಯಾದ್ಯಂತ ಅಸಾಧಾರಣ ಕೌಶಲ್ಯ ಮತ್ತು ತಂಡದ ಕೆಲಸವನ್ನು ಪ್ರದರ್ಶಿಸಿತು, ಫೈನಲ್ ನಲ್ಲಿ ಸ್ಮರಣೀಯ ಜಯ ಸಾಧಿಸಿತು. ಈ ಗೆಲುವು ನಮ್ಮ ಯುವಕರಲ್ಲಿ ಹಾಕಿಯ ಕುರಿತು ಹೆಚ್ಚುತ್ತಿರುವ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ. ತಂಡದ ಭವಿಷ್ಯದ ಪ್ರಯತ್ನಗಳಿಗಾಗಿ ನನ್ನ ಶುಭಾಶಯಗಳು.”
*****
A splendid accomplishment by our young hockey players!
— Narendra Modi (@narendramodi) June 6, 2026
Congratulations to the Indian Men’s U18 Hockey Team on winning the Men’s U18 Asia Cup 2026. The team displayed exceptional skill and teamwork throughout the tournament, culminating in a memorable victory in the final. This… pic.twitter.com/w5xIVAvN13