Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುರುಷರ 90 + ಕೆಜಿ ಬಾಕ್ಸಿಂಗ್ ನಲ್ಲಿ ಬೆಳ್ಳಿ ಗೆದ್ದ ನರೇಂದರ್ ಬೆರ್ವಾಲ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಗ್ಲಾಸ್ಗೊದಲ್ಲಿ ನಡೆದ ಕಾಮನ್ ವೆಲ್ತ್  ಕ್ರೀಡಾಕೂಟ 2026 ರಲ್ಲಿ ಪುರುಷರ 90+ ಕೆಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ನರೇಂದರ್ ಬೆರ್ವಾಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಸ್ಪರ್ಧೆಯುದ್ದಕ್ಕೂ ಅಪಾರ ಧೈರ್ಯ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿದ್ದಕ್ಕಾಗಿ ನರೇಂದ್ರ ಬೆರ್ವಾಲ್ ಅವರನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.

ಮುಂಬರುವ ವರ್ಷಗಳಲ್ಲಿ ಇನ್ನೂ ಅನೇಕ ಸಾಧನೆಗಳು ಮೂಡಿಬರಲಿ ಎಂದು ಶ್ರೀ ನರೇಂದ್ರ ಮೋದಿ ಹಾರೈಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ;

“ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ 90+ ಕೆ.ಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನರೇಂದರ್ ಬೆರ್ವಾಲ್ ಬೆಳ್ಳಿ ಗೆದ್ದಿರುವುದು ತುಂಬಾ ಸಂತೋಷವಾಗಿದೆ. ಸ್ಪರ್ಧೆಯುದ್ದಕ್ಕೂ ಅಪಾರ ಧೈರ್ಯ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಭವಿಷ್ಯವು ಅವರಿಗೆ ಇನ್ನೂ ಹಲವಾರು ಸಾಧನೆಗಳನ್ನು ತರಲಿ.

#CWG2026″

 

*****