Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ಯಾಲಸ್ತೀನ್ ಅಧ್ಯಕ್ಷರ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ

ಪ್ಯಾಲಸ್ತೀನ್ ಅಧ್ಯಕ್ಷರ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ

ಪ್ಯಾಲಸ್ತೀನ್ ಅಧ್ಯಕ್ಷರ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ


ಪ್ಯಾಲಸ್ತೀನ್ ಅಧ್ಯಕ್ಷರಾದ ಘನತೆವೆತ್ತ ಶ್ರೀ. ಮಹಮ್ಮದ್ ಅಬ್ಬಾಸ್ ಅವರೇ,

ಪ್ಯಾಲಸ್ತೀನ್ ಮತ್ತು ಭಾರತೀಯ ನಿಯೋಗದ ಸದಸ್ಯರೇ,

ಮಾಧ್ಯಮದ ಸದಸ್ಯರೇ,

ಮಹಿಳೆಯರೇ ಮತ್ತು ಮಹನೀಯರೇ

ಭಾರತದ ಹಳೆಯ ಗೆಳೆಯರಾದ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರನ್ನು ಮತ್ತೆ ಭಾರತದ ಅಧಿಕೃತ ಭೇಟಿಗೆ ಆಹ್ವಾನಿಸಲು ನಾನು ಹರ್ಷಿಸುತ್ತೇನೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮಗಳ ಕಾಲದಿಂದಲೂ ಭಾರತ ಮತ್ತು ಪ್ಯಾಲಸ್ತೀನ್ ನಡುವೆ ದೀರ್ಘ ಕಾಲೀನ ಐಕ್ಯಮತ್ಯ ಮತ್ತು ಸ್ನೇಹದ ಮೇಲೆ ಬೆಳೆಸಲಾಗಿದೆ. ಪ್ಯಾಲಿಸ್ತೀನದ ಉದ್ದೇಶಗಳಿಗೆ ಬೆಂಬಲ ನೀಡುವಲ್ಲಿ ಭಾರತ ಅಛಲವಾಗಿದೆ. ನಾವು ಸಾರ್ವಭಾಮ, ಸ್ವತಂತ್ರ, ಸಂಯುಕ್ತ ಮತ್ತು ಇಸ್ರೇಲ್ ನೊಂದಿಗೆ ಶಾಂತಿಯುತವಾದ ಸಹ ಅಸ್ತಿತ್ವದ ಪ್ಯಾಲಿಸ್ತೀನ್ ನ ಸಾಕಾರವನ್ನು ನೋಡುವ ವಿಶ್ವಾಸ ಹೊಂದಿದ್ದೇವೆ. ಮಹಮ್ಮದ್ ಅವರೊಂದಿಗೆ ಇಂದು ನಡೆದ ಮಾತುಕತೆ ವೇಳೆ ನಾನು ಈ ಬಗ್ಗೆ ನಮ್ಮ ಮನೋಭಾವವನ್ನು ಪುನರುಚ್ಚರಿಸಿದ್ದೇವೆ.

ಸ್ನೇಹಿತರೆ,

ಅಧ್ಯಕ್ಷ ಅಬ್ಬಾಸ್ ಮತ್ತು ನಾನು ಉಪಯುಕ್ತ ಮತ್ತು ಸವಿವರವಾದ ಚರ್ಚೆಯನ್ನು ಈಗಷ್ಟೇ ಪೂರ್ಣಗೊಳಿಸಿದ್ದೇವೆ. ಇದು ನಮ್ಮ ಪಾಲುದಾರಿಕೆಗೆ ಇನ್ನೂ ಹೆಚ್ಚಿನ ಬಲ ನೀಡಲಿದೆ. ನಾವು ಪಶ್ಚಿಮ ಏಷ್ಯಾ ಪರಿಸ್ಥಿತಿ ಮತ್ತು ಮಧ್ಯ ಪ್ರಾಚ್ಯದ ಶಾಂತಿ ಪ್ರಕ್ರಿಯೆ ಕುರಿತಂತೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ. ಪಶ್ಚಿಮ ಏ,ಯಾದ ಸವಾಲುಗಳನ್ನು ಸುಸ್ಥಿರ ರಾಜಕೀಯ ಮಾತುಕತೆ ಮತ್ತು ಶಾಂತಿಯುತ ಮಾರ್ಗದಲ್ಲಿ ಎದುರಿಸಬೇಕು ಎಂಬುದನ್ನು ನಾವು ಒಪ್ಪಿದ್ದೇವೆ. ಸಮಗ್ರ ಪರಿಹಾರವನ್ನು ಹುಡುಕುವ ನಿಟ್ಟಿನಲ್ಲಿ ಪ್ಯಾಲಿಸ್ತೀನ್ ಮತ್ತು ಇಸ್ರೇಲ್ ನಡುವೆ ಶೀಘ್ರ ಮಾತುಕತೆ ಆರಂಭವಾಗುತ್ತದೆ ಎಂಬ ವಿಶ್ವಾಸ ಭಾರತಕ್ಕಿದೆ. ದ್ವಿಪಕ್ಷೀಯ ಮಟ್ಟದಲ್ಲಿ, ಭಾರತ ಪ್ಯಾಲಿಸ್ತೀನ್ ನೊಂದಿಗೆ ಉಪಯುಕ್ತ ಅಭಿವೃದ್ಧಿ ಪಾಲುದಾರನಾಗಲು ಬದ್ಧವಾಗಿದೆ. ಅಧ್ಯಕ್ಷ ಅಬ್ಬಾಸ್ ಮತ್ತು ನಾನು, ಎರಡೂ ಕಡೆಯವರು ಪ್ರಾಯೋಗಿಕ ಸಹಕಾರದ ಮೂಲಕ ಪ್ಯಾಲಿಸ್ತೀನದ ಆರ್ಥಿಕತೆ ಬೆಳೆಸಲು ಮತ್ತು ಅಲ್ಲಿನ ಜನರ ಜೀವನ ಸುಧಾರಣೆಗೆ ಕೊಡುಗೆ ನೀಡಲು ಸಮ್ಮತಿಸಿದ್ದೇವೆ. ನಾವು ಪ್ಯಾಲಿಸ್ತೀನದ ಅಭಿವೃದ್ಧಿ ಮತ್ತು ಸಾಮರ್ಥ್ಯ ವರ್ಧನೆ ಪ್ರಯತ್ನಗಳಿಗೆ ಬೆಂಬಲ ಮುಂದುವರಿಸುತ್ತೇವೆ. ಇಂದು ಆಖೈರುಗೊಂಡ ಒಪ್ಪಂದಗಳ ಪೈಕಿ ಈ ನಿಟ್ಟಿನಲ್ಲಿ ನಮ್ಮ ಸಹಕಾರವನ್ನು ಬಲಪಡಿಸುವ ಇಂಗಿತವನ್ನು ದೃಢಪಡಿಸಿದೆ. ನಾವು ಭಾರತ ನೆರವು ಒದಗಿಸಿರುವ ಮಾಹಿತಿ ತಂತ್ರಜ್ಞಾನ, ಯುವ ಮತ್ತು ಕೌಶಲ ಅಭಿವೃದ್ಧಿಯಂಥ ನಿರ್ದಿಷ್ಟ ವಿಚಾರಗಳ ಬಗ್ಗೆಯೂ ಚರ್ಚಿಸಿದ್ದೇವೆ. ರಾಮಲ್ಲಾದಲ್ಲಿನ ಮಹತ್ವಾಕಾಂಕ್ಷೆಯ ಟೆಕ್ನೋ ಪಾರ್ಕ್ ನಿರ್ಮಾಣಕ್ಕೆ ಯೋಜನಾ ನೆರವನ್ನು ಭಾರತ ಕೈಗೆತ್ತಿಕೊಂಡಿದೆ. ಇದು ಪೂರ್ಣಗೊಂಡ ಬಳಿಕ, ಇದು ಪ್ಯಾಲಿಸ್ತೀನದ ಐ.ಟಿ. ತಾಣವಾಗಿ ಸೇವೆ ಸಲ್ಲಿಸಲಿದೆ ಮತ್ತು ಐಟಿ ಸಂಬಂಧಿತ ತರಬೇತಿ ಮತ್ತು ಸೇವೆಗಳಿಗೆ ಒಂದೆಡೆಯೇ ಪರಿಹಾರ ಒದಗಿಸಲಿದೆ. ನಾವು ಯೋಗಾ ವಿನಿಮಯದಂಥ ಹೊಸ ಅಂಶಗಳ ಸೇರ್ಪಡೆಯೊಂದಿಗೆ ನಮ್ಮ ಸಾಂಸ್ಕೃತಿಕ ವಿನಿಮಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎದಿರು ನೋಡುತ್ತಿದ್ದೇವೆ. ಮುಂದಿನ ತಿಂಗಳು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಲಿಸ್ತೀನಿಯರು ಪಾಲ್ಗೊಳ್ಳುವುದನ್ನೂ ನಾವು ಎದಿರು ನೋಡುತ್ತಿದ್ದೇವೆ. ಕೊನೆಯದಾಗಿ, ನಾನು ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಮತ್ತು ಅವರ ನಿಯೋಗಕ್ಕೆ ಆಹ್ಲಾದಕರವಾದ ಮತ್ತು ಫಲಪ್ರದವಾದ ಭಾರತದ ವಾಸ್ತವ್ಯವನ್ನು ಬಯಸುತ್ತೇನೆ. ನಾನು ಅಧ್ಯಕ್ಷ ಅಬ್ಬಾಸ್ ವರೊಂದಿಗೆ ನಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲು ಒಗ್ಗೂಡಿ ಶ್ರಮಿಸಲು ಎದಿರು ನೋಡುತ್ತಿದ್ದೇನೆ.

ಧನ್ಯವಾದಗಳು.

ತುಂಬಾ ತುಂಬಾ ಧನ್ಯವಾದಗಳು.

****

AKT/NT