ಪಿಎಂಇಂಡಿಯಾ
ಗ್ರಾಹಕರ ಕುಂದು ಕೊರತೆಗಳನ್ನು ಹೆಚ್ಚು ಸಮರ್ಥವಾಗಿ ಪರಿಹರಿಸುವಂತೆ ಪ್ರಧಾನಿ ಕರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ನವ ದೆಹಲಿಯಲ್ಲಿ ಆಡಳಿತ ಪರವಾದ ಮತ್ತು ಸಕಾಲದಲ್ಲಿ ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ ನಡೆದ ಹದಿಮೂರನೇ ಸಂವಾದದ ಅಧ್ಯಕ್ಷತೆ ವಹಿಸಿದ್ದರು.
ಆರಂಭದಲ್ಲಿ ಪ್ರಧಾನಮಂತ್ರಿಯವರು ಗ್ರಾಹಕರ ಕುಂದುಕೊರತೆಗಳನ್ನು ನಿಭಾಯಿಸುತ್ತಿರುವ ಮತ್ತು ಪರಿಹಾರ ಒದಗಿಸಿರುವ ಕುರಿತಂತೆ ಆಗಿರುವ ಪ್ರಗತಿಯ ಪರಿಶೀಲನೆ ನಡೆಸಿದರು. ಟಿಕೆಟ್ ಬುಕ್ಕಿಂಗ್ ಮತ್ತು ಹೋಟೆಲುಗಳ ಕಾಯ್ದಿರಿಸುವಿಕೆಯಂಥ ಇ-ವಾಣಿಜ್ಯ ವಲಯದಲ್ಲಿನ ಬೃಹತ್ ಗಾತ್ರದ ದೂರುಗಳ ಕುರಿತಂತೆ ಮತ್ತು ಇಂಥ ದೂರುಗಳನ್ನುನಿರ್ಣಾಯಕವಾಗಿ ಪರಿಹರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಸಂಬಂಧಿತ ಅಧಿಕಾರಿಗಳನ್ನು ಪ್ರಶ್ನಿಸಿದರು. ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಯ ಸಾಮರ್ಥ್ಯವನ್ನು ಹೆಚ್ಚಿಸುವುದೂ ಸೇರಿದಂತೆ ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಲಾಯಿತು. ಸಾಮರ್ಥ್ಯ ಹೆಚ್ಚಳ ಮತ್ತು ಗ್ರಾಹಕರ ಕುಂದುಕೊರತೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸುವಂತೆ ಕರೆ ನೀಡಿದ ಪ್ರಧಾನಮಂತ್ರಿಯವರು ಸಮಸ್ಯೆಗಳ ಸ್ವರೂಪ ಕುರಿತಂತೆ ಸಮಗ್ರ ಪರಿಶೀಲನೆ ನಡೆಸುವಂತೆ ಮತ್ತು ಹೊಣೆಗಾರಿಕೆ ನಿಗದಿ ಮಾಡುವ ನಿಟ್ಟಿನಲ್ಲಿ ಮತ್ತು ಅವುಗಳಿಗೆ ಪರಿಹಾರ ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಹತ್ತು ದಿನಗಳ ಒಳಗಾಗಿ ಪರಿಣಾಮಕಾರಿಯಾದ ಅನುಸರಣಾ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಇಂದು ಪರಾಮರ್ಶೆಯ ವೇಳೆ, ಪ್ರಧಾನಮಂತ್ರಿಯವರು ಉತ್ತರ ಪ್ರದೇಶ, ರಾಜಾಸ್ತಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಬಿಹಾರ್, ಒಡಿಶಾ ಮತ್ತು ಉತ್ತರಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಸ್ತರಿಸಿರುವ ರಸ್ತೆ, ರೈಲು,ವಿದ್ಯುತ್, ಕಲ್ಲಿದ್ದಲು ಮತ್ತು ಗಣಿ ವಲಯ ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ದೇಶದಾದ್ಯಂತ ಸೌರ ಪಂಪ್ ಗಳನ್ನು ಅಳವಡಿಸುವ ಕುರಿತ ಪ್ರಗತಿಯನ್ನೂ ಪ್ರಧಾನಮಂತ್ರಿಯುವರು ಪರಾಮರ್ಶಿಸಿದರು. ದೇಶದಾದ್ಯಂತ ಈವರೆಗೆ ಒಟ್ಟು 208 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ಪಂಪ್ ಗಳನ್ನು ಸ್ಥಾಪಿಸಲಾಗಿದೆ ಎಂಬ ವಿಷಯವನ್ನು ತಿಳಿಸಲಾಯಿತು.
ಪ್ರಧಾನಮಂತ್ರಿಯವರು ಜಾರ್ಖಂಡ್, ತೆಲಂಗಾಣ, ಪಂಜಾಬ್, ಛತ್ತೀಸ್ ಗಢ, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ವಿವಿಧ ಸಂಬಂಧಿತ ವಿಷಯಗಳ ಕುರಿತಂತೆ ಚರ್ಚಿಸಿದರು.
ದೇಶದ ದೂರದ ಮತ್ತು ನಕ್ಸಲ್ ಬಾಧಿತ ಪ್ರದೇಶಗಳಿಗೆ ಅದರಲ್ಲೂ ಛತ್ತೀಸಗಢದ ದಕ್ಷಿಣ ಬಸ್ತಾರ್ ಪ್ರದೇಶದಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ಸೌರ ಪಂಪ್ ಗಳು ನೆರವಾಗುತ್ತಿವೆ ಎಂಬ ವಿಷಯವನ್ನು ಪ್ರಧಾನಿಯವರಿಗೆ ತಿಳಿಸಲಾಯಿತು.
ಪ್ರವಾಹ ಪರಿಸ್ಥಿತಿ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಪರಿಶೀಲನೆಯ ವೇಳೆ, ಪ್ರಧಾನಮಂತ್ರಿಯವರು ರಾಜ್ಯಗಳು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಯೋಗ್ಯ ರೀತಿಯಲ್ಲಿ ಅಣಕು ಅಭ್ಯಾಸ ನಡೆಸಬೇಕು ಮತ್ತು ಪ್ರವಾಹ ಪರಿಹಾರ ವ್ಯವಸ್ಥೆಯಲ್ಲಿ ಪರಿಣಾಮಕಾರಿತ್ವದ ಖಾತ್ರಿಗೆ ಹೂಳು ತೆಗೆಯುವ ಕಾರ್ಯ ಕೈಗೊಳ್ಳುವಂತೆ ಪ್ರತಿಪಾದಿಸಿದರು. ಅವರು ಜಲ ಸಂರಕ್ಷಣೆ ಕುರಿತ ಪ್ರಯತ್ನಗಳ ಅಗತ್ಯವನ್ನೂ ಪ್ರತಿಪಾದಿಸಿದರು.
AKT/NT
Today’s PRAGATI session was marked by extensive discussions on road, rail, coal projects and water conservation. pic.twitter.com/esNEkvbGnY
— Narendra Modi (@narendramodi) June 29, 2016
The issue of preparedness for dealing with floods came up during PRAGATI session. Urged states to ensure efficacy of relief mechanisms.
— Narendra Modi (@narendramodi) June 29, 2016
Reviewed progress towards installing solar pumps, which will help provide clean drinking water in remote areas. https://t.co/6rdR8ijlVw
— Narendra Modi (@narendramodi) June 29, 2016