Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ ಪವಿತ್ರ ಕುಟುಂಬದ ಸಮೂಹ


 

ತಮ್ಮ ಕುಟುಂಬದ ಮಹಾ ಪೋಷಕರಾಗಿದ್ದ ಮದರ್ ಮರಿಯಂ ಥೆರೇಸಾ ಅವರಿಗೆ ಬಿ1 ಸಂತ ಪದವಿ ಪ್ರದಾನ ಮಾಡುತ್ತಿರುವುದಕ್ಕೆ  ತಮ್ಮ ‘ಮನ್ ಕಿ ಬಾತ್’ಕಾರ್ಯಕ್ರಮದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪವಿತ್ರ ಕುಟುಂಬದ ಸಮೂಹ ಧನ್ಯವಾದ ಅರ್ಪಿಸಿದೆ.

 

 “ಮದರ್ ಮರಿಯಂ ಥೆರೇಸಾ ಅವರಿಗೆ ಬಿ1 ಸಂತ ಪದವಿ ಪ್ರದಾನ ಮಾಡುತ್ತಿರುವುದಕ್ಕೆ  ನಿಮ್ಮ ‘ಮನ್ ಕಿ ಬಾತ್’ಕಾರ್ಯಕ್ರಮದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕಾಗಿ ಪವಿತ್ರ ಕುಟುಂಬ ಸಮೂಹ ಸಿಎಚ್.ಎಫ್.ನ ಸುಪೀರಿಯರ್ ಜನರಲ್ ಆದ ಸೀನಿಯರ್ ಉದಯ ಆದ ನಾನು,  ಅತ್ಯಂತ ವಿನೀತನಾಗಿ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಥೆರೇಸಾ ಅವರು ದೂರದರ್ಶಿತ್ವದ ವ್ಯಕ್ತಿಯಾಗಿದ್ದರು, ಸಂತ ಮಹಿಳೆಯಾಗಿದ್ದರು, ಶ್ರೇಷ್ಠ ಅತೀಂದ್ರಿಯ ಶಕ್ತಿ ಉಳ್ಳವರಾಗಿ, ತಮ್ಮ ಧ್ಯೇಯವನ್ನು ಹಲವು ಕಷ್ಟಗಳ ನಡುವೆಯೂ ಹೋರಾಟದಿಂದಲೇ ಪೂರ್ಣಗೊಳಿಸಿದ್ದರು. ನೀವು  ತಮ್ಮ ಸುತ್ತಮುತ್ತಲಿನ ಕುಟುಂಬಗಳಿಗೆ ಶಿಕ್ಷಣದ ಮೂಲಕ ಪ್ರೀತಿ ಮತ್ತು ಶಾಂತಿಯನ್ನು ನೀಡುವ ಮೂಲಕ ಆ ಕುಟುಂಬಗಳ ಉನ್ನತಿಗಾಗಿ ಅವಿರತ ಶ್ರಮಿಸಿದ ನವ ಭಾರತದ ಸಂತ ಮಾತೆ ಮರಿಯಂ ಥೆರೇಸಾ ಅವರಿಗೆ ತುಂಬು ಹೃದಯದಿಂದ ನೀವು ಮೆಚ್ಚುಗೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದೀರಿ. ಹೀಗೆ ಅವರು ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಘನತೆವೆತ್ತ ಮೋದಿಜೀ ಅವರೇ, ಮನ್ ಕಿ ಬಾತ್ ಮೂಲಕ ತಮ್ಮ ಮೆಚ್ಚುಗೆಯ ಸಂದೇಶವು ಹೃದಯಸ್ಪರ್ಶಿಯಾಗಿತ್ತು ಮತ್ತು ನಮ್ಮ ಸಮೂಹದ ಮತ್ತು ಸುತ್ತ ಮುತ್ತ ಇರುವ ಪ್ರತಿಯೊಬ್ಬರೂ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ”, ಎಂದು ಪ್ರಧಾನಮಂತ್ರಿಯವರಿಗೆ ಪವಿತ್ರ ಕುಟುಂಬ ಸಭೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.  

 

ತಮ್ಮ ಮಾಸಿಕ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮರಿಯಂ ಥೆರೇಸಾ ಅವರಿಗೆ ಕ್ರೈಸ್ತ ಸಂತ ಪದವಿ ಪ್ರದಾನ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು. “ಬರುವ ಅಕ್ಟೋಬರ್ 13ರಂದು ಘನತೆವೆತ್ತ ಪೋಪ್ ಫ್ರಾನ್ಸಿಸ್ ಅವರು ಸೋದರಿ ಮರಿಯಂ ಥೆರೇಸಾ ಅವರನ್ನು ಸಂತರೆಂದು ಘೋಷಿಸುತ್ತಿರುವುದು, ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಚಾರವಾಗಿದೆ. ನಾನು ಸೋದರಿ ಮಾರಿಯಂ ಥೆರೇಸಾ ಅವರಿಗೆ ಮತ್ತು ಭಾರತದ ನಾಗರಿಕರಿಗೆ ಅದರಲ್ಲೂ ನಮ್ಮ ಕ್ರೈಸ್ತ ಸೋದರ ಮತ್ತು ಸೋದರಿಯರಿಗೆ ಈ ಸಾಧನೆಗಾಗಿ ಅಭಿನಂದನೆ ಸಲ್ಲಿಸುತ್ತೇನೆ.” ಎಂದು ಹೇಳಿದ್ದರು.

 

 

***