Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರಿಂದ ದೆಹಲಿಯಲ್ಲಿ ನಡೆಯಲಿರುವ AI ಇಂಪ್ಯಾಕ್ಟ್ ಶೃಂಗಸಭೆಗೆ ಜಾಗತಿಕ ನಾಯಕರ ಸ್ವಾಗತ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಕೃತಕ ಬುದ್ಧಿಮತ್ತೆ (AI) ಇಂಪ್ಯಾಕ್ಟ್ ಶೃಂಗಸಭೆಗೆ ವಿಶ್ವದಾದ್ಯಂತ ಜಾಗತಿಕ ನಾಯಕರು, ಉದ್ಯಮದ ನಾಯಕರು, ನಾವೀನ್ಯಕಾರರು,  ನೀತಿ ನಿರೂಪಕರು, ಸಂಶೋಧಕರು ಮತ್ತು ಉತ್ಸಾಹಿ ತಂತ್ರಜ್ಞಾನಿಗಳನ್ನು ಸ್ವಾಗತಿಸಿದರು.

“ಸರ್ವಜನ ಹಿತಾಯ, ಸರ್ವಜನ ಸುಖಾಯ – ಎಲ್ಲರಿಗೂ ಕಲ್ಯಾಣ, ಎಲ್ಲರಿಗೂ ಸಂತೋಷ’’ ಎಂಬ ಧೇಯದೊಂದಿಗೆ ನಡೆಯುತ್ತಿರುವ ಶೃಂಗಸಭೆಯು ಮಾನವ ಕೇಂದ್ರಿತ ಪ್ರಗತಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಪ್ರಧಾನಮಂತ್ರಿ ಅವರು ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ, ಆಡಳಿತ ಮತ್ತು ಉದ್ಯಮ ಸೇರಿದಂತೆ ವಿಭಿನ್ನ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಪರಿವರ್ತನಾತ್ಮಕ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಶೃಂಗಸಭೆಯಲ್ಲಿನ ಚರ್ಚೆಗಳು ನಾವೀನ್ಯತೆ, ಸಹಯೋಗ ಮತ್ತು ಎಐನ ಜವಾಬ್ದಾರಿಯುತ ಬಳಕೆಯ ಕುರಿತು ಜಾಗತಿಕ ಸಂವಾದವನ್ನು ಉತ್ಕೃಷ್ಟಗೊಳಿಸುತ್ತದೆ, ಪ್ರಗತಿಪರ, ನವೀನ ಮತ್ತು ಅವಕಾಶ-ಆಧರಿತ ಭವಿಷ್ಯವನ್ನು ರೂಪಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಾಗತಿಕ ಕೃತಕ ಬುದ್ಧಿಮತ್ತೆಯ ಪರಿವರ್ತನೆಯಲ್ಲಿ ಭಾರತದ ನಾಯಕತ್ವವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಒತ್ತಿ ಹೇಳಿದ್ದು,  ಇದು 1.4 ಶತಕೋಟಿ ಜನರ ಸಾಮರ್ಥ್ಯ, ಸದೃಢವಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸಕ್ರಿಯ ನವೋದ್ಯಮ ಪೂರಕ ವ್ಯವಸ್ಥೆ ಮತ್ತು ಅತ್ಯಾಧುನಿಕ ಸಂಶೋಧನೆಯನ್ನು ಆಧರಿಸಿದೆ. ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ಪ್ರಗತಿಗಳು ಮಹತ್ವಾಕಾಂಕ್ಷೆ ಮತ್ತು ಜವಾಬ್ದಾರಿ ಎರಡನ್ನೂ ಪ್ರತಿಬಿಂಬಿಸುತ್ತವೆ, ತಾಂತ್ರಿಕ ಪ್ರಗತಿಯಲ್ಲಿ ರಾಷ್ಟ್ರವನ್ನು ಮುಂಚೂಣಿಯಲ್ಲಿ ಇರಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲಾತಾಣ X ಸರಣಿ ಪೋಸ್ಟ ನಲ್ಲಿ ಹೀಗೆ ಹೇಳಿದ್ದಾರೆ:

“ಕೃತಕ ಬುದ್ಧಿಮತ್ತೆ(ಎಐ) ಕುರಿತು ಚರ್ಚಿಸಲು ಇಡೀ ವಿಶ್ವವನ್ನು ಒಗೂಡಿಸುವುದು!

ಇಂದಿನಿಂದ ಭಾರತವು ದೆಹಲಿಯ ಭಾರತ ಮಂಟಪದಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸುತ್ತದೆ. ಈ ಶೃಂಗಸಭೆಗೆ  ಜಾಗತಿಕ ನಾಯಕರು, ಉದ್ಯಮದ ನಾಯಕರು, ನಾವೀನ್ಯಕಾರರು, ನೀತಿ ನಿರೂಪಕರು, ಸಂಶೋಧಕರು ಮತ್ತು ಜಗತ್ತಿನಾದ್ಯಂತದ ಉತ್ಸಾಹಿ ತಂತ್ರಜ್ಞಾನಿಗಳನ್ನು ಹೃತ್ಪೂರ್ವಕವಾಗಿ ನಾನು ಸ್ವಾಗತಿಸುತ್ತೇನೆ. ಶೃಂಗಸಭೆಯ ವಿಷಯವು ಸರ್ವಜನ ಹಿತಾಯ, ಸರ್ವಜನ ಸುಖಾಯ ಅಥವಾ ಎಲ್ಲರಿಗೂ ಕಲ್ಯಾಣ, ಎಲ್ಲರಿಗೂ ಸಂತೋಷ, ಮಾನವ ಕೇಂದ್ರಿತ ಪ್ರಗತಿಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ನಮ್ಮ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

”ಎಐ ಇಂದು ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ, ಆಡಳಿತ ಮತ್ತು ಉದ್ಯಮ ಸೇರಿ ಹಲವು ಕ್ಷೇತ್ರಗಳನ್ನು ಪರಿವರ್ತಿಸುತ್ತಿದೆ. ಎಐ ಇಂಪ್ಯಾಕ್ಟ್ ಶೃಂಗಸಭೆಯು ನಾವೀನ್ಯತೆ, ಸಹಯೋಗ, ಜವಾಬ್ದಾರಿಯುತ ಬಳಕೆ ಮತ್ತು ಇನ್ನೂ ಹೆಚ್ಚಿನವುಗಳಂತಹ ಎಐನ ವಿಭಿನ್ನ ಅಂಶಗಳ ಕುರಿತು ಜಾಗತಿಕ ಸಂವಾದವನ್ನು ಶ್ರೀಮಂತಗೊಳಿಸುತ್ತದೆ. ಶೃಂಗಸಭೆಯ ಫಲಿತಾಂಶಗಳು ಪ್ರಗತಿಪರ, ನವೀನ ಮತ್ತು ಅವಕಾಶ-ಆಧಾರಿತ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತದೆಂಬ ವಿಶ್ವಾಸ ನನಗಿದೆ’’.

“ಭಾರತದ 1.4 ಶತಕೋಟಿ ಜನರಿಗೆ ಧನ್ಯವಾದಗಳು, ನಮ್ಮ ರಾಷ್ಟ್ರವು ಎಐ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಿಂದ ಸಕ್ರಿಯ ಸ್ಟಾರ್ಟ್‌ಅಪ್ ಪೂರಕ ವ್ಯವಸ್ಥೆ ಮತ್ತು ಅತ್ಯಾಧುನಿಕ ಸಂಶೋಧನೆಯವರೆಗೆ, ಎಐ ನಲ್ಲಿನ ನಮ್ಮ ಹೆಜ್ಜೆಗಳು ಮಹತ್ವಾಕಾಂಕ್ಷೆ ಮತ್ತು ಜವಾಬ್ದಾರಿ ಎರಡನ್ನೂ ಪ್ರತಿಬಿಂಬಿಸುತ್ತವೆ.’’

 

*****