ಪಿಎಂಇಂಡಿಯಾ
ನೇಪಾಳದ ಪ್ರಧಾನಮಂತ್ರಿ ಗೌರವಾನ್ವಿತ ಕೆ.ಪಿ.ಓಲಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಲೋಕ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ಅಭಿನಂದಿಸಿದರು.
ಪ್ರಧಾನಮಂತ್ರಿ ಶ್ರೀ ಮೋದಿ ಅವರು ಪ್ರಧಾನಮಂತ್ರಿ ಶ್ರೀ ಓಲಿ ಅವರಿಗೆ ಅವರ ಹೃದಯಪೂರ್ವಕ ಅಭಿನಂದನಾ ಮಾತುಗಳಿಗೆ ಕೃತಜ್ಞತೆ ಸಲ್ಲಿಸಿ, ಭಾರತ – ನೇಪಾಳ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತದ ಬದ್ದತೆಯನ್ನು ಪುನರುಚ್ಚರಿಸಿದರು.
ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿ ವಿವಿಧ ವಲಯಗಳಲ್ಲಿ ಆಗಿರುವ ಗಮನಾರ್ಹ ಪ್ರಗತಿಗೆ ಇಬ್ಬರು ನಾಯಕರೂ ತೃಪ್ತಿ ವ್ಯಕ್ತಪಡಿಸಿ, ಉಭಯ ದೇಶಗಳ ನಡುವೆ ಸಾಂಪ್ರದಾಯಿಕ ನಿಕಟತೆ ಮತ್ತು ಸ್ನೇಹಾಚಾರದ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಮತ್ತು ಬಹು ಆಯಾಮದ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವ ತಮ್ಮ ಬದ್ದತೆಯನ್ನೂ ಪುನರುಚ್ಚರಿಸಿದರು.
******
Thank you PM @kpsharmaoli for your warm wishes. Nepal and India have been close friends and neighbours since time immemorial, nurtured by our strong people-to-people bonds. I look forward to continue working with you to take India-Nepal relationship to ever greater heights. https://t.co/ySA7gtzVu2
— Narendra Modi (@narendramodi) May 23, 2019