Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮ್ಯಾನ್ಮಾರ್ ನ ಬಗಾನ್ ನಲ್ಲಿ ಭೂಕಂಪದಿಂದಾಗಿ ಹಾನಿಗೀಡಾಗಿರುವ ಪಗೋಡಾಗಳ ಸಂರಕ್ಷಣೆ ಸಂಬಂಧ ಭಾರತ ಮತ್ತು ಮ್ಯಾನ್ಮಾರ್ ನಡುವಿನ ಒಡಂಬಡಿಕೆಗೆ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2017ರ ಸೆಪ್ಟೆಂಬರ್ 6-7ರಂದು ಮ್ಯಾನ್ಮಾರ್ ಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಲಾಗುವುದು.


ಈ ಯೋಜನೆಯ ಜಾರಿ ಭಾರತ ಸಂಸ್ಕೃತಿ ಮತ್ತು ಧರ್ಮ ಕ್ಷೇತ್ರಗಳಲ್ಲಿ ಮ್ಯಾನ್ಮಾರ್ ಜತೆಗೆ ಹೊಂದಿರುವ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿದೆ. ಈ ಯೋಜನೆಯ ಧಾರ್ಮಿಕ ಮತ್ತು ಪ್ರವಾಸಿ ಮಹತ್ವದಿಂದಾಗಿ ಇದು ಮ್ಯಾನ್ಮಾರ್ ಜನತೆಯಲ್ಲಿ ಭಾರತದ ಮೇಲೆ ಅನನ್ಯ ಸದಾಶಯವನ್ನು ಸೃಜಿಸಲಿದೆ. ಇದು ಮ್ಯಾನ್ಮಾರ್ ಜತೆಗಿನ ಭಾರತದ ಅಭಿವೃದ್ಧಿ ಭಾಗೀದಾರಿಕೆಗೂ ಕೊಡುಗೆ ನೀಡಲಿದೆ. ಇದು ಪುನರುಜ್ಜೀವನ ಮತ್ತು ಸಂರಕ್ಷಣೆ ಕ್ಷೇತ್ರದಲ್ಲಿ ಭಾರತದ ಪ್ರಾವೀಣ್ಯವನ್ನು ಕೇವಲ ಮ್ಯಾನ್ಮಾರ್ ಜನತೆಗೆ ಮಾತ್ರವಲ್ಲ; ಇತರ ದೇಶಗಳ ಪ್ರವಾಸಿಗರಿಗೂ ಬಿಂಬಿಸುವುದಕ್ಕೆ ಅವಕಾಶ ಕಲ್ಪಿಸಲಿದೆ.

***