Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ವಿಜಯನಗರದ ಭೋಗಾಪುರಂನಲ್ಲಿ 17,900 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ವಿಜಯನಗರದ ಭೋಗಾಪುರಂನಲ್ಲಿ 17,900 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ವಿಜಯನಗರದ ಭೋಗಾಪುರಂನಲ್ಲಿ 17,900 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. ಸ್ವರ್ಣ ಆಂಧ್ರ ದೃಷ್ಟಿಕೋನಕ್ಕೆ ಅನುಗುಣವಾದ ಈ ದಿನದ ಅಪಾರ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಂತಹ ಶುಭ ತಿಂಗಳಲ್ಲಿ ಉತ್ತರ ಆಂಧ್ರದ ಪವಿತ್ರ ಭೂಮಿಗೆ ಭೇಟಿ ನೀಡಲು ಲಭಿಸಿರುವ  ಅವಕಾಶಕ್ಕಾಗಿ  ಅಪಾರ ಕೃತಜ್ಞತೆ ಸಲ್ಲಿಸಿದರು, ಭಗವಾನ್ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ, ಶ್ರೀ ಕುರ್ಮನಾಥ ಸ್ವಾಮಿ ಮತ್ತು ಮಾತೆ ಪೈಡಿಥಳ್ಳಿ ಅಮ್ಮಾವರು ಅವರಿಗೆ ತಮ್ಮ ಆಳವಾದ ಗೌರವವನ್ನು ಸಲ್ಲಿಸಿದರು. “ಈ ಮಹತ್ವದ ಸಂದರ್ಭಕ್ಕೆ ಸಾಕ್ಷಿಯಾಗಲು ಇಂದು ಉತ್ತರ ಆಂಧ್ರದ ಪವಿತ್ರ ಭೂಮಿಯಲ್ಲಿರುವುದು ನನ್ನ ದೊಡ್ಡ ಸೌಭಾಗ್ಯ” ಎಂದು ಶ್ರೀ ಮೋದಿ ಹೇಳಿದರು.

ಸುಮಾರು ಹದಿನೆಂಟು ಸಾವಿರ ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿಯವರು, ವಿಮಾನ ನಿಲ್ದಾಣ ಮೂಲಸೌಕರ್ಯ, ರಸ್ತೆ ಸಂಪರ್ಕ ಮತ್ತು ಇಂಧನ ಭದ್ರತೆಯನ್ನು ಒಳಗೊಂಡಿರುವ ಬಹು-ವಲಯ ಉಪಕ್ರಮಗಳು ರಾಜ್ಯದ ತ್ವರಿತ ಪ್ರಗತಿಯನ್ನು ಸಂಮಂಜಸವಾಗಿ ಸಂಕೇತಿಸುತ್ತವೆ ಎಂದು ಒತ್ತಿ ಹೇಳಿದರು. “ಈ ಅಭಿವೃದ್ಧಿ ಕಾರ್ಯಗಳು ಆಂಧ್ರಪ್ರದೇಶವು ಎಷ್ಟು ವೇಗದಲ್ಲಿ ಮುನ್ನಡೆಯುತ್ತಿದೆ ಎಂಬುದರ ನಿಜವಾದ ಸಂಕೇತವಾಗಿವೆ” ಎಂದು ಶ್ರೀ ಮೋದಿ ಹೇಳಿದರು.

ಕಾರ್ಯಕ್ರಮವನ್ನು ಅಭೂತಪೂರ್ವ ಐತಿಹಾಸಿಕ ಮಹತ್ವದ ಕ್ಷಣವೆಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಸ್ಮರಣೀಯವಾದಂತಹ ಮೂಲಸೌಕರ್ಯದ ಮೈಲಿಗಲ್ಲುಗಳ ಜೊತೆಗೆ, ಸಾಂಪ್ರದಾಯಿಕ ಧಿಮ್ಸಾ ನೃತ್ಯದ ಮೂಲಕ ಸಾಧಿಸಿದ ಅದ್ಭುತ ಸಾಂಸ್ಕೃತಿಕ ವಿಶ್ವ ದಾಖಲೆಯಿಂದಲೂ   ದಿನವನ್ನು ಗುರುತಿಸಲಾಗಿದೆ ಎಂಬುದರತ್ತ  ಗಮನಸೆಳೆದರು. “ಇಂದಿನ ಕಾರ್ಯಕ್ರಮವು ಹೊಸ ಇತಿಹಾಸವನ್ನು ಸೃಷ್ಟಿಸುವ ಮತ್ತು ಅನೇಕ ರಂಗಗಳಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುವ ಕುರಿತಾಗಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಹದಿಮೂರು ಸಾವಿರಕ್ಕೂ ಹೆಚ್ಚು ಬುಡಕಟ್ಟು ಸಹೋದರಿಯರು ಮತ್ತು ಹೆಣ್ಣುಮಕ್ಕಳ ಅದ್ಭುತ ಪ್ರದರ್ಶನವನ್ನು ಕೊಂಡಾಡಿದ ಪ್ರಧಾನಮಂತ್ರಿಯವರು, ಅವರ ಅದ್ಭುತ ಉತ್ಸಾಹ ಮತ್ತು ಶಿಸ್ತನ್ನು ಶ್ಲಾಘಿಸಿದರು, ರೋಮಾಂಚಕ ಪ್ರದರ್ಶನವು ರಾಷ್ಟ್ರದ ಶ್ರೀಮಂತ ವೈವಿಧ್ಯತೆ ಮತ್ತು ಆಳವಾಗಿ ಸಂರಕ್ಷಿಸಲ್ಪಟ್ಟ ಸ್ಥಳೀಯ ಪರಂಪರೆಯನ್ನು ಸುಂದರವಾಗಿ ಒಳಗೊಂಡಿದೆ ಎಂದು ಹೇಳಿದರು. “ಇಲ್ಲಿ ಪ್ರದರ್ಶಿಸಲಾದ ನಮ್ಮ ಬುಡಕಟ್ಟು ಸಂಸ್ಕೃತಿಯ ಹೆಮ್ಮೆಯು ನಿಜವಾಗಿಯೂ ಭವ್ಯವಾದ ಮತ್ತು ಮರೆಯಲಾಗದ ದೃಶ್ಯವಾಗಿದೆ” ಎಂದು ಶ್ರೀ ಮೋದಿ ಹೇಳಿದರು.

ಅಲ್ಲೂರಿ ಸೀತಾರಾಮ ರಾಜು ಅವರ ವೀರ ಪರಂಪರೆ ಮತ್ತು ಬುಡಕಟ್ಟು ಕಲ್ಯಾಣಕ್ಕಾಗಿ ಅವರ ಜೀವಮಾನದ ಸಮರ್ಪಣೆಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿಯವರು, ಇದೇ ನೆಲದಲ್ಲಿ ಹೊಸದಾಗಿ ಪ್ರಾರಂಭಿಸಲಾದ ವಿಮಾನ ನಿಲ್ದಾಣವು ಪ್ರಾದೇಶಿಕ ಬೆಳವಣಿಗೆಗೆ ನಿರ್ಣಾಯಕ ಓಡುದಾರಿ (ರನ್ವೇ)  ಮತ್ತು ಯುವಜನರ ಸಮೃದ್ಧ ಭವಿಷ್ಯಕ್ಕೆ ಪ್ರಬಲ ಲಾಂಚ್ಪ್ಯಾಡ್ ಎಂದು ಬಣ್ಣಿಸಿದರು. “ಆಂಧ್ರ ಮತ್ತು ಉತ್ತರ ಆಂಧ್ರದ ಬೆಳವಣಿಗೆಗೆ ರನ್ ವೇ ಆಗಿ ಸೇವೆ ಸಲ್ಲಿಸುತ್ತಿರುವ ವಿಮಾನ ನಿಲ್ದಾಣವು ಆಂಧ್ರದ ಯುವಜನರಿಗೆ ಉತ್ತಮ ಭವಿಷ್ಯಕ್ಕಾಗಿ ಅಂತಿಮ ಲಾಂಚ್ ಪ್ಯಾಡ್ ಆಗಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಹೊಸ ವಾಯುಯಾನ ಸೌಲಭ್ಯಕ್ಕೆ ದಂತಕಥೆಯಂತಾಗಿರುವ  ಸ್ವಾತಂತ್ರ್ಯ ಹೋರಾಟಗಾರನ ಹೆಸರನ್ನು ಇಡುವ ಸರ್ಕಾರದ ಔಪಚಾರಿಕ ನಿರ್ಧಾರವನ್ನು ಘೋಷಿಸಿದ ಪ್ರಧಾನಮಂತ್ರಿಯವರು, ಈ ಸ್ಮರಣೀಯ ಗೌರವವು ಅದರ ದ್ವಾರಗಳ ಮೂಲಕ ಹಾದುಹೋಗುವ ಪ್ರತಿಯೊಬ್ಬ ಪ್ರಯಾಣಿಕನಲ್ಲೂ ರಾಷ್ಟ್ರೀಯ ಕರ್ತವ್ಯದ ಆಳವಾದ ಪ್ರಜ್ಞೆಯನ್ನು ತುಂಬುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಯಾವುದೇ ನಾಗರಿಕರು ಶ್ರೀ ಅಲ್ಲೂರಿ ಸೀತಾರಾಮ ರಾಜು ಅವರ ಹೆಸರಿನಿಂದ ಸಾರ್ವಜನಿಕ ಮತ್ತು ರಾಷ್ಟ್ರೀಯ ಸೇವೆಗೆ ತಕ್ಷಣ ಸ್ಫೂರ್ತಿ ಪಡೆಯುತ್ತಾರೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಕಳೆದ ಹನ್ನೆರಡು ವರ್ಷಗಳಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರದ ಅಸಾಧಾರಣ ಪರಿವರ್ತನೆಯನ್ನು ವಿವರಿಸಿದ ಪ್ರಧಾನಮಂತ್ರಿಯವರು, 2014 ರಲ್ಲಿ ಅಲ್ಪ ಅಂದರೆ  ಎಪ್ಪತ್ತನಾಲ್ಕು ಕಾರ್ಯಾಚರಣೆಯ ವಿಮಾನ ನಿಲ್ದಾಣಗಳನ್ನು  ಈಗಿನ ಪ್ರಸ್ತುತ ಆಡಳಿತದಲ್ಲಿ ಸಣ್ಣ ನಗರಗಳ ಸಾಮಾನ್ಯ ನಾಗರಿಕರಿಗೆ ಒದಗಿಸಲಾಗಿರುವ ವಿಮಾನ ಪ್ರಯಾಣ ಸೌಲಭ್ಯಗಳ ಪ್ರಜಾಪ್ರಭುತ್ವೀಕರಣವನ್ನು ಆಚರಿಸುವಂತಿರುವ  1ನೂರ 66 ವಿಮಾನ ನಿಲ್ದಾಣಗಳೊಂದಿಗೆ ಹೋಲಿಸಿದರು. “ಇಂದು, ಸಣ್ಣ ನಗರಗಳ ಸಾಮಾನ್ಯ ಜನರು ವಿಮಾನಗಳ ಮೂಲಕ ಆರಾಮವಾಗಿ ಪ್ರಯಾಣಿಸುತ್ತಿದ್ದಾರೆ, ಇದರಿಂದ ವಿಮಾನ ಪ್ರಯಾಣ ದೊಡ್ಡ ಮಹಾನಗರಗಳಿಗೆ ಸೀಮಿತ ಎಂಬ ಭಾವನೆ ನಿವಾರಣೆಯಾಗಿದೆ” ಎಂದು ಶ್ರೀ ಮೋದಿ ಹೇಳಿದರು.

ವಾಯುಯಾನ ಭೂದೃಶ್ಯವನ್ನು ಮೂಲಭೂತವಾಗಿ ಬದಲಾಯಿಸಿದ ಉಡಾನ್ ಯೋಜನೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಈ ಉಪಕ್ರಮವು ಬಡ ಕುಟುಂಬಗಳು ತಮ್ಮ ಹಾರಾಟದ ಕನಸುಗಳನ್ನು ಸಾಕಾರಗೊಳಿಸಲು ಹೇಗೆ ಯಶಸ್ವಿಯಾಗಿದೆ ಎಂಬುದನ್ನು ಎತ್ತಿ ತೋರಿಸಿದರು, ಇಪ್ಪತ್ತೊಂಬತ್ತು ಸಾವಿರ ಕೋಟಿ ರೂಪಾಯಿಗಳ ಬೃಹತ್ ಹೂಡಿಕೆಯ ಬೆಂಬಲದೊಂದಿಗೆ ಅದರ ಎರಡನೇ ಹಂತದ ಇತ್ತೀಚಿನ ಪ್ರಾರಂಭವನ್ನು ಮತ್ತಷ್ಟು ವಿವರಿಸಿದರು. “ಈ ಯೋಜನೆಯು ಕಡುಬಡವರಿಗೆ ಅವರ ಜೀವಮಾನದ ಕನಸುಗಳನ್ನು ಈಡೇರಿಸುವಲ್ಲಿ ಸಕ್ರಿಯವಾಗಿ ಸಹಾಯ ಮಾಡಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ವಾಯುಯಾನ ಕ್ಷೇತ್ರದಲ್ಲಿನ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕಾಶಿಯ ಇತ್ತೀಚಿನ  ‘ಸ್ಪೋಕ್ ಏರ್ಪೋರ್ಟ್’ ಮಾದರಿಯನ್ನು ಪ್ರಸ್ತಾಪಿಸಿದರು, ಇದು ಈಗ ಅಮೃತಸರಕ್ಕೆ ಯಶಸ್ವಿಯಾಗಿ ವಿಸ್ತರಿಸಿದೆ, ಇದು ಪಂಜಾಬ್ ನಗರವನ್ನು ಇಪ್ಪತ್ತೈದು ಅಂತರರಾಷ್ಟ್ರೀಯ ಸ್ಥಳಗಳಿಗೆ ಅದ್ಭುತವಾಗಿ ಸಂಪರ್ಕಿಸುತ್ತದೆ. “ಆಂಧ್ರದ ನೆಲದಿಂದ, ಈ ಸಾಧನೆಗಾಗಿ ನಾನು ಪಂಜಾಬ್ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಶ್ರೀ ಮೋದಿ ಹೇಳಿದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯ ನೇತೃತ್ವದ ಪ್ರಸ್ತುತ ನಾಯಕತ್ವವನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಈಗ ರಾಜ್ಯದ ಬೆಳವಣಿಗೆಯ ಕಾರ್ಯಸೂಚಿಯನ್ನು ದುಪ್ಪಟ್ಟು ವೇಗದಲ್ಲಿ ಕಾರ್ಯಗತಗೊಳಿಸುತ್ತಿದ್ದಾರೆ ಎಂದರು. “ನಮ್ಮ ಆಂಧ್ರಪ್ರದೇಶವು ಸದಾ ವಿಕಸಿತ ಭಾರತದ ಅಂತಿಮ ಬೆಳವಣಿಗೆಯ ಎಂಜಿನ್ ಆಗುವ ಅಪಾರ ಸಾಮರ್ಥ್ಯವನ್ನು ಹೊಂದಿದೆ” ಎಂದೂ  ಶ್ರೀ ಮೋದಿ ಪ್ರತಿಪಾದಿಸಿದರು.

ನೀಲಿ ಆರ್ಥಿಕತೆಯನ್ನು ಪ್ರಬಲವಾಗಿ ಬಲಪಡಿಸುವ ರಾಷ್ಟ್ರೀಯ ಕಾರ್ಯತಂತ್ರವನ್ನು ವಿವರಿಸಿದ ಪ್ರಧಾನಮಂತ್ರಿಯವರು, ವಿಶಾಖಪಟ್ಟಣಂನಿಂದ ಕೃಷ್ಣಪಟ್ಟಣಂವರೆಗಿನ ಪಾರಂಪರಿಕ ಬಂದರುಗಳ ಆಧುನೀಕರಣ ಮತ್ತು ಮುಲಪೇಟೆ ಮತ್ತು ರಾಮಾಯಪಟ್ಟಣಂನಲ್ಲಿ ಹೊಸ ಕಡಲ ಕೇಂದ್ರಗಳ ನಿರ್ಮಾಣದ ಮೂಲಕ ಇಡೀ ಕರಾವಳಿಯನ್ನು ಸಮಗ್ರ ಆರ್ಥಿಕ ಕಾರಿಡಾರ್ ಆಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಚಿಂತನೆಯನ್ನು/ದೃಷ್ಟಿಕೋನವನ್ನು ವಿವರಿಸಿದರು. “ಈ ಇಡೀ ಪ್ರದೇಶವನ್ನು ಅಭಿವೃದ್ಧಿ ಹೊಂದುತ್ತಿರುವ ಕರಾವಳಿ ಆರ್ಥಿಕ ಕಾರಿಡಾರ್ ಆಗಿ ಸಮಗ್ರವಾಗಿ ಅಭಿವೃದ್ಧಿಪಡಿಸುವುದು ನಮ್ಮ ಕಾರ್ಯತಂತ್ರದ ದೃಷ್ಟಿಕೋನವಾಗಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ವಿಶಾಖಪಟ್ಟಣಂ-ರಾಯ್ಪುರ ಎಕ್ಸ್ ಪ್ರೆಸ್ ವೇ ಅಂತಹ ಪ್ರಮುಖ ರಕ್ತನಾಳದಂತಹ ಅಪಧಮನಿಗಳು ಪ್ರಾದೇಶಿಕ ಅಭಿವೃದ್ಧಿಯ ವೇಗಕ್ಕೆ ನಿರ್ಣಾಯಕ ವೇಗವರ್ಧಕಗಳಾಗಿವೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ರಾಜ್ಯದಾದ್ಯಂತ ದಟ್ಟವಾದ ಹೆದ್ದಾರಿ ಮತ್ತು ಎಕ್ಸ್ಪ್ರೆಸ್ವೇ ಜಾಲದ ತ್ವರಿತ ನಿರ್ಮಾಣವನ್ನು ಎತ್ತಿ ತೋರಿಸಿದರು. “ಈ ಎಕ್ಸ್ಪ್ರೆಸ್ವೇ ಯೋಜನೆಗಳು ಮೂಲಭೂತವಾಗಿ ಇಡೀ ಭೌಗೋಳಿಕ ಪ್ರದೇಶಕ್ಕೆ ಅಭೂತಪೂರ್ವ ವೇಗವನ್ನು ನೀಡುತ್ತಿವೆ” ಎಂದು ಶ್ರೀ ಮೋದಿ ಹೇಳಿದರು.

ಪ್ರದೇಶವನ್ನು ಪ್ರಮುಖ ರಾಷ್ಟ್ರೀಯ ಕೈಗಾರಿಕಾ ಕೇಂದ್ರಗಳೊಂದಿಗೆ ಅಡೆ-ತಡೆರಹಿತವಾಗಿ ಸಂಪರ್ಕಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಂಪೂರ್ಣ ಜಾಲದ ವಿದ್ಯುದ್ದೀಕರಣ ಮತ್ತು ಎಪ್ಪತ್ತಕ್ಕೂ ಹೆಚ್ಚು ನಿಲ್ದಾಣಗಳ ಆಧುನೀಕರಣವನ್ನು ಹೊಂದಿರುವ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಗಳು ಪ್ರಸ್ತುತ ಚಾಲ್ತಿಯಲ್ಲಿವೆ ಎಂದು ಘೋಷಿಸಿದರು. “ಈ ಇಡೀ ಪ್ರದೇಶವು ದೇಶದ ಅತಿದೊಡ್ಡ ಕೈಗಾರಿಕಾ ಕೇಂದ್ರಗಳೊಂದಿಗೆ ಸಲೀಸಾಗಿ ಸಂಪರ್ಕ ಹೊಂದುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಬಹು-ಮಾದರಿ ಸಾರಿಗೆಯ  ಮೇಲ್ದರ್ಜೆ ನವೀಕರಣಗಳನ್ನು ಸಂಯೋಜಿಸುವ ಮೂಲಕ, ರೈಲು, ಬಂದರು ಮತ್ತು ವಾಯು ಮೂಲಸೌಕರ್ಯಗಳನ್ನು ಏಕೀಕರಿಸುವಲ್ಲಿ ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆ (ಮಾಸ್ಟರ್ ಪ್ಲಾನ್ ನ)ಯ  ಪ್ರಮುಖ ಪಾತ್ರವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು, ಇದು ಅಂತಿಮವಾಗಿ ಲಾಜಿಸ್ಟಿಕ್ಸ್ ಅನ್ನು ಉತ್ತಮಗೊಳಿಸುತ್ತದೆ, ಸ್ಥಳೀಯ ರೈತರನ್ನು ಸಬಲೀಕರಣಗೊಳಿಸುತ್ತದೆ ಮತ್ತು ವ್ಯಾಪಾರ ಮಾಡುವ ಅನುಕೂಲತೆ/ಸುಲಭತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. “ಈ ಆಧುನಿಕ ಲಾಜಿಸ್ಟಿಕ್ಸ್ ಜಾಲವು ಸಂಪೂರ್ಣವಾಗಿ ಸಿದ್ಧವಾದ ನಂತರ, ಇದು ಕೈಗಾರಿಕೆಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ ಮತ್ತು ನಮ್ಮ ರೈತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ‘ಸುಗಮ ವ್ಯಾಪಾರ’ ಕೂಡ ಸುಧಾರಿಸುತ್ತದೆ” ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ದೂರದೃಷ್ಟಿಯ ನಾವೀನ್ಯತೆಗಾಗಿ ರಾಜ್ಯದ ಐತಿಹಾಸಿಕ ಒಲವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಸಾಫ್ಟ್ವೇರ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ಥಳೀಯ ಯುವಜನರ ಜಾಗತಿಕ ಪ್ರಾಬಲ್ಯವನ್ನು ಶ್ಲಾಘಿಸಿದರು, ಈ ನಂಬಲಾಗದ ಪ್ರತಿಭೆಗಳನ್ನು ನೇರವಾಗಿ ಪ್ರಾದೇಶಿಕ ಅಭಿವೃದ್ಧಿಗೆ ಬಳಸಿಕೊಳ್ಳುವ ಸರ್ಕಾರದ ದೃಢವಾದ ನಿರಂತರ ಬದ್ಧತೆಯನ್ನು ಪುನರುಚ್ಚರಿಸಿದರು.

ಯುವ ಪ್ರತಿಭೆಯನ್ನು ದೇಶದಲ್ಲಿಯೇ  ಉಳಿಸಿಕೊಳ್ಳುವ ಮತ್ತು ಬಳಸಿಕೊಳ್ಳುವ ಸಂಪೂರ್ಣ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭವಿಷ್ಯದ ಟೆಕ್ ಉದ್ಯಮಗಳತ್ತ ಗಮನ ಹರಿಸಿದರು, ವಿಶಾಖಪಟ್ಟಣಂನಲ್ಲಿ ಹೊಸ ಸೆಮಿಕಂಡಕ್ಟರ್ ಸ್ಥಾವರದ ಅಡಿಪಾಯ ಹಾಕಿರುವುದು ನಿರ್ದಿಷ್ಟ ದಿಕ್ಕಿನಲ್ಲಿ ಒಂದು ಸ್ಮರಣೀಯ ದಾಪುಗಾಲು ಎಂದು ಗುರುತಿಸಿದರು. “ನಮ್ಮ ಪ್ರಾಥಮಿಕ ಗಮನವು ಈಗ ನಮ್ಮ ಪ್ರತಿಭಾವಂತ ಯುವಜನರ ಸಾಮರ್ಥ್ಯವನ್ನು ಹೆಚ್ಚಿಸಲು ಸೆಮಿಕಂಡಕ್ಟರ್ಗಳಂತಹ ಭವಿಷ್ಯದ ಟೆಕ್ ಉದ್ಯಮಗಳ ಮೇಲೆ ದೃಢವಾಗಿ ಕೇಂದ್ರೀಕರಿಸಲ್ಪಟ್ಟಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ಪರಿವರ್ತನಾತ್ಮಕ ಕೈಗಾರಿಕಾ ಬದಲಾವಣೆಯನ್ನು ಕಲ್ಪಿಸಿಕೊಂಡ ಪ್ರಧಾನಮಂತ್ರಿಯವರು, ರಾಜ್ಯವು ತನ್ನ ಸಾಫ್ಟ್ವೇರ್ ಪರಾಕ್ರಮದ ಜೊತೆಗೆ ಅಸಾಧಾರಣ ಉತ್ಪಾದನಾ ಕೇಂದ್ರವಾಗಿ ಅಡೆ-ತಡೆರಹಿತವಾಗಿ ಪರಿವರ್ತನೆಗೊಳ್ಳುತ್ತದೆ, ಆ ಮೂಲಕ ಭವಿಷ್ಯದ ಉದ್ಯೋಗಾವಕಾಶಗಳ ಸಂಪೂರ್ಣ ಹೊಸ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂದು ಭವಿಷ್ಯದ ನೋಟ ನೀಡಿದರು. . “ಈ ಕಾರ್ಯತಂತ್ರದ ವಿಕಾಸವು ಭವಿಷ್ಯದ ಉದ್ಯೋಗಗಳನ್ನು ಯಶಸ್ವಿಯಾಗಿ ಸೃಷ್ಟಿಸುತ್ತದೆ ಮತ್ತು ರಾಜ್ಯದಾದ್ಯಂತ ಟೆಕ್ ಉದ್ಯಮಗಳಿಗೆ ಹೊಚ್ಚ ಹೊಸ ವಾತಾವರಣವನ್ನು ಸೃಷ್ಟಿಸುತ್ತದೆ” ಎಂದು ಶ್ರೀ ಮೋದಿ ಹೇಳಿದರು.

ಜಾಗತಿಕ ಆರ್ಥಿಕ ಬೆಳವಣಿಗೆಯ ಕೇಂದ್ರಗಳ ಸಂಕೀರ್ಣ ಯಾಂತ್ರಿಕತೆಯನ್ನು ವಿವರಿಸಿದ ಪ್ರಧಾನಮಂತ್ರಿಯವರು, ಸಮಗ್ರ ಸುತ್ತಮುತ್ತಲಿನ ಪೂರಕ ಪರಿಸರ ವ್ಯವಸ್ಥೆಯಿಲ್ಲದ  ಏಕಾಂಗಿ ಕಾರ್ಖಾನೆಗಳು ಸಾಕಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು, ಪ್ರಸ್ತುತ ಮುಖ್ಯಮಂತ್ರಿಗಳ ಅವಿರತ ವೈಯಕ್ತಿಕ ಪ್ರಯತ್ನಗಳಿಗೆ ಧನ್ಯವಾದಗಳು. “ಹಗಲಿರುಳು ಕಠಿಣ ಪರಿಶ್ರಮದ ಫಲವಾಗಿ ಅನೇಕ ದೊಡ್ಡ ಜಾಗತಿಕ ಕಂಪನಿಗಳು ಈಗ ಇಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ” ಎಂದು ಶ್ರೀ ಮೋದಿ ಹೇಳಿದರು.

ಸುಧಾರಿತ ತಾಂತ್ರಿಕ ಮೂಲಸೌಕರ್ಯದ ಕುರಿತು ತಮ್ಮ ಮಾತುಗಳನ್ನು  ವಿಸ್ತರಿಸಿದ ಪ್ರಧಾನಮಂತ್ರಿಯವರು, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಕೇಂದ್ರಗಳಲ್ಲಿನ ಸಮಕಾಲೀನ ಬೆಳವಣಿಗೆಗಳನ್ನು ಎತ್ತಿ ತೋರಿಸಿದರು, ಗೂಗಲ್ನ ಹದಿನೈದು ಶತಕೋಟಿ ಡಾಲರ್ ಕ್ಯಾಂಪಸ್ ಘೋಷಣೆಯನ್ನು ಸ್ಥಳೀಯ ಯುವಜನರಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಅಪಾರ ಜಾಗತಿಕ ಆಸಕ್ತಿಯ ಸ್ಪಷ್ಟ ಸೂಚಕ  ಎಂದೂ  ಉಲ್ಲೇಖಿಸಿದರು. “ಇನ್ನೂ ಅನೇಕ ಜಾಗತಿಕ ಕಂಪನಿಗಳು ಇಲ್ಲಿ ನಂಬಲಾಗದ ಹೊಸ ಸಾಧ್ಯತೆಗಳನ್ನು ನೋಡುತ್ತಿವೆ, ಇದು ರಾಜ್ಯ ಮತ್ತು ದೇಶದ ಯುವಜನರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ಡಿಜಿಟಲ್ ತಂತ್ರಜ್ಞಾನವನ್ನು ಮೀರಿ ರಾಜ್ಯದ ಕೈಗಾರಿಕಾ ನಿರೂಪಣೆಯ ವ್ಯಾಪ್ತಿಯನ್ನು ವಿಸ್ತರಿಸಿದ ಪ್ರಧಾನಮಂತ್ರಿಯವರು, ನಕ್ಕಪಲ್ಲಿಯಲ್ಲಿ ಬೃಹತ್ ಹೊಸ ಫಾರ್ಮಾ ಪಾರ್ಕ್ ಗೆ ಕೇಂದ್ರ ಸರ್ಕಾರದ ಗಣನೀಯ ಬೆಂಬಲದತ್ತ ಗಮನಸೆಳೆದರು, ಇದು ರಾಜ್ಯವನ್ನು ಪ್ರಮುಖ ರಾಷ್ಟ್ರೀಯ ಔಷಧೀಯ ಕೇಂದ್ರವಾಗುವಂತೆ ಮಾಡಿದೆ. “ಈ ಬೆಂಬಲದೊಂದಿಗೆ, ಆಂಧ್ರಪ್ರದೇಶವು ದೇಶದ ಅತಿದೊಡ್ಡ ಔಷಧ ಕೇಂದ್ರಗಳಲ್ಲಿ ಒಂದಾಗಿ ವೇಗವಾಗಿ ಅಭಿವೃದ್ಧಿ ಹೊಂದಲಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ನವೀಕರಿಸಬಹುದಾದ ಇಂಧನ ಕ್ಷೇತ್ರದತ್ತ ಹೊರಳಿದ  ಪ್ರಧಾನಮಂತ್ರಿಯವರು, ರಾಯಲಸೀಮಾ ಪ್ರದೇಶವೊಂದೇ  ಐದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಿದೆ ಎಂದು ಬಹಿರಂಗಪಡಿಸಿದರು, ಈ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಕಾರಗೊಳಿಸಲು ಆಡಳಿತದ ಅವಿರತ ಸಮರ್ಪಣೆಯ ಬಗ್ಗೆ ಸಾರ್ವಜನಿಕರಿಗೆ ದೃಢವಾದ ಭರವಸೆಯನ್ನು ನೀಡಿದರು. “ಅಂತಹ ಪ್ರತಿಯೊಂದು ಅಗಾಧ ಸಾಧ್ಯತೆಯನ್ನು ವಾಸ್ತವವಾಗಿ ಪರಿವರ್ತಿಸಲು ನಮ್ಮ ಸರ್ಕಾರ ಹಗಲಿರುಳು ಶ್ರಮಿಸುತ್ತದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ಎಲ್ಲಾ ಕ್ಷೇತ್ರಗಳಲ್ಲಿ ಆಡಳಿತದ ಅಭಿವೃದ್ಧಿ ಕಾರ್ಯಸೂಚಿಯ ವೇಗವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ತಮ್ಮ ಹಿಂದಿನ ಮೂರು ಭೇಟಿಗಳಲ್ಲಿಯೇ  ಎರಡು ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಾರಂಭಿಸಿದ್ದನ್ನು ಉಲ್ಲೇಖಿಸಿ, ಇತ್ತೀಚಿನ ಹೂಡಿಕೆಗಳ ದಿಗ್ಭ್ರಮೆಗೊಳಿಸುವ ಭಾರೀ ಪ್ರಮಾಣವನ್ನು ಸಭಿಕರಿಗೆ ನೆನಪಿಸಿದರು. “ಇತ್ತೀಚಿನ ಬೃಹತ್ ಯೋಜನೆಗಳಿಂದ ಪ್ರತಿಯೊಂದು ವಲಯದಾದ್ಯಂತ ಕೆಲಸದ ಅದ್ಭುತ ವೇಗವನ್ನು ನೀವು ಸುಲಭವಾಗಿ ಅಳೆಯಬಹುದು” ಎಂದು ಶ್ರೀ ಮೋದಿ ಹೇಳಿದರು.

ವಿಶಾಲ ಬೆಳವಣಿಗೆಯ ನಿರೂಪಣೆಯಲ್ಲಿ ಉತ್ತರದ ಜಿಲ್ಲೆಗಳ ವ್ಯವಸ್ಥಿತ ಸಬಲೀಕರಣದ ಬಗ್ಗೆ ಅತೀವ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ವಿಶಾಖಪಟ್ಟಣಂ ಆರ್ಥಿಕ ವಲಯ (ವಿಇಆರ್) ಏಷ್ಯಾದ ಪ್ರಮುಖ ಆರ್ಥಿಕ ಶಕ್ತಿ ಕೇಂದ್ರವಾಗಿ ವಿಕಾಸವನ್ನು ಹೊಂದುತ್ತಿರುವ  ಕಾರ್ಯತ್ರಂತ್ರವನ್ನು ವಿವರಿಸಿದರು, ಪ್ರತಿಯೊಂದು ಹೊಸ ಸೌಲಭ್ಯವು ಏಕೀಕೃತ ಧ್ಯೇಯಕ್ಕೆ ಕೊಡುಗೆ ನೀಡುತ್ತದೆ ಎಂದರು. “ವಿಶಾಖಪಟ್ಟಣಂ ಆರ್ಥಿಕ ವಲಯವು ಏಷ್ಯಾದ ಪ್ರಮುಖ ಆರ್ಥಿಕ ಕೇಂದ್ರವಾಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಅಂತಿಮ ಗುರಿಯಾಗಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಹೂಡಿಕೆಗಳನ್ನು ನೇರವಾಗಿ ಉದ್ಯೋಗವಾಗಿ ಪರಿವರ್ತಿಸುವ ಸರ್ಕಾರದ ಪ್ರಮುಖ ಆರ್ಥಿಕ ತತ್ವವನ್ನು ಬಿಚ್ಚಿಟ್ಟ ಪ್ರಧಾನಮಂತ್ರಿಯವರು, ಹೆಚ್ಚಿದ ಸಾರ್ವಜನಿಕ ಮತ್ತು ಖಾಸಗಿ ಧನಸಹಾಯವು ಉತ್ಪಾದನೆಯನ್ನು ಹೆಚ್ಚಿಸುತ್ತದೆ, ರಫ್ತುಗಳನ್ನು ಹೆಚ್ಚಿಸುತ್ತದೆ ಮತ್ತು ಅಂತಿಮವಾಗಿ ಕುಟುಂಬದ ಆದಾಯ ಹಾಗು  ಜೀವನ ಮಟ್ಟವನ್ನು ಹೆಚ್ಚಿಸುತ್ತದೆ, ಇಂದು ರಾಜ್ಯದಲ್ಲಿ ಅತ್ಯಂತ ಸ್ಪಷ್ಟವಾಗಿ ಈ ಮೌಲ್ಯಯುತ ಚಕ್ರ ಕಂಡು ಬರುತ್ತಿದೆ ಎಂದರು. “ಉದ್ಯೋಗ ಹೆಚ್ಚಾದಾಗ, ಜನರ ಆದಾಯವು ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ ಮತ್ತು ಕುಟುಂಬಗಳ ದೈನಂದಿನ ಜೀವನವು ಗಮನಾರ್ಹವಾಗಿ ಸುಧಾರಿಸುತ್ತದೆ” ಎಂದು ಶ್ರೀ ಮೋದಿ ಹೇಳಿದರು.

ಈ ಪ್ರದೇಶದ ಉಜ್ವಲ ಭವಿಷ್ಯದ ಬಗ್ಗೆ ಸಂಪೂರ್ಣ ಭರವಸೆ ವ್ಯಕ್ತಪಡಿಸುವುದರೊಂದಿಗೆ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ, ಈ ಕಾರ್ಯಕ್ರಮದ ಸಮಯದಲ್ಲಿ ಪ್ರಾರಂಭಿಸಲಾದ ಅಸಂಖ್ಯಾತ ಯೋಜನೆಗಳು ಸ್ವರ್ಣ ಆಂಧ್ರ ಮತ್ತು ವಿಕಸಿತ ಭಾರತ ಈ ಎರಡರ ಮಹತ್ತರವಾದ ನಿರ್ಣಯಗಳನ್ನು ಈಡೇರಿಸುವಲ್ಲಿ ಅಡಿಪಾಯ ಸ್ತಂಭಗಳಾಗಿ ಕಾರ್ಯನಿರ್ವಹಿಸುತ್ತವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

 

*****