Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಅವರಿಂದ ಜೂನ್ 28ಕ್ಕೆ ಕಬೀರ್ ನಗರಕ್ಕೆ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ಮಘರ್ ಗೆ ಜೂನ್ 28, 2018 ರಂದು ಭೇಟಿ ನೀಡಲಿದ್ದಾರೆ.

ಕವಿ ಹಾಗೂ ಸಂತ ಕಬೀರ್ ಅವರ ಐನೂರನೇ ದಿವ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಕಬೀರ್ ಅವರ ಸಮಾಧಿಗೆ ಪುಷ್ಪ ಸಮರ್ಪಣೆ ಮಾಡಲಿದ್ದಾರೆ. ಸಂತ ಕಬೀರ್ ಮಝರ್ ಗೆ ಹೊದಿಕೆಯನ್ನು ಸಮರ್ಪಿಸಲಿದ್ದಾರೆ.

ಪ್ರಧಾನಿ ಅವರು ಸಂತ ಕಬೀರ್ ಗುಹೆಗೆ ಭೇಟಿ ನೀಡಲಿದ್ದಾರೆ. ಸಂತರ ಬೋಧನೆ ಹಾಗೂ ಚಿಂತನೆಗಳನ್ನು ಪರಿಚಯಿಸುವ ಕಬೀರ್ ಅಕಾಡೆಮಿಗೆ ಶಂಕುಸ್ಥಾಪನೆ ನೆರವೇರಿದ ಪ್ರಯುಕ್ತ ಫಲಕವನ್ನು ಅನಾವರಣಗೊಳಿಸಲಿದ್ದಾರೆ.

ಬಳಿಕ ಮಘರ್ ನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವರು ಹಾಗೂ ಮಾತನ್ನಾಡುವರು.