Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಅವರು ಇಸ್ರೇಲ್ ಅಧ್ಯಕ್ಷರ ಜೊತೆ ಮಾಡಿದ ಜಂಟಿ ಮಾಧ್ಯಮಗೋಷ್ಠಿಯ ಹೇಳಿಕೆ ( ನವೆಂಬರ್ 15, 2016)

ಪ್ರಧಾನಿ ಅವರು ಇಸ್ರೇಲ್ ಅಧ್ಯಕ್ಷರ ಜೊತೆ ಮಾಡಿದ ಜಂಟಿ ಮಾಧ್ಯಮಗೋಷ್ಠಿಯ ಹೇಳಿಕೆ ( ನವೆಂಬರ್ 15, 2016)

ಪ್ರಧಾನಿ ಅವರು ಇಸ್ರೇಲ್ ಅಧ್ಯಕ್ಷರ ಜೊತೆ ಮಾಡಿದ ಜಂಟಿ ಮಾಧ್ಯಮಗೋಷ್ಠಿಯ ಹೇಳಿಕೆ ( ನವೆಂಬರ್ 15, 2016)


ಗೌರವಾನ್ವಿತ ಅಧ್ಯಕ್ಷ ರೆವೂನ್ ರಿವ್ಲಿನ್ ಅವರೇ,

ಮತ್ತು ಮಾಧ್ಯಮದ ಗೆಳೆಯರೆ,

ಅಧ್ಯಕ್ಷ- ರೆವೂನ್ ರಿವ್ಲಿನ್ ಹಾಗೂ ಅವರ ನಿಯೋಗದ ಸದಸ್ಯರನ್ನು ನಾನು ಭಾರತಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಅಧ್ಯಕ್ಷ ರೆವ್ಲಿನ್ ಅವರು ಭಾರತಕ್ಕೆ ಇದೇ ಮೊದಲ ಬಾರಿ ಭೇಟಿ ನೀಡಿದ್ದಾರೆ. ವಿಶೇಷ ಸಂದರ್ಭದಲ್ಲಿ ಅವರನ್ನು ಸ್ವಾಗತಿಸುತ್ತಿರುವುದು ನಮಗೆ ಸಂತಸ ತಂದಿದೆ. ಗೌರವಾನ್ವಿತರ ಭೇಟಿಯಿಂದ ನಮ್ಮ ಸಹಭಾಗಿತ್ವದಲ್ಲಿ ಹೊಸ ಮೈಲಿಗಲ್ಲುಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಒತ್ತು ಸಿಗಲಿದೆ. ಕಳೆದ ವರ್ಷ ಇಸ್ರೇಲ್ ಅಧ್ಯಕ್ಷರು ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ಈ ಚಟುವಟಿಕೆ ಮುಂದುವರಿದಿದೆ. ಮುಂದಿನ ವರ್ಷ ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧಗಳಿಗೆ 25 ವರ್ಷ ಪೂರ್ಣಗೊಳ್ಳಲಿದೆ. ಆ ಮೈಲಿಗಲ್ಲು ಹತ್ತಿರವಾಗುತ್ತಿರುವಂತೆಯೇ ನಮ್ಮ ಎರಡು ರಾಷ್ಟ್ರಗಳೂ ಹಲವು ವಲಯಗಳಲ್ಲಿ ನಮ್ಮ ಸಂಬಂಧಗಳನ್ನು ಅಭಿವೃದ್ಧಿಗೊಳಿಸಲು ಬದ್ಧವಾಗಿದ್ದೇವೆ. ಜಾಗತಿಕ ವಿಷಯಗಳು ಪ್ರಾದೇಶಿಕ ಸೇರಿದಂತೆ ನಮ್ಮ ಹಿತಾಸಕ್ತಿಗಳು ಹಾಗೂ ಸಾಮಾನ್ಯ ಅಂಶಗಳನ್ನು ಸಮಾಲೋಚನೆಗಳನ್ನು ಮುಂದುವರಿಸಲು ಬಯಸುತ್ತೇವೆ.

ಗೆಳೆಯರೇ,

ಬಹು ಆಯಾಮದ ಮತ್ತು ನಾನಾ ವಿಭಾಗದಲ್ಲಿ ನಮ್ಮ ಬದ್ಧತೆ ಮುಂದುವರಿಯಲಿದೆ. ನಾವು ಈ ಕೆಳಗಿನ ವಿಷಯಗಳಲ್ಲಿ ಸಹಭಾಗಿತ್ವ ಹೊಂದುತ್ತಿದ್ದೇವೆ.

 ಕೃಷಿ ಉತ್ಪನ್ನ ಹೆಚ್ಚಳ ಮತ್ತು ಪರಿಣಾಮಕಾರಿ ಅಭಿವೃದ್ಧಿ.

 ಸಂಶೋಧನೆಗೆ ಉತ್ತೇಜನ ಮತ್ತು ಅನ್ವೇಷಣೆಗಳ ಸಂಯೋಜನೆ.

 ನಮ್ಮ ಸಮಾಜಕ್ಕೆ ಅನುಕೂಲವಾಗುವ ರೀತಿ ವಿಜ್ಞಾನ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವುದು.

 ಗಟ್ಟಿಯಾದ ವ್ಯಾಪಾರ ಸಂಬಂಧಗಳನ್ನು ಅಭಿವೃದ್ಧಿಪಡಿಸಿ, ಬಂಡವಾಳ ಹೂಡಿಕೆ ಒಪ್ಪಂದಗಳನ್ನು ಮಾಡಿಕೊಳ್ಳುವುದು.

 ನಮ್ಮ ಜನರ ರಕ್ಷಣೆಗಾಗಿ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳುವುದು.

 ಸಾಂಸ್ಕøತಿಕ ಮತ್ತು ಪ್ರವಾಸೋದ್ಯಮದ ಮೂಲಕ ನಮ್ಮ ಜನರ ನಡುವಿನ ಸಂಬಂಧಗಳನ್ನು ವಿಸ್ತರಿಸುವುದು.

 ಶೈಕ್ಷಣಿಕ ವಿನಿಮಯವನ್ನು ಉತ್ತೇಜಿಸುವುದು, ಇಸ್ರೇಲ್ಗೆ್ ಅಧ್ಯಯನಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೆಯೇ ಅಲ್ಲಿಂದ ಭಾರತಕ್ಕೆ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವುದು. ದ್ವಿಪಕ್ಷೀಯ ಸಹಭಾಗಿತ್ವ ಸಾಧಿಸುವಲ್ಲಿ ಇದು ಪ್ರಮುಖ ಸೇತುವೆಯಾಗಲಿದೆ.

ಗೆಳೆಯರೇ,

ಇದಕ್ಕೂ ಮುನ್ನ ಇಂದು ನಾವು ಅಧ್ಯಕ್ಷ ರಿವ್ಲಿನ್ ಅವರು, ಉಭಯ ದೇಶಗಳ ನಡುವಿನ ಸಹಕಾರ ಸಂಬಂಧಗಳನ್ನು ಹಲವು ವಲಯಗಳಲ್ಲಿ ವಿಸ್ತರಿಸಿಕೊಳ್ಳಲು ಒಪ್ಪಿದ್ದೇವೆ. ಇಸ್ರೇಲ್ ಕೃಷಿಯಲ್ಲಿ ಮುಂದಿರುವುದನ್ನು ನಾವು ಅರಿತಿದ್ದೇವೆ. ಅದು ಬರಪೀಡಿತ ಪ್ರದೇಶಗಳಲ್ಲಿನ ಸಣ್ಣ ನೀರಾವರಿ ಮತ್ತು ಜಲ ನಿರ್ವಹಣೆಯಲ್ಲಿ ಪರಿಣಿತಿ ಸಾಧಿಸಿದೆ. ನಾವು ಜಲ ನಿರ್ವಹಣೆ ಮತ್ತು ಜಲಸಂರಕ್ಷಣೆಯನ್ನು ಗುರುತಿಸಿದ್ದೇವೆ. ಈ ಎರಡನ್ನು ಜಂಟಿ ಸಹಭಾಗಿತ್ವದಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಳಸಿಕೊಂಡು ಆದ್ಯತಾ ವಲಯವನ್ನಾಗಿ ಗುರುತಿಸಿ ಅಭಿವೃದ್ಧಿಗೊಳಿಸಲು ಬಯಸಿದ್ದೇವೆ. ಭಾರತೀಯ ಆರ್ಥಿಕತೆಯಲ್ಲಿ ಇಸ್ರೇಲ್ ಕಂಪನಿಗಳಿಗೆ ಹಲವು ಬಗೆಯ ಉತ್ತಮ ಅವಕಾಶಗಳು ಲಭ್ಯವಿವೆ ಎಂಬುದನ್ನು ಇಬ್ಬರೂ ಒಪ್ಪಿದ್ದೇವೆ. ನಮ್ಮ ಆರ್ಥಿಕ ಯೋಜನೆಗಳೂ ಹಾಗೂ ಕಾರ್ಯಕ್ರಮಗಳು ಸಂಶೋಧನೆ, ಅನ್ವೇಷಣೆ ಮತ್ತು ತಾಂತ್ರಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತವೆ. ಇವು ಇಸ್ರೇಲ್ನು ಸಾಮಥ್ರ್ಯಕ್ಕೆ ಹೊಂದಾಣಿಕೆಯಾಗುತ್ತವೆ. ಇಸ್ರೇಲ್ ಕಂಪನಿಗಳು ನಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ತಮ್ಮ ಸಂಬಂಧಗಳನ್ನು ವಿಸ್ತರಿಸಿಕೊಳ್ಳಬಹುದು. ಉಭಯ ರಾಷ್ಟ್ರಗಳ ಖಾಸಗಿ ವಲಯದ ಹೂಡಿಕೆದಾರರು ಈ ಸುಸಂದರ್ಭವನ್ನು ಬಳಸಿಕೊಂಡು ತಮ್ಮ ವ್ಯಾಪಾರವನ್ನು ಅಭಿವೃದ್ಧಿಗೊಳಿಸುವ ಜತೆಗೆ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆ ಸಂಬಂಧಗಳನ್ನು ಅಭಿವೃದ್ಧಿಗೊಳಿಸಬೇಕು ಎಂಬುದು ನಮ್ಮ ಬಯಕೆಯಾಗಿದೆ. ಭಾರತೀಯ ಮತ್ತು ಇಸ್ರೇಲ್ ಕಂಪನಿಗಳು ಉನ್ನತ ತಂತ್ರಜ್ಞಾನ, ಉತ್ಪಾದನಾ ಮತ್ತು ಸೇವಾ ವಲಯಗಳಲ್ಲಿ ಜಂಟಿಯಾಗಿ ಕೆಲಸ ಮಾಡಬಹುದು. ಅಧ್ಯಕ್ಷ ರಿವ್ಲಿನ್ ಅವರು, ನಮ್ಮ ಸಮಾಲೋಚನೆ ವೇಳೆ ಹೇಳಿದಂತೆ ಮೇಕ್ ಇನ್ ಇಂಡಿಯಾ ಯೋಜನೆಯಿಂದ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ ಅದರಿಂದ ಉಭಯ ದೇಶಗಳಿಗೂ ಲಾಭವಾಗಲಿದೆ. ನಮ್ಮ ಸಹಭಾಗಿತ್ವದಿಂದಾಗಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಿ ಎರಡೂ ರಾಷ್ಟ್ರಗಳಿಗೂ ಅನುಕೂಲವಾಗಲಿದೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿನ ನಮ್ಮ ಸಹಭಾಗಿತ್ವ ಉಭಯ ದೇಶಗಳ ಆರ್ಥಿಕತೆಯಲ್ಲಿ ಬದಲಾವಣೆಗಳನ್ನು ತರಲಿದೆ.

ಗೆಳೆಯರೇ,

ಅಧ್ಯಕ್ಷ ರಿವ್ಲಿನ್ ಮತ್ತು ನಾನು ನಮ್ಮ ಬಲಿಷ್ಠ ಮತ್ತು ಬೆಳೆಯುತ್ತಿರುವ ಸಹಭಾಗಿತ್ವವನ್ನು ನಮ್ಮ ಸಮಾಜದ ಸುರಕ್ಷತೆಗೂ ಒತ್ತು ನೀಡಲು ನಿರ್ಧರಿಸಿದ್ದೇವೆ. ನಮ್ಮ ಜನರು ನಿರಂತರವಾಗಿ ಭಯೋತ್ಪಾದನೆ ಮತ್ತು ಬಂಡುಕೋರರಿಂದ ಅಪಾಯ ಮತ್ತು ಬೆದರಿಕೆ ಎದುರಿಸುತ್ತಿದ್ದಾರೆ. ಭಯೋತ್ಪಾದನೆ ಜಾಗತಿಕ ಸವಾಲಾಗಿದೆ ಎಂಬುದನ್ನು ನಾವು ಗುರುತಿಸುತ್ತಿದ್ದೇವೆ. ಅದಕ್ಕೆ ಯಾವುದೇ ಗಡಿ ಇತಿ ಮಿತಿ ಇಲ್ಲ. ಅವು ಕೆಲವು ಸಂಘಟನೆಗಳ ಜೊತೆ ಸೇರಿ ನಾನಾ ರೀತಿಯ ಅಪರಾಧಗಳನ್ನು ಎಸಗುತ್ತಿವೆ. ದುರದೃಷ್ಟವೆಂದರೆ ಭಾರತದ ನೆರೆಯ ರಾಷ್ಟ್ರವೊಂದರಲ್ಲೇ ಅಂತಹ ಸಂಘಟನೆಗಳು ಹುಟ್ಟಿಕೊಂಡು ಅವು, ವಿಸ್ತಾರವಾಗಿ ಬೆಳೆಯುತ್ತಿವೆ. ಉಗ್ರಗಾಮಿ ಸಂಪರ್ಕ ಜಾಲವನ್ನು ದಮನಗೊಳಿಸಲು ಅಂತಾರಾಷ್ಟ್ರೀಯ ಸಮುದಾಯ ಒಂದಾಗಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಾವು ಒಪ್ಪುತ್ತೇವೆ. ಅಂತಹ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದರೆ ಅಥವಾ ಮೌನವಾಗಿದ್ದರೆ ಅದು ಉಗ್ರಗಾಮಿ ಸಂಘಟನೆಗಳಿಗೆ ಇನ್ನಷ್ಟು ಬೆಂಬಲ ನೀಡಿದಂತಾಗುತ್ತದೆ. ಶಾಂತಿ ಬಯಸುವ ರಾಷ್ಟ್ರಗಳಿಗೆ ಬೆದರಿಕೆಯಾಗಿರುವ ಭಯೋತ್ಪಾದನೆ ಹಾಗು ಬಂಡುಕೋರರ ಸಮಸ್ಯೆಗಳನ್ನು ಹತ್ತಿಕ್ಕಲು ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಉಭಯ ರಾಷ್ಟ್ರಗಳು ಒಪ್ಪಿವೆ. ನಾವು ಸೈಬರ್ ಅಪರಾಧ ಸೇರಿದಂತೆ ಹಲವು ನಿಗದಿತ ವಲಯಗಳಲ್ಲಿ ಆದ್ಯತೆ ಮೇಲೆ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. ನಾವು ಬೆಳೆಯುತ್ತಿರುವ ನಮ್ಮ ರಕ್ಷಣಾ ಸಹಭಾಗಿತ್ವದ ಸಾಮಥ್ರ್ಯವನ್ನು ಗುರುತಿಸಿದ್ದೇವೆ. ಆ ಮೂಲಕ ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ನಿರ್ಧರಿಸಲಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಬೇಕೆನ್ನುವ ಭಾರತದ ಬೇಡಿಕೆಯನ್ನು ಸಂಪೂರ್ಣವಾಗಿ ಬೆಂಬಲಿಸಿರುವ ಇಸ್ರೇಲ್ಗೆಡ ಭಾರತ ಸದಾ ಚಿರಋಣಿಯಾಗಿರುತ್ತದೆ.

ಗೆಳೆಯರೇ,

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಅತ್ಯಂತ ದೊಡ್ಡ ಶಕ್ತಿ ಹಾಗು ಅವರೇ ಅತಿ ಹೆಚ್ಚಿನ ಫಲವನ್ನು ಅನುಭವಿಸುವವರು. ಭಾರತ – ಇಸ್ರೇಲ್ ಸಹಭಾಗಿತ್ವದಲ್ಲಿ ಅವರಿಗೆ ಹೆಚ್ಚಿನ ಮನ್ನಣೆ ಇದೆ. ಎರಡು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ನೆಲೆಸಿದ್ದ ಜೂವೀಶ್ ಸಮುದಾಯದ ಸಂಪರ್ಕ ಇದಕ್ಕೆ ಸಾಕ್ಷಿಯಾಗಿದೆ. ಇಂದು ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದೆ. ಭಾರತದಲ್ಲಿನ ಜೂವೀಶ್ ಸಮುದಾಯದ ಬಗ್ಗೆ ನಮಗೆ ಹೆಮ್ಮೆಯಿದೆ. ಅಧ್ಯಕ್ಷರೂ ಹಾಗೂ ನಾನು ಸುದೀರ್ಘ ಇತಿಹಾಸ ಹೊಂದಿರುವ ಜನ – ಜನರ ನಡುವಿನ ಸಂಬಂಧಗಳನ್ನು ಉತ್ತೇಜಿಸಲು ಆದ್ಯತೆ ನೀಡಲು ಒಪ್ಪಿದ್ದೇವೆ.

ಗೌರವಾನ್ವಿತರೇ,

ಎರಡೂವರೆ ದಶಕಗಳ ನಮ್ಮ ಗೆಳೆತನ ಉಭಯ ದೇಶಗಳಿಗೂ ಹಲವು ಲಾಭಾಂಶಗಳನ್ನು ತಂದುಕೊಟ್ಟಿದೆ. ಅದು ಶಾಂತಿ ಬಯಸುವ ನಮ್ಮ ಕೂಗನ್ನು ಬಲಗೊಳಿಸುವ ಜತೆಗೆ ಸ್ಥಿರತೆ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ನೆರವಾಗಿದೆ. ನಿಮ್ಮ ಈ ಭೇಟಿ ನಮ್ಮ ಸಹಭಾಗಿತ್ವಕ್ಕೆ ಹೊಸ ಆಯಾಮ ಹಾಗೂ ಹೊಸ ಪರ್ವ ಆರಂಭಕ್ಕೆ ದಾರಿ ಮಾಡಿಕೊಡಲಿದೆ. ಇದರೊಂದಿಗೆ ನಾನು ಅಧ್ಯಕ್ಷ ರೆವ್ಲಿನ್ ಅವರನ್ನು ಮತ್ತೊಮ್ಮೆ ಆಹ್ವಾನಿಸಿ, ಅವರ ಭಾರತ ಭೇಟಿ ಫಲಪ್ರದವಾಗಲಿ ಎಂದು ಆಶಿಸುತ್ತೇನೆ.

ಧನ್ಯವಾದಗಳು