ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ‘ಪ್ರಮುಖ ಬಂದರು ಟ್ರಸ್ಟ್ ಗಳ ಕಾಯಿದೆ, 1963’ ನ್ನು ‘ಪ್ರಮುಖ ಬಂದರು ಟ್ರಸ್ಟ್ ಪ್ರಾಧಿಕಾರದ ಮಸೂದೆ 2016’ರಿಂದ ಬದಲಾಯಿಸಬೇಕು ಎಂಬ ಹಡಗು (ಶಿಪ್ಪಿಂಗ್) ಸಚಿವಾಲಯದ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಇದು ಪ್ರಮುಖ ಬಂದರುಗಳು ಸ್ವಾಯತ್ತವಾಗಿ ನಿರ್ಧಾರ ಕೈಗೊಳ್ಳುವ ಮತ್ತು ಸಾಂಸ್ಥಿಕ ಸ್ವರೂಪವನ್ನು ಆಧುನೀಕರಿಸಿ ಹೆಚ್ಚಿನ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಪ್ರಮುಖ ಬಂದರುಗಳನ್ನು ಸಬಲಗೊಳಿಸುತ್ತದೆ.
ಬಂದರುಗಳ ಮೂಲಸೌಕರ್ಯ ವಿಸ್ತರಣೆಗೆ ಉತ್ತೇಜನ ನೀಡುವ ಮತ್ತು ವಾಣಿಜ್ಯ ಮತ್ತು ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ, ನಿರ್ಧಾರ ಕೈಗೊಳ್ಳುವುದನ್ನು ವಿಕೇಂದ್ರೀಕರಿಸುವ ಮತ್ತು ಬಂದರುಗಳ ಆಡಳಿತದಲ್ಲಿ ವೃತ್ತಪರತೆಯನ್ನು ತರುವ ಗುರಿಯನ್ನು ಉದ್ದೇಶಿತ ಮಸೂದೆ ಹೊಂದಿದೆ. ಹೊಸ ಪ್ರಮುಖ ಬಂದರು ಪ್ರಾಧಿಕಾರಿ ಮಸೂದೆ 2016, ತನ್ನ ಬಾಧ್ಯಸ್ಥರಿಗೆ ಒಳಿತುಂಟುಮಾಡಲು ಮತ್ತು ಉತ್ತಮವಾಗಿ ಯೋಜನೆಯನ್ನು ಜಾರಿಗೊಳಿಸಲು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಿಧಾರ ಕೈಗೊಳ್ಳಲು ನೆರವಾಗುತ್ತದೆ. ಮಸೂದೆಯು ಯಶಸ್ವೀ ಜಾಗತಿಕ ಪದ್ಧತಿಗಳ ರೀತಿಯಲ್ಲಿ ಕೇಂದ್ರೀಯ ಬಂದರುಗಳಲ್ಲಿ ಮಾದರಿಯಿಂದ ಲ್ಯಾಂಡ್ ಲಾರ್ಡ್ ಬಂದರು ಮಾದರಿಯ ಆಡಳಿತದ ಪುನಶ್ಚೇತನದ ಗುರಿ ಹೊಂದಿದೆ. ಇದು ಪ್ರಮುಖ ಬಂದರುಗಳಲ್ಲಿ ಪಾರದರ್ಶಕ ಕಾರ್ಯನಿರ್ವಹಣೆಯನ್ನು ತರಲೂ ಸಹಾಯ ಮಾಡುತ್ತದೆ.
ಪ್ರಮುಖ ಬಂದರು ಪ್ರಾಧಿಕಾರ ಮಸೂದೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
a. ಪ್ರಮುಖ ಬಂದರು ಟ್ರಸ್ಟ್ ಕಾಯಿದೆ, 1963ಕ್ಕೆ ಹೋಲಿಸಿದರೆ ಈ ಮಸೂದೆ ಹೆಚ್ಚು ನಿಖಟವಾಗಿದೆ ಕಾರಣ ಇದರಲ್ಲಿ ಹಳೆಯ ಮತ್ತು ಪುನರಾವರ್ತನೆಯಾಗುವ ಪರಿಚ್ಛೇದಗಳನ್ನು ತೆಗೆದುಹಾಕುವ ಮೂಲಕ 134 ರಿಂದ 65 ಇಳಿಸಲಾಗಿದೆ.
b. ವಿವಿಧ ಕ್ಷೇತ್ರಗಳ ಹಿತಾಸಕ್ತಿಯನ್ನು ಪ್ರತಿನಿಧಿಸುವ ಪ್ರಸ್ತುತ 17 ರಿಂದ 19 ಸದಸ್ಯರಿರುವ ಬಂದರು ಪ್ರಾಧಿಕಾರದ ಮಂಡಳಿಯನ್ನು ಹೊಸ ಮಸೂದೆ ಸರಳೀಕರಿಸಿದ್ದು, 11 ಸದಸ್ಯರನ್ನು ಒಳಗೊಳ್ಳಲಿದೆ. ವೃತ್ತಿಪರ ಸ್ವತಂತ್ರ ಸದಸ್ಯರನ್ನು ಒಳಗೊಂಡ ಮಂಡಳಿಯು ನಿರ್ಧಾರ ಕೈಗೊಳ್ಳುವ ಮತ್ತು ಕಾರ್ಯತಂತ್ರಾತ್ಮಕ ಯೋಜನೆಯನ್ನು ಬಲಪಡಿಸಲಿದೆ. ಪ್ರಮುಖಬಂದರುಇರುವಪ್ರದೇಶದಆಯಾ ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಮಂಡಳಿ ಒಳಗೊಳ್ಳಲಿದೆ. ಸರ್ಕಾರದಿಂದ ನಾಮನಿರ್ದೇಶಿತಗೊಳ್ಳುವ ಮತ್ತು ಪ್ರಮುಖ ಬಂದರು ಪ್ರಾಧಿಕಾರದ ಕಾರ್ಮಿಕರನ್ನು ಪ್ರತಿನಿಧಿಸುವ ಒಬ್ಬ ಸದಸ್ಯರ ಹೊರತಾಗಿ ರೈಲ್ವೆ ಸಚಿವಾಲಯ, ರಕ್ಷಣಾ ಮತ್ತು ಸೀಮಾಸುಂಕ ಸಚಿವಾಲಯದ ಜೊತೆಗೆ ಕಂದಾಯ ಇಲಾಖೆಯನ್ನು ಸದಸ್ಯರನ್ನಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
c. ಪ್ರಮುಖ ಬಂದರುವಗಳ ದರ ಪ್ರಾಧಿಕಾರದ ಪಾತ್ರವನ್ನು (ಟಿಎಎಂಪಿ) ಪುನರ್ ವಿವರಿಸಲಾಗಿದೆ. ಬಂದರು ಪ್ರಾಧಿಕಾರಕ್ಕೆ ಈಗ ದರ ನಿಗದಿ ಪಡಿಸುವ ಅಧಿಕಾರ ನೀಡಲಾಗಿದೆ. ಪಿಪಿಪಿ ಯೋಜನೆಗಳಿಗೆ ಬಿಡ್ಡಿಂಗ್ ಉದ್ದೇಶಕ್ಕೆ ಇದು ಉಲ್ಲೇಖಿತ ಸಂಕದಂತೆ ಕಾರ್ಯಮಾಡಲಿದೆ. ಪಿಪಿಪಿ ಕಾರ್ಯನಿರ್ವಾಹಕರು ಮಾರುಕಟ್ಟೆಯ ಪರಿಸ್ಥಿತಿಗನುಗುಣವಾಗಿ ದರ ನಿಗದಿ ಮಾಡಲು ಮುಕ್ತರಾಗಿರುತ್ತಾರೆ. ಇತರ ಬಂದರುಗಳ ಸೇವೆ ಮತ್ತು ಜಮೀನೂ ಸೇರಿದಂತೆ ಆಸ್ತಿಗೆ ದರದ ಶ್ರೇಣಿಯ ನಿಗದಿಯ ಅಧಿಕಾರವನ್ನು ಬಂದರು ಪ್ರಾಧಿಕಾರ ಮಂಡಳಿಗೆ ನೀಡಲಾಗಿದೆ.
d. ಪ್ರಮುಖ ಬಂದರುಗಳ ಈ ಮುಂಚಿನ ಟಿಎಎಂಪಿಯ ಉಳಿದ ಕಾರ್ಯಗಳನ್ನು ಮುನ್ನಡೆಸಲು, ಬಂದರುಗಳು ಮತ್ತು ಪಿಪಿಪಿ ವ್ಯಾಪಾರಿಗಳ ನಡುವಿನ ವ್ಯಾಜ್ಯಗಳತ್ತ ಗಮನ ಹರಿಸಲು, ಒತ್ತಡದ ಪಿಪಿಪಿ ಯೋಜನೆಗಳಿಗೆ ಪರಿಶೀಲಿಸಲು ಮತ್ತು ಅಂಥ ಯೋಜನೆಗಳಿಗೆ ಪುನರ್ ಚಾಲನೆ ನೀಡಲು ಪರಿಹಾರ ಕ್ರಮ ಸೂಚಿಸಲು ಹಾಗೂ ಬಂದರುಗಳು/ಖಾಸಗಿ ಕಾರ್ಯಯೋಜಕರು ನೀಡಿದ ಸೇವೆಗೆ ಸಂಬಂಧಿಸಿದ ದೂರಿನ ಬಗ್ಗೆ ಗಮನ ಹರಿಸಲು ಸ್ವತಂತ್ರವಾದ ಪರಾಮರ್ಶಾ ಮಂಡಳಿ ರಚಿಸುವ ಪ್ರಸ್ತಾಪವನ್ನೂ ಮಾಡಲಾಗಿದೆ.
e. ಬಂದರು ಪ್ರಾಧಿಕಾರದ ಮಂಡಳಿಗಳಿಗೆ ಕರಾರು ಮಾಡಿಕೊಳ್ಳಲು, ಯೋಜನೆ ಮತ್ತು ಅಭಿವೃದ್ಧಿ, ದೇಶದ ಹಿತಕ್ಕೆ ಹೊರತಾಗದಂತೆ ದರ ನಿಗದಿ, ತಪ್ಪು ಮತ್ತು ಕ್ರಮ ಕೈಗೊಳ್ಳದ ಕಾರಣ ಉದ್ಭವಿಸುವ ತುರ್ತು ಮತ್ತು ಭದ್ರತೆಯ ಸಮಸ್ಯೆ ನಿಭಾಯಿಸಲು ಪೂರ್ಣ ಅಧಿಕಾರ ನೀಡಲಾಗಿದೆ. ಪ್ರಸಕ್ತ ಎಂಪಿಟಿ ಕಾಯಿದೆ 1963ರಲ್ಲಿ 22 ಪ್ರಕರಣಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯವಾಗಿತ್ತು.
f. ಬಂದರಿನ ಮಿತಿಯೊಳಗಿನ ಪ್ರದೇಶದಲ್ಲಿ ಬಂದರಿನ ಮಿತಿಯೊಳಗೆ ಕೊಳವೆಗಳ ಜೋಡಣೆ, ದೂರವಾಣಿ, ಸಂವಹನ ಗೋಪುರಗಳು, ವಿದ್ಯುತ್ ಪೂರೈಕೆ ಅಥವಾ ಸರಬರಾಜು ಸಾಧನ ಅಳವಡಿಕೆ ಮತ್ತು ನಿರ್ಮಾಣಕ್ಕೆ ತನ್ನದೆ ಮಾಸ್ಟರ್ ಯೋಜನೆ ರೂಪಿಸಲು ಮಂಡಳಿಗಳಿಗೆ ಅಧಿಕಾರ ನೀಡುತ್ತದೆ. ಬಂದರು ಸಂಬಂಧಿತ ಬಳಕೆಗೆ ಜಮೀನನ್ನು 40 ವರ್ಷಗಳವರೆಗೆ ಗುತ್ತಿಗೆಯ ಆಧಾರದ ಮೇಲೆ ನೀಡುವ ಅಧಿಕಾರವೂ ಮಂಡಳಿಗೆ ಇರುತ್ತದೆ. ಆದರೆ ಯಾವುದೇ ಉದ್ದೇಶಕ್ಕೆ ಅಂದರೆ ಸೆಕ್ಷನ್ 22ರಲ್ಲಿ ನಿರ್ದಿಷ್ಟಪಡಿಸಿರುವ ಉದ್ದೇಶಗಳ ಹೊರತಾಗಿ 20 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಗುತ್ತಿಗೆಗೆ ನೀಡಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಾಗಿರುತ್ತದೆ.
g. ಬಂದರು ಪ್ರಾಧಿಕಾರದಿಂದ ಸಿ.ಎಸ್.ಆರ್. ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಅವಕಾಶಗಳನ್ನು ಇದರಲ್ಲಿ ಅಳವಡಿಸಲಾಗಿದೆ.
***
AKT/VBA/SH