Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಡತನದ ವಿರುದ್ಧದ ಭಾರತದ ಹೋರಾಟವು ದೇಶಾದ್ಯಂತ ಹೇಗೆ ಜನರ ಜೀವನವನ್ನು ಬದಲಾಯಿಸುತ್ತಿದೆ ಎಂಬುದರ ಕುರಿತು ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಬಡತನದ ವಿರುದ್ಧ ಭಾರತದ ಹೋರಾಟವು ದೇಶಾದ್ಯಂತ ಹೇಗೆ ಜನರ ಜೀವನವನ್ನು ಬದಲಾಯಿಸುತ್ತಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಲೇಖನವನ್ನು ಹಂಚಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವವು ಬಡತನ ನಿವಾರಣೆಗೆ ತಾತ್ಕಾಲಿಕ ಪರಿಹಾರಗಳನ್ನು ಒದಗಿಸುವ ಬದಲು ಅದನ್ನು ಶಾಶ್ವತಗೊಳಿಸುವ ನಿವಾರಿಸುವತ್ತ ಗಮನ ಹರಿಸಿದೆ ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ. “ಸರ್ವರಿಗೂ ವಸತಿ, ಆರೋಗ್ಯ ರಕ್ಷಣೆ, ಶುದ್ಧ ಕುಡಿಯುವ ನೀರು, ಬ್ಯಾಂಕಿಂಗ್ ಮತ್ತು ಉದ್ಯಮಶೀಲತೆಯ ವಾತಾವರಣ ಒದಗಿಸುವ ಮೂಲಕ, ಕೋಟ್ಯಂತರ ಕುಟುಂಬಗಳು ಮಾಡಿದ ಪ್ರಗತಿಯನ್ನು ಮತ್ತು ಗ್ರಾಮೀಣ ಮಹಿಳೆಯರ ಹೆಚ್ಚುತ್ತಿರುವ ಆರ್ಥಿಕ ಪಾಲ್ಗೊಳ್ಳುವಿಕೆಯನ್ನು ಲೇಖನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಶ್ರೀ ಮೋದಿ ಅವರು ತಮ್ಮ X ಪೋಸ್ಟ್ ನಲ್ಲಿ  ಹೀಗೆ ಹೇಳಿದ್ದಾರೆ;

ಅಗತ್ಯತೆಗಳಿಂದ ಹೊಸ ಜೀವನೋಪಾಯ ಅವಕಾಶಗಳವರೆಗೆ, ಬಡತನದ ವಿರುದ್ಧ ಭಾರತದ ಹೋರಾಟವು ದೇಶಾದ್ಯಂತ ಜನ ಜೀವನವನ್ನು ಬದಲಾಯಿಸುತ್ತಿದೆ!

ಪ್ರಧಾನಮಂತ್ರಿ @narendramodi ಅವರ ನಾಯಕತ್ವವು ಬಡತನವನ್ನು ಹೋಗಲಾಡಿಸಲು ತಾತ್ಕಾಲಿಕ ಪರಿಹಾರಗಳ ಬದಲು  ಶಾಶ್ವತವಾಗಿ ನಿವಾರಿಸುವತ್ತ ಗಮನ ಹರಿಸಿದೆ ಎಂಬುದರ ಕುರಿತು ಶ್ರೀಮತಿ ನಿರ್ಮಲಾ ಸೀತಾರಾಮನ್ ಬರೆದಿದ್ದಾರೆ.

ವಸತಿ, ಆರೋಗ್ಯ ರಕ್ಷಣೆ, ಶುದ್ಧ ನೀರು, ಬ್ಯಾಂಕಿಂಗ್ ಮತ್ತು ಉದ್ಯಮಶೀಲ ವಾತಾವರಣ ಒದಗಿಸುವ ಮೂಲಕ, ಕೋಟ್ಯಂತರ ಕುಟುಂಬಗಳು ಸಾಧಿಸಿದ ಪ್ರಗತಿ ಮತ್ತು ಗ್ರಾಮೀಣ ಮಹಿಳೆಯರ ಹೆಚ್ಚುತ್ತಿರುವ ಆರ್ಥಿಕ ಪಾಲ್ಗೊಳ್ಳುವಿಕೆಯನ್ನು ಲೇಖನದಲ್ಲಿ ಪ್ರಧಾನವಾಗಿ  ಪತ್ತೆಹಚ್ಚಿದ್ದಾರೆ.

 

*****