Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಾಹ್ಯಾಕಾಶದ ಶಾಂತಿಯುತ ಬಳಕೆಯ ಸಹಕಾರಕ್ಕೆ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ತಿಳಿವಳಿಕೆ ಒಪ್ಪಂದ ಕುರಿತು ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಬಾಹ್ಯಾಕಾಶದ ಶಾಂತಿಯುತ ಬಳಕೆಯ ಸಹಕಾರಕ್ಕೆ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ತಿಳಿವಳಿಕೆ ಒಪ್ಪಂದ ಕುರಿತು ವಿವರಿಸಲಾಯಿತು. ಈ ಒಪ್ಪಂದಕ್ಕೆ 2017ರ ಏಪ್ರಿಲ್ ನಲ್ಲಿ ದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.

ಈ ತಿಳಿವಳಿಕೆ ಒಪ್ಪಂದವು ಭೂ ದೂರ ಸಂವೇದಿ, ಉಪಗ್ರಹ ಸಂವಹನ ಮತ್ತು ಉಪಗ್ರಹ ಆಧಾರಿತ ಪಥದರ್ಶಕ, ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಗಳ ಪರಿಶೋಧನೆ, ಬಾಹ್ಯಾಕಾಶ ನೌಕೆಗಳ ಮತ್ತು ಬಾಹ್ಯಾಕಾಶ ವ್ಯವಸ್ಥೆ ಹಾಗೂ ಭೂವ್ಯವಸ್ಥೆಯ ಬಳಕೆಯಂಥ ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಆನ್ವಯಿಕಗಳ ಕ್ಷೇತ್ರದಲ್ಲಿನ ಸಹಕಾರಕ್ಕೆ ಅವಕಾಶ ನೀಡುತ್ತದೆ.

ಈ ತಿಳಿವಳಿಕೆ ಒಪ್ಪಂದವು ಬಾಹ್ಯಾಕಾಶ ಇಲಾಖೆ/ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಡಿಓಎಸ್/ಇಸ್ರೋ) ಮತ್ತು ಬಾಂಗ್ಲಾದೇಶದ ದೂರಸಂಪರ್ಕ ನಿಯಂತ್ರಣ ಆಯೋಗ (ಬಿಟಿಆರ್.ಸಿ.)ಯಿಂದ ಸದಸ್ಯರನ್ನು ಸೇರಿಸಿಕೊಂಡು ಜಂಟಿ ಕಾರ್ಯಪಡೆ ರಚಿಸಲು ಅವಕಾಶ ಕೊಡುತ್ತದೆ. ಇದು ಈ ತಿಳಿವಳಿಕೆ ಒಪ್ಪಂದದ ಜಾರಿಯ ಮಾರ್ಗೋಪಾಯಗಳ ಕುರಿತಂತೆ ಮುಂದಿನ ಕಾರ್ಯ ಯೋಜನೆಯನ್ನು ರೂಪಿಸುತ್ತದೆ.

ಇದು ಭೂ ದೂರ ಸಂವೇದಿ; ಉಪಗ್ರಹ ಸಂವಹನ; ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧ್ಯವಿರುವ ಹೊಸ ಸಂಶೋಧನಾ ಚಟುವಟಿಕೆ ಮತ್ತು ಆನ್ವಯಿಕಗಳ ಪರಿಶೋಧನೆಗೆ ಇಂಬು ನೀಡುತ್ತದೆ.

ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಕಾಮಗಾರಿಗಳಿಗೆ ಆಯಾ ಕಾರ್ಯಕಾರಿ ಸಂಸ್ಥೆಗಳು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಆಯವ್ಯಯ ನಿಯಂತ್ರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ನಿಯಮ ಮತ್ತು ಕಾನೂನುಗಳ ಅನುಸಾರವಾಗಿ ಮತ್ತು ಲಭ್ಯ ಸಂಪನ್ಮೂಲದ ಮಿತಿಯೊಳಗೆ ಆರ್ಥಿಕ ನೆರವು ಒದಗಿಸುತ್ತವೆ. ಈ ಎಂಓಯು ಅಡಿಯಲ್ಲಿ ಕೈಗೊಳ್ಳಲಾದ ಜಂಟಿ ಯೋಜನೆ ಮತ್ತು ಕಾರ್ಯಗಳು ವಾಣಿಜ್ಯೇತರ ಅಥವಾ ವಾಣಿಜ್ಯ ಆಧಾರದ ಮೇಲೆ ಪರಸ್ಪರ ಹಣ ಪಾವತಿ ಇಲ್ಲದೆ ಅಥವಾ ಬದಲಿ ಪರಿಹಾರಾತ್ಮಕ ಅಥವಾ ಒಪ್ಪಂದಗಳ ಆಧಾರದ ಮೇಲಿನ ಸ್ವರೂಪದಲ್ಲಿ ಕಾರ್ಯಗತಗೊಳ್ಳುತ್ತವೆ.
ಮಾನವತೆಯ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಂಟಿ ಕಾರ್ಯಚಟುವಟಿಕೆ ಅಭಿವೃದ್ಧಿಪಡಿಸಲು ಈ ತಿಳಿವಳಿಕೆ ಒಪ್ಪಂದ ಅವಕಾಶ ಕಲ್ಪಿಸುತ್ತದೆ. ಹೀಗಾಗಿ ದೇಶದ ಎಲ್ಲ ವಲಯ ಮತ್ತು ವಿಭಾಗಗಳೂ ಇದರ ಲಾಭವನ್ನು ಪಡೆಯುತ್ತವೆ.

ಹಿನ್ನೆಲೆ:

ಭಾರತ ಮತ್ತು ಬಾಂಗ್ಲಾದೇಶಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದವು. ಆ ಪ್ರಕಾರವಾಗಿ, ಸರ್ಕಾರದ ಮಟ್ಟದಲ್ಲಿನ ಪ್ರಕ್ರಿಯೆಗಾಗಿ ಬಾಂಗ್ಲಾದೇಶದ ಭಾರತೀಯ ರಾಯಭಾರ ಕಚೇರಿ ಮತ್ತು ಎಂ.ಇ.ಎ. 2016ರ ಆಗಸ್ಟ್ ನಲ್ಲಿ ಬಾಹ್ಯಾಕಾಶ ಸಹಕಾರದ ತಿಳಿವಳಿಕೆ ಒಪ್ಪಂದದ ಚೌಕಟ್ಟಿನ ಮಾದರಿ ಸಿದ್ಧಪಡಿಸಿತ್ತು. ತದನಂತರ 2017ರ ಏಪ್ರಿಲ್ 8ರಂದು ನವದೆಹಲಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬಾಹ್ಯಾಕಾಶದ ಶಾಂತಿಯುತ ಬಳಕೆಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು.

***

AKT/SH