Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಿಮ್ಸ್ ಟೆಕ್ ರಾಷ್ಟ್ರೀಯ ಭದ್ರತಾ ಮುಖ್ಯಸ್ಥರಿಂದ ಪ್ರಧಾನಿ ಭೇಟಿ

ಬಿಮ್ಸ್ ಟೆಕ್ ರಾಷ್ಟ್ರೀಯ ಭದ್ರತಾ ಮುಖ್ಯಸ್ಥರಿಂದ ಪ್ರಧಾನಿ ಭೇಟಿ


ಬಿಮ್ ಸ್ಟೆಕ್ ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಮುಖ್ಯಸ್ಥರು ಇಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಬಿಮ್ಸ್ ಟೆಕ್ ರಾಷ್ಟ್ರೀಯ ಸುರಕ್ಷತಾ ಮುಖ್ಯಸ್ಥರು, ಬಿಮ್ಸ್ ಟೆಕ್ ಬಗೆಗಿನ ಪ್ರಧಾನಮಂತ್ರಿಯವರ ನಿಲುವನ್ನು ಪ್ರಶಂಸಿಸಿದರು ಮತ್ತು ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಮುಖ್ಯಸ್ಥರ ಪ್ರಥಮ ಸಭೆಯನ್ನು ಭಾರತದಲ್ಲಿ ಆಯೋಜಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.

ಸಭೆಯಲ್ಲಿ ನಡೆದ ಚರ್ಚೆಯ ಕುರಿತಂತೆ ರಾಷ್ಟ್ರೀಯ ಭದ್ರತಾ ಮುಖ್ಯಸ್ಥರು ಪ್ರಧಾನಮಂತ್ರಿಯವರಿಗೆ ವಿವರ ನೀಡಿದರು.

ಭಯೋತ್ಪಾದನೆ; ವಿಧ್ವಂಸಕತೆ ಮತ್ತು ಮೂಲಭೂತವಾದ; ಮಾದಕವಸ್ತು, ಶಸ್ತ್ರಾಸ್ತ್ರ ಮತ್ತು ಮಾನವ ಕಳ್ಳಸಾಗಣೆ; ಮತ್ತು ಪ್ರಕೃತಿ ವಿಕೋಪದಂಥ ಸಮಾನ ಸುರಕ್ಷತಾ ಆತಂಕಗಳನ್ನು ಎದುರಿಸಲು ಒಗ್ಗೂಡುವಂತೆ ಬಿಮ್ಸ್ ಟೆಕ್ ಸದಸ್ಯ ರಾಷ್ಟ್ರಗಳಿಗೆ ಪ್ರಧಾನಮಂತ್ರಿಯವರು ಕರೆ ನೀಡಿದರು.

ಸೈಬರ್ ಭದ್ರತೆಯ ಡೊಮೈನ್ ಗಳ ಮತ್ತು ಸಾಗರ ಪ್ರದೇಶದ ಮೇಲಿನ ಪರಂಪರಾಗತವಲ್ಲದ ಭದ್ರತಾ ಭೀತಿಗಳನ್ನು ಎದುರಿಸಲೂ ಬಿಮ್ಸ್ ಟೆಕ್ ಸದಸ್ಯ ರಾಷ್ಟ್ರಗಳು ಒಗ್ಗೂಡಿ ಶ್ರಮಿಸಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು.

***

AKT/NT