Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೆಲಾರಸ್ ಅಧ್ಯಕ್ಷರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ ವೇಳೆ ಸಹಿ ಹಾಕಲಾದ ಎಂ.ಓ.ಯು/ಒಪ್ಪಂದಗಳ ಪಟ್ಟಿ


ಕ್ರ.ಸಂ.

ಎಂ.ಓ.ಯು/ಒಪ್ಪಂದಗಳು/ಕರಾರುಗಳ ಹೆಸರು

1

ಭಾರತ ಗಣರಾಜ್ಯದ ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಸಚಿವಾಲಯ ಮತ್ತು ಬೆಲಾರಸ್ ಗಣರಾಜ್ಯದ ಶಿಕ್ಷಣ ಸಚಿವಾಲಯದ ನಡುವೆ ತಿಳಿವಳಿಕೆ ಒಪ್ಪಂದ

2

ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದ ಸಹಕಾರಕ್ಕಾಗಿ ಭಾರತ ಗಣರಾಜ್ಯದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಹಾಗೂ ಬೆಲಾರಸ್ ಗಣರಾಜ್ಯದ ಶಿಕ್ಷಣ ಸಚಿವಾಲಯದ ನಡುವೆ ತಿಳಿವಳಿಕೆ ಒಪ್ಪಂದ.

3

ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರಕ್ಕಾಗಿ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡಮಿ (ಐ.ಎನ್.ಎಸ್.ಎ) ಮತ್ತು ಬೆಲಾರಸ್ ನ ರಾಷ್ಟ್ರೀಯ ವಿಜ್ಞಾನ ಅಕಾಡಮಿಗಳ ನಡುವೆ ಒಪ್ಪಂದ.

4

ಭಾರತದ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಬೆಲಾರಸ್ ದೇಶದ ಬೆಲಾರಸ್ ನ ಗೋರ್ಕಿಯಲ್ಲಿನ ಕೃಷಿ ಅಕಾಡಮಿ ನಡುವೆ ಕೃಷಿ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ತಿಳಿವಳಿಕೆ ಒಪ್ಪಂದ.

5

ಭಾರತ ಗಣರಾಜ್ಯದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಬೆಲಾರಸ್ ಗಣರಾಜ್ಯದ ಕೃಷಿ ಮತ್ತು ಆಹಾರ ಸಚಿವಾಲಯದ ನಡುವೆ 2007ರ ಏಪ್ರಿಲ್ 16ರಂದು ಸಹಿ ಹಾಕಲಾಗಿರುವ ಒಪ್ಪಂದಕ್ಕೆ ಶಿಷ್ಟಾಚಾರದ ತಿದ್ದುಪಡಿ.

6

ಭಾರತ ಗಣರಾಜ್ಯ ಸರ್ಕಾರ ಮತ್ತು ಬೆಲಾರಸ್ ಗಣರಾಜ್ಯ ಸರ್ಕಾರದ ನಡುವೆ 2018-2020ರವರೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾರ್ಯಕ್ರಮ ಸಹಕಾರ ಒಪ್ಪಂದ.

7

ತೈಲ  ಮತ್ತು ಅನಿಲ ವಲಯದಲ್ಲಿ ಭಾರತ ಗಣರಾಜ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಬೆಲಾಸರ್ ನ ಸರ್ಕಾರಿ ಒಡೆತನದ ತೈಲ ಮತ್ತು ರಸಾಯನಶಾಸ್ತ್ರ ಇಲಾಖೆ ನಡುವೆ ಎಂ.ಓ.ಯು.

8

ಜೆಎಸ್ವಿ “ಬೆಲ್ ಜರೂಬೆಸ್ಟ್ರಾಯ್” ಮತ್ತು  ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮ ನಿಯಮಿತದ ನಡುವೆ ತಿಳಿವಳಿಕೆ ಒಪ್ಪಂದ.

9

ಜೆಎಸ್ಸಿ ಬೆಲಾರಸ್ ಪೋಟಾಶ್ ಕಂಪನಿ (ಬಿಪಿಸಿ) ಮತ್ತು ಭಾರತೀಯ ಸಸ್ಯಕ್ಷಾರ ನಿಯಮಿತ (ಐಪಿಎಲ್) ನಡುವೆ ತಿಳಿವಳಿಕೆ ಒಪ್ಪಂದ

10

ಓಜೆಎಸ್.ಸಿ. ಮಿನ್ಸ್ಕ್ ಟ್ರ್ಯಾಕ್ಟರ್ ವಕ್ಸ್ ಮತ್ತು ಭಾರತದ ಪುಣೆಯ ಕಿರ್ಲೋಸ್ಕರ್ ಆಯಿಲ್ ಎಂಜನಿನ್ ಲಿ., ನಡುವೆ ತಿಳಿವಳಿಕೆ ಒಪ್ಪಂದದ ಜಾರಿ ಕರಾರು.