Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೇರುಮಟ್ಟದ ನಾವಿನ್ಯತೆಯ ಸಹಕಾರ ಸ್ಥಾಪನೆಗಾಗಿ ದಕ್ಷಿಣ ಆಫ್ರಿಕಾದೊಂದಿಗೆ ಎಂ.ಓ.ಯು. ಗೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಬೇರು ಮಟ್ಟದ ನಾವಿನ್ಯತೆಯ ಸಹಕಾರ ಸ್ಥಾಪನೆಗೆ ದಕ್ಷಿಣ ಆಫ್ರಿಕಾದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿರುವ ಬಗ್ಗೆ ವಿವರಿಸಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸಹಕಾರಕ್ಕಾಗಿ ಎರಡೂ ರಾಷ್ಟ್ರಗಳ ನಡುವೆ ಅಂತರ ಸರ್ಕಾರ ಒಪ್ಪಂದದ ಮುಂದುವರಿದ ಭಾಗವಾಗಿ ಈ ಎಂ.ಓ.ಯು.ಗೆ 2016ರ ಜುಲೈ 7ರಂದು ಪ್ರಿಟೋರಿಯಾದಲ್ಲಿ ಅಂಕಿತ ಹಾಕಲಾಗಿತ್ತು.

ಈ ಎಂ.ಓ.ಯು. ಅಡಿಯಲ್ಲಿ ಎರಡೂ ರಾಷ್ಟ್ರಗಳು ನಾವಿನ್ಯತೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ವಿಚಾರಗೋಷ್ಠಿ, ಶಿಬಿರ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಜಂಟಿಯಾಗಿ ಆಯೋಜಿಸಲಿವೆ; ಸಮಾಜದ ಲಾಭಕ್ಕಾಗಿ ದಾರಿ ಮಾಡಿಕೊಡುವ ಜಂಟಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ತಂತ್ರಜ್ಞಾನ ವಿನಿಮಯದೊಂದಿದೆ ನಾವಿನ್ಯದಾರ ಕಲ್ಪನೆಗಳನ್ನು ವಾಣಿಜ್ಯಾತ್ಮಕವಾಗಿ ಪರಿವರ್ತಿಸಲು ನೆರವಾಗಲು (ಅನುಕ್ರಮವಾಗಿ ಪರಸ್ಪರ ದೇಶದಲ್ಲಿನ ಸೂಕ್ತ ಕೈಗಾರಿಕೆಗಳೊಂದಿಗೆ ಪಾಲುದಾರಿಕೆಯೂ ಸೇರಿದಂತೆ) ಜಂಟಿ ಯೋಜನೆಗಳ ಅಭಿವೃದ್ಧಿ ಪಡಿಸಲಿವೆ ಮತ್ತು ತಂತ್ರಜ್ಞಾನ ಕುರಿತ ಮುಕ್ತ ಮೂಲಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಿವೆ.

ಈ ತಿಳಿವಳಿಕೆ ಒಪ್ಪಂದವು ಎರಡೂ ರಾಷ್ಟ್ರಗಳಲ್ಲಿ ಅದರಲ್ಲೂ ದೇಶೀಯ ಜ್ಞಾನ ವ್ಯವಸ್ಥೆ ಮತ್ತು ಕೃಷಿ ಮತ್ತು ಜೈವಿಕ ತಂತ್ರಜ್ಞಾನದ ಮೇಲೆ ಗಮನ ಹರಿಸಿ ಬೇರು ಮಟ್ಟದಲ್ಲಿ ಸಮಗ್ರ ನಾವಿನ್ಯತೆ ಮತ್ತು ಉದ್ಯಮಶೀಲತೆ ಉತ್ತೇಜನಕ್ಕಾಗಿ ಒಂದು ಪರಿಸರ ವ್ಯವಸ್ಥೆ ಸೃಷ್ಟಿಸಲು ಮತ್ತು ವ್ಯವಸ್ಥೆ ರೂಪಿಸಲು ಅನುವು ಮಾಡಿಕೊಡಲಿದೆ.

*****

AKT/VBA/SH