Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೋಟ್‌ಸ್ವಾನಾ ಅಧ್ಯಕ್ಷರಾದ ಡುಮಾ ಬೊಕೊ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿಶುಭ ಹಾರೈಸಿದ್ದಕ್ಕಾಗಿ ಬೋಟ್‌ಸ್ವಾನಾ ಅಧ್ಯಕ್ಷ  ಡುಮಾ ಬೊಕೊ ಅವರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೋಟ್‌ಸ್ವಾನಾ ಅಧ್ಯಕ್ಷರಾದ ಡುಮಾ ಬೊಕೊ ಅವರ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದ ಅರ್ಪಿಸಿದ್ದಾರೆ. ಬೋಟ್‌ಸ್ವಾನಾದೊಂದಿಗಿನ ಸ್ನೇಹವನ್ನು ಭಾರತ ಹೆಚ್ಚು ಗೌರವಿಸುತ್ತದೆ ಮತ್ತು ನಮ್ಮ ನಿಕಟ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಒಗ್ಗೂಡಿ ಶ್ರಮಿಸಲು ಎದುರು ನೋಡುತ್ತಿದ್ದೇನೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಶ್ರೀ ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿಈ ರೀತಿ ಸಂದೇಶ ತಿಳಿಸಿದ್ದಾರೆ:

ಅಧ್ಯಕ್ಷರಾದ  ಡುಮಾ ಬೊಕೊ ರವರೇ, ನಿಮ್ಮ ಆತ್ಮೀಯ ಶುಭಾಶಯಗಳನ್ನು ನಾನು ತುಂಬಾ ಪ್ರಶಂಸಿಸುತ್ತೇನೆ.

ಭಾರತವು ಬೋಟ್‌ಸ್ವಾನಾದೊಂದಿಗಿನ ಸ್ನೇಹವನ್ನು ಬಹಳವಾಗಿ ಗೌರವಿಸುತ್ತದೆ ಮತ್ತು ನಮ್ಮ ನಿಕಟ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಒಗ್ಗೂಡಿ ಶ್ರಮಿಸಲು ನಾನು ಎದಿರು ನೋಡುತ್ತಿದ್ದೇನೆ.

@duma_boko

 

*****