ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು(i) ಅಂತರ ಬ್ಯಾಂಕ್ ಪ್ರಾದೇಶಿಕ ಕರೆನ್ಸಿ ಕ್ರೆಡಿಟ್ ಲೈನ್ ಒಪ್ಪಂದ ಮತ್ತು (ii) ಎಕ್ಸಿಂ ಬ್ಯಾಂಕ್ ಸಾಲ ಶ್ರೇಣೀಕರಣಕ್ಕೆ ಸಂಬಂಧಿಸಿದಂತೆ ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ವ್ಯವಸ್ಥೆಯಡಿಯಲ್ಲಿ ಭಾಗವಹಿಸುವ ಸದಸ್ಯ ಬ್ಯಾಂಕ್ ಗಳ ಸಹಕಾರ ಒಪ್ಪಂದಗಳಿಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. ಈ ಎರಡೂ ಒಪ್ಪಂದ ಮತ್ತು ತಿಳಿವಳಿಕೆ ಒಪ್ಪಂದಗಳು ಏಕಛತ್ರಿ ಒಪ್ಪಂದಗಳಾಗಿವೆ ಮತ್ತು ಸ್ವಾಭಾವಿಕವಾಗಿ ಬಂಧಮುಕ್ತವಾಗಿವೆ, ಎಕ್ಸಿಮ್ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಈ ಸಂಬಂಧ ಮಾತುಕತೆ ನಡೆಸಲು ಮತ್ತು ಯಾವುದೇ ವೈಯಕ್ತಿಕ ಒಪ್ಪಂದ ಹಾಗೂ ಬದ್ಧತೆಯನ್ನು ತಮ್ಮದೇ ಚೌಕಟ್ಟಿನಲ್ಲಿ ಆಖೈರುಗೊಳಿಸಲು ಅಧಿಕಾರ ನೀಡಲಾಗಿದೆ.
ಪರಿಣಾಮ
ಈ ಒಪ್ಪಂದಗಳು ಬ್ರಿಕ್ಸ್ ರಾಷ್ಟ್ರಗಳ ನಡುವೆ ರಾಜಕೀಯ ಮತ್ತು ಆರ್ಥಿಕ ಬಾಂಧವ್ಯವನ್ನು ಆಳಗೊಳಿಸುವ ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳೊಳಗೆ ಬಹುಪಕ್ಷೀಯ ಸಂವಾದವನ್ನು ಉತ್ತೇಜಿಸಲಿದೆ.
ಒಪ್ಪಂದಕ್ಕೆ ಅಂಕಿತ ಹಾಕುವುದರಿಂದ ಸಿಡಿಎಸ್, ವಿಇಬಿಮತ್ತು ಬಿಎನ್.ಡಿ.ಇ.ಎಸ್. ನಂತಹ ದೊಡ್ಡ ಅಭಿವೃದ್ಧಿ ಹಣಕಾಸು ಸಂಸ್ಥೆಗಳೊಂದಿಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಎಕ್ಸಿಮ್ ಬ್ಯಾಂಕ್ ಅನ್ನು ಸ್ಥಾನಾಂತರಿಸುತ್ತದೆ. ಸೂಕ್ತ ಸಮಯದಲ್ಲಿ ಎಕ್ಸಿಮ್ ಬ್ಯಾಂಕ್, ಈ ಏಕಛತ್ರಿಯ ಒಪ್ಪಂದವನ್ನು ಬಳಸಿಕೊಂಡು ತನ್ನ ವಾಣಿಜ್ಯಕ್ಕೆ ಸಂಪನ್ಮೂಲ ಪಡೆಯಲು ಯಾವುದೇ ಈ ಸದಸ್ಯ ಸಂಸ್ಥೆಗಳಿಗಳೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬಹುದಾಗಿದೆ. ವಾಣಿಜ್ಯಿಕ ದೃಷ್ಟಿಯಿಂದ ಸಹ-ಹಣಕಾಸು ನೀಡಿಕೆಗೆ ಯಾವುದೇ ಅವಕಾಶವು ದೊರೆತಾಗ, ಯಾವುದೇ ಎರಡು ಸದಸ್ಯ ಸಂಸ್ಥೆಗಳಿಂದ (ಉದಾ. ಭಾರತ ಮತ್ತು ದಕ್ಷಿಣ ಆಫ್ರಿಕಾ), ಎರಡೂ ಸಂಸ್ಥೆಗಳಿಂದ ಏಕೈಕ ಕರೆನ್ಸಿಯಲ್ಲಿ ಸಾಲ ನೀಡಿಕೆ ಸಾಧ್ಯವಿದೆ.
ಹಿನ್ನೆಲೆ
ಭಾರತದ ಅಂತಾರಾಷ್ಟ್ರೀಯ ವಾಣಿಜ್ಯ ಉತ್ತೇಜನ ಮತ್ತು ಸೌಕರ್ಯಕ್ಕೆ ಎಕ್ಸಿಮ್ ಬ್ಯಾಂಕ್ ಸಾಲ ನೀಡುತ್ತದೆ. ಇದು ವಾಣಿಜ್ಯದ ವಿವಿಧ ಹಂತಗಳಲ್ಲಿ ತಂತ್ರಜ್ಞಾನ ಆಮದು, ಉತ್ಪಾದನೆ ಅಭಿವೃದ್ಧಿಯ ರಫ್ತು, ರಫ್ತು ಉತ್ಪಾದನೆ ಮತ್ತು ಸಾಗಣೆ ಪೂರ್ವ ರಫ್ತು ಸಾಲ ಮತ್ತು ಸಾಗಣೆ ನಂತರದ ಸಾಲ ಹಾಗೂ ಸಾಗರೋತ್ತರ ಹೂಡಿಕೆಗೆ ಇದು ಸ್ಪರ್ಧಾತ್ಮಕ ಹಣಕಾಸು ನೆರವು ಒದಗಿಸುತ್ತದೆ.
ಅಂತರಬ್ಯಾಂಕ್ ಸ್ಥಳೀಯ ಕರೆನ್ಸಿ ಕ್ರೆಡಿಟ್ ಲೈನ್ ಒಪ್ಪಂದ
ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ವ್ಯವಸ್ಥೆಯಡಿಯಲ್ಲಿ ಸಾಲ ಸೌಲಭ್ಯ ಒದಗಿಸಲು ಆರಂಭಿಕಮೂಲ ಒಪ್ಪಂದವು ಐದು ವರ್ಷಗಳ ಕಾಲಾವಧಿಯದಾಗಿದ್ದು, 2017ರ ಮಾರ್ಚ್ ನಲ್ಲಿ ಇದರ ಅವಧಿ ಮುಗಿದಿತ್ತು. ಕೆಲವು ಸದಸ್ಯ ಬ್ಯಾಂಕ್ ಗಳು (ಅಂದರೆ ಸಿಡಿಬಿ ಮತ್ತು ವಿಇಬಿ; ಸಿಡಿಬಿ ಮತ್ತು ಬಿಎನ್ಡಿಇಎಸ್) 2012ರಲ್ಲಿ ಸಹಿ ಹಾಕಲಾದ ಸ್ಥಳೀಯ ಕರೆನ್ಸಿಯಲ್ಲಿ ಹಣಕಾಸು ನೀಡಲು ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿವೆ. ಪ್ರಸ್ತುತ ಪರಿಸ್ಥಿತಿಗಳು ಬಳಕೆಗೆ ಅನುಕೂಲಕರವಾಗಿಲ್ಲವಾದರೂ, ಭವಿಷ್ಯದಲ್ಲಿ ಸೂಕ್ತವಾದ ಅವಕಾಶವನ್ನು ಸಾಧಿಸುವ ಸಂದರ್ಭದಲ್ಲಿ ಅದೇ ಜೀವಂತಿಕೆಯನ್ನು ಸಕ್ರಿಯಗೊಳಿಸುವಲ್ಲಿ ಉಪಯುಕ್ತವಾಗಿವೆ. ಎಕ್ಸಿಮ್ ಬ್ಯಾಂಕ್ ಅಪಾಯವನ್ನು ಸರಿದೂಗಿಸಲು, ವಿದೇಶೀ ಮಾರುಕಟ್ಟೆಗಳಲ್ಲಿ ವೈವಿಧ್ಯಮಯ ಕರೆನ್ಸಿಗಳಲ್ಲಿ ಸಂಪನ್ಮೂಲ ಎತ್ತುವಳಿ ಮಾಡುತ್ತದೆ. ಈ ಏಕಛತ್ರಿ ಒಪ್ಪಂದವು, ಸದಸ್ಯ ಬ್ಯಾಂಕ್ ಗಳೊಂದಿಗೆ ರಾಷ್ಟ್ರೀಯ ಕಾನೂನು, ನಿಯಂತ್ರಣ ಮತ್ತು ಆಂತರಿಕ ನೀತಿಯ ಅಂಕಿತದೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.
ಸಾಲ ಶ್ರೇಣೀಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಒಪ್ಪಂದ
ಇದು ಬ್ರಿಕ್ಸ್ ಸದಸ್ಯ ಬ್ಯಾಂಕ್ ಗಳ ನಡುವೆ ಮತ್ತೊಂದು ಬ್ಯಾಂಕ್ ನಿಂದ ಬಂದ ಮನವಿಯ ಆಧಾರದ ಮೇಲೆ, ಸಾಲ ಶ್ರೇಣೀಕರಣ ಹಂಚಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಗಡಿಯಾಚೆಗಿನ ಹಣಕಾಸಿನೊಂದಿಗೆ ಇದು ಸಾಲ ನೀಡಿಕೆಯಲ್ಲಿನ ಅಪಾಯವನ್ನು ತಗ್ಗಿಸುವ ಮಾದರಿ ವ್ಯವಸ್ಥೆಯಾಗಿದೆ. ಭವಿಷ್ಯದಲ್ಲಿ, ಬ್ರಿಕ್ಸ್ ರಾಷ್ಟ್ರಗಳಿಂದ ಪರ್ಯಾಯ ಶ್ರೇಣೀಕರಣ ಸಂಸ್ಥೆ ಹೊಂದಿರುವ ಪ್ರಸ್ತಾಪಕ್ಕೆ ಅಂತಹ ಒಂದು ಮುನ್ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ.
2017ರ ಸೆಪ್ಟೆಂಬರ್ 4ರಂದು ಚೈನಾದ ಕ್ಸಿಯಾಮನ್ನಲ್ಲಿ ಮಾಡಲಾದ ಬ್ರಿಕ್ಸ್ ನಾಯಕರ ಕ್ಸಿಯಾಮೆನ್ ಘೋಷಣಯಲ್ಲಿ ಈ ಒಪ್ಪಂದ ಮತ್ತು ಎಂ.ಓ.ಯು. ಬಗ್ಗೆ ಪ್ರಮುಖವಾಗಿ ತಿಳಿಸಲಾಗಿದೆ.
*******