ಪಿಎಂಇಂಡಿಯಾ
ಬ್ರಿಕ್ಸ್ ವಾಣಿಜ್ಯ ಮಂಡಳಿಯೊಂದಿಗಿನ ಈ ಸಭೆಗೆ ನಿಮ್ಮೆಲ್ಲರನ್ನೂ ಸ್ವಾಗತಿಸುವುದು ನನಗೆ ದೊಡ್ಡ ಹೆಮ್ಮೆಯಾಗಿದೆ.
ಮಂಡಳಿಯು ನಮ್ಮ ರಾಷ್ಟ್ರಗಳ ನಡುವೆ ಪೂರ್ಣ ಆಳವಾದ ಮತ್ತು ವೈವಿಧ್ಯಮಯವಾದ ಆರ್ಥಿಕ ಕಾರ್ಯಕ್ರಮವನ್ನು ಪ್ರತಿಬಿಂಬಿಸುತ್ತದೆ.
ಸ್ಪಂದನಶೀಲ ಮತ್ತು ಸಂಘಟಿತ ಪರಿಹಾರದ ಮೂಲಕ ಬ್ರಿಕ್ಸ್ ನ ಸಮಗ್ರ ಆರ್ಥಿಕ ಕಾರ್ಯಕ್ರಮ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.
ಘನತೆವೆತ್ತರೆ ಮತ್ತು ಸ್ನೇಹಿತರೆ,
ವಾಣಿಜ್ಯ ಮತ್ತು ಆರ್ಥಿಕ ಕಾರ್ಯಕ್ರಮಗಳ ಉತ್ತೇಜನವು ಬ್ರಿಕ್ಸ್ ರಚನೆಯ ಮೂಲಭೂತ ಉದ್ದೇಶವಾಗಿದೆ. ಹೀಗಾಗಿ ಡರ್ಬನ್ ನಲ್ಲಿ ನಾವು ಇದನ್ನು ಸ್ಥಾಪಿಸಿದ ಮೂರು ವರ್ಷಗಳ ನಂತರ ಬ್ರಿಕ್ಸ್ ವಾಣಿಜ್ಯಮಂಡಳಿ ಆರೋಗ್ಯಪೂರ್ಣ ರೂಪ ಪಡೆದಿದೆ.
ನಮ್ಮ ವಾಣಿಜ್ಯ ಸಮುದಾಯದವರು ಬ್ರಿಕ್ಸ್ ನಡುವಿನ ಆತ್ಮೀಯ ಮತ್ತು ವೇಗವಾದ ವಾಣಿಜ್ಯ ಸಹಕಾರಕ್ಕೆ ಪ್ರಬಲ ತತ್ವಪಾದಕಗಳಾಗಿವೆ.
ಅವರ ಪಾಲುದಾರಿಕೆಯು ನಮ್ಮ ಸಮಾಜದಲ್ಲಿ ಸಂಪತ್ತು ಮತ್ತು ಮೌಲ್ಯವನ್ನು ಸೃಷ್ಟಿಸುತ್ತಿದೆ. ಮತ್ತು ಅಲ್ಲದೆ ನಮ್ಮ ಆರ್ಥಿಕತೆಯಲ್ಲಿ ತಾಂತ್ರಿಕವಾದ ನಾವಿನ್ಯತೆ ಮತ್ತು ಸಾಮರ್ಥ್ಯ ವರ್ಧನೆಯೊಂದಿಗೆ ಉದ್ಯೋಗ ಸೃಷ್ಟಿಸುತ್ತಿದೆ ಮತ್ತು ಉತ್ಪಾದನೆ ಹೆಚ್ಚಿಸುತ್ತಿದೆ.
ನಾನು ಈ ಮುನ್ನೋಟವನ್ನು ಶ್ಲಾಘಿಸುತ್ತೇನೆ. ನಾನು ಈ ಮುನ್ನೋಟ ಹಂಚಿಕೊಳ್ಳುತ್ತೇನೆ.
ಘನತೆವೆತ್ತರೇ,
ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ನಾವು, ಆಡಳಿತವನ್ನು ಮುಖ್ಯವಾಹಿನಿಗೆ ತರಲು ಮತ್ತು ಸರಳೀಕರಿಸಲು ಅದರಲ್ಲೂ ಭಾರತದಲ್ಲಿ ಸುಲಭವಾಗಿ ವಾಣಿಜ್ಯ ನಡೆಸಲು ಹಲವು ಗಣನೀಯ ಸುಧಾರಣೆಗಳನ್ನು ಕೈಗೊಂಡಿದ್ದೇವೆ.
ಇದರ ಫಲಿತಾಂಶ ಸ್ಪಷ್ಟವಾಗಿ ಗೋಚರಿಸುತ್ತಿದೆ.
ನಾವು ಆ ಪ್ರದರ್ಶನವನ್ನು ಅಳೆಯುವ ಬಹುತೇಕ ಎಲ್ಲ ಜಾಗತಿಕ ಸೂಚ್ಯಂಕಗಳಲ್ಲಿ ಸಾಗಿದ್ದೇವೆ.
ನಾವು ಇಂದು ಭಾರತವನ್ನು ಜಗತ್ತಿನ ಅತ್ಯಂತ ಮುಕ್ತ ಆರ್ಥಿಕತೆಯಾಗಿ ಪರಿವರ್ತಿಸಿದ್ದೇವೆ.
ನಮ್ಮ ವೃದ್ಧಿಯು ಬಲವಾಗಿದೆ ಮತ್ತು ನಾವು ಈ ವೇಗವನ್ನು ಕಾಯ್ದುಕೊಳ್ಳಲು ಕ್ರಮ ಕೈಗೊಂಡಿದ್ದೇವೆ.
ಬ್ರಿಕ್ಸ್ ವಾಣಿಜ್ಯ ಮಂಡಳಿ ಕೂಡ ಸುಲಭವಾಗಿ ವಾಣಿಜ್ಯ ನಡೆಸುವ, ವಾಣಿಜ್ಯದ ಅಡೆತಡೆ ತೆಗೆದುಹಾಕುವ, ಕೌಶಲ ಅಭಿವೃದ್ಧಿ ಉತ್ತೇಜಿಸುವ, ಉತ್ಪಾದನೆಯ ವಿತರಣೆ ಸರಪಣಿಯನ್ನು ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಸ್ಥಾಪಿಸುವ ಆದ್ಯತೆಯನ್ನು ಹೊಂದಿದೆ ಎಂದು ತಿಳಿದು ನಾನು ಹರ್ಷಿತನಾಗಿದ್ದೇನೆ,
ಬ್ರಿಕ್ಸ್ ರಾಷ್ಟ್ರಗಳ ನಡುವೆ ವಾಣಿಜ್ಯ ವಿಸ್ತರಣೆಗೆ ಮಂಡಲಿಯ ಕಾರ್ಯ ಹೆಚ್ಚು ಭರವಸೆಪೂರ್ಣವಾಗಿದೆ.
ಘನತೆವೆತ್ತರೇ,
ಈಗ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಪೂರ್ಣ ಕ್ರಿಯಾಶೀಲವಾಗಿದೆ. ಇದರ ಸಮಗ್ರ ಯಶಸ್ಸು ನಮ್ಮ ಸಮಾನ ಪ್ರಯತ್ನವಾಗಿದೆ.
ಮೊದಲ ಹಂತದ ಯೋಜನೆ ಆರಂಭಿಸಿದ್ದಕ್ಕಾಗಿ ನಾವು ಎನ್.ಡಿ.ಬಿ. ಮತ್ತು ಅದರ ಆಡಳಿತ ಮಂಡಳಿಯನ್ನು ಅಭಿನಂದಿಸುತ್ತೇವೆ.
ಎನ್.ಡಿ.ಬಿ. ಶುದ್ಧ ಇಂದನ ಮತ್ತು ಹಸಿರು ಮತ್ತು ಸುಸ್ಥಿರ ಮೂಲಸೌಕರ್ಯವನ್ನು ತನ್ನ ಆದ್ಯತೆಮಾಡಿಕೊಂಡಿದೆ.
ನಾವು ಇದನ್ನು ಸ್ವಾಗತಿಸುತ್ತೇವೆ.
ಗುರುತಿಸುವ ಮತ್ತು ನಿರೀಕ್ಷಿಸುವ ಆರ್ಥಿಕ ಯೋಜನೆಗಳ ಅನುಷ್ಠಾನಕ್ಕೆ ನಾವು ಬ್ರಿಕ್ಸ್ ವಾಣಿಜ್ಯ ಮಂಡಳಿಯು ಎನ್.ಡಿ.ಬಿ.ಜೊತೆಯಲ್ಲಿ ಶ್ರಮಿಸಲು ನಾವು ಪ್ರೋತ್ಸಾಹಿಸಬೇಕು.
ಎರಡು ದಿನಗಳ ಹಿಂದೆ ಭಾರತವು ನಿಮ್ಮ ಎಲ್ಲ ರಾಷ್ಟ್ರಗಳ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಮೊದಲ ಬ್ರಿಕ್ಸ್ ವಾಣಿಜ್ಯಮ ಮೇಳವನ್ನು ದೆಹಲಿಯಲ್ಲಿ ಆಯೋಜಿಸಿತ್ತು.
ಇಂಥ ಚಟುವಟಿಕೆಗಳು ಹೆಚ್ಚಿನ ವಾಣಿಜ್ಯ ತಿಳಿವಳಿಕೆ ಮತ್ತು ವಾಣಿಜ್ಯ ವಿನಿಮಯ ಉತ್ತೇಜಿಸುವಂತಿರಬೇಕು.
ಘನತೆವೆತ್ತರೇ,
ನಮ್ಮ ಈ ಕೆಳಗಿನ ಸಮಾನ ಗುರಿ ಸಾಧಿಸಲು ಸರ್ಕಾರಗಳು, ನಾವು ಅವಲಂಬಿತರಾಗಿರುವ ಬ್ರಿಕ್ಸ್ ವಾಣಿಜ್ಯ ಮಂಡಳಿಯೊಂದಿಗೆ ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ನನ್ನ ಮಾತು ಮುಗಿಸುತ್ತೇನೆ:
• ಪರಸ್ಪರ ವಾಣಿಜ್ಯದ ಬಲವರ್ಧನೆ;
• ವಾಣಿಜ್ಯ ಅವಕಾಶಗಳ ಹೆಚ್ಚಳ;
• ಹೂಡಿಕೆಯ ನಂಟಿನ ನಿರ್ಮಾಣ;
• ನಾವಿನ್ಯತೆಯ ಉತ್ತೇಜನ; ಮತ್ತು
• ಬ್ರಿಕ್ಸ್ ಆಂತರಿಕ ವಾಣಿಜ್ಯದಲ್ಲಿನ ತೊಡಕುಗಳ ನಿವಾರಣೆ.
ಇನ್ನು ಕೆಲವೇ ಹೊತ್ತಿನಲ್ಲಿ ನಾವು, ಬ್ರಿಕ್ಸ್ ವಾಣಿಜ್ಯ ಮಂಡಳಿ ಮತ್ತು ಎನ್.ಡಿ.ಬಿ. ನಾಯಕತ್ವದ ಭಾಷಣ ಆಲಿಸಲಿದ್ದೇವೆ.
ಧನ್ಯವಾದಗಳು.
AKT/AK
Spoke on the rich potential of economic cooperation between BRICS nations at the @BRICS2016 Business Council Meet. https://t.co/3hSDJRDR3p
— Narendra Modi (@narendramodi) October 16, 2016
Highlighted reforms undertaken by India in last 2 years to make business easier & make India one of the most open economies in the world.
— Narendra Modi (@narendramodi) October 16, 2016
BRICS Business Council has a key role in strengthening trade & business opportunities, building investment linkages & promoting innovation.
— Narendra Modi (@narendramodi) October 16, 2016