ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿ ಸುಗಮವಾಗಿ ವಾಣಿಜ್ಯ ನಡೆಸಲು ಬೆಂಬಲ ನೀಡುವ ಸಲುವಾಗಿ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್(ಯುಕೆ) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಪೂರ್ವಾನ್ವಯವಾಗಿ ತನ್ನ ಸಮ್ಮತಿ ಸೂಚಿಸಿದೆ. ಈ ಒಪ್ಪಂದಕ್ಕೆ ಈ ತಿಂಗಳ ಆರಂಭದಲ್ಲಿ ಅಂಕಿತ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದವು ಉತ್ತಮ ಪದ್ಧತಿಗಳು, ತಾಂತ್ರಿಕ ನೆರವು ಮತ್ತು ಸುಧಾರಣೆಗಳ ಹೆಚ್ಚಿನ ಅನುಷ್ಠಾನಕ್ಕಾಗಿ ಎರಡೂ ರಾಷ್ಟ್ರಗಳ ಅಧಿಕಾರಿಗಳ ವಿನಿಮಯಕ್ಕೆ ಅನುವು ಮಾಡಿಕೊಡಲಿದೆ. ಈ ಸಹಯೋಗವು ರಾಜ್ಯ ಸರ್ಕಾರಗಳನ್ನು ಕೂಡ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲಿದೆ. ಯುಕೆ ಸರ್ಕಾರ ಈ ಕೆಳಗಿನ ಕ್ಷೇತ್ರಗಳಲ್ಲಿ ತಜ್ಞತೆಯನ್ನು ನೀಡಲು ಆಸಕ್ತಿ ತೋರಿದೆ:
a) ಸಣ್ಣ ವ್ಯಾಪಾರ ಮತ್ತು ನವೋದ್ಯಮಗಳಿಗೆ ಬೆಂಬಲ
b) ವ್ಯಾಪಾರ ಆರಂಭ ಮತ್ತು ನೋಂದಣಿ
c) ತೆರಿಗೆಯ ಪಾವತಿ ಮತ್ತು ತೆರಿಗೆ ಆಡಳಿತ
d) ದಿವಾಳಿ
e) ನಿರ್ಮಾಣ ಅನುಮತಿ
f) ವಿದ್ಯುತ್ ಪಡೆಯುವುದು
g) ತಪಾಸಣೆ ಮತ್ತು ನಿಯಂತ್ರಣಾತ್ಮಕ ಪದ್ಧತಿಗಳಿಗೆ ಅಪಾಯ ಆಧಾರಿತ ಚೌಕಟ್ಟು ಒದಗಿಸುವುದು.
h) ಗಡಿ ಗುಂಟಾ ವ್ಯಾಪಾರ
i) ಸ್ಪರ್ಧಾತ್ಮಕ ಆರ್ಥಶಾಸ್ತ್ರ
j] ಸಾಲ ಪಡೆಯುವುದು
k) ಕಾನೂನು ಮತ್ತು ನಿಯಮದ ಕರಡು ರೂಪಿಸುವುದು
I) ನಿಯಂತ್ರಣಗಳ ಹರಿವು ಮತ್ತು ಸ್ಟಾಕ್ ಕಡಿಮೆ ಮಾಡುವುದು
m) ನಿಯಂತ್ರಣಗಳ ಪರಿಣಾಮದ ನಿರ್ಧರಣೆ
ಪ್ರಸ್ತುತ ಭಾರತವು (ವಾಣಿಜ್ಯ ನಡೆಸುವ ವರದಿ 2017ರ ರೀತ್ಯ) 190 ಆರ್ಥಿಕ ರಾಷ್ಟ್ರಗಳ ಪೈಕಿ ಭಾರತ 130ನೇ ಸ್ಥಾನದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಸುಲಭವಾಗಿ ವಾಣಿಜ್ಯ ನಡೆಸುವ (ಇಓಡಿಬಿ) ಶ್ರೇಣಿಯಲ್ಲಿ ಇಂಗ್ಲೆಂಡ್ ಗಣನೀಯ ಸುಧಾರಣೆಯ ಸಾಧನೆ ಮಾಡಿದೆ. ಕೇಂದ್ರ ಸರ್ಕಾರದ ಸಚಿವಾಲಯಗಳ/ಇಲಾಖೆಗಳ ಮತ್ತು ಉತ್ತಮ ಪದ್ಧತಿ ವಿನಿಮಯ, ಸಾಮರ್ಥ್ಯ ವರ್ಧನೆಯ ಮೂಲಕ ರಾಜ್ಯ ಸರ್ಕಾರಗಳು ಇದರ ಫಲಾನುಭವಿಗಳಾಗಿರುತ್ತಾರೆ. ಪ್ರತಿ ಕಡೆಯವರೂ ಸಹ-ಆತಿಥ್ಯ ತರಬೇತಿ / ವಿಚಾರಸಂಕಿರಣ / ಸಮ್ಮೇಳನಗಳ ವೆಚ್ಚ ಹಾಗೂ ಅದರ ಅಧಿಕಾರಿಗಳ ಪ್ರಯಾಣ ವೆಚ್ಚ ಭರಿಸುತ್ತವೆ.
ಈ ತಿಳಿವಳಿಕೆ ಒಪ್ಪಂದವು, ಯು.ಕೆ. ಸರ್ಕಾರದ ವಿವಿಧ ಸಂಸ್ಥೆಗಳಿಗೆ ಉತ್ತಮ ನಿಯಮಗಳ ಕರಡು ಸಿದ್ಧಪಡಿಸಲು ಅಧಿಕಾರಿಗಳಿಗೆ ವೃತ್ತಪರ ಕೋರ್ಸ್ ಗಳನ್ನು ನೀಡಲು, ಮುಂಪಡೆಯ ಪರಿವೀಕ್ಷಕರ ಸಾಮರ್ಥ್ಯ ವರ್ಧನೆಗೆ, ಉತ್ತಮ ಪದ್ಧತಿಗಳ ವಿನಿಮಯ ಇತ್ಯಾದಿಗೆ ಅವಕಾಶ ಒದಗಿಸುತ್ತದೆ. ಈ ಸಹಯೋಗವು ದೇಶದಲ್ಲಿ ಆಡಳಿತಾತ್ಮಕ ಸನ್ನಿವೇಶದ ವಾತಾವರಣ ಮತ್ತು ಭಾರತದಲ್ಲಿ ದಾರಿಯ ವ್ಯವಹಾರ ಪರಿಸ್ಥಿತಿಯ ಪೋಷಿಸುವಲ್ಲಿ ಭಾರತ ಸರ್ಕಾರಕ್ಕೆ, ರಾಜ್ಯ ಸರ್ಕಾರಗಳಿಗೆ ಮತ್ತು ಅದರ ಸಂಸ್ಥೆಗಳಿಗೆ ನಾವಿನ್ಯಪೂರ್ಣ ಪದ್ಧತಿಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.