Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಮೆಟ್ರೋ ಜಾಲ 2014ರಲ್ಲಿ 248 ಕಿ.ಮೀ.ನಷ್ಟಿದ್ದು ಪ್ರಸ್ತುತ ಸುಮಾರು 1,200 ಕಿ.ಮೀ.ಗೆ ವ್ಯಾಪಿಸಿರುವ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಮೆಟ್ರೋ ಜಾಲ ಗಮನಾರ್ಹವಾಗಿ ವಿಸ್ತರಣೆ ಕಂಡಿರುವುದನ್ನು ವಿವರಿಸಿದ್ದಾರೆ. 2014ರಲ್ಲಿ ದೇಶದ ಐದು ನಗರಗಳಲ್ಲಿ ಕೇವಲ 248 ಕಿ.ಮೀ. ಉದ್ದದ ಮೆಟ್ರೋ ಮಾರ್ಗಗಳಿದ್ದವು; ಆದರೆ ಇಂದು 26 ನಗರಗಳಲ್ಲಿ ಸುಮಾರು 1,200 ಕಿ.ಮೀ. ಉದ್ದದ ಮೆಟ್ರೋ ಮಾರ್ಗಗಳಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರತಿದಿನ ಒಂದು ಕೋಟಿಗೂ ಹೆಚ್ಚು ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ ಎಂದು ಗಮನಸೆಳೆದಿರುವ ಪ್ರಧಾನಮಂತ್ರಿಯವರು, ಈ ವಿಸ್ತರಣೆಯಿಂದಾಗಿ ಸಂಚಾರ ದಟ್ಟಣೆಯಲ್ಲಿ ವ್ಯಯಿಸಬೇಕಾದ ಸಮಯ ತಗ್ಗಿದ್ದು, ಕುಟುಂಬದೊಂದಿಗೆ ಕಾಲಕಳೆಯಲು ಹೆಚ್ಚು ಸಮಯ ದೊರೆತು, ಉತ್ಪಾದಕತೆ ಹೆಚ್ಚಾಗಲಿದೆ ಮತ್ತು ಉತ್ತಮ ಅವಕಾಶಗಳು ದೊರೆಯಲಿವೆ ಎಂದು ಹೇಳಿದ್ದಾರೆ.

ನಗರ ಭಾರತಕ್ಕಾಗಿ ಸರ್ಕಾರವು ಈ ಪರಿವರ್ತನೆಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಶ್ರೀ ಮೋದಿ ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:

“ಇದು ನಿಮಗೆ ನನ್ನ ಪ್ರಶ್ನೆ …

2014ಕ್ಕೂ ಮೊದಲು ಇದ್ದ ವೇಗದಲ್ಲೇ ಭಾರತದ ಮೆಟ್ರೋ ಜಾಲವು ವಿಸ್ತರಣೆಯಾಗುತ್ತಾ ಸಾಗಿದ್ದಿದ್ದರೆ, ಪುಣೆಯಂತಹ ನಗರಗಳಲ್ಲಿ ಮೆಟ್ರೋ ಬರಲು ಎಷ್ಟು ಸಮಯ ಕಾಯಬೇಕಾಗುತ್ತಿತ್ತು?

ವರ್ಷಗಳೇ.. ಅಲ್ಲ… ಬಹುಶಃ ದಶಕಗಳೇ ಬೇಕಾಗುತ್ತಿತ್ತು.

ಮತ್ತು ಅದು ಸ್ವೀಕಾರಾರ್ಹವಾಗಿರಲಿಲ್ಲ.

2014ರಲ್ಲಿ, ಭಾರತದ 5 ನಗರಗಳಲ್ಲಿ ಕೇವಲ 248 ಕಿ.ಮೀ ಉದ್ದದ ಮೆಟ್ರೋ ಮಾರ್ಗಗಳಿದ್ದವು.

ಇಂದು, 26 ನಗರಗಳಾದ್ಯಂತ ಸುಮಾರು 1,200 ಕಿ.ಮೀ ಉದ್ದದ ಮೆಟ್ರೋ ಮಾರ್ಗಗಳಿವೆ.

ಪ್ರತಿದಿನ ಒಂದು ಕೋಟಿಗೂ ಹೆಚ್ಚು ಜನರು ಮೆಟ್ರೋದಲ್ಲಿ ಪಯಣಿಸುತ್ತಾರೆ.

ಇದರ ಪ್ರಭಾವ ಅಂಕಿಅಂಶಗಳು ಅಥವಾ ಸಂಖ್ಯೆಗಳನ್ನು ಮೀರಿದ್ದಾಗಿದೆ.

ಇದರರ್ಥ ಸಂಚಾರ ದಟ್ಟಣೆಯಲ್ಲಿ ಕಡಿಮೆ ಸಮಯ, ಕುಟುಂಬದೊಂದಿಗೆ ಹೆಚ್ಚಿನ ಸಮಯ, ಅಧಿಕ ಉತ್ಪಾದಕತೆ ಮತ್ತು ಉತ್ತಮ ಅವಕಾಶಗಳು.

ನಗರೀಕೃತ ಭಾರತದೆಡೆಗೆ ಈ ರೂಪಾಂತರದೊಂದಿಗೆ ನಾವು ಕಾರ್ಯಪ್ರವೃತ್ತರಾಗಿದ್ದೇವೆ!”

 

*****