ಪಿಎಂಇಂಡಿಯಾ
ರಾಷ್ಟ್ರೀಯ ಕೈಮಗ್ಗ ದಿನದಂದು ಕೇಂದ್ರ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಈ ಲೇಖನವು ಭಾರತದ ಶ್ರೇಷ್ಠ ನಾಗರಿಕತೆಯ ಶಕ್ತಿಗಳಲ್ಲಿ ಒಂದಾದ ಕೈಮಗ್ಗವನ್ನು ಮತ್ತು ಭಾರತೀಯ ಜವಳಿಗಳ ಅಸಂಖ್ಯಾತ ಪ್ರಾದೇಶಿಕ ಸಂಪ್ರದಾಯಗಳನ್ನು ಉಲ್ಲೇಖಿಸುತ್ತದೆ.
“ಭಾರತದ ಯುವಕರು ಭಾರತೀಯ ಪರಂಪರೆ ಮತ್ತು ತಂತ್ರಜ್ಞಾನ, ಸೃಜನಶೀಲತೆ ಮತ್ತು ಉದ್ಯಮವನ್ನು ಒಟ್ಟುಗೂಡಿಸಲು, ಕೈಮಗ್ಗ ಕ್ಷೇತ್ರದ ಮುಂದಿನ ಅಧ್ಯಾಯವನ್ನು ರೂಪಿಸಲು, ಆ ಮೂಲಕ ನೇಕಾರರ ಜೀವನೋಪಾಯವನ್ನು ಬಲಪಡಿಸಲು ಸಚಿವರು ಲೇಖನದ ಮೂಲಕ ಕರೆ ನೀಡಿದ್ದಾರೆ” ಎಂದು ಶ್ರೀ ಮೋದಿ ಅವರು ಹೇಳಿದರು.
ಎಕ್ಸ್ ತಾಣದಲ್ಲಿ ಶ್ರೀ ಮೋದಿ ಅವರು ಹೀಗೆ ಪೋಸ್ಟ್ ಮಾಡಿದ್ದಾರೆ:
ಭಾರತವು ಇಂದು #NationalHandloomDay ಆಚರಿಸುತ್ತಿರುವಾಗ, ಕೇಂದ್ರ ಸಚಿವರಾದ ಶ್ರೀ @girirajsinghbjp ಅವರು ಕೈಮಗ್ಗವನ್ನು ಭಾರತದ ಶ್ರೇಷ್ಠ ನಾಗರಿಕತೆಯ ಶಕ್ತಿಗಳಲ್ಲಿ ಒಂದು ಎಂದು ಶ್ಲಾಘಿಸಿದ್ದಾರೆ, ಭಾರತೀಯ ಜವಳಿಗಳ ಅಸಂಖ್ಯಾತ ಪ್ರಾದೇಶಿಕ ಸಂಪ್ರದಾಯಗಳನ್ನು ಅವರು ಉಲ್ಲೇಖಿಸಿದ್ದಾರೆ.
ಭಾರತದ ಯುವಕರು ಪರಂಪರೆ ಮತ್ತು ತಂತ್ರಜ್ಞಾನ, ಸೃಜನಶೀಲತೆ ಮತ್ತು ಉದ್ಯಮವನ್ನು ಒಟ್ಟುಗೂಡಿಸಲು, ಕೈಮಗ್ಗದ ಮುಂದಿನ ಅಧ್ಯಾಯವನ್ನು ರೂಪಿಸಲು, ಆ ಮೂಲಕ ನೇಕಾರರ ಜೀವನೋಪಾಯವನ್ನು ಬಲಪಡಿಸಲು ಕರೆ ನೀಡಿದ್ದಾರೆ.
*****
As India marks #NationalHandloomDay today, Union Minister Shri @girirajsinghbjp lauds handloom as one of India’s greatest civilisational strengths, highlighting the countless regional traditions of Indian textiles.
— PMO India (@PMOIndia) August 7, 2026
The Minister calls upon India’s youth to bring together heritage… https://t.co/FaATaFySTa