Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಿಂದ ಮಾಡಿದ ಭಾಷಣದ ಕ್ಷಣಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಿಂದ ಮಾಡಿದ ಭಾಷಣದ ಕ್ಷಣಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೆಂಪುಕೋಟೆಯ ಆವರಣದಿಂದ ಮಾಡಿದ ಭಾಷಣದ ಕೆಲವು ಕ್ಷಣಗಳನ್ನು ಹಂಚಿಕೊಳ್ಳುತ್ತಾ, 2047ರ ವೇಳೆಗೆ ದೇಶವು ವಿಕಸಿತ ಭಾರತವಾಗುವತ್ತ ಸಾಗುತ್ತಿರುವ ಪಯಣವನ್ನು ಪ್ರಸ್ತುತಪಡಿಸಿದ್ದಾರೆ.  ರಾಷ್ಟ್ರದ ಅಭೂತಪೂರ್ವ ಪ್ರಗತಿ, ಜಾಗತಿಕ ಬಿಕ್ಕಟ್ಟುಗಳನ್ನು ಎದುರಿಸಿ ಮತ್ತೆ ಸಮಸ್ಥಿತಿಗೆ ತಲುಪಿರುವ ಬಗ್ಗೆ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಾ ಅವರು, ಬೆಳವಣಿಗೆಯ ಪ್ರಮುಖ ಸ್ತಂಭಗಳು, ಯುವ ಸಬಲೀಕರಣ, ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ಅಗತ್ಯವಾದ ಸಾಮೂಹಿಕ ಸಂಕಲ್ಪವನ್ನು ಒತ್ತಿ ಹೇಳಿದ್ದಾರೆ. ರಾಷ್ಟ್ರದ ಬಹುಮುಖಿ ಬೆಳವಣಿಗೆಯನ್ನು ಪ್ರಸ್ತಾಪಿಸಿರುವ ಅವರು, ಸಪ್ತಾಧಾರಾದ ಬಲವಾದ ಚೌಕಟ್ಟಿನ ಮೂಲಕ ದೇಶವು ಹೊಸ ಆವೇಗವನ್ನು ಪಡೆಯಲಿದೆ ಮತ್ತು ಇನ್ನಷ್ಟು ಎತ್ತರಕ್ಕೇರಲಿದೆ ಎಂದು ಪ್ರತಿಪಾದಿಸಿದ್ದಾರೆ.

ಪ್ರಧಾನಮಂತ್ರಿಗಳು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

“ಕೆಂಪುಕೋಟೆಯಲ್ಲಿ ಸ್ಮರಣೀಯ ಸ್ವಾತಂತ್ರ್ಯ ದಿನ! ಈ ದಿನವು ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟವರ ಸ್ಥೈರ್ಯ ಮತ್ತು ತ್ಯಾಗವನ್ನು ನೆನಪಿಸುತ್ತದೆ. ಅದೇ ಸಮಯದಲ್ಲಿ, ಇದು ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ನವೀನ ಬದ್ಧತೆಯನ್ನು ಪುನರುಚ್ಚರಿಸುವ ದಿನವಾಗಿದೆ. ತ್ರಿವರ್ಣ ಧ್ವಜವು ಯಾವಾಗಲೂ ಪ್ರತಿಯೊಂದು ಸವಾಲನ್ನು ಮೆಟ್ಟಿ ನಿಂತು ಮೇಲೇರಲು, ಏಕತೆಯ ಬಂಧಗಳನ್ನು ಬಲಪಡಿಸಲು ಮತ್ತು ರಾಷ್ಟ್ರಕ್ಕೆ ನಮ್ಮನ್ನು ಅರ್ಪಿಸಿಕೊಳ್ಳಲು ನಮಗೆ ಸ್ಫೂರ್ತಿ ನೀಡಲಿ.”

“ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮದ ಇನ್ನೂ ಕೆಲವು ನೋಟಗಳು ಇಲ್ಲಿವೆ.”

“2047ರ ವೇಳೆಗೆ ವಿಕಸಿತ ಭಾರತ ನಮ್ಮ ಗುರಿಯಾಗಿದೆ. ಕಳೆದ 12 ವರ್ಷಗಳಲ್ಲಿ, ಭಾರತ ಅಭೂತಪೂರ್ವ ವೇಗ ಮತ್ತು ಪ್ರಮಾಣದೊಂದಿಗೆ ಪ್ರಗತಿ ಸಾಧಿಸುತ್ತಿದೆ. ಇಂದು, ಭಾರತವು ನವೀನ ವಿಶ್ವಾಸ ಮತ್ತು ದೃಢಸಂಕಲ್ಪದೊಂದಿಗೆ ಪ್ರಗತಿ ಸಾಧಿಸುತ್ತಿದೆ. ಈ ಜಗತ್ತು ಭಾರತದ ಆವೇಗಕ್ಕೆ ಸಾಕ್ಷಿಯಾಗುತ್ತಿದೆ.”

“ವಿಕಸಿತ ಭಾರತವೂ ಆತ್ಮನಿರ್ಭರ ಭಾರತವಾಗಿರಬೇಕು. ನಮ್ಮ ಸ್ವಂತ ಸಾಮರ್ಥ್ಯಗಳನ್ನು ನಿರ್ಮಿಸುವುದರಿಂದ ಶಾಶ್ವತ ಬಲ ಸಿಗಲಿದೆ. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ವೋಕಲ್ ಫಾರ್ ಲೋಕಲ್‌ನ ಹಿಂದಿನ ನಿಲುವು. ಪರಿವರ್ತನೆಯು ಈಗಾಗಲೇ ಗೋಚರಿಸುತ್ತಿದೆ. ಭಾರತವು ಸಂಪೂರ್ಣ ಅರೆವಾಹಕ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಅರೆವಾಹಕ ಸ್ಥಾವರಗಳು ಕಾರ್ಯಾರಂಭ ಮಾಡಿದ್ದು, ಚಿಪ್ ರಫ್ತು ಆರಂಭವಾಗಿದೆ ಮತ್ತು ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಸ್ಥಾವರಗಳಲ್ಲಿ ಉತ್ಪಾದನೆ ನಿರೀಕ್ಷಿಸಲಾಗಿದೆ. ನಾವು ನಿರ್ಣಾಯಕ ಖನಿಜಗಳಲ್ಲಿ ನಮ್ಮ ಸಾಮರ್ಥ್ಯಗಳನ್ನು ಬಲಪಡಿಸುತ್ತಿದ್ದೇವೆ.”

 “‘ಇಲ್ಲ ಹೋಗು’ ಎಂಬ ನಿಲುವಿನಿಂದ ‘ಮುಂದೆ ಸಾಗು’ ಎಂಬ ದೃಢನಿಶ್ಚಯದವರೆಗೆ…”

“हथियारी नक्सल तो गए, लेकिन दिमागी नक्सल समाज को गलत राह पर घसीटने के लिए भांति-भांति के दांव आजमा रहे हैं। इन्हें पहचानकर आइसोलेट करने के साथ ही देश की युवा पीढ़ी को विकसित राष्ट्र बनाने की मुख्यधारा से जोड़ना होगा।”

“गरीब और मिडिल क्लास परिवारों पर कोचिंग क्लासेज का आर्थिक बोझ ना आए, इसलिए हमने युवाओं के लिए विभिन्न परीक्षाओं की फ्री ऑनलाइन कोचिंग का निर्णय लिया है। इस दिशा में हम एक मजबूत नेटवर्क भी खड़ा करने वाले हैं।”

“2036 के ओलंपिक को देखते हुए देश के गांवों से लेकर शहरों तक टैलेंट हंट का एक बड़ा अभियान चलाया जाएगा। इसके तहत 5 से 15 साल के बच्चों की खेल प्रतिभा को स्पेशल ट्रेनिंग से निखारा जाएगा।”

“ಬಿಕ್ಕಟ್ಟಿನ ಸಮಯದಲ್ಲಿ ಭಾರತದ ನಿಜವಾದ ಶಕ್ತಿಯನ್ನು ಪರೀಕ್ಷಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭ, ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದ ಪರಿಸ್ಥಿತಿಯವರೆಗೆ, ಭಾರತದ ಬಗ್ಗೆ ಅನೇಕ ಹಿಂಜರಿಕೆಗಳಿದ್ದವು. ಆದರೆ, ಕಳೆದ ದಶಕದಲ್ಲಿ ಭಾರತವು ಪಡೆದಿರುವ ಸಾಮರ್ಥ್ಯಗಳು ಈ ಎಲ್ಲಾ ಆತಂಕಗಳನ್ನು ತಪ್ಪು ಎಂದು ಸಾಬೀತುಪಡಿಸಲು ನಮಗೆ ಪೂರಕವಾಗಿವೆ. ಯಾವುದೇ ರೀತಿಯ ಒತ್ತಡದ ಪೂರ್ಣ ಪರಿಣಾಮದಿಂದ ಬಡ ಕುಟುಂಬಗಳು ಮತ್ತು ರೈತರನ್ನು ರಕ್ಷಿಸಲು ನಾವು ಸದಾ ಕಾರ್ಯನಿರ್ವಹಿಸಿದ್ದೇವೆ. ನಮ್ಮ ಸನ್ನದ್ಧತೆಯು ಅನಿಶ್ಚಿತ ಜಗತ್ತನ್ನು ಎದುರಿಸುವ ನಮ್ಮ ಸಾಮರ್ಥ್ಯವನ್ನು ಬಲಪಡಿಸಿದೆ.”

“आज भारत के पास स्थिर Political Mandate, स्थिर सरकार, वाइब्रेंट लोकतंत्र, मजबूत न्याय तंत्र और हम सबको दिशा देने वाला संविधान है। इसीलिए दुनियाभर में आज भारत का सम्मान तेजी से बढ़ रहा है।”

“देश को शक्ति की इस सप्तधारा से नई गति और नई ऊंचाई मिलने वाली है:

 

  1. मैन्युफैक्चरिंग पावर

 

  1. कृषि और फूड प्रोसेसिंग

 

  1. टेक्नोलॉजी और इनोवेशन

 

  1. गतिशक्ति

 

  1. रक्षा शक्ति

 

  1. ग्रीन इकोनॉमी और ब्लू इकोनॉमी

 

  1. सॉफ्ट पावर”

“देश की मातृशक्ति को नमन करते हुए सभी राजनीतिक दलों से मैं एक बार फिर आग्रह करता हूं कि वे महिला आरक्षण को जल्द से जल्द लागू कराने के लिए आगे आएं।”

“देश की पहली डिजिटल जनगणना को लेकर सभी देशवासियों, विशेषकर युवा साथियों से मेरा यह विनम्र आग्रह…”

“समय हमारा है, अवसर हमारा है, संकल्प हमारा है… आओ, मिलकर विकसित भारत बनाएं।”

 

*****