Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ 80ನೇ ಸ್ವಾತಂತ್ರ್ಯೋತ್ಸವಕ್ಕೆ ಆತ್ಮೀಯವಾಗಿ ಶುಭ ಕೋರಿದ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಕೃತಜ್ಞತೆ


ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಶುಭಾಶಯ ಕೋರಿದ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ವಿಶ್ವೆದೆಲ್ಲೆಡೆಗಳಿಂದ ಸ್ವೀಕೃತವಾದ ಸಂದೇಶಗಳಿಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಭೂತಾನ್ ಪ್ರಧಾನಮಂತ್ರಿ ಶೆರಿಂಗ್ ಟೊಬಗೆ ಅವರ ಟ್ವೀಟ್ ಗೆ ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ:

“ಪ್ರಧಾನಮಂತ್ರಿ ಶೆರಿಂಗ್ ಟೊಬಗೆ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಭೂತಾನ್ ನೊಂದಿಗಿನ ನಮ್ಮ ವಿಶೇಷ ಮತ್ತು ಶಾಶ್ವತ ಪಾಲುದಾರಿಕೆಯನ್ನು ನಾವು ಅಪಾರವಾಗಿ ಗೌರವಿಸುತ್ತೇವೆ, ಅದು ಉಭಯ ದೇಶಗಳ ಬಲದೊಂದಿಗೆ ಮುಂದುವರಿಯುತ್ತಿದೆ.”

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ಲೋವಾಕಿಯಾದ ಅಧ್ಯಕ್ಷರಾದ ಪೀಟರ್ ಪೆಲ್ಲೆಗ್ರಿನಿ ಅವರಿಗೆ ಎಕ್ಸ್ ನಲ್ಲಿ ಹೀಗೆ ಧನ್ಯವಾದ ಸಮರ್ಪಿಸಿದ್ದಾರೆ:
 
“ಅಧ್ಯಕ್ಷರಾದ ಪೆಲ್ಲೆಗ್ರಿನಿ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಭಾರತ ಮತ್ತು ಸ್ಲೋವಾಕಿಯಾ ನಡುವಿನ ಸಮಗ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಎದುರು ನೋಡುತ್ತಿದ್ದೇವೆ.”

ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷರಾದ ಡಾ. ಮೊಹಮ್ಮದ್ ಮುಯಿಝು ಅವರೊಂದಿಗೆ ಹೀಗೆ ಹಂಚಿಕೊಂಡಿದ್ದಾರೆ:

“ಅಧ್ಯಕ್ಷರಾದ ಮುಯಿಝು ಅವರೇ, ನಿಮ್ಮ ಆತ್ಮೀಯ ಶುಭ ಹಾರೈಕೆಗಳಿಗೆ ಧನ್ಯವಾದಗಳು. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಮೈತ್ರಿಯ ಬಂಧಗಳು ಸದೃಢವಾಗಿ ಬೆಳೆಯುತ್ತಲೇ ಇರಲಿ.”

ಫ್ರಾನ್ಸ್ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಎಕ್ಸ್ ನಲ್ಲಿ ಹಂಚಿಕೊಂಡಿರುವ ಟ್ವೀಟ್‌ ನಲ್ಲಿ ಪ್ರಧಾನಮಂತ್ರಿ ಹೀಗೆ ಧನ್ಯವಾದ ಅರ್ಪಿಸಿದ್ದಾರೆ:

 “ನನ್ನ ಸ್ನೇಹಿತರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು!”

ಪ್ರಧಾನಮಂತ್ರಿ ಮೋದಿ ಅವರು ಎಕ್ಸ್ ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ನಲ್ಲಿ ನೇಪಾಳದ ಪ್ರಧಾನಮಂತ್ರಿ ಬಾಲೇಂದ್ರ ಶಾ ಅವರಿಗೆ ನೀಡಿರುವ ಪ್ರತಿಕ್ರಿಯೆ ಹೀಗಿದೆ:

“ಪ್ರಧಾನಮಂತ್ರಿ ಬಾಲೇಂದ್ರ ಶಾ ಅವರೇ, ನಿಮ್ಮ ಆತ್ಮೀಯ ಶುಭ ಹಾರೈಕೆಗಳಿಗೆ ಧನ್ಯವಾದಗಳು. ನಮ್ಮ ರಾಷ್ಟ್ರಗಳ ಜನರ ಪರಸ್ಪರ ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಭಾರತ ಮತ್ತು ನೇಪಾಳ ನಡುವಿನ ಬಹುಮುಖಿ ಮತ್ತು ಪ್ರಾಚೀನ ನಾಗರಿಕತೆಯ ಬಂಧವನ್ನು ಮತ್ತಷ್ಟು ಬಲಪಡಿಸಲು ನಾವು ಒಟ್ಟಾಗಿ ಕಾರ್ಯನಿರ್ವಹಿಸಲು ಬದ್ಧರಾಗಿದ್ದೇವೆ.”

ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹಂಚಿಕೊಂಡ ಸಂದೇಶದಲ್ಲಿ ನೇಪಾಳದ ಮಾಜಿ ಉಪಪ್ರಧಾನಿ ರಬಿ ಲಾಮಿಚಾನೆ ಅವರಿಗೆ ನೀಡಿರುವ ಪ್ರತಿಕ್ರಿಯೆ ಹೀಗಿದೆ:

“ರಬಿ ಲಮಿಚಾನೆ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಪರಸ್ಪರ ಪ್ರಗತಿ ಮತ್ತು ಸಮೃದ್ಧಿಗಾಗಿ ಭಾರತ ಮತ್ತು ನೇಪಾಳ ನಡುವಿನ ಅಗಾಧ ಸ್ನೇಹ ಬಾಂಧವ್ಯವನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ.”

ಸೈಪ್ರಸ್ ಅಧ್ಯಕ್ಷರಾದ ನಿಕೋಸ್ ಕ್ರಿಸ್ಟೊಡೌಲಿಡ್ಸ್ ಅವರಿಗೆ ಎಕ್ಸ್ ನಲ್ಲಿ ಪ್ರಧಾನಮಂತ್ರಿಗಳು ನೀಡಿರುವ ಪ್ರತಿಕ್ರಿಯೆ ಹೀಗಿದೆ:

“ಅಧ್ಯಕ್ಷರಾದ ಕ್ರಿಸ್ಟೊಡೌಲಿಡ್ಸ್ ಅವರೇ, ನಿಮ್ಮ ಆತ್ಮೀಯ ಶುಭ ಹಾರೈಕೆಗಳಿಗೆ ಧನ್ಯವಾದಗಳು. ನಮ್ಮ ನಿಕಟ ಮತ್ತು ವ್ಯಾಪಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕಾರ್ಯನಿರ್ವಹಿಸಲು ನಾವು ಎದುರು ನೋಡುತ್ತಿದ್ದೇವೆ.”

ಗಯಾನಾ ಅಧ್ಯಕ್ಷರಾದ ಡಾ. ಇರ್ಫಾನ್ ಅಲಿ ಅವರ ಸಂದೇಶಕ್ಕೆ ಪ್ರತಿಯಾಗಿ ಎಕ್ಸ್ ನಲ್ಲಿ ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ: 

“ಅಧ್ಯಕ್ಷರಾದ ಡಾ. ಇರ್ಫಾನ್ ಅಲಿ ಅವರೇ, ನಿಮ್ಮ ಆತ್ಮೀಯ ಶುಭ ಹಾರೈಕೆಗಳಿಗೆ ಧನ್ಯವಾದಗಳು. ಗಯಾನಾದೊಂದಿಗಿನ ಮೈತ್ರಿ ಹಾಗೂ ಇತಿಹಾಸ ಮತ್ತು ಹಂಚಿತ ಮೌಲ್ಯಗಳಲ್ಲಿ ಬೇರೂರಿರುವ ನಮ್ಮ ಜನರ ನಡುವಿನ ನಿಕಟ ಬಾಂಧವ್ಯವನ್ನು ಗೌರವಿಸುತ್ತೇವೆ. ನಮ್ಮ ಜನರ ಅನುಕೂಲಕ್ಕಾಗಿ ನಮ್ಮ ನಡುವಿನ ಪಾಲುದಾರಿಕೆ ವರ್ಧಿಸುತ್ತಲಿರಲಿ.”

ಶ್ರೀ ಮೋದಿ ಅವರು ಇಸ್ರೇಲ್ ಅಧ್ಯಕ್ಷರಾದ ಐಸಾಕ್ ಹರ್ಜೋಗ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಎಕ್ಸ್‌ ನಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ ಅವರು ಹೀಗೆ ಹೇಳಿದ್ದಾರೆ: “ಅಧ್ಯಕ್ಷರಾದ ಹರ್ಜೋಗ್ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಇಸ್ರೇಲ್ ನೊಂದಿಗಿನ ಸ್ನೇಹವನ್ನು ಭಾರತ ಅಪಾರವಾಗಿ ಗೌರವಿಸುತ್ತದೆ. ನಮ್ಮ ಜನರ ಅನುಕೂಲಕ್ಕಾಗಿ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ.”

ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ಎಕ್ಸ್ ನಲ್ಲಿ ಹಂಚಿಕೊಂಡಿರುವ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರ ಪ್ರತಿಕ್ರಿಯೆ ಹೀಗಿದೆ: “ಪ್ರಧಾನಮಂತ್ರಿ ನೆತನ್ಯಾಹು ಅವರೇ ನಿಮ್ಮ ಆತ್ಮೀಯ ಶುಭ ಹಾರೈಕೆಗಳಿಗೆ ವಂದನೆಗಳು. ಭಾರತ-ಇಸ್ರೇಲ್ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಇನ್ನಷ್ಟು ಸದೃಢವಾಗುತ್ತಾ ಹೊಸ ಅವಕಾಶಗಳನ್ನು ತೆರೆಯಲಿ ಮತ್ತು ನಮ್ಮ ರಾಷ್ಟ್ರಗಳ ನಡುವಿನ ಜನರೊಂದಿಗೆ ಗಾಢ ಸಂಪರ್ಕ ಬೆಸೆಯಲಿ.” 

ಪ್ರಧಾನಮಂತ್ರಿ ಮೋದಿ ಅವರು ಎಕ್ಸ್ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಜಮೈಕಾದ ಪ್ರಧಾನಮಂತ್ರಿ ಆಂಡ್ರ್ಯೂ ಹೋಲ್ನೆಸ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ:

“ಪ್ರಧಾನಮಂತ್ರಿ ಆಂಡ್ರ್ಯೂ ಹೋಲ್ನೆಸ್ ಅವರೇ, ನಿಮ್ಮ ಆತ್ಮೀಯ ಶುಭ ಹಾರೈಕೆಗೆ ಧನ್ಯವಾದಗಳು. ಭಾರತವು ಜಮೈಕಾದೊಂದಿಗಿನ ತನ್ನ ನಿರಂತರ ಸ್ನೇಹವನ್ನು ಬಹುವಾಗಿ ಗೌರವಿಸುತ್ತದೆ ಹಾಗೂ ನಮ್ಮ ವಿಶೇಷ ಮತ್ತು ನಿಕಟ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿದೆ.”

 

*****