Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನ ತಂತ್ರಜ್ಞಾನದ ಉನ್ನತ ಕಾಲೇಜುಗಳ ನಡುವಿನ ತಿಳಿವಳಿಕೆ ಒಪ್ಪಂದದ ನವೀಕರಣಕ್ಕೆ ಮತ್ತು 2011ರಲ್ಲಿ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐ.ಸಿ.ಎ.ಐ.) ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನ ತಂತ್ರಜ್ಞಾನದ ಉನ್ನತ ಕಾಲೇಜು (ಎಚ್.ಸಿ.ಟಿ.)ಗಳೊಂದಿಗಿನ ತಿಳಿವಳಿಕೆ ಒಪ್ಪಂದದ ನವೀಕರಣಕ್ಕೆ ಮತ್ತು 2011ರಲ್ಲಿ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಯು.ಎ.ಇ.ಯ ಎಚ್.ಸಿ.ಟಿಯೊಂದಿಗಿನ ತಿಳಿವಳಿಕೆ ಒಪ್ಪಂದದ ನವೀಕರಣವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:-

1. ಲೆಕ್ಕ ಮತ್ತು ಹಣಕಾಸಿಗೆ ಸಂಬಂಧಿಸಿದಂತೆಎಚ್.ಸಿ.ಟಿ.ಯ ಪ್ರಸಕ್ತ ಪಠ್ಯಕ್ರಮಕ್ಕೆ ಅನುಗುಣವಾಗಿ ಎಚ್.ಸಿ.ಟಿ.ಗೆ ಐ.ಸಿ.ಎ.ಐ. ತಾಂತ್ರಿಕ ನೆರವು ಒದಗಿಸುತ್ತದೆ;

2. . ಐ.ಸಿ.ಎ.ಐನಲ್ಲಿ ಸದಸ್ಯತ್ವ ಪಡೆಯುವ ಗುರಿಯೊಂದಿಗೆ ಎಚ್.ಸಿ.ಟಿ. ವಿದ್ಯಾರ್ಥಿಗಳಿಗೆ ಐಸಿಎಐನ ತಾಂತ್ರಿಕ ವೃತ್ತಿಪರ ಪರೀಕ್ಷೆಗಳನ್ನು ಬರೆಯಲು ಅನುಕೂಲವಾಗುವಂತೆ ಐ.ಸಿ.ಎ.ಐ. ಹೊಸ/ಪರಿಷ್ಕೃತ ಕೋರ್ಸ್ ಮತ್ತು ವಿಧಾನಗಳನ್ನು ಪರಿಚಯಿಸಲಿದೆ;

3. ಅರ್ಹತೆ ಪಡೆದ ಎಚ್.ಸಿ.ಟಿ. ವಿದ್ಯಾರ್ಥಿಗಳಿಗೆ ಐ.ಸಿ.ಎ.ಐನ ವೃತ್ತಿಪರ ಪರೀಕ್ಷೆ ನಡೆಸಲು ಐ.ಸಿ.ಎ.ಐ ತಾಂತ್ರಿಕ ನೆರವು ಒದಗಿಸಲಿದೆ;

4. ಎಚ್.ಸಿ.ಟಿ. ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗಾಗಿ ವಿಚಾರಸಂಕಿರಣ ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸಿಲು ಐ.ಸಿ.ಎ.ಐ ಸಹಯೋಗ ನೀಡುತ್ತದೆ;

5. ಪರಸ್ಪರ ಒಪ್ಪಿಗೆಯ ಆಧಾರದ ಮೇಲೆ ತಜ್ಞತೆ ಹೊಂದಿದ ಸೂಕ್ತ ಪೂರಕ ಬೋಧಕರನ್ನು ಐ.ಸಿ.ಎ.ಐ ಒದಗಿಸುತ್ತದೆ;

6. ಎಚ್.ಸಿ.ಟಿ. ವಿದ್ಯಾರ್ಥಿಗಳಿಗಾಗಿ ಐ.ಸಿ.ಎ.ಐ ಪ್ರಮಾಣಪತ್ರ ನೀಡುವ ಕೋರ್ಸ್ ಗಳನ್ನೂ ಪೂರೈಸುತ್ತದೆ;

7. ಐ.ಸಿ.ಎ.ಐಗೆ ವೃತ್ತಿಪರ ಮತ್ತು ತಾಂತ್ರಿಕ ಪರೀಕ್ಷೆ ನಡೆಸಲು ಎಚ್.ಸಿ.ಟಿ. ಸಕಲ ಸೌಕರ್ಯ ಒದಗಿಸುತ್ತದೆ;

8. ಎಚ್.ಸಿ.ಟಿ. ಮತ್ತು ಐ.ಸಿ.ಎ.ಐ. ಬೋಧಕರ ಮತ್ತು ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತದೆ;

9. ಯು.ಎ.ಇ.ಯ ವಿವಿಧ ಎಚ್.ಸಿ.ಟಿ. ಕಾಲೇಜುಗಳಲ್ಲಿ ವೃತ್ತಿಪರ ಅಭಿವೃದ್ಧಿ ಮತ್ತು ತಾಂತ್ರಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ ಮತ್ತು ಸಮಾವೇಶಆಯೋಜಿಸಲು ಎಚ್.ಸಿ.ಟಿ. ಮತ್ತು ಐ.ಸಿ.ಎ.ಐಗಳು ಸಹಯೋಗ ವಹಿಸುತ್ತವೆ. ಎಚ್.ಸಿ.ಟಿ. ಅಂಥ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ಒದಗಿಸುತ್ತದೆ ಮತ್ತು ತನ್ನ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಅಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತದೆ;

10. ಐ.ಸಿ.ಎ.ಐ ಮತ್ತು ಎಚ್.ಸಿ.ಟಿ.ಗಳು ಅಕೌಂಟಿಂಗ್ ಮತ್ತು ಹಣಕಾಸು ಹಾಗೂ ಲೆಕ್ಕ ಪರಿಶೋಧನೆಗಳಲ್ಲಿ ಅಲ್ಪಾವಧಿಯ ವೃತ್ತಿಪರ ಕೋರ್ಸ್ ಗಳನ್ನು ಯು.ಎ.ಐ.ಯಲ್ಲಿ ಎಚ್.ಸಿ.ಟಿ.ಯ ಅನ್ವಯಿಕ ಸಂಶೋಧನೆ ಮತ್ತು ತರಬೇತಿಯ ಪ್ರಾವಿಣ್ಯತೆ ಕೇಂದ್ರ (ಸಿಇ.ಆರ್.ಟಿ.)ಗಳಲ್ಲಿ ನಡೆಸಲು ಸಹಯೋಗ ನೀಡುತ್ತವೆ.

ಈ ಪ್ರಸ್ತಾವನೆಯು ಈಕ್ವಿಟಿ, ಸಾರ್ವಜನಿಕ ಹೊಣೆಗಾರಿಕೆ ಮತ್ತು ನಾವಿನ್ಯತೆಯ ಗುರಿಗಳನ್ನು ಉತ್ತಮಪಡಿಸುವುದನ್ನು ಅಪೇಕ್ಷಿಸುತ್ತದೆ.

ಹಿನ್ನೆಲೆ:

ಐ.ಸಿ.ಎ.ಐ. ಭಾರತದಲ್ಲಿ ಚಾರ್ಟರ್ಡ್ ಅಟೌಂಟೆನ್ಸಿ ವೃತ್ತಿಯನ್ನು ನಿಯಂತ್ರಿಸಲು ಸಂಸತ್ತಿನಲ್ಲಿ ಅನುಮೋದನೆಗೊಂಡ ಚಾರ್ಟರ್ಡ್ ಅಕೌಂಟೆಂಟರುಗಳ ಕಾಯಿದೆ 1949ರ ಅಡಿಯಲ್ಲಿ ಸ್ಥಾಪಿತವಾದ ಶಾಸನಾತ್ಮಕ ಕಾಯವಾಗಿದೆ. ಯು.ಎ.ಇ.ಯ ಎಚ್.ಸಿ.ಟಿ ಅಬುದಾಬಿ, ಎಲ್ ಐನ್, ದುಬೈ, ಫುಜೈರಾ, ಮದೀನತ್ ಜಾಯೆದ್, ರಾಸ್ ಅಲ್ ಖೈಮ್ಹಾ, ರುವೈಸ್ ಮತ್ತು ಶಾರ್ಜಾದಲ್ಲಿ 17 ಆಧುನಿಕ, ತಂತ್ರಜ್ಞಾನದಿಂದ ಕೂಡಿದ ಸಂಕೀರ್ಣದಲ್ಲಿರುವ 23 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 2 ಸಾವಿರ ಸಿಬ್ಬಂದಿ ಒಳಗೊಂಡ ಸಮುದಾಯವಾಗಿದ್ದು, ಸಂಯುಕ್ತ ಅರಬ್ ಎಮಿರೇಟ್ಸ್ (ಯು.ಎ.ಇ.)ಯಲ್ಲೇ ಅತಿ ದೊಡ್ಡ ಉನ್ನತ ಶಿಕ್ಷಣ ಸಂಸ್ಥೆಯಾಗಿದೆ. ಎಚ್.ಸಿಟಿ. ತಾಂತ್ರಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಮೀಣಿಕವಾಗಿ ಎಲ್ಲರಿಗೂ ನಂಬಿಕೆಯ ಮತ್ತು ಮೌಲ್ಯಯುತ ಅತ್ಯುನ್ನತ ಗುಣಮಟ್ಟದ ಮತ್ತು ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆಯುವಂಥ ದೃಷ್ಟಿಯ ಹಾಗೂ ಮನ್ನಣೆಯುಕ್ತವಾದ ತಾಂತ್ರಿಕ ಮತ್ತು ವೃತ್ತಿಪರ ತೃತೀಯ ಶಿಕ್ಷಣವನ್ನು ಒದಗಿಸುವ ಕಾರ್ಯ ಮಾಡುತ್ತಿದೆ. ಎಚ್.ಸಿ.ಟಿ.ಯ ಮಹೋದ್ದೇಶ ಪ್ರಮುಖ ಶಿಕ್ಷಣದಲ್ಲಿ ಮೂಲಭೂತ ಆಧಾರಸ್ತಂಭವಾಗಬೇಕು ಮತ್ತು ಆಧುನಿಕ ರಾಷ್ಟ್ರ ನಿರ್ಮಾಣ ಮಾಡಬೇಕು ಎಂಬುದಾಗಿದೆ.

ಐ.ಸಿ.ಎಐ ಮತ್ತು ಯುಎಇಯ ಎಚ್.ಸಿ.ಟಿ. ನಡುವಿನ ತಿಳಿವಳಿಕೆ ಒಪ್ಪಂದವನ್ನು ನವೀಕರಿಸಲು ಎಚ್.ಸಿ.ಟಿ. ಪರಿಗಣಿಸಿದ್ದು, ಯುಎಇಯಲ್ಲಿ ಈ ತಿಳಿವಳಿಕೆ ಒಪ್ಪಂದದ ಮೂಲಕ ಅಕೌಂಟಿಂಗ್, ಫೈನಾನ್ಷಿಯಲ್ ಮತ್ತು ಆಡಿಟ್ ಜ್ಞಾನ ನೆಲೆಯನ್ನು ಬಲವಡಿಸಲು ಒಗ್ಗೂಡಿ ಶ್ರಮಿಸಲಿದೆ. ಎಚ್.ಸಿ.ಟಿ.ಯೊಂದಿಗಿನ ಈ ತಿಳಿವಳಿಕೆ ಒಪ್ಪಂದಕ್ಕೆ 2011ರ ಜನವರಿ 4ರಂದು ಐದು ವರ್ಷಗಳ ಅವಧಿಗೆ ಅಂಕಿತ ಹಾಕಲಾಗಿತ್ತು.

AKT/VBA/SH