Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ನೆಲದಲ್ಲಿ ಭಯೋತ್ಪಾದನೆ /ಕೋಮು /ಎಡ ಪಂಥೀಯ ವಿಧ್ವಂಸಕತೆಯ ಹಿಂಸಾಚಾರ ಮತ್ತು ಗಡಿಯಾಚೆಗಿನ ಗುಂಡಿನ ದಾಳಿ ಮತ್ತು ಗಣಿ /ಐಇಡಿ ಸ್ಫೋಟಗಳಿಂದ ಬಾಧಿತರಾದ ನಾಗರಿಕರಿಗೆ ನೆರವು ನೀಡುವ ಕೇಂದ್ರದ ಯೋಜನೆಗೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು “ಭಯೋತ್ಪಾದನೆ /ಕೋಮು /ಎಡ ಪಂಥೀಯ ವಿಧ್ವಂಸಕತೆಯ ಹಿಂಸಾಚಾರ ಮತ್ತು ಗಡಿಯಾಚೆಗಿನ ಗುಂಡಿನ ದಾಳಿ ಮತ್ತು ಗಣಿ /ಐಇಡಿ ಸ್ಫೋಟಗಳಿಂದ ಬಾಧಿತರಾದ ನಾಗರಿಕರಿಗೆ ನೆರವು ನೀಡುವ ಕೇಂದ್ರದ ಯೋಜನೆ ” ಅಡಿ ನೀಡಲಾಗುವ ಪರಿಹಾರದ ಅನುದಾನವನ್ನು 3 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ತನ್ನ ಅನುಮೋದನೆ ನೀಡಿದೆ. ಈ ಯೋಜನೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ:-

1. ಇದೇ ಮೊದಲ ಬಾರಿಗೆ, ಭಾರತ-ಪಾಕ್ ಗಡಿಯಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಯಿಂದ ಬಾಧಿತರಾದವರಿಗೆ ಭಯೋತ್ಪಾದನೆ ಅಥವಾ ಎಲ್.ಡಬ್ಲ್ಯು.ಇ. ಹಿಂಸಾಚಾರದಲ್ಲಿ ಮೃತಪಟ್ಟವರಿಗೆ ನೀಡುವಂತೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು.

2. ಗಡಿಯಾಚೆಗಿನ ಗುಂಡಿನ ದಾಳಿಯ ಬಾಧಿತರಿಗೆ ಪರಿಹಾರ ನೀಡುವ ಮತ್ತು ಭಯೋತ್ಪಾದನೆ ಅಥವಾ ಎಲ್.ಡಬ್ಲ್ಯುಇ ಹಿಂಸಾಚಾರಕ್ಕೆ ಬಲಿಯಾದವರಿಗೆ ನೀಡುವ ಪರಿಹಾರದ ಮೊತ್ತವನ್ನು 3 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ಬುಧವಾರ ಕೈಗೊಂಡಿದೆ.

3. ಇನ್ನು ಮುಂದೆ ಯಾವುದೇ ನಾಗರಿಕರು ದೇಶದ ಯಾವುದೇ ಭಾಗದಲ್ಲಿ ಭಯೋತ್ಪಾದಕ ದಾಳಿ, ಎಲ್.ಡಬ್ಲ್ಯು.ಇ ಹಿಂಸಾಚಾರ, ಗಡಿಯಾಚೆಗಿನ ಗುಂಡಿನ ದಾಳಿ, ಶೆಲ್ ದಾಳಿ ಅಥವಾ ಐ.ಇ.ಡಿ. ಸ್ಫೋಟಕ್ಕೆ ಬಲಿಯಾದರೆ, ಸಮಾನವಾಗಿ 5 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ.

4. ಇದೇ ಕಾರಣಗಳಿಗಾಗಿ ಅಸಮರ್ಥರಾಗುವ ಅಥವಾ ಶೇ.50 ಅಥವಾ ಅದಕ್ಕಿಂತ ಹೆಚ್ಚು ದಿವ್ಯಾಂಗರಾಗುವವರಿಗೂ 5 ಲಕ್ಷ ಪರಿಹಾರ ನೀಡಲಾಗುತ್ತದೆ.

5. ಬಾಧಿತ ಕುಟುಂಬದ ಯಾವುದೇ ಸದಸ್ಯರಿಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದಲ್ಲಿ ನೌಕರಿ ನೀಡುವುದಿಲ್ಲ ಎಂಬ ಷರತ್ತಿಗೆ ಒಳಪಟ್ಟು ಈ ಪರಿಹಾರದ ಮೊತ್ತವನ್ನು ನೀಡಲಾಗುತ್ತದೆ.

6. ಈವರೆಗೆ ಇಂಥ ಹಿಂಸಾಚಾರಗಳಿಂದ ಶಾಶ್ವತವಾಗಿ ಅಸಮರ್ಥರಾಗುವ ಅಥವಾ ಸಾವಿಗೀಡಾಗುವ ನಾಗರಿಕರ ಹತ್ತಿರದ ಬಂಧುಗಳಿಗೆ ಭಯೋತ್ಪಾದನೆ, ಕೋಮು, ನಕ್ಸಲ್ ಹಿಂಸಾಚಾರದಲ್ಲಿ ಬಲಿಯಾದ ನಾಗರಿಕರಿಗೆ ನೆರವು ನೀಡುವ ಕೇಂದ್ರ ಯೋಜನೆ 2008ರ ಅನ್ವಯ 3 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುತ್ತಿತ್ತು. ಕೇಂದ್ರ ಸರ್ಕಾರ ಜಾರಿಮಾಡಿರುವ ಇದೇ ಸ್ವರೂಪದ ಯೋಜನೆಯ ಹೊರತಾಗಿ, ಪರಿಹಾರದ ಮೊತ್ತ ಅಥವಾ ಸರ್ಕಾರದಿಂದ ಯಾವುದೇ ರೀತಿಯ ಪರಿಹಾರ ಅಥವಾ ಇನ್ನಾವುದೇ ಮೂಲದಿಂದ ಅವರು ಇನ್ನಾವುದೇ ರೀತಿಯ ನೆರವನ್ನು ಪಡೆದಿದ್ದಾಗ್ಯೂ ಈ ಕುಟುಂಬಗಳಿಗೆ ಯೋಜನೆಯ ಅಡಿಯಲ್ಲಿ ನೆರವು ಪಡೆಯಲು ಅರ್ಹತೆ ಇರುತ್ತಿತ್ತು. 2008ರಲ್ಲಿ ಈ ಯೋಜನೆ ಜಾರಿಯಾದ ದಿನದಿಂದ ಈವರೆಗೆ ಸರ್ಕಾರ 35.89 ಕೋಟಿ ರೂಪಾಯಿಗಳಿ ಪರಿಹಾರವನ್ನು ಸರ್ಕಾರ ವಿತರಿಸಿದೆ.

ಹಿನ್ನೆಲೆ:

23.10.2014ರಂದು ಪ್ರಧಾನಮಂತ್ರಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಗಡಿಯಾಚೆಗಿನ ಗುಂಡಿನ ದಾಳಿಗೆ ಬಲಿಯಾದರವ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ಪರಿಹಾರ ನೀಡುವ ವಿಷಯ ಪ್ರಸ್ತಾಪವಾಗಿತ್ತು. ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಗಡಿ ಪ್ರದೇಶದಲ್ಲಿ ಬದುಕುತ್ತಿರುವ ಭಾರತೀಯ ನಾಗರಿಕರು ಪದೇ ಪದೇ ನಡೆಯುವ ಕದನ ವಿರಾಮ ಉಲ್ಲಂಘನೆ ಅದರಲ್ಲೂ ಪಾಕಿಸ್ತಾನಕ್ಕೆ ಹೊಂದಿಕೊಂಡ ಜಮ್ಮು ಮತ್ತು ಕಾಶ್ಮೀರದ ವಾಯವ್ಯ ಭಾಗದಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಸುಮಾರು 770 ಕಿಲೋ ಮೀಟರ್ ಉದ್ದದ ಗಡಿ ನಿಯಂತ್ರಣ ರೇಖೆ (ಎಲ್.ಓ.ಸಿ.) ಮತ್ತು 220 ಕಿಲೋ ಮೀಟರ್ ಉದ್ದದ ಅಂತಾರಾಷ್ಟ್ರೀಯ ಗಡಿಯಲ್ಲಿ ಪದೆ ಪದೇ ಕದನ ವಿರಾಮ ಉಲ್ಲಂಘನೆ ಆಗುತ್ತಿದೆ ಮತ್ತು 1990ರಿಂದ ಭಯೋತ್ಪಾದಕರ ಒಳ ನುಸುಳುವಿಕೆ ಹೆಚ್ಚಿದೆ. 2015ರವರೆಗೆ 13921 ನಾಗರಿಕರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಈ ನಾಗರಿಕರು ಅನುಭವಿಸುತ್ತಿರುವ ತೊಂದರೆಯ ಹಿನ್ನೆಲೆಯಲ್ಲಿ, ಸರ್ಕಾರ ಗಡಿಯಾಚೆಗಿನ ದಾಳಿಗೆ ಬಲಿಯಾದವರನ್ನೂ ಯೋಜನೆ ವ್ಯಾಪ್ತಿಗೆ ತರಲು ನಿರ್ಧರಿಸಿದೆ.

*****