Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಜಪಾನಿನ ಏರೋ ಸ್ಪೇಸ್ ಎಕ್ಸ್ ಪ್ಲೊರೇಷನ್ ಸಂಸ್ಥೆ (ಜೆಎಎಕ್ಸ್ಎ) ನಡುವೆ ಬಾಹ್ಯಾಕಾಶ ಕ್ಷೇತ್ರದ ಸಹಕಾರದ ತಿಳಿವಳಿಕೆ ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಜಪಾನೀಸ್ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ ಏಜೆನ್ಸಿ (ಜೆಎಎಕ್ಸ್ಎ) ನಡುವೆ ಬಾಹ್ಯಾಕಾಶ ಕ್ಷೇತ್ರದ ಸಹಕಾರಕ್ಕಾಗಿ ಟೋಕಿಯೋದಲ್ಲಿ 2016ರ ನವೆಂಬರ್ 11ರಂದು ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರ ನೀಡಲಾಯಿತು.

ಎರಡೂ ದೇಶಗಳಿಗೆ ಅನ್ವಯವಾಗುವ ಕಾನೂನು ಮತ್ತು ನಿಯಮಗಳಂತೆ ಹಾಗೂ ಅವುಗಳ ಅಂತಾರಾಷ್ಟ್ರೀಯ ಬಾಧ್ಯತೆಗಳಿಗೆ ಅನುಗುಣವಾಗಿ ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಕ್ಕಾಗಿಯೇ ಬಳಕೆ ಮಾಡುವ ಮತ್ತು ಬಳಸಿಕೊಳ್ಳುವ ಭವಿಷ್ಯದ ಸಹಕಾರ ಚಟುವಟಿಕೆ ಈ ತಿಳಿವಳಿಕೆ ಒಪ್ಪಂದದ ಉದ್ದೇಶವಾಗಿದೆ.

ಈ ತಿಳಿವಳಿಕೆ ಒಪ್ಪಂದವು ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನ ಮತ್ತು ಭೂ ಅವಲೋಕನ, ಉಪಗ್ರಹ ಸಂವಹನ ಮತ್ತು ಪಥದರ್ಶಕದಂಥ ಆನ್ವಯಿಕಗಳು; ಪರಿಶೋಧನೆ ಮತ್ತು ಬಾಹ್ಯಾಕಾಶ ವಿಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ (ಬಾಹ್ಯಾಕಾಶ ವ್ಯವಸ್ಥೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ); ಮತ್ತು ಬಾಹ್ಯಾಕಾಶ ಕೈಗಾರಿಕೆ ಉತ್ತೇಜನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಅವಕಾಶ ಒದಗಿಸುತ್ತದೆ.

ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಲಿಖಿತವಾಗಿ ಅವರು ನಿರ್ಧರಿಸದ ಹೊರತು ಇಸ್ರೋ ಮತ್ತು ಜೆಎಕ್ಸ್ಎಗಳು ತಮ್ಮ ತಮ್ಮ ಚಟುವಟಿಕೆಗಳ ವೆಚ್ಚವನ್ನು ಭರಿಸುತ್ತವೆ. ಈ ತಿಳಿವಳಿಕೆ ಒಪ್ಪಂದ ಮತ್ತು ತಮ್ಮ ತಮ್ಮ ಹೂಡಿಕೆಯ ಪ್ರಕ್ರಿಯೆ, ಸೂಕ್ತ ನಿಧಿಯ ಲಭ್ಯತೆ ಮತ್ತು ತಮ್ಮ ರಾಷ್ಟ್ರೀಯ ಕಾನೂನಿನ ಅನ್ವಯ ಅವುಗಳ ಸೂಕ್ತ ಜಾರಿಗೆ ಪ್ರತ್ಯೇಕ ಒಪ್ಪಂದಗಳ ಅಡಿಯಲ್ಲಿ ತಮ್ಮ ತಮ್ಮ ಪಾತ್ರ ಹಾಗೂ ಚಟುವಟಿಕೆಯನ್ನು ಪೂರ್ಣಗೊಳಿಸುವ ಸಾಮರ್ಥ್ಯವನ್ನು ತೋರುತ್ತವೆ.

ಈ ಚೌಕಟ್ಟಿನ ತಿಳಿವಳಿಕೆ ಒಪ್ಪಂದವು, ಮಾನವತೆಯ ಲಾಭಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ಆನ್ವಯಿಕಗಳ ಕ್ಷೇತ್ರದಲ್ಲಿ ಕೂಡ ಜಂಟಿ ಚಟುವಟಿಕೆಗೆ ಇಂಬು ನೀಡುತ್ತದೆ. ಇದರಿಂದಾಗಿ ದೇಶದ ಎಲ್ಲ ಪ್ರದೇಶ ಮತ್ತು ವರ್ಗಕ್ಕೂ ಲಾಭವಾಗಲಿದೆ.

ಹಿನ್ನೆಲೆ:

ಭಾರತ ಮತ್ತು ಜಪಾನ್, 5 ದಶಕಗಳಿಂದಲೂ ಬಾಹ್ಯಾಕಾಶ ಸಹಕಾರ ನೀಡುತ್ತಾ ಬಂದಿವೆ ಮತ್ತು ವಾತಾವರಣ ಅಧ್ಯಯನ, ಭೂಮಂಡಲದ ಅವಲೋಕನ ಮತ್ತು ದೂರ ಸಂವೇದಿಯ ವೈಜ್ಞಾನಿಕ ತನಿಖೆ ಕ್ಷೇತ್ರದಲ್ಲಿ ಅಧ್ಯಯನ ನಡೆಸುತ್ತಿವೆ. 2003ರಲ್ಲಿ ಜೆಎಎಕ್ಸಎ ಸ್ಥಾಪನೆಯೊಂದಿಗೆ “ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಭಾವ್ಯ ಭವಿಷ್ಯದ ಸಹಕಾರ ಪರಿಗಣನೆಗಳು ಸಂಬಂಧಿಸಿದ ವ್ಯವಸ್ಥೆ”ಗೆ 2005ರ ಅಕ್ಟೋಬರ್ ನಲ್ಲಿ ಇಸ್ರೋ/ಬಾಹ್ಯಾಕಾಶ ಇಲಾಖೆ (ಡಿಓಎಸ್) ಮತ್ತು ಜೆಎಎಕ್ಸ್ಎ ಅಂಕಿತ ಹಾಕಿದ್ದವು. ತರುವಾಯ ಎರಡೂ ಸಂಸ್ಥೆಗಳು ಚಂದಿರನ ಶೋಧನೆ, ಉಪಗ್ರಹ ಪಥದರ್ಶಕ, ಖಗೋಳದ ಶೋಧನೆ ಮತ್ತು ಏಷ್ಯಾ ಪೆಸಿಫಿಕ್ ಪ್ರಾದೇಶಿಕ ಬಾಹ್ಯಾಕಾಶ ಸಂಸ್ಥೆಯ ವೇದಿಕೆ (ಎ.ಪಿ.ಆರ್.ಎಸ್.ಎ.ಎಫ್.)ಗಳ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಿವೆ.

2016ರ ಏಪ್ರಿಲ್ 5ರಂದು ಇಸ್ರೋ –ಜೆಎಎಕ್ಸ್ಎ ದ್ವಿಪಕ್ಷೀಯ ಸಭೆಯ ವೇಳೆ, ಹೆಚ್ಚಿನ ಸಹಕಾರದ ಸ್ವರೂಪಕ್ಕಾಗಿ ಎರಡೂ ಕಡೆಯವರು 2005ರ ಒಪ್ಪಂದದ ಅಂಶಗಳನ್ನು ಪರಿಷ್ಕರಿಸುವ ಅಗತ್ಯವನ್ನು ಪ್ರತಿಪಾದಿಸಿದ್ದವು. ಆ ಪ್ರಕಾರವಾಗಿ ಎರಡೂ ಕಡೆಯವರು ಬಾಹ್ಯಾಕಾಶ ಕ್ಷೇತ್ರದ ಸಹಕಾರಕ್ಕಾಗಿ ಇಸ್ರೋ ಮತ್ತು ಜೆಎಎಕ್ಸ್ಎ ನಡುವೆ ಹೊಸ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಕರಡು ಸಿದ್ಧಪಡಿಸಿದ್ದು, ಇದಕ್ಕೆ ಭಾರತದ ಪ್ರಧಾನಮಂತ್ರಿಯವರು ಜಪಾನ್ ಪ್ರವಾಸ ಕೈಗೊಂಡಿದ್ದಾಗ 2016ರ ನವೆಂಬರ್ 11ರಂದು ಟೋಕಿಯೋದಲ್ಲಿ ಅಂಕಿತ ಹಾಕಲಾಗಿತ್ತು.

*****

AKT/VBA/SH