ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಸಮಾಚಾರ ಸೇವೆ (ಐಐಎಸ್) ಗ್ರೂಪ್ ಎ ಕೇಡರ್ ಪುನಾರಚನೆಗೆ ತನ್ನ ಅನುಮೋದನೆ ನೀಡಿದೆ.
ಈ ಪುನಾರಚನೆಯು ಇತರ ಹಂತಗಳಲ್ಲಿ ಹೊಂದಿಕೆಯ ಕಡಿತದೊಂದಿಗೆ ಸರ್ವೋನ್ನತ ಮಟ್ಟದಲ್ಲಿ ಎರಡು ಹುದ್ದೆಗಳು, ಉನ್ನತ ಆಡಳಿತ ಗ್ರೇಡ್ ನಲ್ಲಿ ಐದು ಮತ್ತು ಹಿರಿಯ ಆಡಳಿತ ಗ್ರೇಡ್ ಹಂತದಲ್ಲಿ 19 ಹುದ್ದೆಗಳ ಸೇರ್ಪಡೆಯನ್ನೂ ಒಳಗೊಂಡಿದೆ. ಐಐಎಸ್ ಕೇಡರ್ ನಲ್ಲಿ ಪ್ರಸ್ತುತ ಇರುವ ನಿಶ್ಚಲತೆಯ ಸಮಸ್ಯೆಯನ್ನು ಈ ಪುನಾರಚನೆ ನಿವಾರಿಸಲಿದೆ ಮತ್ತು ಐಐಎಸ್ ಅಧಿಕಾರಿಗಳ ವೃತ್ತಿ ಭವಿಷ್ಯವನ್ನು ಸುಧಾರಿಸಲಿದೆ. ಈ ಕೇಡರ್ ಪರಾಮರ್ಶೆ ಕಸರತ್ತಿನಿಂದ ಸರ್ಕಾರಿ ಮಾಧ್ಯಮ ಮತ್ತು ಸಂವಹನದ ವಿಭಾಗದ ಉತ್ತಮ ಕಾರ್ಯನಿರ್ವಹಣೆಗೆ ಕಾರಣವಾಗಲಿದೆ.
ಸರ್ಕಾರದ ಜನಪರವಾದ ನೀತಿಗಳನ್ನು ಜನತೆಗೆ ತಲುಪಿಸಲು ನಡೆದಿರುವ ವಿಸ್ತರಣೆ ಪ್ರಯತ್ನದ ಹಿನ್ನೆಲೆಯಲ್ಲಿ ಈ ಕೇಡರ್ ಪರಾಮರ್ಶೆ ಮಾಡಲಾಗುತ್ತಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ದುಪ್ಪಟ್ಟಾಗಿರುವ ಅಂತಹ ಕ್ರಮಗಳ ಕುರಿತ ಮಾಹಿತಿಯನ್ನು ಪ್ರಸಾರ ಮಾಡುವ ಅಗತ್ಯವಿದೆ.
AKT/VBA/SH