ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಸಮುದಾಯ ಕಲ್ಯಾಣ ನಿಧಿ (ಐಸಿಡಬ್ಲ್ಯುಎಫ್) ಮಾರ್ಗಸೂಚಿಗಳ ಪರಿಷ್ಕರಣೆಗೆ ತನ್ನ ಸಮ್ಮತಿ ಸೂಚಿಸಿದೆ.
ಸಾಗರದಾಚೆಯ ಭಾರತೀಯ ಪ್ರಜೆಗಳು ಸಂಕಷ್ಟಕ್ಕೆ ಮತ್ತು ತುರ್ತುಸ್ಥಿತಿಗೆ ಸಿಲುಕಿದ ಅರ್ಹ ಪ್ರಕರಣಗಳಲ್ಲಿ ಪರೀಕ್ಷಿಸುವ ವಿಧಾನದ ಆಧಾರದ ಮೇಲೆ ನೆರವು ಒದಗಿಸುವ ಉದ್ದೇಶದೊಂದಿಗೆ 2009ರಲ್ಲಿ ಐಸಿಡಬ್ಲ್ಯುಎಫ್ ಅನ್ನು ಸ್ಥಾಪಿಸಲಾಗಿತ್ತು. ಪರಿಷ್ಕೃತ ಮಾರ್ಗಸೂಚಿಗಳು ನಿಧಿಯ ಮೂಲಕ ಕಲ್ಯಾಣ ಕ್ರಮಗಳ ಸ್ವರೂಪವನ್ನು ವಿಶಾಲ ಆಧಾರದ ಮೇಲೆ ವಿಸ್ತರಿಸುವುದನ್ನು ಬಯಸುತ್ತದೆ. ಈ ಮಾರ್ಗಸೂಚಿಗಳು ಮೂರು ಪ್ರಮುಖ ಅಂಶಗಳು ಅಂದರೆ, ಸಂಕಷ್ಟದ ಸ್ಥಿತಿಯಲ್ಲಿರುವ ಸಾಗರೋತ್ತರ ಭಾರತೀಯ ಪ್ರಜೆಗಳಿಗೆ ನೆರವು, ಸಮುದಾಯ ಕಲ್ಯಾಣ ಚಟುವಟಿಕೆಗಳು ಮತ್ತು ರಾಯಭಾರ ಸೇವೆಗಳ ಸುಧಾರಣೆಯನ್ನು ಒಳಗೊಂಡಿರುತ್ತದೆ. ಸಾಗರೋತ್ತರ ಭಾರತೀಯ ಪ್ರಜೆಗಳು ನೆರವು ಕೋರಿದಾಗ ಅದಕ್ಕೆ ತ್ವರಿತವಾಗಿ ಸ್ಪಂದಿಸಲು ವಿದೇಶದಲ್ಲಿನ ಭಾರತೀಯ ಮಿಷನ್ ಗಳಿಗೆ ಮತ್ತು ಪೋಸ್ಟ್ಸ್ ಗಳಿಗೆ ಹೆಚ್ಚಿನ ನಮ್ಯತೆಯನ್ನು ಒದಗಿಸುತ್ತದೆ.
ಐ.ಸಿ.ಡಬ್ಲ್ಯು.ಎಫ್. ಭಾರತೀಯ ಪ್ರಜೆಗಳಿಗೆ ನೆರವು ಒದಗಿಸುವುದರ ಜೊತೆಗೆ, ಲಿಬಿಯಾ, ಇರಾಕ್, ಯೆಮನ್, ದಕ್ಷಿಣ ಸೂಡಾನ್ ಮತ್ತು 2013 ರಲ್ಲಿ ಸೌದಿ ಅರೇಬಿಯಾ ಸಾಮ್ರಾಜ್ಯದ ನೈಟಾಖಾಟ್ ಕಾರ್ಯಾಚರಣೆಯ ವೇಳೆ ದಾಖಲೆ ರಹಿತ ಭಾರತೀಯ ಕಾರ್ಮಿಕರಿಗೆ ಮತ್ತು 2017 ರಲ್ಲಿ ನಡೆಯುತ್ತಿರುವ ಕ್ಷಮಾದಾನದ ಕಾರ್ಯಾಚರಣೆಯಂಥ ಇತರ ತುರ್ತಾಗಿ ತೆರವುಗೊಳಿಸುವ ಸವಾಲಿನ ಸಂದರ್ಭಗಳಲ್ಲಿ ಮಹತ್ವದ ಬೆಂಬಲ ನೀಡುತ್ತದೆ.
ನಿಧಿಯ ಮೂಲಕ ಈ ಸ್ಥಳಾಂತರ ಮತ್ತು ನೆರವು ಒದಗಿಸುವ ಪ್ರಮಾಣ ಮತ್ತು ವೇಗವು ಸಾರ್ವತ್ರಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಇದು ಸಾಗರದಾಚೆಯ ವಲಸೆ ಕಾರ್ಮಿಕರಿಗೆ ತುರ್ತು ಸಮಯದಲ್ಲಿ ಭಾರತದಿಂದ ಬೆಂಬಲ ದೊರಕುತ್ತದೆ ಎಂಬ ನಿರೀಕ್ಷೆಯ ಬಗ್ಗೆ ವಿಶ್ವಾಸವನ್ನೂ ಮೂಡಿಸಿದೆ.
ಐ.ಸಿ.ಡಬ್ಲ್ಯು.ಎಫ್. ವಿದೇಶದಲ್ಲಿನ ಎಲ್ಲ ಭಾರತೀಯ ಮಿಷನ್ಸ್ (ಅಭಿಯಾನ)ಗಳಿಗೆ ಮತ್ತು ಪೋಸ್ಟ್ಸ್ ಗಳಿಗೆ ವಿಸ್ತರಣೆಯಾಗಿದೆ ಹಾಗೂ ಇದಕ್ಕೆ ವಿದೇಶದಲ್ಲಿನ ಭಾರತೀಯ ಮಿಷನ್ ಗಳು ಮತ್ತು ಪೋಸ್ಟ್ ಗಳು ಒದಗಿಸಿದ ವಿವಿಧ ರಾಯಭಾರ ಸೇವೆಗಳಿಗೆ ವಿಧಿಸಲಾಗುವ ಸೇವಾ ಶುಲ್ಕದ ಮೂಲಕ ಪ್ರಾಥಮಿಕವಾಗಿ ಹಣ ಒದಗಿಸಲಾಗುತ್ತದೆ.
****
AKT/VBA/SH