ಪಿಎಂಇಂಡಿಯಾ
ನ್ಯೂಜಿಲೆಂಡ್ ಪ್ರಧಾನಮಂತ್ರಿ ಅವರಾದ ಮಾನ್ಯ ಕ್ರಿಸ್ಟೋಫರ್ ಅವರು ಆಯೋಜಿಸಿದ್ದ “ಭಾರತ-ನ್ಯೂಜಿಲೆಂಡ್: ಒಂದು ಯಶಸ್ವಿ ಪಾಲುದಾರಿಕೆ” ಎಂಬ ವಿಷಯಾಧಾರಿತ ವಿಶೇಷ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಅವರಾದ ಶ್ರೀ ನರೇಂದ್ರ ಮೋದಿಯವರು ಭಾಗವಹಿಸಿದ್ದರು. ರಾಜಕೀಯ, ವ್ಯಾಪಾರ, ಕೈಗಾರಿಕೆ, ಶಿಕ್ಷಣ, ತಂತ್ರಜ್ಞಾನ, ಕ್ರೀಡೆ ಮತ್ತು ಕಲೆ ಮುಂತಾದ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ಲುಕ್ಸನ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಆಳವಾದ ಮತ್ತು ಶಾಶ್ವತವಾದ ಬಾಂಧವ್ಯವನ್ನು ದೃಢೀಕರಿಸಿ, ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಿ, ಪರಸ್ಪರ ಸಮೃದ್ಧಿ ಪಡೆಯಲು ಹಂಚಿಕೆಯ ದೃಷ್ಟಿಕೋನವನ್ನು ವಿವರಿಸಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಉಭಯ ದೇಶಗಳ ನಡುವಿನ ಪೂರಕತೆ ಮತ್ತು ಜನರೊಂದಿಗಿನ ಬಾಂಧವ್ಯದ ಬಗ್ಗೆ ಪ್ರಸ್ತಾಪಿಸಿದರು. ದ್ವಿಪಕ್ಷೀಯ ಬಾಂಧವ್ಯವನ್ನು ವ್ಯೂಹಾತ್ಮಕ ಪಾಲುದಾರಿಕೆಯ ಮಟ್ಟಕ್ಕೆ ಏರಿಸಿರುವುದನ್ನು ಅವರು ಸ್ವಾಗತಿಸಿದರು. ಇದು ನಡೆಯುತ್ತಿರುವ ಸಹಯೋಗವನ್ನು ಮತ್ತಷ್ಟು ಗಾಢವಾಗಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ದಾಖಲೆಯ ಅವಧಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಹಾಕಲಾಗಿದ್ದು, ಇದು ಎರಡೂ ದೇಶಗಳ ವ್ಯಾಪಾರ, ಯುವಕರು ಮತ್ತು ರೈತರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಮತ್ತು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಧಾನಮಂತ್ರಿ ಶ್ರೀ ಲುಕ್ಸನ್ ಅವರು ಭೋಜನ ಸಮಾರಂಭದ ನಂತರ ಕ್ರೀಡಾಂಗಣದಲ್ಲಿ ಪ್ರದರ್ಶಿಸಲಾದ ನವೀನ ಕ್ರೀಡಾ ಸಲಕರಣೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಅವರು ನ್ಯೂಜಿಲೆಂಡ್ ನ ಪದಕ ವಿಜೇತ ಕ್ರೀಡಾಪಟುಗಳು ಮತ್ತು ಉನ್ನತ ಸಾಧನೆಯ ಕ್ರೀಡೆಗಳಿಗೆ ಸಂಬಂಧಿಸಿದ ಇತರರೊಡನೆ ಸಂವಾದ ನಡೆಸಿದರು. ಉಭಯ ದೇಶಗಳ ನಡುವಿನ ಕ್ರೀಡಾ ಬಾಂಧವ್ಯದ 100 ವರ್ಷಗಳನ್ನು ಸ್ಮರಿಸಿದ ಪ್ರಧಾನಮಂತ್ರಿ ಶ್ರೀ ಮೋದಿಯವರು, ಈ ಭೇಟಿಯ ವೇಳೆ ತೀರ್ಮಾನಿಸಲಾದ ಕ್ರೀಡಾ ಜಂಟಿ ಕ್ರಿಯಾ ಯೋಜನೆಯು ಕ್ರಿಕೆಟ್ ಅನ್ನು ಮೀರಿ ಎರಡೂ ದೇಶಗಳ ಬಾಂಧವ್ಯವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಭಾರತವು 2030ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾ ಸಹಕಾರವನ್ನು ವಿಸ್ತರಿಸುವ ಎರಡೂ ದೇಶಗಳ ಆಶಯಕ್ಕೆ ಅನುಗುಣವಾಗಿ ಈ ಭೇಟಿಯು ನಡೆಯಿತು.
*****
India and New Zealand are working together to build an even stronger partnership for the future.@chrisluxonmp
— Narendra Modi (@narendramodi) July 11, 2026
https://t.co/BJUTl8Vo6e
आज चालीस वर्षों के बाद भारतीय प्रधानमंत्री की न्यूजीलैंड यात्रा हो रही है।
— PMO India (@PMOIndia) July 11, 2026
यह हमारे संबंधों के एक नए अध्याय का शुभारंभ है: PM @narendramodi
हमने भारत-न्यूजीलैंड संबंधों को Strategic Partnership के स्तर पर ले जाने का ऐतिहासिक निर्णय लिया है।
— PMO India (@PMOIndia) July 11, 2026
इसके अंतर्गत हम हर क्षेत्र में स्पष्ट लक्ष्यों और ठोस परिणामों के साथ आगे बढ़ेंगे: PM @narendramodi
इस वर्ष हमने record समय में Free Trade Agreement किया।
— PMO India (@PMOIndia) July 11, 2026
इस उपलब्धि से दोनों देशों के उद्योगों, किसानों और युवाओं के लिए नए द्वार खुलेंगे: PM @narendramodi
आज हमने Indo-Pacific में maritime cooperation के लिए एक framework पर सहमति बनाई है।
— PMO India (@PMOIndia) July 11, 2026
Bilateral naval exercises, logistics support और hydrography में सहयोग से हमारा आपसी तालमेल बढ़ेगा: PM @narendramodi
वैश्विक मंच पर भी भारत और न्यूज़ीलैंड भरोसेमंद साझेदार और करीबी मित्र हैं।
— PMO India (@PMOIndia) July 11, 2026
हमारा मानना है कि वर्तमान समय की चुनौतियों का सामना करने के लिए UN सहित अन्य वैश्विक संस्थानों में reform आवश्यक है: PM @narendramodi