ಪಿಎಂಇಂಡಿಯಾ
ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು ಭಾರತೀಯ ರಫ್ತುಗಳ ಮೇಲಿನ ಸುಂಕಗಳನ್ನು ತೆಗೆದುಹಾಕಲಿದೆ, ಹೆಚ್ಚಿನ ಕಾರ್ಮಿಕರ ತೊಡಗಿಕೊಳ್ಳುವಿಕೆಯ ವಲಯಗಳಿಗೆ ಉತ್ತೇಜನ ನೀಡಲಿದೆ ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂ ಎಸ್ ಎಂ ಇ) ಗಳನ್ನು ಬಲಪಡಿಸಲಿದೆ, ಜೊತೆಗೇ ಕೃಷಿ ಮತ್ತು ಹೈನುಗಾರಿಕೆಯಂತಹ ಕ್ಷೇತ್ರಗಳು ಸಂಪೂರ್ಣವಾಗಿ ರಕ್ಷಿಸಲ್ಪಡುವುದನ್ನು ಖಾತರಿಪಡಿಸಲಿದೆ ಎಂಬ ಬಗ್ಗೆ ಸವಿಸ್ತಾರವಾದ ಅಂಶಗಳನ್ನು ಲೇಖನ ವಿವರಿಸಿದೆ. ಕೃಷಿ ಉತ್ಪಾದಕತೆ ಮತ್ತು ಹೂಡಿಕೆ ಬದ್ಧತೆಗಳಿಗೆ ಬೆಂಬಲದೊಂದಿಗೆ ಈ ಒಪ್ಪಂದವು ವಿದ್ಯಾರ್ಥಿಗಳು ಮತ್ತು ನುರಿತ ವೃತ್ತಿಪರರಿಗೆ ಅವಕಾಶಗಳನ್ನು ವಿಸ್ತರಿಸಲಿದೆ ಎಂಬ ಬಗ್ಗೆಯೂ ಲೇಖನ ವಿವರಿಸಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ :
“ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು (ಎಫ್ಟಿಎ) ಕೃಷಿ ಮತ್ತು ಹೈನುಗಾರಿಕೆಯಂತಹ ಕ್ಷೇತ್ರಗಳ ಸಂಪೂರ್ಣ ರಕ್ಷಣೆ ಖಚಿತಪಡಿಸಿಕೊಳ್ಳುತ್ತಾ ಭಾರತೀಯ ರಫ್ತುಗಳ ಮೇಲಿನ ಸುಂಕಗಳನ್ನು ಹೇಗೆ ತೆಗೆದುಹಾಕಲಿದೆ, ಕಾರ್ಮಿಕ-ತೀವ್ರ ವಲಯಗಳಿಗೆ ಹೇಗೆ ಉತ್ತೇಜನ ನೀಡಲಿದೆ ಮತ್ತು ಎಂಎಸ್ಎಂಇಗಳನ್ನು ಹೇಗೆ ಬಲಪಡಿಸಲಿದೆ ಎಂಬ ಬಗ್ಗೆ ಕೇಂದ್ರ ಸಚಿವರಾದ ಶ್ರೀ @PiyushGoyal ಅವರು ವಿವರಿಸಿದ್ದಾರೆ.
ಕೃಷಿ ಉತ್ಪಾದಕತೆ ಮತ್ತು ಹೂಡಿಕೆ ಬದ್ಧತೆಗಳಿಗೆ ಬೆಂಬಲದ ಜೊತೆಗೆ ಈ ಎಫ್ಟಿಎ ವಿದ್ಯಾರ್ಥಿಗಳು ಮತ್ತು ನುರಿತ ವೃತ್ತಿಪರರಿಗೆ ಅವಕಾಶಗಳನ್ನು ವಿಸ್ತರಿಸಲಿದೆ.”
******
Union Minister Shri @PiyushGoyal elaborates how the India-New Zealand FTA removes tariffs on Indian exports, boosting labour-intensive sectors and strengthening MSMEs, while ensuring that sectors like agriculture and dairy remain fully protected.
— PMO India (@PMOIndia) April 27, 2026
The FTA also expands… https://t.co/b8dS3K3E7G