ಪಿಎಂಇಂಡಿಯಾ
2026ರ ಫೆಬ್ರವರಿ 17 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ದ್ವಿಪಕ್ಷೀಯ ಸಂಬಂಧವನ್ನು ”ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ’ ಯ ಎತ್ತರಕ್ಕೆ ಏರಿಸಿದರು ಮತ್ತು ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ 2026 ಅನ್ನು ಜಂಟಿಯಾಗಿ ಉದ್ಘಾಟಿಸಿದರು. ಉಭಯ ನಾಯಕರು ಕೃತಕ ಬುದ್ಧಿಮತ್ತೆ, ನಾವೀನ್ಯತೆ ಸಂಶೋಧನೆ, ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ ಮತ್ತು ಸೈಬರ್ ಸ್ಪೇಸ್, ಆರೋಗ್ಯ, ಸಂಸ್ಕೃತಿ, ಆರ್ಥಿಕತೆ, ಶೈಕ್ಷಣಿಕ ಸಂಪರ್ಕಗಳು ಮತ್ತು ಜನರಿಂದ ಜನರ ನಡುವಿನ ಸಂಬಂಧಗಳಂತಹ ವಲಯಗಳಲ್ಲಿ ವಿಸ್ತೃತ ಮತ್ತು ವೈವಿಧ್ಯಮಯ ಸಹಕಾರಕ್ಕೆ ಕರೆ ನೀಡಿದರು.
2047ಕ್ಕೆ ನೀನಲಕ್ಷೆ ಮತ್ತು ಎರಡೂ ದೇಶಗಳ ಹಂಚಿಕೆಯ ನಾವೀನ್ಯತೆ ಪಯಣದ ಆಧಾರದ ಮೇಲೆ ಭಾರತ ಮತ್ತು ಫ್ರಾನ್ಸ್ ನಾವೀನ್ಯತೆ ಆರ್ಥಿಕ ಸ್ಥಿತಿಸ್ಥಾಪಕತ್ವ, ಸುಸ್ಥಿರ ಅಭಿವೃದ್ಧಿ, ಕಾರ್ಯತಂತ್ರದ ಸ್ವಾಯತ್ತತೆ ಮತ್ತು ತಾಂತ್ರಿಕ ಮತ್ತು ಕೈಗಾರಿಕಾ ಸಾರ್ವಭೌಮತ್ವದ ಪ್ರಮುಖ ಚಾಲಕಶಕ್ತಿ ಎಂದು ಗುರುತಿಸುತ್ತವೆ. ನಾವೀನ್ಯತೆ ಪಾಲುದಾರಿಕೆಯ ಬಲವರ್ಧನೆಯು ಎರಡೂ ದೇಶಗಳ ಸಂಪೂರ್ಣ ನಾವೀನ್ಯತೆ ಸಾಮರ್ಥ್ಯವನ್ನು ಸಮಪರ್ಕವಾಗಿ ಬಳಸಲು ಮತ್ತು ಜಾಗತಿಕ ಸವಾಲುಗಳಿಗೆ ಪರಿಹಾರಗಳಿಗೆ ಕೊಡುಗೆ ನೀಡಲು ಸಹಾಯ ಮಾಡುತ್ತದೆ ಎಂಬುದನ್ನು ಉಭಯ ದೇಶಗಳು ಒಪ್ಪಿದ್ದವು.
2047ರ ವಿಕಸಿತ ಭಾರತದ ದೂರದೃಷ್ಟಿ ಮತ್ತು 2030ರಡಿಯಲ್ಲಿ ಫ್ರಾನ್ಸ್‌ನ ಮಹತ್ವಾಕಾಂಕ್ಷೆಯು ಭವಿಷ್ಯ-ಆಧಾರಿತ ನಾವೀನ್ಯತೆ ಪಾಲುದಾರಿಕೆ ರೂಪಿಸಲು ಬಲಿಷ್ಠ ಸಮನ್ವಯವನ್ನು ಒದಗಿಸುತ್ತದೆ, ಇದು ನಾವೀನ್ಯತೆಗಳಲ್ಲಿ ಹೊಸ ಹೂಡಿಕೆ ಅವಕಾಶಗಳಿಗೆ ದಾರಿ ಮಾಡಿಕೊಡುವ ಮೂಲಕ ಅಡೆತಡೆಗಳನ್ನು ನಿವಾರಿಸಲಿವೆ ಎಂಬುದನ್ನು ಎರಡೂ ದೇಶಗಳು ಗುರುತಿಸಿವೆ. ಆದ್ದರಿಂದ ಭಾರತ ಮತ್ತು ಫ್ರಾನ್ಸ್, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹ-ಅಭಿವೃದ್ಧಿಯನ್ನು ಮುನ್ನಡೆಸುವುದು, ವಿಶ್ವಾಸಾರ್ಹ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವುದು, ಶೈಕ್ಷಣಿಕ ಮತ್ತು ಸಂಶೋಧನಾ ಮೊಬಿಲಿಟಿಯನ್ನು ತೀವ್ರಗೊಳಿಸುವುದು ಮತ್ತು ಜನರು, ಭೂಮಿ ಮತ್ತು ಹಂಚಿಕೆಯ ಸಮೃದ್ಧಿಗೆ ಸಮಗ್ರ ಫಲಿತಾಂಶಗಳನ್ನು ತಲುಪಿಸುವ ಕಡೆಗೆ ತಮ್ಮ ಸಹಯೋಗದ ಪ್ರಯತ್ನಗಳನ್ನು ಮಾರ್ಗದರ್ಶನ ಮಾಡಲು ಭಾರತ-ಫ್ರಾನ್ಸ್ ನಾವೀನ್ಯತೆ ನೀನಲಕ್ಷೆ 2030 ಅನ್ನು ಒಂದು ಚೌಕಟ್ಟಾಗಿ ಅಳವಡಿಸಿಕೊಳ್ಳುತ್ತಿವೆ.
ಈ ನೀಲನಕ್ಷೆಯು ಈ ಕೆಳಗಿನ ಪ್ರಮುಖ ಅಂಶಗಳನ್ನು ಒಳಗೊಂಡಿದೆ:
I. ”ವಿಶ್ವಾಸಾರ್ಹತೆಗಾಗಿ ಕೃತಕ ಬುದ್ಧಿಮತ್ತೆ’ ಪಾಲುದಾರಿಕೆಯು ನಾವೀನ್ಯತೆ ಪಾಲುದಾರಿಕೆಯ ಕೇಂದ್ರ ಸ್ತಂಭವಾಗಿದೆ: 2025ರ ಫೆಬ್ರವರಿಯಲ್ಲಿ ಕೃತಕ ಬುದ್ಧಿಮತ್ತೆಯ ಕುರಿತಾದ ಭಾರತ-ಫ್ರಾನ್ಸ್ ಘೋಷಣೆ ಮತ್ತು 2025 ಮತ್ತು 2026 ರಲ್ಲಿ ಫ್ರಾನ್ಸ್ ಮತ್ತು ಭಾರತ ಆಯೋಜಿಸಿದ ಎಐ ಕ್ರಿಯೆ ಮತ್ತು ಪರಿಣಾಮ ಶೃಂಗಸಭೆಗಳ ಆಧಾರದ ಮೇಲೆ ಎರಡೂ ದೇಶಗಳು ”ವಿಶ್ವಾಸಾರ್ಹ ಎಐ’’ ಅನ್ನು ತಮ್ಮ ನಾವೀನ್ಯತೆ ಪಾಲುದಾರಿಕೆಯ ಕೇಂದ್ರ ಸ್ತಂಭವನ್ನಾಗಿ ಮಾಡಲು ಒಪ್ಪಿವೆ.
●ಸುರಕ್ಷಿತ, ಭದ್ರ ಮತ್ತು ವಿಶ್ವಾಸಾರ್ಹ ಎಐ ವ್ಯವಸ್ಥೆಗಳು: ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಮಾನವ ಹಕ್ಕುಗಳೊಂದಿಗೆ ಹೊಂದಿಕೆಯಾಗುವ ಸುರಕ್ಷಿತ, ಸುಸ್ಥಿರ ಮತ್ತು ವಿಶ್ವಾಸಾರ್ಹ ಎಐ ವ್ಯವಸ್ಥೆಗಳನ್ನು ಉತ್ತೇಜಿಸಲು, ತಾರತಮ್ಯ ಮತ್ತು ತಪ್ಪು ಮಾಹಿತಿಯ ಪ್ರಸರಣವನ್ನು ತಡೆಗಟ್ಟಲು ಮತ್ತು ಸುಸ್ಥಿರ ಅಭಿವೃದ್ಧಿಗಾಗಿ 2030 ರ ಕಾರ್ಯಸೂಚಿಯನ್ನು ಬೆಂಬಲಿಸಲು ಎರಡೂ ದೇಶಗಳು ಒಗ್ಗೂಡಿ ಕಾರ್ಯನಿರ್ವಹಿಸಲಿವೆ. ನಾವೀನ್ಯತೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯನ್ನು ಹತ್ತಿಕ್ಕದಂತೆ ನೋಡಿಕೊಳ್ಳುವಾಗ, ಗಡಿ ಮತ್ತು ಉತ್ಪಾದಕ ಮಾದರಿಗಳನ್ನು ಒಳಗೊಂಡಂತೆ ಎಐ ಆಡಳಿತಕ್ಕೆ ಪರಸ್ಪರ ಕಾರ್ಯಸಾಧ್ಯವಾದ ಅಪಾಯ-ಆಧಾರಿತ ವಿಧಾನಗಳನ್ನು ಮುನ್ನಡೆಸಲು ನಿಯಂತ್ರಣಗಳು, ಮಾನದಂಡಗಳ ಸಂಸ್ಥೆಗಳು ಮತ್ತು ತಾಂತ್ರಿಕ ತಜ್ಞರ ನಡುವಿನ ಸಹಕಾರವನ್ನು ಪ್ರೋತ್ಸಾಹಿಸಲಾಗುವುದು.
● ತಮ್ಮ ಎಐ ಪಾಲುದಾರಿಕೆಯ ಆದ್ಯತೆಯಾಗಿ ಆನ್ಲೈನ್ನಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಸಹಕಾರ: ಎಐ ಆಧರಿಸಿದ ಸೇವೆಗಳು ದುರ್ಬಲ ವರ್ಗಗಳಿಗೆ, ವಿಶೇಷವಾಗಿ ಡಿಜಿಟಲ್ ಪರಿಸರದಲ್ಲಿ ಮಕ್ಕಳಿಗೆ ಒಡ್ಡುವ ತೀವ್ರ ಅಪಾಯಗಳನ್ನು ಗುರುತಿಸಿ, ಭಾರತ ಮತ್ತು ಫ್ರಾನ್ಸ್ ತಮ್ಮ ಎಐ ಪಾಲುದಾರಿಕೆಯ ಆದ್ಯತೆಯಾಗಿ ಆನ್ಲೈನ್ನಲ್ಲಿ ಮಕ್ಕಳ ಸುರಕ್ಷತೆಯ ಕುರಿತು ತಮ್ಮ ಸಹಕಾರವನ್ನು ಗಾಢಗೊಳಿಸಲು ಒಪ್ಪಿಕೊಂಡಿವೆ. ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಕರೆಯಲಾದ ಎಐ ಮತ್ತು ಮಕ್ಕಳ ಸುರಕ್ಷತೆಯ ಕುರಿತಾದ ತಜ್ಞರ ಗುಂಪು ಮತ್ತು ಆನ್‌ಲೈನ್‌ನಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಭಾರತದ ಉದಯೋನ್ಮುಖ ತಾಂತ್ರಿಕ-ಕಾನೂನು ಚೌಕಟ್ಟನ್ನು ಆಧರಿಸಿ, ಗೌಪ್ಯತೆ-ಸಂರಕ್ಷಿಸುವ ವಯಸ್ಸಿನ ಭರವಸೆ, ವಿನ್ಯಾಸದ ಮೂಲಕ ಸುರಕ್ಷತೆ ರೂಪುರೇಶೆಗಳು ಮತ್ತು ಮಕ್ಕಳೊಂದಿಗೆ ಭೌತಿಕವಾಗಿ ಸಂವಹನ ನಡೆಸುವ ಎಐ ವ್ಯವಸ್ಥೆಗಳಿಗೆ ಫಲಿತಾಂಶ-ಆಧಾರಿತ ಸುರಕ್ಷತಾ ಮಾನದಂಡಗಳು ಸೇರಿದಂತೆ ಹಾಲಿ ಪ್ರಗತಿಯಲ್ಲಿರುವ ಉಪಕ್ರಮಗಳ ನಡುವೆ ಎರಡೂ ದೇಶಗಳು ಸಮಗ್ರ ಸಮನ್ವಯವನ್ನು ಅಭಿವೃದ್ಧಿಪಡಿಸುತ್ತಾರೆ.
● ಗೌಪ್ಯತೆ–ಸಂರಕ್ಷಿಸುವ ಡೇಟಾ ಹಂಚಿಕೆ ಚೌಕಟ್ಟುಗಳ ಕೇಂದ್ರೀಕರಣ: ಮೂಲಭೂತ ಹಕ್ಕುಗಳನ್ನು ರಕ್ಷಿಸುವಾಗ ಎಐ ಮತ್ತು ದತ್ತಾಂಶ ಅಧರಿತ ನಾವೀನ್ಯತೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಗೌಪ್ಯತೆ-ಸಂರಕ್ಷಿಸುವ ದತ್ತಾಂಶ ಹಂಚಿಕೆ ಚೌಕಟ್ಟುಗಳ ಕೇಂದ್ರೀಕರಣವನ್ನು ಭಾರತ ಮತ್ತು ಫ್ರಾನ್ಸ್ ಗುರುತಿಸುತ್ತವೆ. ಭಾರತದ ದತ್ತಾಂಶ ಸಬಲೀಕರಣ ಮತ್ತು ಸಂರಕ್ಷಣಾ ವಾಸ್ತುಶಿಲ್ಪ (ಡಿಇಪಿಎ) ಮತ್ತು ಫ್ರಾನ್ಸ್‌ನ ವಿಶ್ವಾಸಾರ್ಹ ದತ್ತಾಂಶ ಸ್ಥಳಗಳು ಮತ್ತು ಆರೋಗ್ಯ ದತ್ತಾಂಶ ವೇದಿಕೆಗಳ ಮೇಲಿನ ಕೆಲಸವು ಸಂಶೋಧನೆ, ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಸೇವೆಗಳಿಗೆ ಸುರಕ್ಷಿತ, ಒಪ್ಪಿಗೆ ಆಧಾರಿತ ದತ್ತಾಂಶ ಹರಿವನ್ನು ಬೆಂಬಲಿಸುವ ಪೂರಕ ಸಾಮರ್ಥ್ಯಗಳನ್ನು ನೀಡುತ್ತವೆ.
II. ಶೈಕ್ಷಣಿಕ ಮೊಬಿಲಿಟಿಯ ಮೂಲಕ ವರ್ಧಿತ ಜನರಿಂದ ಜನರಿಗೆ ಸಹಕಾರಕ್ಕಾಗಿ ಪಾಲುದಾರಿಕೆ: 2047 ಚೌಕಟ್ಟಿನಡಿಯಲ್ಲಿ ಹಂಚಿಕೆಯ ಉದ್ದೇಶಗಳಿಗೆ ಅನುಗುಣವಾಗಿ, ಎಸ್ ಟಿಇಎಂ ಶಿಕ್ಷಣ, ಸಂಶೋಧನಾ ಪಾಲುದಾರಿಕೆಗಳು, ಪ್ರತಿಭೆಗಳ ಓಡಾಟ (ಮೊಬಿಲಿಟಿ) ಮತ್ತು ಸಾಂಸ್ಥಿಕ ಸಹಯೋಗದಲ್ಲಿ ಹೂಡಿಕೆಯು ಭವಿಷ್ಯದ ಪೀಳಿಗೆಯನ್ನು ಜಾಗತಿಕ ಸವಾಲುಗಳನ್ನು ಎದುರಿಸಲು ಸಿದ್ಧಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಎರಡೂ ದೇಶಗಳು ಗುರುತಿಸಿವೆ. ಆ ನಿಟ್ಟಿನಲ್ಲಿ 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಫ್ರಾನ್ಸ್‌ನ ಉದ್ದೇಶದ ಪ್ರಾಮುಖ್ಯತೆಯನ್ನು ಎರಡೂ ದೇಶಗಳು ಅಂಗೀಕರಿಸಿವೆ ಮತ್ತು ದ್ವಿಪಕ್ಷೀಯ ಪಾಲುದಾರಿಕೆಯ ಅಡಿಪಾಯವಾಗಿ ಜನರಿಂದ ಜನರಿಗೆ ಸಂಬಂಧಗಳನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ. ಈ ಸಂದರ್ಭದಲ್ಲಿ ಉಭಯ ದೇಶಗಳು ಈ ಕೆಳಗಿನ ಉಪಕ್ರಮಗಳನ್ನು ಸ್ವಾಗತಿಸಿವೆ:
●ಪರಸ್ಪರ ಅರ್ಹತೆಗಳ ಗುರುತಿಸುವಿಕೆ (ಎಂಆರ್ ಕ್ಯೂ): ದೀರ್ಘಕಾಲೀನ ನಾವೀನ್ಯತೆ ಪಾಲುದಾರಿಕೆಗಳನ್ನು ಉಳಿಸಿಕೊಳ್ಳುವಲ್ಲಿ ಮೊಬಿಲಿಟಿ ಮತ್ತು ಶೈಕ್ಷಣಿಕ ಏಕೀಕರಣದ ಕೇಂದ್ರ ಪಾತ್ರವನ್ನು ಗುರುತಿಸುತ್ತಾ, ಎರಡೂ ದೇಶಗಳು ಉನ್ನತ ಶಿಕ್ಷಣ ಮತ್ತು ವೃತ್ತಿಪರ ಅರ್ಹತೆಗಳಿಗಾಗಿ ಪರಸ್ಪರ ಗುರುತಿಸುವಿಕೆ ಚೌಕಟ್ಟುಗಳನ್ನು ಬಲಪಡಿಸುವ ಮಹತ್ವ ಪುನರುಚ್ಚರಿಸಿವೆ. 2018 ರಲ್ಲಿ ಭಾರತದೊಂದಿಗೆ ಪರಸ್ಪರ ಅರ್ಹತೆಗಳ ಗುರುತಿಸುವಿಕೆ (ಎಂಆರ್ ಕ್ಯೂ) ಒಪ್ಪಂದವನ್ನು ಮುಕ್ತಾಯಗೊಳಿಸಿದ ಮೊದಲ ದೇಶ ಫ್ರಾನ್ಸ್ ಎಂಬುದನ್ನು ನೆನಪಿಸಿಕೊಳ್ಳುತ್ತಾ, ಉಭಯ ನಾಯಕರು ವ್ಯಾಪಕ ಶ್ರೇಣಿಯ ಶೈಕ್ಷಣಿಕ ವಿಭಾಗಗಳು, ನಿಯಂತ್ರಿತ ವೃತ್ತಿಗಳು ಮತ್ತು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳನ್ನು ಒಳಗೊಂಡ ವಿಸ್ತೃತ ಮತ್ತು ನವೀಕರಿಸಿದ ಚೌಕಟ್ಟಿನತ್ತ ಕೆಲಸ ಮಾಡುವ ಉದ್ದೇಶವನ್ನು ವ್ಯಕ್ತಪಡಿಸುತ್ತಾರೆ. ಅಂತಹ ಸಹಕಾರವು ಹೆಚ್ಚಿನ ಶೈಕ್ಷಣಿಕ ಮೊಬಿಲಿಟಿಯನ್ನು ಬೆಂಬಲಿಸುತ್ತದೆ, ದ್ವಿ-ಪದವಿ ಕಾರ್ಯಕ್ರಮಗಳು ಮತ್ತು ಡಾಕ್ಟರೇಟ್ ಸಹ-ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಸುಗಮಗೊಳಿಸುತ್ತದೆ ಮತ್ತು ಭಾರತ ಮತ್ತು ಫ್ರಾನ್ಸ್ ನಡುವಿನ ದೀರ್ಘಕಾಲೀನ ಪ್ರತಿಭೆ ಮತ್ತು ಜ್ಞಾನ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.
ಅಲ್ಲದೆ, ಭಾರತ ಮತ್ತು ಫ್ರಾನ್ಸ್‌ನ ಹಲವಾರು ಸಂಸ್ಥೆಗಳು ವಿದ್ಯಾರ್ಥಿ ವಿನಿಮಯ ಮತ್ತು ಸಂಶೋಧನಾ ಸಹಯೋಗದ ಮೂಲಕ ಶೈಕ್ಷಣಿಕ ಚಲನಶೀಲತೆಯ ಮೇಲೆ ಸಹಕರಿಸಲು ಒಪ್ಪಿಕೊಂಡಿವೆ (ಒಪ್ಪಂದಗಳ ಪಟ್ಟಿ ಅಡಕಲ್ಲಿದೆ).
III. ಉದ್ಯಮ-ಶೈಕ್ಷಣಿಕ ಸಂಪರ್ಕಗಳ ಮೂಲಕ ತಾಂತ್ರಿಕ ಸಾರ್ವಭೌಮತ್ವ ಮತ್ತು ನಾವೀನ್ಯತೆಗಾಗಿ ಪಾಲುದಾರಿಕೆಯು ಬೆಳವಣಿಗೆಗೆ ಕಾರಣವಾಯಿತು: ಸರ್ಕಾರಗಳು, ಕೈಗಾರಿಕೆಗಳು, ನವೋದ್ಯಮಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳ ನಡುವಿನ ನಿಕಟ ಸಹಯೋಗವು ನಾವೀನ್ಯತೆ-ನೇತೃತ್ವದ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕಾರ್ಯತಂತ್ರದ ವಲಯಗಳಲ್ಲಿ ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಅತ್ಯಗತ್ಯ ಎಂದು ಎರಡೂ ದೇಶಗಳು ಗುರುತಿಸುತ್ತವೆ. ಈ ಸಂದರ್ಭದಲ್ಲಿ ಎರಡೂ ದೇಶಗಳು ಈ ಅಂಶಗಳನ್ನು ಗುರುತಿಸಿವೆ:
● ಇಂಡೋ-ಫ್ರೆಂಚ್ ಸೆಂಟರ್ ಫಾರ್ ದಿ ಪ್ರಮೋಷನ್ ಆಫ್ ಅಡ್ವಾನ್ಸ್‌ಡ್ ರಿಸರ್ಚ್ (CEFIPRA) ಗೆ ಪ್ರಮುಖ ಗಮನ: ಇದು ದ್ವಿಪಕ್ಷೀಯ ವೈಜ್ಞಾನಿಕ ಸಹಕಾರದ ಪ್ರಮುಖ ಸಾಧನವಾಗಿದ್ದು, ನಾವೀನ್ಯತೆ ಮತ್ತು ಕಾರ್ಯತಂತ್ರದ ಸಂಬಂಧಿತ ತಂತ್ರಜ್ಞಾನಗಳ ಸಹ-ಅಭಿವೃದ್ಧಿ ಮತ್ತು ಸ್ಕೇಲಿಂಗ್ ಮೇಲೆ ವರ್ಧಿತ ಗಮನವನ್ನು ಹೊಂದಿದೆ.
● ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷದ ಪ್ರಮುಖ ಸಾಧನೆಯಾಗಿ ಭಾರತ-ಫ್ರಾನ್ಸ್ ನಾವೀನ್ಯತೆ ಜಾಲದ (ಐಎಫ್ ಐಎನ್) ಪ್ರಾಮುಖ್ಯತೆ ಮತ್ತು ಎರಡೂ ದೇಶಗಳ ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಸಂಪರ್ಕಿಸುವ ಪ್ರಬಲ ಸಾಧನವಾಗಿದೆ. ಐಎಫ್ ಐಎನ್ ನ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಜಂಟಿ ಇಂಡೋ-ಫ್ರೆಂಚ್ ಸ್ಟೀರಿಂಗ್ ಸಮಿತಿಯ ಸಂಭಾವ್ಯ ಸ್ಥಾಪನೆಯ ಮೂಲಕ ಅದರ ದೀರ್ಘಕಾಲೀನ ಚೈತನ್ಯಕ್ಕೆ ಕೊಡುಗೆ ನೀಡಲು ಎರಡೂ ದೇಶಗಳು ಬದ್ಧವಾಗಿವೆ.
●ಬಯೋಮೆಡಿಕಲ್ ವಿಜ್ಞಾನ ಮತ್ತು ಆರೋಗ್ಯ ನಾವೀನ್ಯತೆಯಲ್ಲಿ ಸಹಕಾರವನ್ನು ಬೆಂಬಲಿಸುವ ಅಸ್ತಿತ್ವದಲ್ಲಿರುವ ವೇದಿಕೆಯಾಗಿ ಫ್ರಾಂಕೊ-ಇಂಡಿಯನ್ ಕ್ಯಾಂಪಸ್ ಇನ್ ಲೈಫ್ ಸೈನ್ಸಸ್ ಫಾರ್ ಹೆಲ್ತ್ (FIC-LSH) ನ ಪ್ರಸ್ತುತತೆ ಮತ್ತು ಆರೋಗ್ಯ ವಲಯದಲ್ಲಿ ದ್ವಿಪಕ್ಷೀಯ ಸಂಶೋಧನೆ, ಶೈಕ್ಷಣಿಕ ಸಹಯೋಗ ಮತ್ತು ನಾವೀನ್ಯತೆ ಪಾಲುದಾರಿಕೆಗಳಿಗೆ ಅದರ ಕೊಡುಗೆಯನ್ನು ಬಲಪಡಿಸುವ ಮಾರ್ಗಗಳ ಕುರಿತು ನಿರಂತರ ಚರ್ಚೆಗಳಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸುವುದು.
ಸಂಶೋಧನಾ ಪ್ರಯೋಗಾಲಯಗಳಿಗೆ ಪರಸ್ಪರ ಪ್ರವೇಶ, CEFIPRA, ಜಂಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ, ಸ್ಟೇಷನ್-ಎಫ್‌ನಲ್ಲಿ ಸ್ಟಾರ್ಟ್-ಅಪ್ ಸಹಯೋಗ, FRIND-X ಮತ್ತು ಭಾರತ-ಫ್ರಾನ್ಸ್ ಇನ್ನೋವೇಶನ್ ನೆಟ್‌ವರ್ಕ್ ಅನ್ನು ಪ್ರಾರಂಭಿಸುವ ಮೂಲಕ, ಎರಡೂ ದೇಶಗಳು ತಮ್ಮ ತಾಂತ್ರಿಕ ಸಾರ್ವಭೌಮತ್ವವನ್ನು ಭದ್ರಪಡಿಸಿಕೊಳ್ಳಲು ಮತ್ತು ಮುಂದಿನ ಪೀಳಿಗೆಯ ಸಂಶೋಧಕರು ಮತ್ತು ಉದ್ಯಮಿಗಳು ಜಾಗತಿಕ ಸವಾಲುಗಳನ್ನು ಸ್ವತಂತ್ರವಾಗಿ ಎದುರಿಸಬಹುದೆಂದು ಖಚಿತಪಡಿಸಿಕೊಳ್ಳಲು ಬದ್ಧವಾಗಿವೆ
ಅಲ್ಲದೆ ಉಭಯ ದೇಶಗಳು ಈ ಕೆಳಗಿನ ಉಪಕ್ರಮಗಳಿಗೆ ಒಪ್ಪಿಕೊಂಡಿವೆ:
● ಏರೋನಾಟಿಕ್ಸ್ ತರಬೇತಿ ಮತ್ತು ವೃತ್ತಿಜೀವನಕ್ಕಾಗಿ ಫ್ರಾಂಕೊ–ಇಂಡಿಯನ್ ಕ್ಯಾಂಪಸ್: ಫ್ರಾನ್ಸ್ ಮತ್ತು ಭಾರತವು ಈ ಪ್ರಮುಖ ಮತ್ತು ಕಾರ್ಯತಂತ್ರದ ವಲಯದಲ್ಲಿ ತಮ್ಮ ತರಬೇತಿ ಕೊಡುಗೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಹಂಚಿಕೊಳ್ಳಲು ಕಾನ್ಪುರದಲ್ಲಿ ಎಂಎಸ್ ಡಿಇ ಜೊತೆ ಪಾಲುದಾರಿಕೆಯಲ್ಲಿ ಏರೋನಾಟಿಕಲ್ ತರಬೇತಿ ಕ್ಯಾಂಪಸ್ ಅನ್ನು ಸ್ಥಾಪಿಸುತ್ತವೆ.
●ಭಾರತ–ಫ್ರಾನ್ಸ್ ಇನ್ನೋಎಕ್ಸ್ಚೇಂಜ್ ಸೇತುವೆ: ಎರಡೂ ದೇಶಗಳ ನಡುವೆ ಮೀಸಲಾದ ಸಂಶೋಧನೆ ಮತ್ತು ಉದ್ಯಮಶೀಲತೆ ಕಾರಿಡಾರ್ ಅನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ದ್ವಿಪಕ್ಷೀಯ ಸ್ಟಾರ್ಟ್ಅಪ್ ಮತ್ತು ನಾವೀನ್ಯತೆ ವಿನಿಮಯ ಉಪಕ್ರಮವಾಗಿ ಭಾರತ-ಫ್ರಾನ್ಸ್ ಇನ್ನೋಎಕ್ಸ್‌ಚೇಂಜ್ ಸೇತುವೆಯ ಸಾಮರ್ಥ್ಯವನ್ನು ಎರಡೂ ಕಡೆಯವರು ಗುರುತಿಸುತ್ತಾರೆ. ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಉಪಕ್ರಮಗಳ ಮೇಲೆ ನಿರ್ಮಿಸುವ ಮೂಲಕ ಇನ್ನೋಎಕ್ಸ್‌ಚೇಂಜ್ ಸೇತುವೆಯು ಎರಡೂ ದೇಶಗಳಲ್ಲಿನ ಸಂಶೋಧನಾ ಪ್ರಯೋಗಾಲಯಗಳು, ತಂತ್ರಜ್ಞಾನ ವೇದಿಕೆಗಳು, ನಾವೀನ್ಯತೆ ಕ್ಲಸ್ಟರ್‌ಗಳು, ಹೂಡಿಕೆದಾರರು ಮತ್ತು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಗಳಿಗೆ ರಚನಾತ್ಮಕ ಮತ್ತು ಪರಸ್ಪರ ಪ್ರವೇಶವನ್ನು ಒದಗಿಸುತ್ತದೆ. ಸ್ಟಾರ್ಟ್-ಅಪ್‌ಗಳು ಮತ್ತು ನಾವೀನ್ಯಕಾರರು ಸಂಶೋಧನಾ ವಸತಿಗಳ ಸಹಯೋಗದ ನಾವೀನ್ಯತೆ ಒಳಗೊಳ್ಳುವಿಕೆ ಮತ್ತು ಸಹಯೋಗ ಕಾರ್ಯಕ್ರಮಗಳನ್ನು ಹಾಗೂ ಎರಡೂ ನ್ಯಾಯವ್ಯಾಪ್ತಿಗಳಲ್ಲಿ ಸಾಫ್ಟ್ ಲ್ಯಾಂಡಿಂಗ್‌ಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ.
● ನಾವೀನ್ಯತೆ, ಉದ್ಯೋಗ ಮತ್ತು ಅಂತರ್ಗತ ಆರ್ಥಿಕ ಬೆಳವಣಿಗೆಯನ್ನು ಚಾಲನೆ ಮಾಡುವಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪ್ರಮುಖ ಪಾತ್ರವನ್ನು ಗುರುತಿಸಿ, ಎರಡೂ ಕಡೆಯವರು ಎಸ್ ಎಂಇ ಪೂರಕ ವ್ಯವಸ್ಥೆಗಳ ನಡುವೆ ಮತ್ತಷ್ಟು ಸಂವಹನಕ್ಕಾಗಿ ಮಾರ್ಗಗಳನ್ನು ಅನ್ವೇಷಿಸಲು ಉದ್ದೇಶಿಸಲಾಗಿದೆ.
● ಫ್ರಾನ್ಸ್ ಮತ್ತು ಭಾರತ ಎರಡೂ ದೇಶಗಳ ನಡುವೆ ಬಾಹ್ಯಾಕಾಶದಲ್ಲಿ ಸಾಂಸ್ಥಿಕ ಮಟ್ಟದಲ್ಲಿ ಹಾಗೂ ಫ್ರೆಂಚ್ ಮತ್ತು ಭಾರತೀಯ ಖಾಸಗಿ ಬಾಹ್ಯಾಕಾಶ ಪೂರಕ ವ್ಯವಸ್ಥೆಗಳ ನಡುವೆ ಅಸ್ತಿತ್ವದಲ್ಲಿರುವ ಬಲವಾದ ಪಾಲುದಾರಿಕೆಯನ್ನು ಬಲಪಡಿಸಲು ಬದ್ಧವಾಗಿವೆ. ಭಾರತ ಮತ್ತು ಫ್ರಾನ್ಸ್ ಒಂದೇ ವಾರದಲ್ಲಿ ಎರಡು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಆಯೋಜಿಸಲಿವೆ: ಸೆಪ್ಟೆಂಬರ್ 7-9 ರಂದು ಬೆಂಗಳೂರಿನಲ್ಲಿ ಬೆಂಗಳೂರು ಬಾಹ್ಯಾಕಾಶ ಪ್ರದರ್ಶನ (ಬಿಎಸ್ ಎಕ್ಸ್) ಮತ್ತು ಸೆಪ್ಟೆಂಬರ್ 9-10 ರಂದು ಪ್ಯಾರಿಸ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆ. ಈ ಪ್ರಮುಖ ಕಾರ್ಯಕ್ರಮಗಳು ಫ್ರೆಂಚ್ ಝೀರೋ-ಜಿ ಸಾಮರ್ಥ್ಯಗಳು ಮತ್ತು ಪರಿಣತಿಗೆ ಸಂಬಂಧಿಸಿದ ಜಂಟಿ ಚಟುವಟಿಕೆಗಳು ಮತ್ತು ಕಡಿಮೆ ಭೂಮಿಯ ಕಕ್ಷೆಯಲ್ಲಿ ಭಾರತೀಯ ಭವಿಷ್ಯದ ಬಾಹ್ಯಾಕಾಶ ನಿಲ್ದಾಣಕ್ಕೆ ಸಂಬಂಧಿಸಿದ ಭೂಮಿಯ ವೀಕ್ಷಣೆ ಮತ್ತು ಮಾನವ ಪರಿಶೋಧನೆ ಕ್ಷೇತ್ರಗಳಲ್ಲಿ ನಮ್ಮ ದ್ವಿಪಕ್ಷೀಯ ಬಾಹ್ಯಾಕಾಶ ಸಹಕಾರವನ್ನು ಗಾಢವಾಗಿಸಲು ಮತ್ತು ಫ್ರೆಂಚ್ ಮತ್ತು ಭಾರತೀಯ ಪರಿಸರ ವ್ಯವಸ್ಥೆಗಳನ್ನು ಒಟ್ಟುಗೂಡಿಸಲು ರಚನಾತ್ಮಕ ಸಾಮಾನ್ಯ ಮಹತ್ವಾಕಾಂಕ್ಷೆಗೆ ಭದ್ರ ಬುನಾದಿ ಹಾಕಲು ಕೊಡುಗೆ ನೀಡುತ್ತವೆ.
IV. ಆರೋಗ್ಯದಲ್ಲಿನ ಜಾಗತಿಕ ಸವಾಲುಗಳಿಗೆ ಎಐ ಮತ್ತು ಸಂಶೋಧನಾ-ಆಧಾರಿತ ಪರಿಹಾರಗಳನ್ನು ನಿರ್ಮಿಸಲು ಪಾಲುದಾರಿಕೆ
● ಸಮ್ಮತಿ ಆಧಾರಿತ ದತ್ತಾಂಶ ಹಂಚಿಕೆ: ಭಾರತದ ಐಸಿಎಂಆರ್ ಮತ್ತು ಫ್ರಾನ್ಸ್‌ನ ಆರೋಗ್ಯ ದತ್ತಾಂಶ ಹಬ್ (ಎಚ್ ಡಿಎಡಿ) ಒಳಗೊಂಡ ಪೈಲಟ್ ಯೋಜನೆಯಂತಹ ನಡೆಯುತ್ತಿರುವ ಸಹಯೋಗಗಳನ್ನು ನಿರ್ಮಿಸುವ ಮೂಲಕ, ಎರಡೂ ಕಡೆಯವರು ರಾಷ್ಟ್ರೀಯ ಕಾನೂನು ಚೌಕಟ್ಟುಗಳಿಗೆ ಅನುಸಾರವಾಗಿ ಸುರಕ್ಷಿತ ದತ್ತಾಂಶ ಹಂಚಿಕೆಗಾಗಿ ಒಪ್ಪಿಗೆ ಆಧಾರಿತ ರೂಪುರೇಶೆಗಳ ಮೇಲೆ ಕಾರ್ಯನಿರ್ವಹಿಸಲಿದ್ದಾರೆ. ಇದನ್ನು ಅಳೆಯಬಹುದು, ಹೆಚ್ಚುವರಿ ವಲಯಗಳಿಗೆ ಹೊಂದಿಕೊಳ್ಳಬಹುದು ಮತ್ತು ಜಾಗತಿಕ ದಕ್ಷಿಣ ಸೇರಿದಂತೆ ಆಸಕ್ತ ಪಾಲುದಾರರೊಂದಿಗೆ ಹಂಚಿಕೊಳ್ಳಬಹುದು. ಎಐ ನಾವೀನ್ಯತೆ ಮತ್ತು ಸಾರ್ವಜನಿಕ ಹಿತಾಸಕ್ತಿ ಸಂಶೋಧನೆಗೆ ಆಧಾರವಾಗಿರುವ ಪರಸ್ಪರ ಕಾರ್ಯಸಾಧ್ಯ, ಹಕ್ಕುಗಳನ್ನು ರಕ್ಷಿಸುವ ದತ್ತಾಂಶ ಮೂಲಸೌಕರ್ಯಗಳನ್ನು ಮುನ್ನಡೆಸಲು ಭಾರತ ಮತ್ತು ಫ್ರಾನ್ಸ್ ತಮ್ಮ ದತ್ತಾಂಶ ಮಧ್ಯವರ್ತಿಗಳು, ತಾಂತ್ರಿಕ ಪ್ರಮಾಣಿತ ಸಂಸ್ಥೆಗಳು ಮತ್ತು ನಿಯಂತ್ರಕರ ನಡುವೆ ಜಂಟಿ ಕೆಲಸವನ್ನು ಪ್ರೋತ್ಸಾಹಿಸುತ್ತವೆ.
ಪರಸ್ಪರ ನಂಬಿಕೆ, ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಕಾರ್ಯತಂತ್ರದ ಸ್ವಾಯತ್ತತೆ ಮತ್ತು ವಿಶ್ವಾಸಾರ್ಹ, ಮುಕ್ತ, ಅಂತರ್ಗತ ಮತ್ತು ಮಾನವ-ಕೇಂದ್ರಿತ ನಾವೀನ್ಯತೆಗೆ ಸಾಮಾನ್ಯ ಬದ್ಧತೆಯಿಂದ ಮಾರ್ಗದರ್ಶಿಸಲ್ಪಟ್ಟ ಪಾಲುದಾರಿಕೆಯಾಗಿ ಭಾರತ ಮತ್ತು ಫ್ರಾನ್ಸ್ ಈ ನೀಲನಕ್ಷೆಯನ್ನು ಪಾಲನೆ ಮಾಡುತ್ತವೆ.
ಭಾರತ-ಫ್ರಾನ್ಸ್ ನಾವಿನ್ಯತಾ ನೀಲನಕ್ಷೆ 2030ಯ ಅಡಕ
ಒಪ್ಪಂದಗಳು
| 2. |
ಐಐಟಿ ಬಾಂಬೆ ಮತ್ತು ಫ್ರಾನ್ಸ್‌ನ ಪ್ಯಾರಿಸ್-ಸ್ಯಾಕ್ಲೇ ವಿಶ್ವವಿದ್ಯಾಲಯದ ನಡುವೆ ಟ್ರಾನ್ಸ್ ಲೇಷನ್, ಇನ್‌ಕ್ಯುಬೇಶನ್ ಮತ್ತು ವೇಗವರ್ಧನೆಯಲ್ಲಿ ಸಹಕಾರವನ್ನು ಸೇರಿಸಲು ಅಸ್ತಿತ್ವದಲ್ಲಿರುವ ತಿಳಿವಳಿಕೆ ಒಪ್ಪಂದಕ್ಕೆ ತಿದ್ದುಪಡಿ. |
| 3. |
ಐಐಟಿ ಬಾಂಬೆ ಮತ್ತು ಫ್ರಾನ್ಸ್‌ನ ನೈಸ್‌ನ ಯೂನಿವರ್ಸಿಟಿ ಕೋಟ್ ಡಿ’ಅಜುರ್ ನಡುವೆ ಅಧ್ಯಾಪಕರು, ಆಡಳಿತ ಸಿಬ್ಬಂದಿ, ಇಲಾಖೆಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ಸಹಕಾರ. |
| 4 . |
ಐಐಟಿ ದೆಹಲಿ ಮತ್ತು ಫ್ರಾನ್ಸ್‌ನ ಇನ್‌ಸ್ಟಿಟ್ಯೂಟ್ ಮೈನ್ಸ್-ಟೆಲಿಕಾಮ್ ನಡುವೆ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಶೈಕ್ಷಣಿಕ ಮತ್ತು ವೈಜ್ಞಾನಿಕ ವಿನಿಮಯ ಮತ್ತು ಸಹಯೋಗ. |
| 5. |
ಐಐಟಿ ದೆಹಲಿ ಮತ್ತು ಫೌಂಡೇಷನ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಟ್ರಾನ್ಸ್‌ಫರ್ (ಎಫ್‌ಐಟಿಟಿ) ಮತ್ತು ಫ್ರಾನ್ಸ್‌ನ ರೇಸಿನ್ಸ್ ಡಿ ಫ್ರಾನ್ಸ್ ನಡುವಿನ ನಾವೀನ್ಯತೆ ಮತ್ತು ಉದ್ಯಮಶೀಲತೆ ಪಾಲುದಾರಿಕೆ, ವಿಶೇಷವಾಗಿ ಇಂಧನ, ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆ. |
| 6. |
ಐಐಟಿ ದೆಹಲಿ ಮತ್ತು ಫೌಂಡೇಷನ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಟ್ರಾನ್ಸ್‌ಫರ್ (ಎಫ್‌ಐಟಿಟಿ) ಮತ್ತು ಡಿಡಿಐ (ಡೆಸ್ಕಾರ್ಟೆಸ್ ಡೆವಲಪ್‌ಮೆಂಟ್ & ಇನ್ನೋವೇಶನ್) ಇನ್ಕ್ಯುಬೇಟರ್ ನಡುವಿನ ಇಂಧನ, ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಯ ಮೇಲೆ ಕೇಂದ್ರೀಕರಿಸಿದ ನಾವೀನ್ಯತೆ ಮತ್ತು ಉದ್ಯಮಶೀಲತೆ ಪಾಲುದಾರಿಕೆ |
| 7. |
ಐಐಟಿ ದೆಹಲಿ ಮತ್ತು ಫೌಂಡೇಷನ್ ಫಾರ್ ಇನ್ನೋವೇಶನ್ ಮತ್ತು ಜಿ2ಐ ವೆಂಚರ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ (ಅದರ ಫ್ರೆಂಚ್ ಘಟಕ ಎಸ್‌ಸಿ ಕನ್ಸೈಲ್ ಪ್ರತಿನಿಧಿಸುತ್ತದೆ) ನಡುವಿನ ಜಾಗತಿಕ ಸವಾಲುಗಳನ್ನು ಪರಿಹರಿಸಲು ಮತ್ತು ಮಾರುಕಟ್ಟೆ-ಸಿದ್ಧ ಉತ್ಪನ್ನಗಳು ಮತ್ತು ಪರಿಹಾರಗಳ ಕುರಿತು ಸಂಶೋಧನೆಯನ್ನು ವೇಗಗೊಳಿಸಲು ನಾವೀನ್ಯತೆ ಮತ್ತು ಉದ್ಯಮಶೀಲತೆ ಪಾಲುದಾರಿಕೆ |
| 8. |
ಐಐಟಿ ಗಾಂಧಿನಗರ ಮತ್ತು ಫ್ರಾನ್ಸ್‌ನ ಕೊಮುಟೊ ಎಸ್‌ಎ / ಬ್ಲಾಬ್ಲಾಕಾರ್ ನಡುವೆ ಚಲನಶೀಲತೆ, ಕೃತಕ ಬುದ್ಧಿಮತ್ತೆ, ಡಿಜಿಟಲ್ ವೇದಿಕೆಗಳು, ಸುಸ್ಥಿರತೆ, ಸ್ಮಾರ್ಟ್ ಸಾರಿಗೆ ವ್ಯವಸ್ಥೆಗಳು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳಲ್ಲಿ ಶೈಕ್ಷಣಿಕ, ನಾವೀನ್ಯತೆ, ಉದ್ಯಮಶೀಲತೆ ಮತ್ತು ಸಂಶೋಧನಾ ಸಹಯೋಗವನ್ನು ಅನ್ವೇಷಿಸಲು ಆಸಕ್ತಿಯ ಅಭಿವ್ಯಕ್ತಿ. |
| 9. |
ಭಾರತದಲ್ಲಿ ರಾಷ್ಟ್ರೀಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸಿ, ಐಐಟಿ ತಿರುಪತಿ ಮತ್ತು ಫ್ರಾನ್ಸ್‌ನ ಸಫ್ರಾನ್ ಎಲೆಕ್ಟ್ರಾನಿಕ್ಸ್ ಮತ್ತು ಡಿಫೆನ್ಸ್ ನಡುವೆ ಸ್ಥಾನೀಕರಣ, ಸಂಚರಣೆ ಮತ್ತು ಸಮಯ ನಿರ್ವಹಣೆ (ಪಿಎನ್‌ಟಿ)ಯಲ್ಲಿ ಕಾರ್ಯತಂತ್ರದ ಶೈಕ್ಷಣಿಕ-ಉದ್ಯಮ ಪಾಲುದಾರಿಕೆ |
| 10. |
ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಂಶೋಧನಾ ಸಹಯೋಗವನ್ನು ಉತ್ತೇಜಿಸಲು ಐಐಟಿಗಳು, ಐಐಎಸ್‌ಸಿ ಮತ್ತು ಯುಡಿಐಸಿಇ ನೆಟ್‌ವರ್ಕ್‌ಗಳ ನಡುವಿನ ಉದ್ದೇಶದ ಘೋಷಣೆ |
| 11. |
ಐಐಟಿ ಹೈದರಾಬಾದ್ ಮತ್ತು ಕ್ರಿಮ್ಸನ್ ಎನರ್ಜಿ ಎಕ್ಸ್‌ಪರ್ಟ್ಸ್ ಮತ್ತು ಡಸಾಲ್ಟ್ ಸಿಸ್ಟಮ್ ನಡುವಿನ 3D ಕಂಪ್ಯೂಟಿಂಗ್ ಸಿಸ್ಟಮ್‌ಗಳ ಸಹಯೋಗಕ್ಕಾಗಿ ತಿಳಿವಳಿಕೆ ಒಪ್ಪಂದ |
| 12. |
ಸಿರಾನ್ ಎಐ ಮತ್ತು ಸಫ್ರಾನ್ ಏರ್‌ಕ್ರಾಫ್ಟ್ ಎಂಜಿನ್‌ಗಳ ನಡುವಿನ ತಿಳುವಳಿಕೆ ಒಪ್ಪಂದ |
| 13. |
ಐಐಟಿ ಮದ್ರಾಸ್ ಮತ್ತು ಯೂನಿವರ್ಸಿಟಿ ಡಿ ಲಿಮೋಜಸ್ (ಯುನಿಲಿಮ್) ನಡುವಿನ ವಿದ್ಯಾರ್ಥಿ ವಿನಿಮಯ ಒಪ್ಪಂದದ ನವೀಕರಣ |
| 14. |
ಐಐಟಿ ಮದ್ರಾಸ್ ಮತ್ತು ಇಎಸ್ ಸಿಪಿ ಬಿಸಿನೆಸ್ ಸ್ಕೂಲ್ ನಡುವಿನ ವಿದ್ಯಾರ್ಥಿ ವಿನಿಮಯ ಒಪ್ಪಂದ |
| 15. |
ಐಐಟಿ ಮದ್ರಾಸ್ ಮತ್ತು Clermont Auvergne ಇನ್ಸ್ಟಿಟ್ಯೂಟ್ ನ್ಯಾಷನಲ್ ಪಾಲಿಟೆಕ್ನಿಕ್ (Clermont Auvergne INP) ನಡುವಿನ ವಿದ್ಯಾರ್ಥಿ ವಿನಿಮಯ ಒಪ್ಪಂದ |
| 16. |
ಐಐಟಿ ಮದ್ರಾಸ್ ಮತ್ತು Université de Technologie de Compiégne (UTC) ನಡುವಿನ ವಿದ್ಯಾರ್ಥಿ ವಿನಿಮಯ ಒಪ್ಪಂದ |
| 17. |
ಐಐಟಿ ಮದ್ರಾಸ್ ಮತ್ತು CentraleSupélec Université Paris-Saclay ನಡುವಿನ ವಿದ್ಯಾರ್ಥಿ ವಿನಿಮಯ ಒಪ್ಪಂದದ ನವೀಕರಣ |
| 18. |
ಯೂನಿವರ್ಸಿಟಿ ಗ್ರೆನೋಬಲ್ ಆಲ್ಪೆಸ್ (ಯುಜಿಎ), ಫ್ರಾನ್ಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು (ಐ ಐ ಎಸ್ ಸಿ), ಭಾರತ ನಡುವಿನ ತಿಳಿವಳಿಕೆ ಒಪ್ಪಂದ |
| 19. |
ಐಐಟಿ ಮದ್ರಾಸ್ ಮತ್ತು ಎಕೋಲ್ ನ್ಯಾಷನಲ್ ಸುಪರಿಯರ್ ಡೆಸ್ ಮೈನ್ಸ್ ಡಿ ಸೇಂಟ್-ಎಟಿಯೆನ್ ನಡುವಿನ ಶೈಕ್ಷಣಿಕ ಸಹಯೋಗ ಮತ್ತು ವಿದ್ಯಾರ್ಥಿ ವಿನಿಮಯ ಒಪ್ಪಂದ |
1. | ಐಐಟಿ ಬಾಂಬೆ ಮತ್ತು ಫ್ರಾನ್ಸ್‌ನ ಇನ್‌ಸ್ಟಿಟ್ಯೂಟ್ ಪಾಲಿಟೆಕ್ನಿಕ್ ಡಿ ಪ್ಯಾರಿಸ್ (ಐಪಿಪಿ) ನಡುವೆ ಟ್ರಾನ್ಸ್ ಲೇಷನ್, ಇನ್‌ಕ್ಯುಬೇಶನ್ ಮತ್ತು ವೇಗವರ್ಧನೆಯಲ್ಲಿ ಸಹಕಾರವನ್ನು ಸೇರಿಸಲು ಅಸ್ತಿತ್ವದಲ್ಲಿರುವ ತಿಳಿವಳಿಕೆ ಒಪ್ಪಂದಕ್ಕೆ ತಿದ್ದುಪಡಿ |
|---|
*****
PM @narendramodi held productive talks with President @EmmanuelMacron in Nice. The leaders discussed cooperation in defence, space, technology, security and innovation. They also explored ways to strengthen economic ties and collaboration in critical minerals, healthcare and… pic.twitter.com/iUd8rb4DFo
— PMO India (@PMOIndia) June 14, 2026
Today’s talks with my friend, President Macron were exceptionally productive. Considering the longstanding friendship between our nations, we have decided to elevate our ties to a Special Global Strategic Partnership.
— Narendra Modi (@narendramodi) June 14, 2026
Our talks covered ways to deepen cooperation in key sectors… pic.twitter.com/u5qHR1f9Cz
India and France will keep working together to boost economic ties. The India-EU FTA provides unparalleled momentum in this regard. We are also launching an Economic Security Dialogue to ensure stronger supply chains in critical minerals and technology. Other areas where we will… pic.twitter.com/8B9FLRO2ep
— Narendra Modi (@narendramodi) June 14, 2026
Les entretiens d’aujourd’hui avec mon ami le Président Macron ont été exceptionnellement productifs. Au regard de l’amitié de longue date entre nos deux nations, nous avons décidé d’élever nos relations au rang de Partenariat stratégique global d’exception.
— Narendra Modi (@narendramodi) June 14, 2026
Nos échanges ont… pic.twitter.com/MtRO1m8q1W
L’Inde et la France continueront de travailler ensemble pour renforcer leurs liens économiques. L’accord de libre-échange Inde-UE offre à cet égard un élan sans précédent. Nous lançons également un Dialogue sur la sécurité économique afin de renforcer les chaînes… pic.twitter.com/Cd4TT7s2xf
— Narendra Modi (@narendramodi) June 14, 2026