ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ- ಬಾಂಗ್ಲಾದೇಶದ ಶಿಷ್ಟಾಚಾರ ಮಾರ್ಗದ ಕುಶಿಯಾರಾ ನದಿಯ ಆಶುಗಂಜ್ –ಜಾಕಿಗಂಜ್ ಮಾರ್ಗದಲ್ಲಿ ಮತ್ತು ಜಮುನಾ ನದಿಯ ಸಿರಾಜ್ ಗಂಜ್ – ದೈಖಾವ ಮಾರ್ಗದಲ್ಲಿ ಎರಡೂ ದೇಶಗಳು ಜಂಟಿಯಾಗಿ ಹೂಳೆತ್ತುವ ಮೂಲಕ ಜಲ ಮಾರ್ಗ ಅಭಿವೃದ್ಧಿಗಾಗಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು ಈಶಾನ್ಯ ಭಾರತಕ್ಕೆ ಸರಕು ಸಾಗಣೆಯ ಮಾರ್ಗವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಜೊತೆಗೆ ಸಿಲ್ಗುರಿ ಚಿಕನ್ಸ್ ನೆಕ್ ಕಾರಿಡಾರ್ ಮೇಲಿನ ಒತ್ತಡವನ್ನೂ ಕಡಿಮೆ ಮಾಡಲಿದೆ.
AKT/VBA/SH