Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಕಿರ್ಗಿಸ್ತಾನ್ ನಡುವೆ ಪ್ರವಾಸೋದ್ಯಮ ಕ್ಷೇತ್ರದ ಸಹಕಾರ ಬಲವರ್ಧನೆಗಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಗಣರಾಜ್ಯದ ಪ್ರವಾಸೋದ್ಯಮ ಸಚಿವಾಲಯ ಮತ್ತು ಕಿರ್ಗಿಜ್ ಗಣರಾಜ್ಯದ ಪ್ರವಾಸೋದ್ಯಮ ಮತ್ತು ಮಾಹಿತಿ, ಸಾಂಸ್ಕೃತಿಕ ಸಚಿವಾಲಯದ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಸಹಕಾರದ ಬಲವರ್ಧನೆಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

ಪ್ರವಾಸೋದ್ಯಮಕ್ಷೇತ್ರದಲ್ಲಿನ ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕುವುದರಿಂದ ಪರಸ್ಪರರಿಗೆ ಆಗುವ ಲಾಭವನ್ನು ಗಮನದಲ್ಲಿಟ್ಟುಕೊಂಡು, ಇಬ್ಬರೂ ಪಕ್ಷಕಾರರು, ಎರಡೂ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಗಾಗಿ ಪರಸ್ಪರ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ರಚನಾತ್ಮಕ ಮಾತುಕತೆ ಆರಂಭಿಸಿದ್ದಾರೆ.   ಕರ್ಗಿಜ್ ಗಣರಾಜ್ಯದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿರುವುದು ಈ ಮಹತ್ವದ ಮಾರುಕಟ್ಟೆಯಿಂದ ಬರುವವರ ಸಂಖ್ಯೆ ಹೆಚ್ಚಿಸುವ ಸಾಧನವಾಗಲಿದೆ.

 

ಈ ತಿಳಿವಳಿಕೆ ಒಪ್ಪಂದದ ಮುಖ್ಯ ಉದ್ದೇಶ ಈ ಕೆಳಗಿನವುಗಳನ್ನು ಒಳಗೊಂಡಿದೆ:

  1. a) ಪ್ರವಾಸೋದ್ಯಮ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ವಿಸ್ತರಣೆ
  2. b) ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ದತ್ತಾಂಶ ವಿನಿಮಯ.
  3. c) ಹೊಟೆಲ್ ಗಳು ಮತ್ತು ಪ್ರವಾಸ ಏರ್ಪಡಿಸುವವರೂ ಸೇರಿದಂತೆ ಪ್ರವಾಸೋದ್ಯಮದ ಬಾಧ್ಯಸ್ಥರ ನಡುವೆ ಸಹಕಾರ ಉತ್ತೇಜಿಸುವುದು.
  4. d) ಮಾನವ ಸಂಪನ್ಮೂಲ ಅಭಿವೃದ್ಧಿಯ ಸಹಕಾರದಲ್ಲಿ ವಿನಿಮಯ ಕಾರ್ಯಕ್ರಮ ರೂಪಿಸುವುದು.
  5. e) ಆತಿಥ್ಯ ಮತ್ತು ಪ್ರವಾಸೋದ್ಯಮದ ಕ್ಷೇತ್ರದಲ್ಲಿ ಹೂಡಿಕೆ.
  6. f) ಎರಡೂ ಕಡೆ ಪ್ರವಾಸೋದ್ಯಮ ಉತ್ತೇಜಿಸಲು  ಪ್ರವಾಸ ಏರ್ಪಡಿಸುವವರ/ಮಾಧ್ಯಮ/ಅಭಿಪ್ರಾಯ ಮೂಡಿಸುವವರ ಭೇಟಿ ವಿನಿಮಯ.
  7. g) ತಾಣ ಅಭಿವೃದ್ಧಿ ಮತ್ತು ನಿರ್ವಹಣೆ, ಉತ್ತೇಜನ ಮತ್ತು ಮಾರುಕಟ್ಟೆಯ ಅನುಭವದ ವಿನಿಮಯ.
  8. h) ಪರಸ್ಪರ ರಾಷ್ಟ್ರದಲ್ಲಿ ನಡೆಯುವ ಪ್ರವಾಸ ಮೇಳ/ವಸ್ತುಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಮತ್ತು
  9. i) ಸುರಕ್ಷಿತ ಮತ್ತು ಗೌರವಯುತ ಹಾಗೂ ಸುಸ್ಥಿರ ಪ್ರವಾಸೋದ್ಯಮ ಉತ್ತೇಜಿಸುವುದು.

ಕಿರ್ಗಿಸ್ತಾನ್ ಸಿಐಎಸ್ ರಾಷ್ಟ್ರಗಳ ಭಾಗವಾಗಿದೆ ಮತ್ತು ಇದು ಖಜಕಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಡಿಯನ್ನು ಒಳಗೊಂಡಿದೆ. ಭಾರತ ಮತ್ತು ಕಿರ್ಗಿಸ್ತಾನ್ ಗಳು ಬಲವಾದ ರಾಜತಾಂತ್ರಿಕ ಮತ್ತು ದೀರ್ಘಕಾಲೀನ ಆರ್ಥಿಕ ಬಾಂಧವ್ಯ ಹೊಂದಿವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಕಿರ್ಗಿಸ್ತಾನ್ ನಿಂದ ಭಾರತಕ್ಕೆ ಬಂದ ಪ್ರವಾಸಿಗರ ವಿವರ ಈ ಕೆಳಗಿನಂತಿದೆ.:-

2012  ( 1348)             2013 ( 2103 )             2014 (2479 )          2015 ( 2729)           2016( 2883)   *

( * ಜನವರಿ –ನವೆಂಬರ್ 2016)

 

 

 

AKT/VBA/SH