ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ನೈಜೀರಿಯಾ ನಡುವೆ ಪರಿಷ್ಕೃತ ವಾಯು ಸೇವೆಗಳ ಒಪ್ಪಂದ (ಎ.ಎಸ್.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. ಈ ಹಿಂದೆ 1978ರ ಜನವರಿ 31ರಂದು ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು.
ಈ ಒಪ್ಪಂದವನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ಮಾಡಿರುವುದು ನಾಗರಿಕ ವಿಮಾನ ಯಾನ ಕ್ಷೇತ್ರದಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂತಾರಾಷ್ಟ್ರೀಯ ನಾಗರಿಕ ವಿಮಾನ ಸಂಸ್ಥೆ (ಐ.ಸಿ.ಎ.ಓ.)ರೂಪಿಸಿರುವ ಇತ್ತೀಚಿನ ಮಾದರಿಗೆ ಅನುಗುಣವಾಗಿದೆ ಮತ್ತು ಎರಡೂ ದೇಶಗಳ ನಡುವೆ ವಾಯುಯಾನ ಸಂಪರ್ಕ ಸುಧಾರಣೆ ಮಾಡುವ ಉದ್ದೇಶವನ್ನೂ ಹೊಂದಿದೆ.
ಪರಿಷ್ಕೃತ ಒಪ್ಪಂದವು ಭಾರತ ಮತ್ತು ನೈಜೀರಿಯಾ ನಡುವಿನ ನಾಗರಿಕ ವಿಮಾನಯಾನ ಬಾಂಧವ್ಯದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಮತ್ತು ಎರಡೂ ದೇಶಗಳ ನಡುವೆ ಹೆಚ್ಚಿನ ವಾಣಿಜ್ಯ, ಹೂಡಿಕೆ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಅವಕಾಶ ಮಾಡಿಕೊಡುತ್ತದೆ.
ವಾಯು ಸೇವೆಗಳ ಒಪ್ಪಂದದ ಅಗತ್ಯ ಅಂಶಗಳು ಈ ಕೆಳಗಿನಂತಿವೆ:
i) ಎರಡೂ ರಾಷ್ಟ್ರಗಳು ಒಂದು ಅಥವಾ ಹೆಚ್ಚಿನ ವಾಯುಯಾನ ಸಂಸ್ಥೆಗಳನ್ನು ನಿಯುಕ್ತಿಗೊಳಿಸುವ ಅಧಿಕಾರ ಹೊಂದಿರುತ್ತವೆ.
ii) ತಮ್ಮ ವಾಯು ಸೇವೆಗಳ ಮಾರಾಟ ಮತ್ತು ಉತ್ತೇಜನಕ್ಕಾಗಿ ಎರಡೂ ದೇಶಗಳ ನಿಯೋಜಿತ ವಾಯುಯಾನ ಸಂಸ್ಥೆಗಳು ಮತ್ತೊಂದು ರಾಷ್ಟ್ರದ ನೆಲದಲ್ಲಿ ತಮ್ಮ ಸಂಸ್ಥೆ ಸ್ಥಾಪಿಸುವ ಹಕ್ಕು ಹೊಂದಿರುತ್ತವೆ.
iii) 3ನೇ, 4ನೇ ಮತ್ತು 5ನೇ ಸ್ವತಂತ್ರ ಸಂಚಾರದ ಹಕ್ಕಿನೊಂದಿಗೆ ಯಾವುದೇ ಸ್ವರೂಪದ ಎಷ್ಟೇ ಸಂಖ್ಯೆಯ ಸರಕು ಸಾಗಣೆಯ ಸೇವೆಯನ್ನು ಪರಸ್ಪರರ ರಾಷ್ಟ್ರದಲ್ಲಿ ಕಾರ್ಯಾಚರಣೆ ನಡೆಸಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ.
iv) ನಿಯೋಜಿತ ಏರ್ ಲೈನ್ ವಾಣಿಜ್ಯ ಪರಿಗಣನೆ ಆಧಾರಿತವಾಗಿ ಸಮಂಜಸವಾದ ಮಟ್ಟದ ಒಪ್ಪಿತ ಸೇವೆಗಳಲ್ಲಿ ದರ ನಿರ್ಧರಿಸಲು ಮುಕ್ತವಾಗಿರುತ್ತವೆ.
v) ಪ್ರತಿ ಪಕ್ಷಕಾರರ ನಿಯೋಜಿತ ಏರ್ ಲೈನ್ ಗಳು ಅದೇ ಪಕ್ಷದ ಮತ್ತು ಮತ್ತೊಂದು ಪಕ್ಷದ ನಿಯೋಜಿತ ವಿಮಾನ ಯಾನ ಸಂಸ್ಥೆದೊಂದಿಗೆ ಸಹಕಾರ ಮಾರುಕಟ್ಟೆ ವ್ಯವಸ್ಥೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ.
vi) ಹೊಸ ನಿಬಂಧನೆಗಳಂತೆ, ಪ್ರತಿಯೊಂದು ಕಡೆಯವರೂ ಎರಡೂ ದಿಕ್ಕಿನಲ್ಲಿ ತಮಗೆ ನಿರ್ದಿಷ್ಟಪಡಿಸಿದ ಮಾರ್ಗದಲ್ಲಿ ಮಾರ್ಗ ಪರಿಶಿಷ್ಟದಂತೆ ವಾರದಲ್ಲಿ ಗರಿಷ್ಠ 7 ಸಂಚಾರ ಕೈಗೊಳ್ಳಬಹುದಾಗಿದೆ.
vii) ಈ ಮೇಲಿನ ಎಲ್ಲ ಅಂಶಗಳ ಜೊತೆಗೆ ಹೊಸ ಎ.ಎಸ್.ಎ.ಯಲ್ಲಿ ಕಾರ್ಯಾಚಾರಣೆಯ ಅಧಿಕಾರವನ್ನು, ಒಪ್ಪಿತ ಸೇವೆಗಳ ಕಾರ್ಯಾಚರಣೆಗೆ ಅಗತ್ಯವಾದ ನೀತಿಗಳನ್ನು, ಮಾರ್ಗಗಳ ನಮ್ಯತೆ, ವಾಣಿಜ್ಯ ಅವಕಾಶಗಳು, ವಾಯುಯಾನ ಸುರಕ್ಷತೆ, ವಾಯುಯಾನ ಭದ್ರತೆ ಸಂಬಂಧಿತ ನಿಯಮ ಇತ್ಯಾದಿಗಳನ್ನು ಭಾರತೀಯ ಮಾದರಿಯ ಎ.ಎಸ್.ಎ. ಗೆ ಅನುಗುಣವಾಗಿ ಅಮಾನತು ಮಾಡುವ ಅಥವಾ ಹಿಂತೆಗೆದುಕೊಳ್ಳುವ ಅವಕಾಶವಿರುತ್ತದೆ,
AKT/VBA/SH