ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2018ರ ಮೇ ತಿಂಗಳಿನಲ್ಲಿ ಪೆರುವಿನ ಲಿಮಾದಲ್ಲಿ ಅಂಕಿತ ಹಾಕಲಾಗಿದ್ದ ಭಾರತ ಮತ್ತು ಪೆರು ನಡುವಿನ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
ಪರಸ್ಪರ ಸಮಾನ ಲಾಭ ಮತ್ತು ಪರಸ್ಪರ ಸಂಬದ್ಧತೆಯ ಆಧಾರದ ಮೇಲೆ ಹೊಸ ಮತ್ತು ನವೀಕರಿಸಬಹುದಾದ ವಿಷಯಗಳ ಮೇಲೆ ತಾಂತ್ರಿಕ ದ್ವಿಪಕ್ಷೀಯ ಸಹಕಾರವನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಸಾಂಸ್ಥಿಕ ಸಹಕಾರ ಸಂಬಂಧದ ಆಧಾರವನ್ನು ಸ್ಥಾಪಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ. ಒಪ್ಪಂದದ ಜಾರಿಯ ಸಲುವಾಗಿ ಕ್ರಿಯಾ ಯೋಜನೆ ಅಭಿವೃದ್ಧಿ ಪಡಿಸಲು ಜಂಟಿ ಸಮಿತಿಯ ಸ್ಥಾಪನೆಗೂ ಈ ಒಪ್ಪಂದ ಅನುವು ಮಾಡಿಕೊಡುತ್ತದೆ.
ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಹಕಾರವರ್ಧನೆಗೂ ಈ ಒಪ್ಪಂದ ನೆರವಾಗಲಿದೆ.