Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಪ್ಯಾಲಸ್ಟೀನ್ ನಡುವೆ ಕೃಷಿ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೃಷಿ ಸಹಕಾರಕ್ಕಾಗಿ ಪ್ಯಾಲಸ್ತೀನ್ ನ ಕೃಷಿ ಸಚಿವಾಲಯ ಹಾಗೂ ಭಾರತದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಮೇ ನಲ್ಲಿ ಪ್ಯಾಲಸ್ತೀನ್ ನ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಂಕಿತ ಹಾಕಲಾಗಿತ್ತು.

ಈ ತಿಳಿವಳಿಕೆ ಒಪ್ಪಂದವು, ಪ್ಯಾಲಸ್ತೀನ್ ನ ಪಶುವೈದ್ಯ ಸೇವೆಗಳು ಮತ್ತು ಪ್ರಾಣಿಗಳ ಆರೋಗ್ಯ; ನೀರಾವರಿಯ ಸಾಮರ್ಥ್ಯ ಹೆಚ್ಚಳ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಕೃಷಿ ಮತ್ತು ಪಶುವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಗೆ ಸಹಕಾರವನ್ನು ಒದಗಿಸುತ್ತದೆ. ಇದು ಸಸ್ಯ ಮತ್ತು ಮಣ್ಣಿನ ಫಲವತ್ತತೆ ಕ್ಷೇತ್ರ;ನೈರ್ಮಲ್ಯ ಮತ್ತು ಫೈಟೋಸ್ಯಾನಿಟರಿ ಕಾನೂನುಗಳು ಮತ್ತು ಸಸ್ಯ ಸಂರಕ್ಷಣೆ, ಪಶು ಸಂಗೋಪನೆ, ಆಧುನಿಕ ನೀರಾವರಿ ತಂತ್ರಜ್ಞಾನದಲ್ಲಿನ ಅನುಭವದ ವಿನಿಮಯ ಮತ್ತು ತರಬೇತಿ ಮತ್ತು ಸಾಮರ್ಥ್ಯವರ್ಧನೆ ಇತ್ಯಾದಿಯನ್ನೂ ಒಳಗೊಂಡ ಕ್ಷೇತ್ರಗಳಿಗೂ ವಿಸ್ತರಿಸುವುದು ಕೂಡ ಇದರ ವ್ಯಾಪ್ತಿಗೆ ಬರುತ್ತದೆ.

ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ, ಎಂ.ಓ.ಯುನಲ್ಲಿ ಉಲ್ಲೇಖಿಸಲಾಗಿರುವ ಉದ್ದೇಶಗಳ ಸಾಧನೆ ಮತ್ತು ಕ್ರಿಯಾ ಯೋಜನೆಯ ಪ್ರಗತಿಯನ್ನು ತಿಳಿಯಲು ಕೃಷಿಯ ನಿಗಾ ಸಮಿತಿಯನ್ನು ಸ್ಥಾಪಿಸಲಾಗುತ್ತದೆ, ಇದು ಸಹಕಾರಕ್ಕಾಗಿ ಕಾರ್ಯಸೂಚಿಯನ್ನೂ ರೂಪಿಸುತ್ತದೆ.

****

AKT/VBA/SH