ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಜಲ ಮಾರ್ಗದಲ್ಲಿ ಪ್ರಯಾಣಿಕರ ಮತ್ತು ಪ್ರವಾಸಿಗರ ನಿಗದಿತ ಸಂಚಾರ ಆರಂಭಿಸಲು ಎರಡೂ ದೇಶಗಳ ನಡುವಿನ ಕರಾವಳಿ ಮತ್ತು ಶಿಷ್ಟಾಚಾರದ ಮಾರ್ಗಗಳಲ್ಲಿ ನೌಕಾ ವಿಹಾರ ಸೇವೆಗಳ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದ ಕಾರ್ಯರೂಪಕ್ಕೆ ಬಂದಲ್ಲಿ, ಎರಡೂ ದೇಶಗಳ ನಡುವಿನ ಜನರ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಎರಡೂ ದೇಶಗಳ ನಡುವೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಹಕಾರವನ್ನು ಹೆಚ್ಚಿಸುತ್ತದೆ.
ಭಾರತ ಮತ್ತು ಬಾಂಗ್ಲಾದೇಶದ ಜನರಿಗೆ ಇದು ಉದ್ಯೋಗಾವಕಾಶವನ್ನೂ ಕಲ್ಪಿಸಲಿದೆ.
AKT/VBA/SH