ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಹೈಡ್ರೋಕಾರ್ಬನ್ ವಲಯದಲ್ಲಿನ ಸಹಕಾರಕ್ಕಾಗಿ ಚೌಕಟ್ಟಿನ ಒಪ್ಪಂದ (ಎಫ್.ಓ.ಯು)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಪರಸ್ಪರರ ಲಾಭಕ್ಕಾಗಿ ಮತ್ತು ಸಮಾನತೆಯ ಆಧಾರದ ಮೇಲೆ ಹೈಡ್ರೋಕಾರ್ಬನ್ ವಲಯದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಮತ್ತು ಅದಕ್ಕೆ ಅವಕಾಶ ನೀಡಲು ಸಹಕಾರಿ ಸಾಂಸ್ಥಿಕ ಚೌಕಟ್ಟಿನ ವ್ಯವಸ್ಥೆಯನ್ನು ರೂಪಿಸುವುದು ಪ್ರಸ್ತಾಪಿತ ಎಫ್.ಓ.ಯು. ಉದ್ದೇಶವಾಗಿದೆ.
ಉಪ ಪ್ರಾದೇಶಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಈ ಎಫ್.ಓ.ಯು. ಉತ್ತೇಜಿಸಲಿದೆ. ಇದು ಅಭಿವೃದ್ಧಿಗೆ ಪ್ರಚೋದನೆ ನೀಡಲಿದೆ ಮತ್ತು ಎರಡೂ ದೇಶಗಳಿಗೆ ತಮ್ಮ ಅಭಿವೃದ್ಧಿಯ ಆಶೋತ್ತರಗಳು, ವಿನಿಮಯಿತ ನಿರ್ದಿಷ್ಟ ಸ್ಥಳ ಮತ್ತು ದಕ್ಷಿಣ ಏಷ್ಯಾದ ಪ್ರಗತಿ ಮತ್ತು ಶಾಂತಿಯುತವಾದ ಸಮಾನ ಮುನ್ನೋಟವನ್ನು ಸಾಕಾರಗೊಳಿಸಲು ಅವಕಾಶ ನೀಡುತ್ತದೆ.
ಪ್ರಸ್ತಾಪಿತ ಎಫ್.ಓ.ಯು. ನಿರ್ಬಂಧ ರಹಿತ ಸ್ವರೂಪದ್ದಾಗಿದೆ ಮತ್ತು ಇದು ಐದು ವರ್ಷಗಳವರೆಗೆ ಮಾನ್ಯತೆ ಹೊಂದಿರುತ್ತದೆ.
AKT/VBA/SH