ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ರೈಲ್ವೇ ವಲಯದಲ್ಲಿ ತಾಂತ್ರಿಕ ಸಹಕಾರಕ್ಕೆ ಸಂಬಂಧಿಸಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಭೂಮಿ ಮತ್ತು ಸಾಗರ ವಲಯದ ಫೆಡರಲ್ ಸಾರಿಗೆ ಪ್ರಾಧಿಕಾರದ ಜತೆ ಅಂಕಿತ ಹಾಕಲ್ಪಟ್ಟ ತಿಳುವಳಿಕಾ ಒಡಂಬಡಿಕೆಯನ್ನು ಪರಾಮರ್ಶಿಸಿತು. ಈ ತಿಳುವಳಿಕಾ ಒಡಂಬಡಿಕೆಗೆ 2018 ರ ಫೆಬ್ರವರಿ 10 ರಂದು ಅಂಕಿತ ಹಾಕಲಾಗಿದೆ.
ಈ ತಿಳುವಳಿಕಾ ಒಡಂಬಡಿಕೆ ಈ ಕೆಳಗಿನ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರಕ್ಕೆ ಅನುವು ಮಾಡಿಕೊಡಲಿದೆ.
1.) ನಿಯಂತ್ರಣ , ಸುರಕ್ಷೆ ಮತ್ತು ಅಪಘಾತಗಳ ತಾಂತ್ರಿಕ ತನಿಖೆ.
2.) ನಿಲ್ದಾಣಗಳ ಮರು ಅಭಿವೃದ್ಧಿ
3.) ಲೊಕೋಮೋಟಿವ್ ಗಳು, ಬೋಗಿಗಳು ಮತ್ತು ವ್ಯಾಗನ್ ಗಳು; ಹಾಗು
4.) ಸಹಭಾಗಿಗಳು ಜಂಟಿಯಾಗಿ ಗುರುತಿಸುವ ಇತರ ಯಾವುದೇ ಕ್ಷೇತ್ರಗಳು.
ಲಾಭಗಳು:
ಈ ತಿಳುವಳಿಕಾ ಒದಂಬಡಿಕೆಯು ಭಾರತೀಯ ರೈಲ್ವೇಗೆ ರೈಲ್ವೇ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಜ್ಞಾನ ಪಡೆಯಲು ಮತ್ತು ಸಂವಾದ ನಡೆಸಲು ವೇದಿಕೆಯನ್ನು ಒದಗಿಸುತ್ತದೆ. ಈ ತಿಳುವಳಿಕಾ ಒಡಂಬಡಿಕೆ ಮಾಹಿತಿ ವಿನಿಮಯ, ವಿಚಾರ ಸಂಕಿರಣ, ತಾಂತ್ರಿಕ ಭೇಟಿಗಳು, ಮತ್ತು ಜಂಟಿಯಾಗಿ ಒಪ್ಪಿಕೊಂಡ ಸಹಕಾರೀ ಯೋಜನೆಗಳ ಅನುಷ್ಟಾನಕ್ಕೆ ಅನುಕೂಲ ಮಾಡಿಕೊಡುತ್ತದೆ.
ಹಿನ್ನೆಲೆ:
ರೈಲ್ವೇ ಮಂತ್ರಾಲಯವು ರೈಲ್ವೇ ವಲಯದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ವಿವಿಧ ವಿದೇಶೀ ಸರಕಾರಗಳು ಮತ್ತು ರಾಷ್ಟ್ರೀಯ ರೈಲ್ವೇಗಳ ಜತೆಯಲ್ಲಿ ತಿಳುವಳಿಕಾ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ. ಹೈ ಸ್ಪೀಡ್ ಕಾರಿಡಾರುಗಳು, ಹಾಲಿ ಇರುವ ಮಾರ್ಗಗಳಲ್ಲಿ ವೇಗ ವರ್ಧನೆ , ವಿಶ್ವ ದರ್ಜೆಯ ನಿಲ್ದಾಣಗಳ ಅಭಿವೃದ್ದಿ, ಭಾರೀ ದುರಸ್ತಿ ಮತ್ತು ರೈಲ್ವೇ ಮೂಲಸೌಕರ್ಯಗಳ ಆಧುನೀಕರಣ ಇತ್ಯಾದಿಗಳು ಈ ಸಹಕಾರದಲ್ಲಿ ಗುರುತಿಸಲ್ಪಟ್ಟಿರುತ್ತವೆ. ರೈಲ್ವೇ ತಂತ್ರಜ್ಞಾನ ಮತ್ತು ಕಾರ್ಯನಿರ್ವಹಣೆ ಕ್ಷೇತ್ರದಲ್ಲಿಯ ಬೆಳವಣಿಗೆಗಳ ಬಗ್ಗೆ ಮಾಹಿತಿ ವಿನಿಮಯ, ಜ್ಞಾನ ವಿನಿಮಯ, ತಾಂತ್ರಿಕ ಭೇಟಿಗಳು, ತರಬೇತಿ ಮತ್ತು ವಿಚಾರ ಸಂಕಿರಣಗಳು , ಪರಸ್ಪರ ಹಿತಾಸಕ್ತಿಯ ಕಾರ್ಯಾಗಾರಗಳ ಮೂಲಕ ಸಹಕಾರವನ್ನು ಸಾಧಿಸಲಾಗುತ್ತದೆ.